Thursday 30 October 2014

ಬಿಡುಗಡೆಯ ಧನ್ಯ ಘಳಿಗೆ.











ಕಪಿಲವಸ್ತುವಿನ ರಾಜಕುಮಾರ ಸಿದ್ದಾರ್ಥ, ಯೌವನದ ಉತ್ತುಂಗದಲ್ಲಿರುವಾಗಲೇ

 ಭೌತಿಕ ಜಗತ್ತಿನ ನಶ್ವರತೆಯಿಂದ ಭ್ರಮನಿರಸಗೊಂಡ. ಅರಮನೆ, ಸುಂದರ ಪತ್ನಿ, 

ಮಗನನ್ನು ತೊರೆದು ಸತ್ಯವನ್ನರಸಿ ಹೊರಟ. ಒಂದು ದಿನ ಅವನು ಅರಸಿ ಹೊರಟ 

ಸತ್ಯದ ದರ್ಶನವಾಯಿತು. ಸಿದ್ದಾರ್ಥ ಗೌತಮ ಬುದ್ಧನಾದ. ಶಾಕ್ಯ ವಂಶದ 

ರಾಜಕುಮಾರ, ಸಿಂಹಾಸನವನ್ನೇರಿ ಚಕ್ರವರ್ತಿಯಾಗುವ ಬದಲು, ಲಕ್ಷಾಂತರ 

ಹ್ರದಯ ಪರಿವರ್ತನೆ ಮಾಡಿ , ಆಧ್ಯಾತ್ಮ ಜಗತ್ತಿನಲ್ಲಿ ಸಾಮ್ರಾಜ್ಯ ಸ್ಥಾಪಿಸಿದ. ಇವನ ಬದುಕಿನ ಒಂದು ಘಟನೆ ಇದು.



ಒಮ್ಮೆ ಇವನು ಮಗಧದ ರಾಜಧಾನಿಯಾದ ರಾಜಗ್ರಹದ ಹೊರಗಿರುವ ಚೈತ್ಯದಲ್ಲಿ 

ತಂಗಿದ್ದ. ಪ್ರತಿದಿನ ಸಂಜೆ ಶ್ರಾವಕರು ಇವನ ಮಾತು ಕೇಳಲು ನೆರೆಯುತ್ತಿದ್ದರು. 

ಅಂದು ಹೀಗೆಯೇ ಮಂದಿ ಸೇರಿದ್ದರು. ಬುದ್ಧ ತನ್ನ ಪರಿವಾರದ ಭಿಕ್ಷು ಕಶ್ಯಪನನ್ನೇ 

ದಿಟ್ಟಿಸಿ ನೋಡುತ್ತಾ ಪ್ರವಚನ ಪ್ರಾರಂಭಿಸಿದ. ಅದು ಹೀಗಿತ್ತು-



"ದುಖಃಕ್ಕೆ ಕಾರಣ ಆಸೆ. ಆದುದರಿಂದ ದುಖಃದಿಂದ ಬಿಡುಗಡೆ ಹೊಂದುವ ಮಾರ್ಗ 

ಒಂದೇ, ದುಖಃಕ್ಕೆ ಕಾರಣವುದುದನ್ನು ಮಾಡಬಾರದು. ದುಖಃಕ್ಕೆ ಕಾರಣವೂ 

ಸರಳವೇ. ಅಗತ್ಯವಿಲ್ಲದ ವಸ್ತುಗಳ ಬಗ್ಗೆ ಗಮನ, ಅನಂತರ ಆ ವಸ್ತುಗಳ ಬಗ್ಗೆ 

ಬೆಳೆಸಿಕೊಳ್ಳುವ ಮೋಹ, ಆ ವಸ್ತುಗಳನ್ನು ಗಳಿಸಿಕೊಳ್ಳಲು ಉಳಿಸಿಕೊಳ್ಳಲು ಕಡೆಯ

 ನಿರಂತರ ಪ್ರಯತ್ನ. ಇವೆ ದುಖಃದ ಕಾರಣಗಳು. ಸಾಧನೆಯ ಹಾದಿಯಲ್ಲಿ ನಡೆಯ 

ಬಯಸುವವರು, ಮುಖ್ಯವಾಗಿ ಭಿಕ್ಷುಗಳು. ಈ ದುಖಃ ಮೂಲದ ಕ್ರಿಯೆಗಳಿಂದ ದೂರವೇ ಇರಬೇಕು."



ಭಿಕ್ಷು ಕಶ್ಯಪನ ಮುಖ ಬಾಡಿಹೋಯಿತು. ಅಂದು ಬೆಳಿಗ್ಗೆ ಅವನು ರಾಜಗ್ರಹಕ್ಕೆ 

ಭಿಕ್ಷೆಗಾಗಿ ಹೋಗಿದ್ದ. ಅಲ್ಲಿ ಒಂದು ಜಾತ್ರೆ ನಡೆಯುತಿತ್ತು. ಅದರಲ್ಲಿ ಒಂದು 

ಸ್ಪರ್ಧೆಯಿತ್ತು. ಒಂದು ಚಿನ್ನದ ಭರಣಿಯಲ್ಲಿ ಮುತ್ತುರತ್ನಗಳನ್ನು ತುಂಬಿ ಎತ್ತರದಲ್ಲಿ 

ತೂಗು ಹಾಕಿದ್ದರು. ಯಾವುದೇ ರೀತಿಯಲ್ಲಿ ಮೇಲಕ್ಕೆ ಏರದೆ ಅದರ ಸರಪಳಿಯನ್ನು 

ಕತ್ತರಿಸದೇ ಭರಣಿಯನ್ನು ಕೆಡವದೆ ಕೆಳಗಿಳಿಸುವವ ಅದರ ಒಡೆಯನಾಗುತ್ತಿದ್ದ. 

ಕೆಲವರು ಸ್ಪರ್ಧೆಯ ನಿಯಮ ಕೇಳಿಯೇ ಹತ್ತಿರವೂ ಹೋಗದೆ ಮರಳಿದರು. 

ಕೆಲವರು ಇದು ಬರೀ ಸೋಗು, ಕಡೆಗೆ ಯಾರಿಗೂ ಸಿಗದೇ, ಅದರ ಯಜಮಾನನೇ 

ಅದನ್ನು ಪಡೆಯುವಂತೆ ಮಾಡುವ ಹುನ್ನಾರ ಎಂದು ಅವಹೇಳನ ಮಾಡಿದರು. 

ಮತ್ತೆ ಕೆಲವರು ಪ್ರಯತ್ನಿಸಿದರೂ ಸಫಲರಾಗದೇ ನಿರಾಶರಾದರು. ವೈವಿಧ್ಯಕ್ಕೆ 

ಇನ್ನೊಂದು ಹೆಸರು ಈ ಜಗತ್ತು!



ಇದನ್ನೆಲ್ಲ ಗಮನಿಸುತ್ತಿದ್ದ ಕಶ್ಯಪ ಭಿಕ್ಷು. ಅವನಿಗೆ ಅಪೂರ್ವವಾದ ಯಕ್ಷಿಣಿ ವಿದ್ಯೆ 

ತಿಳಿದಿತ್ತು. ಸರಿ, ಮುಂದೆ ಬಂದು ತನ್ನ ವಿದ್ಯೆಯಿಂದ ಭರಣಿ ತನ್ನಿಂದ ತಾನೇ 

ಕೆಳಗಿಳಿಯುವಂತೆ ಮಾಡಿದ. ಸ್ಪರ್ಧೆಯಲ್ಲಿ ಗೆದ್ದು ಭರಣಿಯನ್ನು ಬುದ್ಧನಿಗೆ ಅರ್ಪಿಸಲು

ತಂದಿದ್ದ. ಬಹುಶಃ ಇದು ಬುದ್ಧನಿಗೆ ತಿಳಿದು, ತನಗಾಗಿಯೇ ಈ ಮಾತು 

ಹೇಳಿರಬೇಕು ಎಂದು ಅವನ ಮನಸ್ಸು ಖಿನ್ನವಾಯಿತು.



ಪ್ರವಚನ ಮುಗಿದು ನೆರೆದವರೆಲ್ಲಾ ಹೊರಟುಹೋದ ಅನಂತರ, ತಾನು ಗೆದ್ದು ತಂದ

 ಭರಣಿಯನ್ನು ಗುರುವಿನ ಮುಂದಿಟ್ಟು ನಟಮಸ್ತಕನಾಗಿ ನಿಂತುಕೊಂಡ. ಬುದ್ಧದೇವ 

ನಸುನಗುತ್ತಾ, "ಕಶ್ಯಪ, ನಿನಗೆ ಈ ಭರಣಿ ಹಾಗೂ ಅದರಲ್ಲಿರುವ ಸಂಪತ್ತಿನ 

ಅಗತ್ಯವಿತ್ತೇ?" ಕಶ್ಯಪ ತಲೆಯಲ್ಲಾಡಿಸಿ. "ಇಲ್ಲ ಗುರುವೇ"ಎಂದುತ್ತರಿಸಿದ. 

ಎರಡನೆಯ ಪ್ರಶ್ನೆ ಬಂತು. "ಭಿಕ್ಷುಗಳು, ಸಾಧಕರು ವೈಭವೋಪೇತವಾದ 

ವಸ್ತುಗಳನ್ನು ಇಟ್ಟುಕೊಳ್ಳಬಹುದೇ?" ಕಶ್ಯಪ ಸಣ್ಣ ಸ್ವರದಲ್ಲಿ ಉತ್ತರಿಸಿದ,"ಇಲ್ಲ 

ಗುರುವೆ". ಬುದ್ಧ ಮತ್ತೆ ಕೇಳಿದ, "ಯಾಕೆ?" "ಇವೆರಡೂ ದುಖಃಕ್ಕೆ ಕಾರಣ"."ಈ 

ದುಖಃ ಕಾರಣಗಳನ್ನು ಪಡೆಯಲು, ನೀನು ಕಷ್ಟದಿಂದ ಕರಗತವಾದ ಸಿದ್ಧಿಯನ್ನು 

ಉಪಯೋಗಿಸಿದೆ. ಇದರಿಂದ ಭರಣಿ ನಿನ್ನದಾಯಿತು. ನೆರೆದ ಮಂದಿ ನಿನ್ನ ಈ 

ವಿದ್ಯೆಯಿಂದ ಬೆರಗಾದರೂ ನೀನು ಅವರ ದ್ರಷ್ಟಿಯಲ್ಲಿ ಪವಾದಪುರುಷನಾದೆ. 

ಅಮಾನುಷನಾದೆ. ನಿನಗಾರಿವಾಗದಂತೆ ನಿನ್ನ ಅಹಂಕಾರ ಉಬ್ಬಿತು. ಇಷ್ಟು 

ಸಾಕಾಗಲಿಲ್ಲನಿನಗೆ. ಇದನ್ನು ನನಗರ್ಪಿಸಿ ನನ್ನನ್ನೂ ಮೆಚ್ಚಿಸಲು ಪ್ರಯತ್ನಿಸಿದೆ. 

ಭಿಕ್ಷು ಧರ್ಮದಿಂದ ವಿಚಲಿತನಾದೆ. ಏನು ಹೇಳುವಿ?" ಎಂದ ಗೌತಮ ಬುದ್ಧ.





"ತಮ" ಎಂದರೆ ಅಜ್ಞಾನದ ಗಾಢ ಕತ್ತಲು. "ಗೌ" ಎಂದರೆ ಬೆಳಕಿನ ಕಿರಣ. ಬುದ್ಧ 

ಎಂದರೆ ಬಹುಶಃ ತಾನು ಕಂಡ ಜ್ಞಾನದ ಹಾದಿಯನ್ನು ಜಿಜ್ಞಾಸುಗಳಿಗೆ ಮುಟ್ಟಿಸಲು 

ಬದ್ಧನಾದವ ಎಂದಿರಬಹುದು ಕೂಡ. ಕಶ್ಯಪನ ಮಟ್ಟಿಗಂತಲೂ ಹಾಗೆ ಆಯಿತು. 

ಅವನ ಕಣ್ಣುಗಳು ತೆರೆದುಕೊಂಡವು. ಮರು ಮಾತನಾಡದೆ ತನ್ನ ಭೌತಿಕತೆಯನ್ನು 

ಭರಣಿಯೊಳಗೆ ತುಂಬಿಸಿ, ಆಧ್ಯಾತ್ಮ ಸಾಗರದಲ್ಲಿ ಎಸೆದು ತ್ರಪ್ತನಾದ.

ಇಂಥ ಘಳಿಗೆಗಳೇ ಪರಿಪಕ್ವತೆಯ ಸಂಕೇತ. ಬಿಡುಗಡೆಯ ಪ್ರಥಮ ಹೆಜ್ಜೆ.

ನಮ್ಮ ಚಿಂತನೆಗಳು ಪರಮಾರ್ಥಾದೆಡೆಗೆ ಹರಿಯದಂತೆ ತಡೆಯುತ್ತವೆ. ನಮ್ಮ 

ಭೌತಿಕ ಮೋಹಗಳು ಎಲ್ಲಿಯವರೆಗೆಂದರೆ, 'ಸಾವೆಂಬ' ಶಬ್ದವೇ ಭಯ ಹುಟ್ಟಿಸುತ್ತದೆ.

 ಈ ಭಾವಪಾಶ ಹರಿಯದೆ ಭಯದಿಂದ ಬಿಡುಗಡೆಯಾಗದು. ಇದು ಮತ್ತೆ 

ಭೌತಿಕವಲ್ಲ. ಕೇವಲ ಮಾನಸಿಕ. ಆಮೆ ಕಷ್ಟಕಾಲದಲ್ಲಿ ತನ್ನ ತಲೆ, ಕಾಲುಗಳನ್ನು 

ಚಿಪ್ಪಿನೊಳಗೆ ಎಳೆದುಕೊಳ್ಳುವಂತೆ, ಪ್ರಾಪಂಚಿಕ ಆಮಿಷಗಳಿಂದ ಮನಸ್ಸನ್ನು 

ಒಳಗೆಳೆದುಕೊಳ್ಳುವುದೇ ಬಿಡುಗಡೆಯ ಮೊದಲ ಹೆಜ್ಜೆ. ಈ ಬಿಡುಗಡೆಯ ಕ್ಷಣವೇ 

ಧನ್ಯ ಘಳಿಗೆ, ಪುಣ್ಯಗಳು ಪರಿಪಕ್ವವಾದ ಕ್ಷಣ. ಇದಕ್ಕೆ ಮನುಷ್ಯ ಪ್ರಯತ್ನವೇ 

ಮೊದಲು. ಈ ಪ್ರಯತ್ನಕ್ಕೆ ಮನಸ್ಸು ಹದವಾದಂದು, ದೇವತೆಗಳೂ ಸಹಾಯ 

ಮಾಡುತ್ತಾರೆ ಎನ್ನುತ್ತದೆ ನಮ್ಮ ಪ್ರಾಚೀನ ಜ್ಞಾನ.




Wednesday 29 October 2014

ಬದುಕಿಗೊಂದು ಪರಿವರ್ತನೆಯ ತಿರುವು...



ಬದುಕನ್ನು ಬದಲಿಸಬಹುದೇ? ಉತ್ತರ ಹೌದು ಎಂದಾದರೆ, ಹಾಗಾದರೆ 

ವಿಧಿಬರಹದ ಕರ್ಮಫಲ ಎಂಬೆಲ್ಲ ಸಿದ್ದಾಂತಗಳಿಗೆ ಯಾವ ಸ್ಥಾನ ಬರುತ್ತದೆ? 

ಎಂಬೆಲ್ಲ ಪ್ರಶ್ನೆಗಳು ಎದುರಾಗುತ್ತವೆ. ಈ ಚಿಂತನೆಗಳಿಂದ ಹೊರ ನಿಂತು ಒಂದು ಉದಾಹರಣೆಯನ್ನು ನೋಡಿ..





ರಾತ್ರಿ ಮಲಗುವ ಹೋಗುವ ಮುನ್ನ ಮಕ್ಕಳು ತಂದೆಯೊಂದಿಗೆ ಸ್ವಲ್ಪ ಸಮಯ 

ಕಳೆಯಲು ಬಂದವು. ಹೋಗುವಾಗ ಕಾಲಿನ ಚಪ್ಪಲಿಗಳನ್ನು ಜೊತೆಗೆ ಒಯ್ಯಲು 

ಮರೆತವು. ಬೆಳಿಗ್ಗೆ ಏಳುವಾಗ ಹೊತ್ತಾಗಿತ್ತು. ಧಾವಂತದಲ್ಲಿ ಅವನು ಮಂಚದಿಂದ 

ಕೆಳಗಿಳಿಯುತ್ತಿರುವಂತೆಯೇ ಮಕ್ಕಳ ಚಪ್ಪಲಿಗಳ ಮೇಲೆ ಕಾಲಿಟ್ಟ. ಜಾರಿ ಬಿದ್ದ, 

ಹೊತ್ತಾಗಿ ಎದ್ದ ಕೋಪ ಬೇರೆ, ಜಾರಿ ಬಿದ್ದ ನೋವು ಸೇರಿಕೊಂಡು ಮಾತುಗಳಾಗಿ 

ಹೊರ ಬಿಟ್ಟು. ಮಕ್ಕಳನ್ನು ಬಾಯಿಗೆ ಬಂದಂತೆ ಬೈದು ಕೂಗಾಡಿದ. ಸ್ನಾನ ಮಾಡಿ, 

ಗಡ್ಡ ಕೆರೆದುಕೊಳ್ಳುವಾಗ ಸಿಟ್ಟು ಧುಮುಧುಮಿಸುತ್ತಲೆ ಇತ್ತು. ಪರಮೋಶಿಯಾಗಿ 

ಹೋಯಿತು. ಬ್ಲೇಡು, ಗಲ್ಲದ ಚರ್ಮ ಸವರಿ, ಗಾಯವಾಗಿ ರಕ್ತ ಜೀನುಗತೊಡಗಿತು.

ಇವನ ಗಲಾಟೆ ಕೇಳಿ ಬಂದ ಪತ್ನಿ ಔಷಧಿ ಹಾಕುವಾಗ ಉರಿ ತಡಯಲಾಗದೆ ಅವಳ 

ಮೇಲೆಯೂ ಹರಿಹಾಯ್ದ ಈತ! ತಿಂಡಿ ತಿನ್ನಲೂ ಸಮಯವಿಲ್ಲ ಎಂದು ಗೊಣಗುತ್ತಾ 

ಉಪ್ಪಿಟ್ಟನ್ನು ಬಾಯಿಗಿಟ್ಟರೆ ಸೀದ ವಾಸನೆ ಬರುತ್ತಿದೆ. ಉಪ್ಪಿಲ್ಲ. ಸಿಟ್ಟಿನಿಂದ ಉರಿ 

ಉರಿದು, ತಿಂಡಿಯನ್ನು ಮೇಜಿನ ಮೇಲೆ ಕುಕ್ಕಿ ಬೈಕು ಹತ್ತಿದ. ಹಿಂದು-ಮುಂದು 

ನೋಡದೆ ಹೋಗುತ್ತಿರುವಂತೆ ತಿರುವಿನಲ್ಲಿ ಬರುತ್ತಿರುವ ಟ್ರಕ್ ಕಾಣಲಿಲ್ಲ. ಚಾಲಕನ 

ಪ್ರಯತ್ನ ಮೀರಿ ಬೈಕು ಲಾರಿಗೆ ಬಡಿಯಿತು.! ಎಚ್ಚರ ತಪ್ಪಿತು.






ಮತ್ತೆ ಬೋಧ ತಿಳಿದಾಗ ಕೈ-ಕಾಲುಗಳಿಗೆ ಪಟ್ಟಿ ಹಾಕಲಾಗಿತ್ತು. ಪಕ್ಕದಲ್ಲಿ ಕಣ್ಣೀರು 

ಸುರಿಸುವ ಪತ್ನಿ, ಮಕ್ಕಳಿದ್ದರು. ಅವರ ಮುಖದಲ್ಲಿ ಒಡೆದು ಕಾಣುತ್ತಿದ್ದ ಪ್ರೀತಿ, 

ಧಾವಂತ ಕಂಡು ಇವನ ಹ್ರದಯ ಕರಗಿತ್ತು. ಕಣ್ಣು ಮುಚ್ಚಿಕೊಂಡಾಗ, ಮನಸ್ಸು 

ಚಿಂತಿಸಲು ತೊಡಗಿತು. ಇಷ್ಟಾದದ್ದು ತನ್ನಿಂದಲೇ! ಇದು ಅಗತ್ಯವಿರಲಿಲ್ಲ..! ಇದನ್ನು 

ನಾನು ಬದಲಿಸ ಬಲ್ಲವನಾಗಿದ್ದೆ. ಯಾವಾಗ ತನಗೆ ಬೆಳಿಗ್ಗೆ ಏಳಬೇಕು ಎಂದು 

ತಿಳಿದಿತ್ತೋ, ಸಾಕಷ್ಟು ಸಮಯಕ್ಕೆ ಮುನ್ನವೇ ಅಲಾರಾಂ ಇಡಬಹುದಿತ್ತು. 

ಮುನ್ನಾದಿನ ರಾತ್ರಿ ತನಗೆ ಅಷ್ಟು ಸಂತೋಷ ನೀಡಿದ ಮಕ್ಕಳನ್ನು ಚಪ್ಪಲಿ ಬಿಟ್ಟು 

ಹೋದರೆಂದು ಬಾಯಿಗೆ ಬಂದಂತೆ ಕೂಗಾಡಿ ಬಯ್ದು ನೋಯಿಸುವ ಅಗತ್ಯವೇ 

ಇರಲಿಲ್ಲ! ಇನ್ನೂ ತನ್ನ ಸಿಟ್ಟಿನಿಂದಲೇ ಬಿದ್ದೆ, ಗಾಯ ಮಾಡಿಕೊಂಡೆ. ತನಗೆ 

ಸಹಾಯ ಮಾಡಲು ಬಂದಿದ್ದರಿಂದ ತಿಂಡಿಗೆ ಉಪ್ಪು ಹಾಕಲು ಮರೆತಿರಬೇಕು. 

ಆದುದರಿಂದಲೇ ಉಪ್ಪಿಟ್ಟು ಸೀದು ಹೋಗಿರಬೇಕು. ಇದೆಲ್ಲ ತನಗ್ಯಾಕೆ ಆವಾಗ 

ಅರ್ಥವಾಗಲಿಲ್ಲ? ಎನ್ನಿಸಿತು.





ಅಪಘಾತಕ್ಕೆ ಈಡಾಗುವುದು ಅವನ ವಿಧಿಯಾಗಿತ್ತೆ? ಅಥವಾ ಒಂದಿಷ್ಟು 

ಸಂಯಮದಿಂದ ಅದು ವಿಧಿಯೆ ಆಗಿದ್ದರೂ ಅದನ್ನು ಬದಲಾಯಿಸಬಹುದಿತ್ತೇ? 

ಮನಸ್ಸು ಮರ್ಕಟನಂತೆ. ಚಲನಶೀಲತೆಯೇ ಅದರ ಸ್ವಭಾವ. ಆದರೆ ನಿರಂತರ 

ಪ್ರಯತ್ನದಿಂದ ಅದನ್ನು ಕೂಡ ಪಳಗಿಸಬಹುದು. ಬದುಕನ್ನು ಕಾಣುವ ದ್ರಷ್ಟಿಕೋನವೇ ಬದಲಾಯಿಸಿಕೊಳ್ಳಬಹುದು.























ಅಮೆರಿಕ, ವಿಯೆಟ್ನಾಂ ಯುದ್ಧ ಮುಗಿದ ನಂತರ, ಅಲ್ಲಿನ ಘೋರ ಸನ್ನಿವೇಶವನ್ನು 

ಬಿತ್ತರಿಸಲು ದೂರದರ್ಶನ ಕಂಪನಿಗಳ ದಂಡೆ ಅಲ್ಲಿಗೆ ಹೋಯಿತು. ಅಮೆರಿಕನ್ನರ 

ಬಾಂಬು ದಾಳಿಯಿಂದ ವಿಯೆಟ್ನಾಂ ಧೂಳಿಪಟವಾಗಿತ್ತು. ಹೆತ್ತವರನ್ನು 

ಕಳೆದುಕೊಂಡು ನಿರ್ಗತಿಕರಾಗಿರುವ ಮಕ್ಕಳು, ಉರಿದ ಹೋದ ಮನೆಗಳು, 

ಕೊಳೆತು ಹೋದ ಹೆಣಗಳಿಂದ ಹರಡಿದ ರೋಗಗ್ರಸ್ತರು.... ಹೀಗೆ ನರಕ ಸದ್ರಶ 
ದೇಶವಾಗಿತ್ತದು.




ಕಂಡವರಲ್ಲಿ ಹೆಚ್ಚಿನವರಿಂದ ಇದನ್ನು ಜೀರ್ಣಿಸಿಕೊಳ್ಳಲಾಗಲೇ ಇಲ್ಲ. ಕೆಲವರ ಮತಿ 

ಕೆಟ್ಟು ಹೋಯಿತು. ಕೆಲವರು ಅಪರಾಧಿ ಭಾವದಿಂದ ಆತ್ಮಹತ್ಯೆ ಮಾಡಿಕೊಂಡರು.

 ಅವರಲ್ಲಿ ಕೆಲವರು ಮೊದಲ ಆಘಾತದಿಂದ ಚೇತರಿಸಿಕೊಂಡ ಅನಂತರ, ತಮ್ಮ 

ದೇಶ ಮಾಡಿದ ತಪ್ಪಿಗೆ, ತಾವೂ ಹೊಣೆಗಾರರೇ. ಆದುದರಿಂದ ಇದನ್ನು ಮರಳಿ 

ಸುಸ್ಥಿತಿಗೆ ತರುವ ಕೆಲಸ ಮಾಡುವುದೇ ತಮ್ಮ ಶಿಕ್ಷೆ ಎಂದು ನಿರ್ಧರಿಸಿದರು. 

ದುರಂತದ ಚಿತ್ರಣವನ್ನು ಅಮೇರಿಕಕ್ಕೆ ಒಯ್ದು, ಹಳ್ಳಿ ಹಳ್ಳಿ, ನಗರಗಳಲ್ಲಿ ಅದನ್ನು 

ಪ್ರದರ್ಶಿಸಿದರು. ಸಹಾಯ ಯಾಚಿಸಿದರು.


ಈ ಚಿತ್ರಗಳನ್ನು ಕಂಡವರ 

ಹ್ರದಯ ದ್ರವಿಸಿತು. 

ಮಿಲಿಯನ್ಗಳ ಸಂಖ್ಯೆಯಲ್ಲಿ 

ಡಾಲರುಗಳು ಹರಿದು 
ಬಂದವು. 



ಅನಾಥ ಮಕ್ಕಳನ್ನು ದತ್ತು ಪಡೆಯಲು ತಾ ಮುಂದು ನಾ ಮುಂದು ಎಂದು 

ಮುಂದಾದರು ಮಂದಿ. ಶಾಲಾ-ಕಾಲೇಜುಗಳು, ಪ್ರಾಥಮಿಕ ಆರೋಗ್ಯ 

ಕೇಂದ್ರಗಳು, ವಸತಿ ಸಮುಚ್ಚಯಗಳು ತಯಾರಾದವು. ರಸ್ತೆ ರಿಪೇರಿ ಭರದಿಂದ 

ನಡೆಯಿತು. ಹೀಗೆ ಕುಸಿದುಹೋದ ಯುದ್ಧ ಜರ್ಝರಿತ ದೇಶ, 

ನೋಡುನೋಡುತ್ತಿರುವಂತೆಯೆ ಚೇತರಿಸಿಕೊಂಡಿತು. ಇಷ್ಟಾದದ್ದು ಕೆಲವೇ ಕೆಲವು 

ಮಂದಿಯ ಧನ್ಯಾತ್ಮಕ ದ್ರಷ್ಟಿಕೋನದಿಂದ ಎಂದರೆ ಸರಿಯಾಗುತ್ತದೆ. ಅಂದರೆ, 

ಅವರು ಬದುಕನ್ನು ಕಟ್ಟ ಬಯಸಿದರು. ಬದುಕನ್ನು ಬದಲಿಸಿದರು. ಇದೆ ಅದರ 

ವಿಧಿಯಾಗಿತ್ತೆ? ಅಥವಾ ಮನೋಬಲ ವಿಧಿಯನ್ನು ಮೀರಿ ನಿಂತಿತೇ?

Tuesday 28 October 2014

ಕತ್ತಲಿನಿಂದ ಬೆಳಕಿನೆಡೆಗೆ........................




ಒಬ್ಬನ ಆಯಸ್ಸು ತೀರಿತು.. ಬದುಕಿದ್ದಾಗ ಬಹಳಷ್ಟು ಒಳ್ಳೆಯದನ್ನೇ ಮಾಡಿದ್ದ. 

ನಮ್ಮಗಳ ಭಾಷೆಯಲ್ಲಿ ಹೇಳುವುದಾದರೆ ಬಹಳ ಪುಣ್ಯ ಮಾಡಿದ್ದ. ಯಮದೂತರು 

ಇವನ 'ಆತ್ಮ'ವನ್ನು ತೆಗೆದುಕೊಂಡು ಸ್ವರ್ಗಕ್ಕೆ ಹೋದರು. ಪ್ರಮಾದವಶಾತ್ ಅವನ 

ಹೆಸರು ಸ್ವರ್ಗದ ಕಡತದಲ್ಲಿರಲಿಲ್ಲ.!


ಸ್ವರ್ಗಪಾಲಕರು ಹೆಸರಿಲ್ಲದಿದ್ದರಿಂದ ಇವನ ಆತ್ಮವನ್ನು ಬಾಗಿಲಲ್ಲಿಯೇ ತಡೆದು 

ನಿಲ್ಲಿಸಿದರು. ಸ್ವರ್ಗಕ್ಕೆ ಪ್ರವೇಶ ನಿರಾಕರಿಸಲಾಯಿತು! ಈಗ ಯಮದೂತರಿಗೆ 

ಸಮಸ್ಯೆ ಉಂಟಾಯಿತು. ಇವನನ್ನು ಏನು ಮಾಡುವುದು? ಮರಳಿ 

ಧರೆಗೆ ಕೊಂಡೊಯ್ಯಲಾಗದು.! ಅವನಿಷ್ಟು ದಿನವೂ 

ಉಪಯೋಗಿಸುತ್ತಿದ್ದ ' ದೇಹ', ಅವನದನ್ನು ತೊರೆದ ತಕ್ಷಣ 'ಶವ'ವಾಗಿ ಮಂದಿ 

ಅದನ್ನು ಕಂಡರೆ ಹೆದರಲು ಶುರು ಮಾಡಿದ್ದರು. ಬಿಟ್ಟರೆ ಕೊಳೆತು ಹುಳು ಬೀಳುತ್ತದೆ. 

ಅದರ ವಿಲೇವಾರಿಯಾಗದೆ ಮಂದಿ ಊಟ ಮಾಡಲಾಗದು.! ಮನೆಯಲ್ಲಿ ಒಲೆ 

ಹೊತ್ತಿಸಲಾಗದು! ಒಟ್ಟಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗ ಬಿಡುಗಡೆಯಾಗಬೇಕು. 

ಹೀಗೆ ತರಾತುರಿಯಲ್ಲಿ ಅದನ್ನು ಸುಟ್ಟು ಹಾಕಲಾಯಿತು.

ಸರಿ, ಸ್ವಲ್ಪ ಕಾಲ ಕಳೆಯಲಿ. ಆಮೇಲೆ ನೋಡೋಣ ಎಂದುಕೊಂಡು ಅದನ್ನು ನರಕಕ್ಕೆ ಕರೆತಂದರು. ಎಲ್ಲಿ ನೋಡಿದರಲ್ಲಿ 

ಕೆಸರು, ಹೊಲಸು ತುಂಬಿದ ಹೊಂಡಗಳು, ಒಣಗಿ ಕರಟಿ ಹೋದ ಮರ-

ಗಿಡಗಳು,ವಾಸನೆ, ಕೊಳಕು,ವರ್ಷಗಟ್ಟಲೆ ಸ್ನಾನ ಮಾಡದ,ಕ್ಷೌರ 

ಮಾಡದ,ಜಡೆಗಟ್ಟಿದ ತಲೆಗಳು. ಒಂದೇ ಎರಡೇ!?ಎಲ್ಲದಕ್ಕೂ ಪುಟ್ಟವಿಟ್ಟಂತೆ 

ಜಗಳ,ಕೆಟ್ಟ ಬೈಯ್ಗುಳಗಳು,ಹೊಡೆದಾಟಗಳು. ಯಮದೂತರು ಹೀಗಿರುವ ನರಕಕ್ಕೆ 

ಇವನನ್ನು ಕರೆತಂದರು. ಇವನೋ ತೀರಾ ನಿಸ್ಪ್ರಹ, ಅಲಕ್ ನಿರಂಜನ್! 

ಯಮದೂತರೇ ಮುಜುಗರ ಪಟ್ಟುಕೊಂಡರು ಇವನು 'ಕಂ ಕಿಂ' 

ಎನ್ನದೆ ನರಕದತ್ತ ನಡೆದ. ಸರಿ,ಯಮದೂತರು ತಮ್ಮ ಮುಂದಿನ ಕೆಲಸಕ್ಕೆ ಹೊರಟು ಹೋದರು.



ಕೆಲವು ಕಾಲ ಕಳೆಯಿತು. ಯಮದೂತರಿಗೆ ಇವನ ಬಗ್ಗೆ ವಿಚಾರಿಸಬೇಕು 

ಎಂದುಕೊಂಡದ್ದು ಮರೆತೇ ಹೋಯಿತು. ಒಂದು ದಿನಯಾವುದೋ ಕೆಲಸಕ್ಕೆಂದು 

ಅತ್ತ ಬಂದವರಿಗೆ ಫಕ್ಕನೆ ಇವನ ನೆನಪಾಯಿತು. ಓಡುತ್ತಾ ಯಮಧರ್ಮನಲ್ಲಿಗೆ 

ಹೋಗಿ ನಡೆದುದ್ಡನ್ನೆಲ್ಲ ನಿವೇದಿಸಿದರು. ಯಮಧರ್ಮ ಹೆದರಿದ. ಹಿಂದೊಮ್ಮೆ 

ನಚಿಕೇತನೆಂಬ ಪುಟ್ಟ ಹುಡುಗ ಕೇವಲ ಮೂರು ದಿನ ಯಮಲೋಕದ ಬಾಗಿಲಲ್ಲಿ 

ಕಾದಿರಬೇಕಾದ ಬಂದ ಪ್ರಸಂಗ ನೆನಪಾಯಿತು. ಜೀವನ್ಮರಣಗಳ ರಹಸ್ಯವನ್ನು 

ವಿವರಿಸಿ ಬ್ರಹ್ಮಶಾಪದಿಂದ ಪಾರಾಗಬೇಕಾಯಿತು ಆವಾಗ!  ಈಗ ಯಾವ ಬೆಲೆ 

ತೆರಬೇಕಾಗಿ ಬರುತ್ತದೋ ಎಂದು ಹೆದರಿ, ತಾನೇ ಕ್ಷಮೆಕೇಳಿ ತನ್ನ ಕೋಣದ 

ಮೇಲೆಯೇ ಏರಿಕೊಂಡು ಸ್ವರ್ಗಕ್ಕೆ ಕರೆದುಕೊಂಡು ಬರುವುದೇ ಸೈ ಎಂದುಕೊಂಡು ನರಕ ದ್ವಾರಕ್ಕೆ ಬಂದ.



ಈಗ ಯಮದೂತರು ಗೊಂದಲಕ್ಕೆ ಬಿದ್ದರು.! ಏಕೆ ಗೊತ್ತೇ? ಹಿಂದೆ ಅವರು ಕಂಡ 

ನರಕಕ್ಕೂ ಇಂದು ಅವರ ಮುಂದಿರುವ ನರಕಕ್ಕೂ ಯಾವುದೇ ಹೋಲಿಕೆ ಇರಲಿಲ್ಲ. 

ಇಂದು ಇಲ್ಲಿ ಎಲ್ಲವೂ ಸ್ವಚ್ಛ,ಸುಂದರ! ಹೊಲಸು ಹೊಂಡಗಳಿಲ್ಲ. ಬದಲಿಗೆ ಸ್ವಚ್ಛ 

ನೀರು ತುಂಬಿದ ಕೊಳಗಳಲ್ಲಿ ಚೆಂದದ ಬಾತುಕೋಳಿಗಳು ಈಜುತ್ತಿವೆ. ಎತ್ತ 

ನೋಡಿದರತ್ತ ಹಸಿರು ರಾಜಿ! ಹೂ-ಹಣ್ಣುಗಳಿಂದ ತೋಟದಲ್ಲಿ ಹಕ್ಕಿಗಳು 

ಮಧುರವಾಗಿ ಹಾಡುತ್ತಿವೆ. ಮಂದಿ ಅಲ್ಲಲ್ಲಿ ಗುಂಪುಗಟ್ಟಿ ಹಾಡಿ ಕುಣಿಯುತ್ತಿದ್ದಾರೆ. 

ಭಗವಂತನ ನಾಮ ಸ್ಮರಣೆಯಾಗುತ್ತಿದೆ. ಎಲ್ಲೆಲ್ಲಿಯೂ ಸ್ವಚ್ಛ, ಸುಂದರ, 

ಸುಗಂಧಮಯ ವಾತಾವರಣ! ಯಮರಾಜ ಹೂಂಕರಿಸಿ ಕೆಂಗಣ್ಣು 

ಮಾಡಿದ. "ಇದೆಲ್ಲಿಯೋ ಬಂದಿದ್ದೇವೆ. ತಪ್ಪಿ ಈ ಸ್ವರ್ಗವನ್ನು 

ನರಕವೆಂದುಕೊಂಡಿರೋ ಹೇಗೆ? ಇದು ನಮ್ಮ ಸ್ವರ್ಗಕ್ಕಿಂತಲೂ 

ಚೆನ್ನಾಗಿದೆ. ಯಾವ ಜಾಗವೋ, ಲೋಕವೋ ವಿಚಾರಿಸಿ ಬನ್ನಿ" ಎಂದು ಅಪ್ಪಣೆ ಮಾಡಿದ.




ಹಾಗೆ ವಿಚಾರಿಸಲಾಗಿ ವಿಷಯ ತಿಳಿಯಿತು. ಕೆಲವು ಕಾಲದ ಹಿಂದೆ, ಒಂದು 

ಜೀವವನ್ನು ತಾತ್ಕಾಲಿಕವಾಗಿ ಇಲ್ಲಿ ಬಿಟ್ಟು ಹೋಗಲಾಗಿತ್ತೆಂದು, ಈ ಬದಲಾವಣೆಗೆ 

ಕಾರಣವೇ ಆ ಜೀವ ಎಂದು ತಿಳಿಯಿತು. ತನ್ನಲ್ಲಿ ಪರರ ಕಾಣುವವ ಎಲ್ಲಿದ್ದರೂ ಅದು ಸ್ವರ್ಗವೇ!





ಬದುಕಿನ ಉತ್ಕಟ ಕ್ಷಣದಲ್ಲಿ 'ನಾನು'ಮಾತ್ರ ಇರುತ್ತೇನೆ. ಅದು 

ಧರ್ಮಸಂಕಟವಿರಲಿ, ಜೀವನದ ಯಾವುದೇ ಹೋರಾಟವಿರಲಿ,ಕಡೆಗೆ ಪರಮರ್ಥ

 ಸಾಧನೆ ಅಥವಾ ದೇಹತ್ಯಾಗದ ಸಮಯದಲ್ಲಿಯೇ ಇರಲಿ, ಒಳಗಿನಿಂದ ಕೇವಲ 

'ಅದು' ಮಾತ್ರ ಏಕಾಂಗಿ. ಹುಟ್ಟುವಾಗಲು ಏಕಾಂಗಿಯೇ, ಸಾಯುವಾಗಲೂ 

ಏಕಾಂಗಿಯೇ. ಮಧ್ಯೆ ಹೊಂದಿಕೊಂಡು ಬರುವ ಸಂಭಂಧಗಳೇಲ್ಲ ಭೌತಿಕವಾಗಿ ಈ 

ದೇಹದೊಂದಿಗೆ ಮಾತ್ರ. ಸಂಭಂಧಗಳ ಭಾವಗಳು ಚೈತನ್ಯದಿಂದ ಹೊರಗೆ 

ನಿಂತಾಗ ಮತ್ತೆ ಮತ್ತೆ ಹುಟ್ಟುವ, ಸಾಯುವ ಪರಿಬ್ರಮಣ ಇರದು. ಇಂಥ 'ಮುಕ್ತ' 

ಎಲ್ಲಿದ್ದರೂ ಅವನಿಗೆ ಅದು ಸ್ವರ್ಗವೇ! ಮಾತ್ರವಲ್ಲ, 

ಅವನಿರುವ ಪರಿಸರವು ನರಕವೇ ಆಗಿದರು ಅದು ಸ್ವರ್ಗವಾಗಿ ಬದಲಾಗುತ್ತದೆ.




ಈ ಜಗತ್ತು ದ್ವಂದ್ವಗಳಿಂದ ಕೂಡಿದೆ. ಸುಖ-ದುಃಖ,ಕತ್ತಲು-ಬೆಳಕು. ಹೀಗೆ 

ಮಾಯೆಯ ಆಟ. ಇದನ್ನು ನೋಡುತ್ತಾ ಅನುಭವಿಸುತ್ತಾ ಅದರಲ್ಲಿಯೇ ನಾವು 

ಕಳೆದು ಹೋಗುತ್ತೇವೆ. ಆದರೆ ನಾವು ತ್ರಿನೇತ್ರರೂ ಹೌದು. ನಮ್ಮ ಮೂರನೆಯ 

ಕಣ್ಣನ್ನು ತೆರೆಯುವುದನ್ನು ಸಾಧಿಸಬೇಕು. ನಿಜವಾದ ಅರ್ಥದಲ್ಲಿ ತೆರೆದುಕೊಂಡಾಗ ' 

ಭೌತಿಕ' ಸುಖ ಸುಟ್ಟು ಬೂದಿಯಗುತ್ತದೆ. ನಮ್ಮ 

ಶುದ್ಧ ಸ್ವರೂಪದ ದರ್ಶನವಾಗುತ್ತದೆ. 'ಶಿವ'ನಾಗುತ್ತೇವೆ. 'ಶಿವ' ಎಂದರೆ 

ಮಂಗಲಕಾರಕ. ನರಕವನ್ನೂ ಸ್ವರ್ಗವಾಗಿ ಪರಿವರ್ತಿಸುವವನು!





ದೀಪ ಎಂದರೆ ಬೆಳಕು. ಬೆಳಕಿನ ಅನುಪಸ್ಥಿತಿಯೇ ಕತ್ತಲು. ಕತ್ತಲಿಗೆ ತನ್ನದೇ ಆದ ಅಸ್ತಿತ್ವವಿಲ್ಲ. ಆದುದರಿಂದ ಬಿಡುಗಡೆ ಸುಲಭ. 

ಒಂದೇ ಒಂದು ಪುಟ್ಟ ಹಣತೆಯ ಬೆಳಕಿನಿಂದ ಕತ್ತಲು 'ಇಲ್ಲ'ವಾಗುತ್ತದೆ. ಒಂದೇ 

ಒಂದು ಸದ್ವಿಚಾರದ ಚಿಂತನೆಯಿಂದಲೂ ಅಜ್ಞಾನ ಕಳೆಯುತ್ತದೆ. 'ನರಕ'ವನ್ನೂ 

'ಸ್ವರ್ಗ'ವಾಗಿ ಪರಿವರ್ತಿಸುವ ಶಕ್ತಿ ಇದೆ ಬೆಳಕು ಕಂಡವನಿಗೆ,



ನಮ್ಮೊಳಗೆ ಅಂತರ್ಗತವಾಗಿರುವ, "ನಾನೇ ಬ್ರಹ್ಮ" ಎಂಬ ಸತ್ಯವನ್ನು ಅರ್ಥ 

ಮಾಡಿಕೊಳ್ಳುತ್ತಾ, ಕತ್ತಲನ್ನು ಒಪ್ಪಿಕೊಂಡು, ಅದರಿಂದ ಮುಕ್ತಿ ಹೊಂದುವ ಸಂದೇಶ ಪಡೆಯೋಣ.



ಕತ್ತಲಿನಿಂದ ಬೆಳಕಿನೆಡೆಗೆ, ಒಂದಾಗಿ ಕೈ ಕೈ ಹಿಡಿದು ಮುನ್ನಡೇಯೋಣ.


Monday 20 October 2014

ಮನೋಭೂಮಿಕೆಯ ಎರಡು ವೈರುಧ್ಯಗಳು

"ಸರ್ವರಿಗೂ ದೀಪಾವಳಿಯ ಶುಭಾಶಯಗಳು......."













ಮಹಾಭಾರತದ ಸುಂದರ, ಮನೋಜ್ಞ ಕಥೆಯಿದು. ಕರ್ಣ ಸೂತಪುತ್ರ. ಆದರೂ

 ದಾನಕ್ಕೆ ಹೆಸರಾದವನು. ವೃದ್ಧ ಯತಿಯ ರೂಪದಲ್ಲಿ ಮುಂದೆ ನಿಂತು ಬೇಡಿದ 

ಇಂದ್ರನಿಗೆ ತನ್ನ ಸ್ವರ್ಣಕವಚವನ್ನು ದಾನ ನೀಡಿದ ಮಹಾನ್ ಜೀವ ಕರ್ಣ. ಸ್ವರ್ಣ 

ಕವಚ ದೇಹದಿಂದ ಬೇರೆಯಾದರೆ ಸಾವನ್ನು ಕೈಬೀಸಿ ಕರೆದಂತೆ ಎಂಬುದನ್ನು 

ತಿಳಿದೂ ಬೇಡಿದ್ದನ್ನು ನಿರಾಕರಿಸದೇ ನೀಡಿದ್ದ. ಇಂಥವನ ಬಗ್ಗೆ ಇದೆ ಈ ಕಥೆ.




ಒಮ್ಮೆ ಕರ್ಣ ಅಭ್ಯಂಗಕ್ಕೆಂದು ಚಿನ್ನದ ಪಾತ್ರೆಯಿಂದ ಎಣ್ಣೆ ಹಚ್ಚಿಕೊಳ್ಳುತ್ತಿದ್ದ. ಆಗ 

ಅಲ್ಲಿಗೆ ಒಬ್ಬ ಬ್ರಾಹ್ಮಣ ಬಂದ. "ಸ್ವಾಮೀ, ಮಗಳಿಗೆ ಮದುವೆ ಗೊತ್ತಾಗಿದೆ. ತೀರಾ 

ಬಡತನ. ಏನಾದರೂ ಸಹಾಯ ಮಾಡಬಹುದೇ?" ಎಂದ. ಕರ್ಣ ಕೂಡಲೇ

 ಕೈಯಲ್ಲಿದ್ದ ಚಿನ್ನದ ಬೋಗುಣಿಯನ್ನು ಬ್ರಾಹ್ಮಣನ ಕೈಯಲ್ಲಿಟ್ಟು ಬಿಟ್ಟ. "ಸ್ವಾಮೀ,

 ತಿಳಿದೋ ತಿಳಿಯದೆಯೋ ನೀಡುವ ಆತುರದಲ್ಲಿ ಎಡಗೈಯಿಂದ ದಾನ ಮಾಡಿದಿರಿ.

 ಎಡಗೈಯಿಂದ ನೀಡುವ ದಾನದಿಂದ ಸಕಲ ಸೌಭಾಗ್ಯಗಳೂ ಕ್ಷೀಣವಾಗುತ್ತವೆ 

ಎಂಬ ಮಾತಿದೆ. ನಿಮಗೆ ಇಂಥ ಸ್ಥಿತಿ ಬರಬಾರದು ಎಂಬ ಉದ್ದೇಶದಿಂದ ಹೇಳುತ್ತಿದ್ದೇನೆ" ಎಂದ.



ಕೂಡಲೇ ಕರ್ಣ, "ವಿಪ್ರೋತ್ತಮನೆ, ಮೈಗಂಟಿದ ಕೊಳೆಯಿಂದ ಬಿಡುಗಡೆ 

ಹೊಂದಲು ಅಭ್ಯಂಗಕ್ಕೆ ಸಿದ್ಧನಾಗುತ್ತಿದ್ದೆ. ಇದರೊಂದಿಗೆ ಮನಸ್ಸಿನಲ್ಲಿ 

ಉಳಿದಿರಬಹುದಾದ ಕೊಳೆಯನ್ನು ಹೋಗಲಾಡಿಸುವುದೆಂತು ಎಂದು ಚಿಂತಿಸುತ್ತಿದ್ದೆ.

 ಭೌತಿಕ ಸಿರಿ ಸಂಪತ್ತುಗಳೂ ನನ್ನವು ಎಂಬ ಪ್ರಜ್ಞೆ, ಆಧ್ಯಾತ್ಮಿಕ ಉನ್ನತಿಯ 

ಹಾದಿಯಲ್ಲಿನ ತೊಡರುಗಳು. ಆದುದರಿಂದ ಒಂದು ವೇಳೆ ನೀನೆಂದಂತೆ, 

ಎಡಗೈಯಲ್ಲಿ ದಾನ ಮಾಡುವುದರಿಂದ ಸಿರಿಸಂಪದಗಳು ಕ್ಷೀಣ ಯಾ 

ನಾಶವಾದರೂ ಅದರಿಂದ ತೊಂದರೆ ಏನೂ ಇಲ್ಲ. ಅಷ್ಟು ಮಾತ್ರವಲ್ಲ, 

ಸಿರಿಸಂಪತ್ತುಗಳೆಂದೂ ಶಾಶ್ವತವಲ್ಲ. ಸಂಪತ್ತೆಂದು ಪೋಷಿಸುವ ಈ ದೇಹ 

ಕಾಲಕ್ರಮೇಣ ಮುದಿಯಾಗುತ್ತದೆ. ರೋಗರುಜಿನಗಳಿಂದ ಕ್ಷೀಣವಾಗುತ್ತದೆ. ಮುಂದೆ 

ಒಂದು ದಿನ ಜೀವದಿಂದ ಬೇರೆಯಾಗಿ ಮಣ್ಣಾಗಿ ಹೋಗುತ್ತದೆ. 'ನನ್ನದೇ' 

ಎಂದುಕೊಂಡ ದೇಹದ ಗತಿಯೇ ಇದಾದರೆ ಮತ್ತೆ ಹೊರಗಿನ ಸಿರಿಸಂಪತ್ತು ನನ್ನದೆಂತು ಭಾವಿಸುವುದೆಂತು?

"ಇಲ್ಲಿ ಮತ್ತೊಂದು ಮಾತಿದೆ. ನೀವು ಬೇಡಿಕೆ ಮುಂದಿರಿಸಿದಿರಿ. ಆಗ ನನ್ನ 

ಎಡಗೈಯಲ್ಲಿ ಬೋಗುಣಿ ಇತ್ತು. ಶಾಸ್ತ್ರಸಮ್ಮತವಾಗಿ ನೀಡಬೇಕೆಂದು, ಒಂದು ವೇಳೆ 

ಬಲಗೈಗೆ ಬದಲಾಯಿಸಲು ಪ್ರಯತ್ನಿಸಿದ್ದರೆ, ಅಷ್ಟರಲ್ಲಿ ನನ್ನ ಮನಸ್ಸು 

ಬದಲಾಗದಿರಲು ಎನ್ನಲು ಎಂತು ಸಾಧ್ಯ? ಚಿತ್ತದ ವ್ರತ್ತಿಯೆ ಬಲು ಚಂಚಲ. ಈ ಕ್ಷಣ 

ಇದ್ದಂತೆ ಇನ್ನೊಂದು ಕ್ಷಣ ಇರುತ್ತದೆ ಎನ್ನಲಾಗಲ್ಲ. ಆಗ ನೀಡುವ ಭಾಗ್ಯದಿಂದ 

ವಂಚಿತನಾಗುತ್ತಿದ್ದೆ. ಆದುದರಿಂದ ಈ ಕ್ಷಣ ಎಡಗೈಯೊ ಬಲಗೈಯೊ, ಏನಿದೆಯೋ 

ಎಂತಿದೆಯೋ ನೀಡಬೇಕೆನಿಸಿದ ಕ್ಷಣ ಕೊಟ್ಟೆ ಬಿಡಬೇಕು ಎನಿಸಿತು" ಎಂದುತ್ತರಿಸಿದನಂತೆ.


ಮನಸ್ಸಿನ ವ್ರತ್ತಿಯನ್ನು ಇಷ್ಟು ಸರಳವಾಗಿ ವಿವರಿಸುವ, ಬದುಕಿನ ಕ್ಷಣಿಕತೆಯನ್ನೂ ಎತ್ತಿ ತೋರಿಸುವ ಈ ಕರ್ಣನ ಕಥೆ ಇಂದು ನಮ್ಮ ಸಂಕೀರ್ಣ ಬದುಕಿಗೊಂದು ಅನುಕರಣೀಯ . 


ತಿರುಪೆಯನೊಬ್ಬ ಮನೆಯಿಂದ ಹೊರಡುವಾಗ, ಪಾತ್ರೆಯಲ್ಲಿ ಘಮಘಮಿಸುವ 

ತುಪ್ಪದ ಕಡಬುಗಳನ್ನಿಟ್ಟುಕೊಂಡು ಹೊರಟನಂತೆ. ಒಂದು ಮನೆಯ ಮುಂದೆ 

ನಿಂತು, "ಅಮ್ಮಾ, ಭಿಕ್ಷೆ ಹಾಕಿ ತಾಯೀ" ಎಂದ. ಬಾಗಿಲಿನ ಹತ್ತಿರ ಬರುತ್ತಿರುವಂತೇ

 ಅವಳ ಮೂಗಿಗೆ ತುಪ್ಪದ ಪರಿಮಳ ಬಡಿಯಿತು. "ಇದು ಎಲ್ಲಿಯದೋ?" 
ಎಂದಳು ಕಡಬುಗಳನ್ನು ಕಣ್ಣರಳಿಸಿ ನೋಡುತ್ತಾ.


ತಿರುಪೆಯವನೆಂದ, "ಓ, ಆ ಮನೆಯ ಮಹಾತಾಯಿ ನೀಡಿದಳಮ್ಮಾ. ಅವರು 

ಯಾವಾಗಲೂ ಹಾಗೆ, ಕೊಡುಗೈ ದಾನಿ. ಎಂದೂ ಹಳಸಿದ್ದು, ಪಳಸಿದ್ದು 

ನೀಡಿದವರೇ ಅಲ್ಲ. ಏನಿದ್ದರೂ ಬಿಸಿಬಿಸಿ ಊಟವೇ. ಅದೂ ಒಂದು ಹೊಟ್ಟೆ 

ತುಂಬುವಷ್ಟು...." ಎಂದು ಗುಣಗಾನ ಮುಂದುವರಿಯಿತು. ಈ ಮನೆಯವಳು ಬೆನ್ನ 

ಹಿಂದೆ ಅಡಗಿಸಿಟ್ಟುಕೊಂಡ, ಹಳಸಲು ದೋಸೆಯನ್ನು ಹಾಗೆ ಮರಳಿ ಅಡುಗೆಮನೆಗೆ 

ತೆಗೆದುಕೊಂಡು ಹೋದದ್ದು, ಅಂದಿನ ಬಿಸಿಬಿಸಿ ಹೆಸರುಬೇಳೆ- ಅಕ್ಕಿಯ ಖಿಚಡಿ, 

ದೋಸೆಯ ಜಾಗದಲ್ಲಿ ಕುಳಿತದ್ದು ಎಲ್ಲವನ್ನೂ ತಿರುಪೆಯವ ಅರ್ಧ ತೆರೆದ 

ರೆಪ್ಪೆಗಳಡಿಯಲ್ಲಿ ನೋಡುತ್ತಲೇ ಇದ್ದ, ಮುಸಿಮುಸಿ ನಗುತ್ತಲೇ ಇದ್ದ. ಮನುಷ್ಯನ ಮನೋಧರ್ಮ ತಿಳಿದ ವಿಜ್ಞಾನಿ ಇವ!


ನಾವಿಂದು ಯಾವರೀತಿಯಲ್ಲಿಯೇ ಇರಲಿ. ನೀಡುವ ಕೊಡುಗೆ, ಉಪಹಾರ, 

ದಾನಗಳೆಲ್ಲವೂ ಅಹಂಕಾರ ಮೂಲದವು. ಇಲ್ಲಿ ಬಹುತೇಕವಾಗಿ "ನಾನು" 

ಕೊಡುವವ ಎಂಬ ಭಾವವೇ ಮುಖ್ಯ. "ಅವನಿಗಿಂತ" ನನ್ನದು "ಹೆಚ್ಚಿನದು" ಎಂಬ 

ಹಿನ್ನಲೆಯೇ ಪ್ರಬಲ. ದಯೆ, ಪ್ರೀತಿ, ಅನುಕಂಪಗಳಲ್ಲಿ 'ಅಹಂ' ಕುಳಿತಿರುತ್ತದೆ. ಸಹಜ

 ಗುಣಗಳನ್ನು ಬೆಳೆಯಲು ಆಸ್ಪದವಿತ್ತರೆ "ಇದು" ನೇಪಥ್ಯಕ್ಕೆ ಸರಿಯುತ್ತದೆ.



ಬದುಕು ಹೇಗಿರಬೇಕು? ತಿಮ್ಮಗುರುವೆನ್ನುತ್ತಾರೆ-

                     ನಾಸಿಕದೋಳುಚ್ಚಾಸ ನಿಶ್ವಾಸ ನಡೆವಂತೆ |


                       ಸೂಸುತ್ತಲಿರಲಿ ನಿನ್ನಿರವು ಮಂಗಳವ ||



ಉಸಿರಾಡುವುದು ಹೇಗೆ ಸಹಜಕ್ರಿಯೆಯೋ ಹಾಗೆ ನಿಮ್ಮ ಬದುಕು ಸಮಾಜಕ್ಕೆ ಮಂಗಲಮಯವಾಗಿರಬೇಕು ಎನ್ನುತ್ತಾರೆ ತಿಮ್ಮಗುರು.


"ಸರ್ವರಿಗೂ ದೀಪಾವಳಿಯ ಶುಭಾಶಯಗಳು......."

ಮನುಕುಲದ ಕಾಳಜಿಯೇ ಜೀವ ವಿಕಾಸದ ಕುರುಹು..ಭಾಗ-೨

ಈ ಗೌತಮ ಬುದ್ಧ ಹುಟ್ಟುವ ಸಾವಿರಾರು ವರ್ಷಗಳ ಹಿಂದೆಯೂ ಒಬ್ಬ ಗೌತಮ ಇದ್ದ.

 ಪಂಚಮಹಾ ಪತಿವ್ರತೆಯರಲ್ಲಿಒಬ್ಬಳಾದ ಅಹಲ್ಯೆಯ ಪತಿ ಗೌತಮ ಮಹರ್ಷಿ! 

ಒಮ್ಮೆ ಹಸುವೊಂದು ಗೌತಮ ಮಹರ್ಷಿಯ ಆಶ್ರಮ ಹೊಕ್ಕಿತು. ಅಲ್ಲಿ ಒಣಗಲು

 ಹಾಕಿದ ಅಕ್ಕಿಯನ್ನೆಲ್ಲಾ ತಿಂದುಬಿಟ್ಟಿತು. ಇದನ್ನು ಕಂಡ ಗೌತಮ ಮಹರ್ಷಿಯ 

ಮನಸ್ಸು ತಲ್ಲಣಿಸಿತು. ಏಕೆಂದರೆ, ನೀರಿನಕೊರತೆ ತೀವ್ರವಾಗಿದ್ದ ಆ ಪರಿಸರದಲ್ಲಿ 

ಒಂದೇ ಒಂದು ಬೆಲೆ ತೆಗೆಯುವ ಸಾಧ್ಯತೆಇತ್ತು. ಒಂದು ಸಲ ಬೆಳೆದ ಅಕ್ಕಿಯನ್ನು

ಎಚ್ಚರಿಕೆ ವಹಿಸಿ ಕಾಪಿಟ್ಟರೆ ವರ್ಷಪೂರ್ತಿ ಗುರುಕುಲವಾಸಿಗಳಿಗೆ ಊಟ ಸಿಗುತ್ತಿತ್ತು. 

ಈಗ ಹಸು ಆ ಅಕ್ಕಿಯನ್ನು ತಿಂದು ಹಾಕಿದೆ.ಇದೆ ಭಾವದಲ್ಲಿ ಗೌತಮ ಮಹರ್ಷಿ 

ಹಸುವನ್ನು 

ಅಟ್ಟಿಸಿಕೊಂಡು ಹೋದ. 

ಓದುತ್ತಿರುವ ಹಸುವಿಗೆ 

ಕಾಲು ಜಾರಿತು. 

ಹೊಂಡಕ್ಕೆ ಬಿದ್ದ ಅದರ 

ಪ್ರಾಣ ಹಾರಿ 

ಹೋಯಿತು.

ಈಗ ಗೌತಮ 

ಮಹರ್ಷಿಗಳ ಮನಸ್ಸು 

ಮತ್ತೊಂದು ಸಮಸ್ಯೆಗೆ 

ಸಿಕ್ಕಿಬಿಟ್ಟಿತು. ಅಬೋಧ 

ಹಸು, ತನಗೆ ದೊರಕಿದ

 ಆಹಾರವನ್ನುತಿಂದಿತ್ತು. ಅದರ ಹಿಂದಿರುವ ಸಮಸ್ಯೆಯ ಅರಿವು ಅದಕ್ಕಿರಲಿಲ್ಲ. 

ಹಾಗಿರುವಾಗ ತಾನದನ್ನು ಓಡಿಸಬಾರದಿತ್ತು. ತನ್ನಿಂದಲೇ

ಅದಕ್ಕೆ ಸಾವು ಬಂತು. ಒಂದು ಸಾವಿಗೆ ಕಾರಣನಾದ ತನಗೆ ಪಾಪ 

ಸುತ್ತಿಕೊಂಡಿತು. ಸಂಯಮಿಯಾಗಿರಬೇಕಾಗಿದ್ದ ತಾನು ಹೀಗೆ 

ವಿಚಲಿತನಾಗಬಾರದಿತ್ತು. ಇದಕ್ಕೆ ಕಾರಣವೇನು? ಎಂದು ಶಿವನನ್ನು ಕುರಿತು 

ತಪಸ್ಸನ್ನಾಚರಿಸಿದ. ಶಿವ ಪ್ರಸನ್ನನಾಗಿ, "ಶಿಷ್ಯವ್ರನ್ದದ ಮೇಲಿನ ನಿನ್ನ 

ಜವಾಬ್ದಾರಿಯ ತೀವ್ರತೆ ನಿನ್ನಿಂದ ಈ ಕೆಲಸ ಮಾಡಿಸಿತು. ಇದಕ್ಕೆ ಕಾರಣ ನೀರಿನ 

ಕೊರತೆ.ಸಾಕಷ್ಟು ನೀರಿದ್ದಿದ್ದರೆ ಬೇಕಾದಷ್ಟು ಬೆಳೆ ತೆಗೆಯಬಹುದಾಗಿತ್ತು. ಬೆಳೆ 

ಸಾಕಷ್ಟಿದ್ದರೆ ಹಸು ತಿಂದರೂ ಮಿಕ್ಕುತ್ತಿತ್ತು.ನಿನಗೆ ಸಮಸ್ಯೆ

 ಇರುತ್ತಿರಲಿಲ್ಲ. ನಿನ್ನ ಬದ್ಧತೆಯಿಂದ ಹೀಗಾಯಿತು" ಎಂದು ತಿಳಿ ಹೇಳಿ, ಅಲ್ಲಿ ಒಂದು

 ನದಿಯನ್ನು ಸ್ರಷ್ಟಿಸಿದನಂತೆ. ಅದಕ್ಕೆ ಗೋದಾವರಿ ಎಂದು ಹೆಸರಾಯಿತು. 

ಗೋದಾವರಿ ತೀರದ ಭತ್ತದ ಬೆಳೆ ಅತ್ಯುತ್ಕ್ರಷ್ಟ ಎನ್ನಲಾಗುತ್ತದೆ. ಹೀಗೆ ಮನುಕುಲದ

ಬಗೆಗಿನ ಕಾಳಜಿಯೇ ಜೀವದ ಅರಳುವಿಕೆಗೆ ಅಂತಿಮ ಸಂಕೇತ. ಭವದ 

ಸಮಸ್ತದಲ್ಲೂ ಭಗವಂತನನ್ನು ಕಾಣುವ ವಿಕಸಿತ ಸ್ವರೂಪ.

Saturday 18 October 2014

ಮನುಕುಲದ ಕಾಳಜಿಯೇ ಜೀವ ವಿಕಾಸದ ಕುರುಹು..ಭಾಗ-೧



ಮಗಧದ ರಾಜಧಾನಿಯಾದ ರಾಜಗೃಹ ಹೊರಗಿರುವ ಚೈತ್ಯದಲ್ಲಿ ಗೌತಮ ಬುದ್ದ 

ಬಿಡು ಬಿಟ್ಟಿದ್ದ. ಪ್ರತಿದಿನ ಸಂಜೆ ಪ್ರವಚನ ನಡೆಸುತ್ತಿದ್ದ. ಮಂದಿ ಕಿಕ್ಕಿರಿದು 

ಸೇರುತ್ತಿದ್ದರು. ಹೀಗಿರುವಲ್ಲಿ ವೈಶಾಲಿಯಿಂದ ಬಂದ ವರ್ತಕರ ತಂಡದವರಿಗೆ 

ಬುದ್ದದೇವ ಇಲ್ಲಿರುವ ವಿಷಯ ತಿಳಿಯಿತು. ವ್ಯಾಪಾರಕ್ಕೆಂದು ಬಂದವರು ಸಂಜೆ 

ಮುನ್ನ ಕೆಲಸ ಮುಗಿಸಿ ಬುದ್ದನನ್ನು ಕೇಳಲು ಬರತೊಡಗಿದರು. ಒಂದು ವಾರ 

ಕಳೆಯಿತು. ವರ್ತಕ ತಂಡದ ಯಜಮಾನನಿಗೆ ಒಂದು ಸಂದೇಹ ಬಂತು. ಆ 

ಸಂದೇಹ ಅವನ ವೃತ್ತಿ ಆಧಾರಿತ ಚಿಂತನೆಯಿಂದ ಬಂದಿತ್ತು.





ಅವನು ಗೌತಮ ಬುದ್ದನ ಮುಂದೆ ತನ್ನ ಸಂದೇಹ ಮಂಡಿಸಿದ.- " ಭಗವಾನ್ ಇಷ್ಟು 

ಶ್ರಮ ಪಟ್ಟು ಪ್ರತಿದಿನ, ಇಷ್ಟು ಮಂದಿಗೆ ತಾವು ಕಂಡ ಸತ್ಯದ ಬಗ್ಗೆ ಇನ್ನಿಲ್ಲದಂತೆ 

ತಿಳಿಯಹೇಳುತ್ತೀರಿ. ಆದರೆ, ಇವರಲ್ಲಿ ಎಷ್ಟು ಮಂದಿಗೆ ತಾವು ಹೇಳುವ ಮಾತುಗಳು

ಅರ್ಥವಾಗುತ್ತವೋ ಎಂಬ ಸಂದೇಹ ನನಗೆ. ಒಂದು ವೇಳೆ ಒಂದಿಷ್ಟು 

ಅರ್ಥವಾಯಿತು ಎಂದುಕೊಂಡರು ಆ ತತ್ವಗಳ ಪಾಲನೆ ಎಷ್ಟು ಮಂದಿಯಿಂದ 

ಸಾಧ್ಯವಾಗುತ್ತದೆ? ಮತ್ತೆ ತಮ್ಮ ಹಾಗೆ ನಿರ್ವಾಣ ಹೊಂದುವ ಮಂದಿಯನ್ನು 

ಊಹಿಸಲೂ ಅಸಾಧ್ಯ. ಹಾಗಿರುವಾಗ ತಮ್ಮ ಈ ಶ್ರಮ ವ್ಯರ್ಥವಾಗುತ್ತಿದೆಯಲ್ಲ? 

ಇದರಿಂದ ತಮಗಾಗುವ ಲಾಭಾವಾದರೂ ಏನು?"






ಗೌತಮ ಬುದ್ಧ ನಸುನಗುತ್ತಾ " ತಾವು ವೈಶಾಲೀಯವರೆಂದು ಕಾಣುತ್ತದೆ 

ಅಲ್ಲವೇ?" ಎಂದು ಪ್ರಶ್ನಿಸಿದ. ವಣಿಕನ ಮುಖ ಇಷ್ಟಗಲವಾಯಿತು. "ಹೌದು , 

ಹೌದು. ನಾನು ವೈಶಾಲೀಯವ" ಎಂದುತ್ತರಿಸಿದ. ಬುದ್ಧದೇವ ಮತ್ತೆ 

"ರಾಜಗೃಹದಿಂದ ವೈಶಾಲಿಗೆ ಹೋಗುವ ದಾರಿ ಹೇಗೆ? ಒಂದೇ ದಾರಿಯೊ ಅಥವಾ 

ಹಲವು ದಾರಿಗಳಿವೆಯೋ? ಮತ್ತೆ ವೈಶಾಲಿ ಬಲು ಸುಂದರ ನಗರ ಎಂದು 

ಕೇಳಿದ್ದೇನೆ. ಹೌದೇನು?" ಎಂದು ಕೇಳಿದ. ವಣಿಕನಿಗೆ ತಾನು ಸಮಾಧಾನ 

ಬಯಸಿದ ಸಂದೇಹ ಮರೆತೇ ಹೋಯಿತು. ಬಲು ಉತ್ಸಾಹದಿಂದ ವೈಶಾಲಿಗೆ 

ಹೋಗುವ ಬೇರೆ ಬೇರೆ ದಾರಿಗಳು, ಆ ದಾರಿಯಲ್ಲಿ ಸಿಗುವ ನದಿ ತೊರೆಗಳು,

ದಟ್ಟ ಕಾನನದ ಹಸಿರು, ರಾಜಿ, ಮತ್ತೆ ವೈಶಾಲಿಯ ವೈಭವ , ಸೌಂದರ್ಯ 

ವರ್ಣಿಸತೊಡಗಿದ.. ಇವನ ಮಾತಿನ ಮೋಡಿಗೆ ಮರುಳಾದ ಮಂದಿ ಇವನ ಸುತ್ತ 

ಹಿಂಡುಗಟ್ಟಿ ನಿಂತರು. ಸುಮಾರು ಹೊತ್ತು ಹೀಗೆ ವರ್ಣಿಸಿದ ಅನಂತರ ವರ್ಣಿಕ, " 

ಆಹಾ! ಇಷ್ಟು ನನ್ನ ಮಾತುಗಳ ಮೂಲಕ ತೋರಿಸಬಹುದಾದ ವೈಶಾಲಿ ವೈಭವ .

 ಆದರೆ ನನ್ನನ್ನು ನಂಬಿ ... ನನ್ನ ಈ ಮಾತುಗಳಲ್ಲಿ ನೂರರಲ್ಲಿ ಒಂದು ಭಾಗ 

ನ್ಯಾಯವು ಈ ಸುಂದರ ನಗರದ ವರ್ಣನೆಯಾಗಲಿಲ್ಲ. ನೀವೆಲ್ಲರೂ 

ಒಮ್ಮೆಯಾದರೂ ನೋಡಲೇಬೇಕಾದ ನಗರವದು.. ಪ್ರಯತ್ನ ಪೂರ್ವಕವಾಗಿ 

ಒಮ್ಮೆ ನಮ್ಮೂರಿಗೆ ಬನ್ನಿ ಎಂದು ಆಹ್ವಾನಿಸುತ್ತಿದ್ದೇನೆ" ಎಂದು ಮಾತು ಮುಗಿಸಿದ.






ನೆರೆದವರು ಚದುರಿ ಹೋದ ಅನಂತರ, ನಸುನಗುತ್ತಾ ಕುಳಿತಿದ್ದ ಬುದ್ಧ 

ಕಂಡ."ಅಯ್ಯಾ! ವಣಿಕಶ್ರೇಷ್ಟ, ಈ ವೈಶಾಲಿಯಂತೆಯೇ ಪರಮ ಪದ ನನ್ನ ತವರು,

 ಸೌಂದರ್ಯ, ಶಾಂತಿ, ಆನಂದದ ತವರು. ಒಮ್ಮೆಯಾದರೂ ಮಂದಿ ಅಲ್ಲಿಗೆ

ಹೋಗುವ ಪ್ರಯತ್ನವನ್ನಾದರೂ ಮಾಡಲಿ ಎಂದು ನನ್ನಾಸೆ. ಆದುದರಿಂದ ಇಲ್ಲಿಗೆ 

ಕರೆತರುವ ಹಾದಿ, ಮತ್ತೆ ಈ ನಗರಿಯ ವೈಭವದ ವರ್ಣನೆ ಮಾಡುತ್ತೇನೆ. 

ಪ್ರಯತ್ನಿಸುವವರು ಹೋಗುತ್ತಾರೆ. ಹೋಗಲಾಗವರಿಗೆ ಪ್ರಯತ್ನಿಸಿದವರಿಗೂ ಒಂದು

ಲಾಭವಾಗುತ್ತದೆ. ಇಂಥದ್ದೊಂದು ಇದೆ ಎಂಬ ವಿಷಯದ ಬೀಜ ಬೀಳುತ್ತದೆ. ಅವರ
 ಮಂದಂಗಳದಲ್ಲಿ ಮುಂದೆ ಎಂದಾದರೊಂದು ದಿನ ಅನುಕೂಲ ವಾತಾವರಣ 

ಸಿಕ್ಕಿದಂದು ಆ ಬೀಜ ಮೊಳಕೆಯೊಡೆಯಲೂಬಹುದು! ಆದ್ದರಿಂದ ಇಲ್ಲಿ

 ಎಲ್ಲವೂ ಲಾಭವೇ. ನಷ್ಟದ ಮಾತೆ ಇಲ್ಲ " ಎಂದ ಕರುಣಾಮಯಿ ಬುದ್ಧ...





ಈ ಜಗತ್ತಿನಲ್ಲಿ ಅದರದೇ ಆದ ನಿಯಮವಿದೆ. 

ಪ್ರತಿಯೊಂದು ಆ 
ನಿಯಮದಂತೆ  ನಡೆಯುತ್ತದೆ. 

ಮನುಷ್ಯನಿಗೂ ಇದೆ ನಿಯಮ

ಅನ್ವಯಿಸುತ್ತದೆ. ಒಳಿತು 

ಮಾಡಿದರೆ ಒಳಿತು, ಕೆಟ್ಟದ್ದು ಮಾಡಿದರೆ ಕೆಟ್ಟ ಫಲ. ಇದೆ ನಿಯಮ. ಆದುದರಿಂದ

ತಪ್ಪು ಉದ್ದೆಶಪುರ್ವಕವಾಗಿಲ್ಲದಾಗ ಕ್ಷಮೆಯಾಚಿಸುತ್ತಾ, ವಿಶ್ವಾಚೈತನ್ಯಕ್ಕೆ 

ಮೊರೆಹೋದರೆ ಫಲದ ತೀವ್ರತೆ ಕಡಿಮೆಯಾಗುವುದು. ಮಾತ್ರವಲ್ಲ, 

ಶಕ್ತಿಯು ವ್ಱದ್ಧಿಯಗುತ್ತದೆ ಎನ್ನುತ್ತಾರೆ ಬಲ್ಲವರು.....

ಒಂದು ಸಂಜೆ....ಭಾಗ-೬

೧೧ ಸೆಪ್ಟೆಂಬರ್ ೨೦೦೧


"ಯಾರೋ ಭಯೋತ್ಪಾದಕರು ನಿಮ್ಮ ದೇಶದಲ್ಲಿ ಶಿಬಿರನ್ನೇರ್ಪಡಿಸಿಕೊಂಡು ನೆರೆ 

ರಾಷ್ಟ್ರಗಳ ಮೇಲೆ ಕತ್ತಲಲ್ಲಿ ದಾಳಿ ನಡೆಸಿದರೆ, ಅದಕ್ಕೆ ಪಾಪ, ನೀವೇನು 

ಮಾಡಬಲ್ಲಿರಿ?" ಎಂದಿದ್ದ ಅಮೆರಿಕ, ಈಗ ಆ ಮಾತು ಹಿಂದೆ ತೆಗೆದುಕೊಳ್ಳಬೇಕಾಗಿ

 ಬಂತು. ಅದಕ್ಕೆ ಕಾರಣ 'ಸೆಪ್ಟೆಂಬರ್ ೧೧'ರಂದು ನಡೆದ ಘಟನೆ.



ಆ ದಿನ ನಾಲ್ಕು ವಿಮಾನಗಳು ಅಮೆರಿಕಾದ ಸೈನಿಕ ಬಲವನ್ನೂ, ಗೂಢಚಾರ 

ವ್ಯವಸ್ಥೆಯನ್ನು ಅಪಹಾಸ್ಯ ಮಾಡುವಂತೆ ಡಬ್ಲ್ಯೂ. ಟಿ. ಸಿ. ಕಟ್ಟಡಗಳಿಗೆ ಅಪ್ಪಳಿಸಿ 

ಸಾವಿರಾರು ಜನ ಅಮೆರಿಕರನ್ನೂ, 

ಪೆಂಟಗಾನ್ ಸೈನಿಕರನ್ನೂಬಲಿ 

ತೆಗೆದುಕೊಂಡು ಧ್ವಂಸವಾದವು. 

ಊಹೆಗು ನಿಲುಕದ ಈ ಭಯೋತ್ಪಾದಕ 
ಚಟುವಟಿಕೆಗೆ 

ಜಗತ್ತು ಧಿಗ್ಬ್ರಮೆಗಿಡಾಯಿತು. ಇತ್ತೀಚಿನ 

ಕಾಲದಲ್ಲಿ ಇದರಂತಹ ನರರೂಪ ರಾಕ್ಷಸ ಚಟುವಟಿಕೆ ಮತ್ತೊಂದು ನಡೆದಿಲ್ಲ.


ಇದರ ಹಿಂದಿರುವುದು ಒಸಾಮಾ-ಬಿನ್-ಲಾಡೆನ್ ಎನ್ನುವುದು ಅಮೆರಿಕಾದ ನಂಬಿಕೆ. 
ಸಾಕ್ಷ್ಯಾಧಾರಗಳಿಲ್ಲ. ಆದರೆ ನಂಬಿಕೆ ಮಾತ್ರ ಬಲವಾಗಿತ್ತು. ಮುಸ್ಲಿಮ್ ಮತ 

ರಕ್ಷಣೆಯನ್ನು ತನ್ನ ಹೆಗಲಿಗೇರಿಸ್ಕೊಂಡ ಲಾಡೆನ್, ಒಂದೊಮ್ಮೆ ಪಶ್ಚಿಮ 

ಏಷ್ಯಾದಲ್ಲಿರುತ್ತಿದ್ದ. ಅವನ ವಿಧ್ವಂಸಕ ಚಟುವಟಿಕೆಗಳನ್ನು ಸಹಿಸಿಕೊಳ್ಳಲಾಗದೆ 

ಮಾತ್ರದೇಶ ಒದ್ದೋಡಿಸಿತ್ತು. ಸೌದಿ ಅರೇಬಿಯಾದಿಂದ ಪರಾರಿಯಾಗಿ 
ಅಫಘಾನಿಸ್ತಾನದಲ್ಲಿ ತಲೆಮರೆಸಿಕೊಂಡ.



ಅಸಲಿ ಕಥೆ ಆರಂಭವಾಗಿದ್ದು ಇಲ್ಲೆ. ಒಳ್ಳೆಯದೋ, ಕೆಟ್ಟದ್ದೋ, ಮಾನವರೋ, 

ರಾಕ್ಷಸರೋ-ಅದೇನೇ ಇದ್ದರೂ ಮಾತಿಗೂ,ಮತಕ್ಕೂ ಕಟ್ಟುಬೀಳುವ ಸ್ವಭಾವ 

ತಾಲಿಬಾನಿಗಳದು. ಇವರು ಲಾಡೆನ್ ಗೆ ಆಶ್ರಯ ನೀಡಿದರು. ಒಂದೊಮ್ಮೆ ಇವರನ್ನು ಲಾಲಿಸಿ ಪ್ರೋತ್ಸಾಹಿಸಿದ್ದು ಅಮೆರಿಕನ್ನರೆ! ಆದರೆ ಭಯೋತ್ಪಾದಕರಿಗೆ 

ಆಶ್ರಯ ನೀಡಿದ್ದಕ್ಕೆ ಅಫಘಾನಿಸ್ತಾನದಿಂದ ತಾಲಿಬಾನಿಗಳ ಹೆಸರು ಅಳಿಸಿ 

ಹಾಕಬೇಕೆಂದು ಅಮೆರಿಕ ನಿರ್ಧರಿಸಿತು. ವಿಶ್ವದ ರಾಷ್ಟ್ರಗಳ ಸಹಾನುಭೂತಿ 

ಪಡೆಯಿತು. ಇಲ್ಲವೆನ್ನುವ ಧೈರ್ಯ ಯಾರಿಗಿರಲು ಸಾಧ್ಯ? ಆದರೆ ಅಲ್ಲೊಂದು ತೊಡಕು ತಲೆಯೆತ್ತಿತು.


ತಾಲಿಬಾನಿಗಳನ್ನು ಒಂದು ದೇಶ ಎಂಬುದಾಗಿ ಮನ್ನಣೆ ನೀಡಿದ ಮೂರು 

ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದ್ದುದು ಪಾಕಿಸ್ತಾನ. ತಾಲಿಬಾನಿಗಳಿಗೂ 

ಪಾಕಿಸ್ತಾನಿಗಳಿಗೂ ಆಪ್ತರು. ಆದರೆ ಪಾಕಿಸ್ತಾನದ ನೆರವಿಲ್ಲದೆ ಅಫಘನ್ 

ಸರೋವರದಲ್ಲಿ ಬಚ್ಚಿಟ್ಟುಕೊಂಡ ಲಾಡೆನ್ ಹಿಡಿಯುವುದು ಕಷ್ಟ.! ಆದರೆ ಪಾಕಿಸ್ತಾನ 

ಅಮೇರಿಕಕ್ಕೆ ಸಾವಿರಾರು ಕೋಟಿ ಡಾಲರ್ಗಳಷ್ಟು ಸಾಲಗಾರನಾಗಿತ್ತು. ಅಮೆರಿಕ ಆ ಟ್ರಂಪ್ ಕಾರ್ಡ್ಗಳನ್ನು ಬಳಸಿತು.!




"ತಾಲಿಬಾನಿಗಳನ್ನು ನಾಶಮಾಡಲು ನೆರವಾದರೆ, ನೀವು ನಮಗೆ ಕೊಡಬೇಕಿರುವ 

ಸಾಲವನ್ನೆಲ್ಲ ಮನ್ನಾ ಮಾಡುತ್ತೇವೆ" ಎಂದು ಒತ್ತಡ ಹೇರಿತು ಅಮೆರಿಕ.

      ಪಾಪ. ಪಾಕಿಸ್ತಾನ ಏನು ಮಾಡಬೇಕು? 'ಇಲ್ಲ, ಒಲ್ಲೆ' ಎಂದ ಮರುಕ್ಷಣ ಅದರ ಆರ್ಥಿಕ ವ್ಯವಸ್ಥೆ ಇನ್ನಿಲ್ಲದಂತೆ ಕುಸಿಯುತ್ತದೆ.



ನೀತಿ-ನಿಜಾಯಿತಿ, ಮಾತಿಗೆ ಕಟ್ಟುಬೀಳುವುದು, ಗೆಳೆತನ ಇವ್ಯಾವುವೂ ರಾಜನೀತಿಯಲ್ಲಿ ಶಾಶ್ವತವಲ್ಲ.


ಪಾಕಿಸ್ತಾನ ತಾಲಿಬಾನಿಗಳಿಗೆ ವಿರೋಧವಾಗಿ ಅಮೆರಿಕದೊಂದಿಗೆ ಕೈ ಕೂಡಿಸಿತು.

ಹನ್ನೆರಡು ವರ್ಷಗಳ ಹಿಂದೆ ರಷ್ಯನ್ನರನ್ನು, ಭಾರತೀಯರನ್ನೂ ಅಫಘಾನ್ನಿಂದ ದೂರ 

ಮಾಡಲೋಸುಗ ಯಾವ ಗುಂಪನ್ನು ಬಳಿಗೆಳೆದುಕೊಂಡು ಪೋಷಿಸಿ, ಬೆಳೆಸಿದ್ದವೋ 

ಈಗ ಆ ಗುಂಪನ್ನು ಬೇರು ಸಹಿತ ನಿರ್ಮೂಲ ಮಾಡಲು ಅಮೆರಿಕ ಪಾಕಿಸ್ತಾನ ಕಂಕಣ ತೊಟ್ಟವು.



ಇಲ್ಲೆ ಭಾರತ ಕಲಿಯಬೇಕಿರುವ ಪಾಠ ಒಂದಿದೆ. ಅದಕ್ಕೋಸ್ಕರವೇ ಇಷ್ಟೊಂದು ಪೀಠಿಕೆ.


" ನೀನು ಬಲಶಾಲಿಯಾದರೆ, ನೀನೇನು ಹೇಳಿದರೂ ಎಲ್ಲರೂ ಕೇಳುತ್ತಾರೆ.

 ಇಷ್ಟವಿರಲಿ,ಇಲ್ಲದಿರಲಿ,ನಿಂದೆಲ್ಲಾ ಮಾತಿಗೆಲ್ಲ ತಲೆದೂಗುತ್ತಾರೆ. ನಿನ್ನಲ್ಲಿ ಬಲ 

ಇಲ್ಲದಿದ್ದರೆ ನ್ಯಾಯ ನಿನ್ನ ಕಡೆಗಿದ್ದರೂ "ತಮಗೆ ಉಪಯೋಗವಾಗದ ಧರ್ಮ 

ಯಾಕೆ ಬಿಡು" ಎಂದುಕೊಳ್ಳುತ್ತಾರೆ. ನಿನ್ನ ನೆರವಿಗೆ ಬರುವುದಿಲ್ಲ. ಅದಕ್ಕೆ ಮೊದಲಿಗೆ 

ಬಲ ಸಂಪಾದಿಸು, ಅದಕ್ಕಿಂತಲೂ ಮುಂಚೆ ಧೈರ್ಯ ಸಂಪಾದಿಸು. ನಿನ್ನ 

ಆಧೈರ್ಯಕ್ಕೆ ಒಳ್ಳೆಯತನ ಎಂದು ಹೆಸರಿಟ್ಟುಕೊಳ್ಳಬೇಡ." 




ಜಗತ್ತಿನ ಎಲ್ಲ ರಾಷ್ಟ್ರಗಳೂ ಅಮೆರಿಕಾರನ್ನು ಬೆಂಬಲಿಸಿದ್ದು ಕೇವಲ ಇದೊಂದು 

ಕಾರಣಕ್ಕಾಗಿ! ಲಾಡೆನ್ ನರರೂಪ ರಾಕ್ಷಸನೇ ಇರಬಹುದು. ಆದರೆ ಸಾಕ್ಷಿ,ಪುರಾವೆ

 ತೋರಿಸೆಂದು ಯಾರೊಬ್ಬರೂ ಕೇಳಲಿಲ್ಲ. ಇನ್ನೊಂದು ರಾಷ್ಟ್ರದ ಮೇಲೆ 

ಬಾಂಬುಗಳ ಮಳೆ ಸುರಿಸಿದರೂ ಕಿಮಕ್ಕೆನ್ನಲಿಲ್ಲ. ಭಾರತದೇಶ 

ಕಲಿಯಬೇಕಿರುವುದು ಮತ್ತೊಂದು ವಾಸ್ತವ, ಇದಕ್ಕಿಂತಲೂ ಮಹತ್ತರವಾದದ್ದು ಇನ್ನೊಂದಿದೆ.


ಕಠಿಣ ನಿರ್ಧಾರವೊಂದನ್ನು ಕೈಗೊಂಡಾಗ ವಿರೋಧ ವ್ಯಕ್ತವಾಗುವುದು ಸ್ವಾಭಾವಿಕ! 

ಸಹಜ!! ಆದರೆ ಆ ನಿರ್ಧಾರವನ್ನೇ ಬಲವಾಗಿ ಸಮರ್ಥಿಸಿ ಗಟ್ಟಿಯಾಗಿ ನಿಂತರೆ, 

ಬಲು ಬೇಗದಲ್ಲೇ ಆ ವ್ಯತಿರೇಕ, ಇಲ್ಲಾಗುತ್ತದೆ, ಜನರಿಗೆ ಅದಕ್ಕಿಂತಲೂ 

ಮುಖ್ಯವಾದ ಕೆಲಸಗಳು ಇನ್ನೂ ಸಾಕಷ್ಟಿರುತ್ತವಾದರಿಂದ. ೧೯೮೯ರಲ್ಲಿ ಚೀನಾದ 

ತಿಯನಾನ್‌ಮೆನ್ ಚೌಕದಲ್ಲಿ ವಿದ್ಯಾರ್ಥಿಗಳು ಎಬ್ಬಿಸಿದ ದಂಗೆ, ೨೦೦೦ದಲ್ಲಿ 

ಅಂದ್ರಪ್ರದೇಶದಲ್ಲಿ ವಿದ್ಯುತ್ ಶುಲ್ಕ ಏರಿಕೆಗೆ ವಿರೋಧ ಪಕ್ಷಗಳು ಎಬ್ಬಿಸಿದ ಗದ್ದಲ... 

ಇಂಥವೆಲ್ಲ ಹಾಗೆ ಕರಗಿ ಹೋಗಲು ಕಾರಣ- ನಿರ್ಧಾರಕ್ಕೆ ಅಚಲವಾಗಿ ಅಂಟಿಕೊಂಡು ನಿಂತದ್ದು.!


ತಾಲಿಬಾನಿಗಳ ಮೇಲೆ ಅಮೆರಿಕ ಯುದ್ಧ ಘೋಷಿಸಿದ ಕೂಡಲೇ ಬಹಳ ಕಡೆ 

ವಿರೋಧ ಪ್ರದರ್ಶನಗಳು ಕಂಡುಬಂದವು. ಹೈದರಾಬಾದನಲ್ಲಿ ಪುಟ್ಟ 

ಹುಡುಗನೊಬ್ಬನಿಗೆ ಲಾಡೆನ್ನಂತೆ ಮೇಕಪ್ ಮಾಡಿ, ಕೈಗೆ ಬಂದೂಕು ನೀಡಿ 

ಮೆರವಣಿಗೆ ಮಾಡಲಾಗಿತ್ತು ಕೂಡ! ಈ ಮೆರವಣಿಗೆಗೆ ಪೊಲೀಸರ ರಕ್ಷಣೆ 

(ಎಸ್ಕಾರ್ಟ್)  ನೀಡಿದ್ದು ನಮ್ಮ ಒಳ್ಳೆಯತನಕ್ಕೂ (?) ಕೈಲಾಗದಿರುವಿಕೆಗೂ (?), 

ಓಟುಗಳ ರಾಜಕೀಯ ನಿದರ್ಶನ. ನಮ್ಮ ಹಿಡಿತ ಬಿಗಿಯಾಗಿದೆ ಎನ್ನುವುದು 

ಗೊತ್ತಾದರೆ ಎದುರಾಳಿ ಬಾಲ ಬಿಚ್ಚಲಾರ. ಆ ರೀತಿ ಇರಲು ನಮ್ಮಿಂದ 

ಸಾಧ್ಯವಾಗಿದ್ದರೆ ನಮ್ಮ ವಿದೇಶಾಂಗ ಮಂತ್ರಿ ಕಂದಹಾರ್ಗೆ ಹೋಗಿ 

ಭಯೋತ್ಪಾದಕರ ಕಾಲಿಗೆ ಬೀಳುವ ಅಗತ್ಯವಿರಲಿಲ್ಲ. ಆ ಸಂದರ್ಭದಲ್ಲಿ ನಾವು 

ಬಿಡುಗಡೆ ಮಾಡಿದ ಭಯೋತ್ಪಾದಕರು ಸ್ರಷ್ಟಿಸಿದ ವಿಧ್ವಂಸ ಕಾಂಡ ಎಂಥದೆಂಬುದು ಎಲ್ಲರಿಗೂ ಗೊತ್ತಿದ್ದದ್ದೇ.


ಐವತ್ತು ವರ್ಷಗಳ ಹಿಂದೆ ಹೋದರೆ --


ಸ್ವಾತಂತ್ರ್ಯ ಬಂದ ದಿನಗಳಲ್ಲೇ ಸರ್ದಾರ್ ವಲ್ಲಭಾಯಿ ಪಟೇಲರನ್ನು ಕಳಿಸಿ, 

ನಿಜಾಮನನ್ನು ಮಣಿಸಿದಂತೆ ಕಾಶ್ಮೀರವನ್ನು ಭಾರತದೊಳಗೆ ಸೇರ್ಪಡೆ 

ಮಾಡಿಕೊಂಡಿದಿದ್ದರೆ, ಈ ಸ್ವಾಯತ್ತ ಆಡಳಿತದ ಪ್ರಶ್ನೆಯೇ ತಲೆ ತೆಲೆಯೆತ್ತುತ್ತಿರಲಿಲ್ಲ. 

ಆ ರೀತಿ ಮಾಡಿದ್ದರೆ ಆಗ ಗದ್ದಲ ಎದ್ದಿರುತಿತ್ತು ನಿಜ, ಆದರೆ ಎಷ್ಟು ದಿನ ಮುಂದುವರೀಯುತಿತ್ತು?




ಧೈರ್ಯ ಇರಬೇಕು. ಮೆಟ್ಟಿ ನಿಲ್ಲುವ ಬಲ ಇರಬೇಕು! ಎಲ್ಲಕ್ಕಿಂತ ಮುಖ್ಯವಾಗಿ 

ರಾಜಕೀಯ ನಾಯಕರೆನಿಸಿಕೊಂಡವರಲ್ಲಿ ಮತಗಳಿಗೋಸ್ಕರ ದೇಶವನ್ನು ಒತ್ತೆ 

ಇಡುವ ಹೀನ ಗುಣ, ಇಲ್ಲವಾಗಬೇಕು!!!




ಮುಗಿಯಿತು....ಧನ್ಯವಾದಗಳು...

(Sourse :- "Malegalada ondu sanje" Novel from yandamuri Virendranath.)

Thursday 16 October 2014

ಒಂದು ಸಂಜೆ....ಭಾಗ-೫

ಷರೀಫ್ ಮುಗ್ಧನಂತೆ- "ನನಗೇನು ಗೊತ್ತಿಲ್ಲ ಮಿಸ್ಟರ್ ಪ್ರೆಸಿಡೆಂಟ್, ಆ 

ತಾಲಿಬಾನಿಗಳು ಕಾಶ್ಮೀರ್ ಪವಿತ್ರ ಯುದ್ಧ ವೀರರು ಮಾಡುತ್ತಿರುವ ಯುದ್ಧ ಅದು. 

ಅದರೊಂದಿಗೆ ನಮ್ಮ ದೇಶಕ್ಕೆ ಯಾವ ಸಂಭಂಧವೂ ಇಲ್ಲ" ಎಂದ.

"ಕಿವಿಯಲ್ಲಿಡೊದಕ್ಕೆ ಪಾಕಿಸ್ತಾನದಲ್ಲಿ ಹೂಗಳು ಎಲ್ಲೂ ಸಿಗೋದಿಲ್ಲ ಮಿಸ್ಟರ್ ಷರೀಫ್, 
ಕಾಶ್ಮೀರದಲ್ಲಾದ್ರೆ ಸಿಗುತ್ತದೆ. ಅದಕ್ಕೆ ಬಹುಶಃ ನೀವು ಅದನ್ನು 

ಆಕ್ರಮಿಸಿಕೊಳ್ಳಬೇಕೆಂದು ಕೊಳ್ಟಿದ್ದೀರಿ ಅಂತ ಅಂದ್ಕೋತೀನಿ."


"ನೀವೇನು ಮಾತಾಡ್ತಿದಿರೋ ನನಗೆ ಅರ್ಥವಾಗುತ್ತಿಲ್ಲ"

"ಪಾಕಿಸ್ತಾನ ಸೇನಾ ಬೆಂಬಲವಿಲ್ಲದೇ ಕೇವಲ ಕಾಶ್ಮೀರ್ 

ಯುದ್ಧವೀರರು,ತಾಲಿಬಾನಿಗಳು ಸೇರಿ ಹಿಮಾಲಯ ಶಿಖರಗಳ ಮೇಲೆ ಎಲುಬು 

ತೂತು ಕೊರೆಯುವ ಚಳಿಯಲ್ಲಿ, ಬಲಿಷ್ಟ ಭಾರತದ ಸೇನೆಯನ್ನು ಎದುರಿಸಿ 

ಹೋರಾಡಿ ಗೆಲ್ಲಬೇಕು ಅಂದ್ಕೊಳ್ತಿದಿರಾ? ಯಾರ ಕಿವಿಲಿ ಹೂವಿಡಬೇಕು ಅಂತ ಇದನ್ನೆಲ್ಲ ಹೇಳ್ತಿದಿರಿ?"
"ಜಮ್ಮು-ಶ್ರೀನಗರಗಳನ್ನು, ಒಂದುಗೂಡಿಸುವ ರಹದಾರಿಯನ್ನು ಕಾರ್ಗಿಲ್ ಬಳಿ

 ಆಕ್ರಮಿಸಿದರೆ ಕಾಶ್ಮೀರ್ ಪ್ರತ್ಯೇಕವಾಗಿ ಬಿಡುತ್ತೆ ಮಿಸ್ಟರ್ ಪ್ರೆಸಿಡೆಂಟ್."

"ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕ ಯಾವುದೇ ಎರಡು ದೇಶಗಳ ನಡುವೆ 

ಯುದ್ಧ ಆಗೋದನ್ನು ಬಯಸುತ್ತಿಲ್ಲ ಷರೀಫ್. ಯುದ್ಧ ಅಂತೇನಾದರೂ 

ಮಾಡೋದಾದ್ರೆ ಅದನ್ನು ಅಮೆರಿಕವೇ ಮಾಡಬೇಕು! ಅದಾದರೂ ಕೇವಲ ಇತರ ದೇಶಗಳಿಗೆ ಶಾಂತಿ-ಭದ್ರತೆಗಳನ್ನೊದಗಿಸುವುದಕ್ಕೋಸ್ಕರ....."

ಪಾಕಿಸ್ತಾನ್ ಪ್ರಧಾನಿ ಮತ್ತೊಮ್ಮೆ ಯೋಚಿಸಿ, ಮೋಡಿ ಎನ್ನುವ ಧೋರಣೆಯಲ್ಲಿ 

ನುಡಿದ- " ಅಫಘಾನವನ್ನು ಗೆದ್ದ ನಂತರ ತಾಲಿಬಾನಿಗಳು ಬಲು 

ಉತ್ಸಾಹದಿಂದಿದ್ದಾರೆ. 'ಯುದ್ಧ' ಅವರನ್ನು ಬಲು ಉತ್ಸಾಹದಿಂದಿರಿಸುತ್ತದೆ. 

ಮತ್ತೊಂದೆಡೆ ಪಾಕ್ ಆಕ್ರಮಿತ ಕಾಶ್ಮೀರದಿಂದ ಸ್ವಾತಂತ್ರ್ಯಯೋಧರು ಅವರಿಗೆ 

ಜೊತೆಯಾಗಿದ್ದಾರೆ. ಕಾಶ್ಮೀರಕ್ಕೆ ವಿಮುಕ್ತಿ ದೊರಕಿಸಿಕೊಡಲು ಇದಕ್ಕಿಂತಲೂ 

ಒಳ್ಳೆಯ ಅವಕಾಶ ಮತ್ತೊಂದು ಸಿಗೋದಿಲ್ಲ. ಸ್ವಲ್ಪ ನಮ್ಮ ಕಡೆಯಿಂದಲೂ ಯೋಚಿಸಿ"

ಪ್ರೆಸಿಡೆಂಟ್ ನಕ್ಕ. "ಅಮೆರಿಕ ತನ್ನ ಕಡೆಯಿಂದ ಬಿಟ್ಟು ಬೇರಾರ ಕಡೆಯಿಂದಲೂ 

ಯೋಚಿಸೊದಿಲ್ಲ ಮಿಸ್ಟರ್ ಪ್ರೈಮ್ ಮಿನಿಸ್ಟರ್, ಈಗಾಗಲೇ ನಾವು ಸಾಕಷ್ಟು 

ಮುಖಭಂಗಕ್ಕಿಡಾಗಿದ್ದೇವೆ. ಇರಾಕ್ನಂತಹ ಪುಟ್ಟ ದೇಶವನ್ನು, ಸದ್ದಾಮ್ 

ಹುಸೇನನನ್ನು ನಿಯಂತ್ರಿಸಲು ನಮ್ಮಿಂದಾಗುತ್ತಿಲ್ಲ. ಇರಾನಿನಲ್ಲಿ ಕೂಡ ಹೆಚ್ಚು ಕಮ್ಮಿ

 ಸೋಲುವ ಪರಿಸ್ಥಿತಿಯೇ ತಲೆದೋರಿ ನಿಮ್ಮ ತಾಲಿಬಾನಿಗಳ ಸಹಾಯ 

ಪಡೆಯೋಹಾಗಾಗಿದೆ....."ಎಂದು ಕ್ಷಣ ತಡೆದು ಮುಂದುವರೆಸಿದ: "ಈ ಪರಿಸ್ಥಿಯಲ್ಲಿ 

ಭಾರತದೊಂದಿಗೆ ಯುದ್ಧವಾದರೆನಾವು ನಿಮಗೇನು ನೆರವು ನೀಡುವ 

ಪರಿಸ್ಥಿತಿಯಲ್ಲಿರೊದಿಲ್ಲ. ಭಾರತ ಕೂಡ ಅಷ್ಟು ಸುಲಭವಾಗಿ ಕಾಶ್ಮೀರವನ್ನು 

ಬಿಟ್ಟುಕೊಡುವುದಿಲ್ಲ. ಯೋಚನೆ ಮಾಡಿ ನೋಡಿ! ಹಾನಿಗೊಳಗಾಗೋದು ನೀವೇ, ಹೋಗಿ, ಯುದ್ಧ ನಿಲ್ಲಿಸಿ."


ಪಾಕಿಸ್ತಾನದ ಪ್ರಧಾನಿ ಮಾತಾಡಲಿಲ್ಲ. ಮಾತನಾಡಲು ಏನೂ ಇರಲಿಲ್ಲ ಕೂಡ!

ಸಾವಿರಾರು ಮಿಲಿಯನ್ಗಟ್ಟಲೆ ಡಾಲರ್ಗಳನ್ನು ಸಾಲ ನೀಡಿದವನೊಂದಿಗೆ ಒಬ್ಬ 

ದುರ್ಬಲ ಏನು ಮಾತಾಡಬಲ್ಲ? ಇನ್ನೊಂದು ಯುದ್ಧಕ್ಕೆ ಮತ್ತೆ ಸಹಾಯ ಮಾಡೆಂದು 

ಯಾವ ಬಾಯಲ್ಲಿ ಕೇಳಬಲ್ಲ? ಅದಕ್ಕೆ ಸುಮ್ಮನೆ ಅಲ್ಲಿಂದೆದ್ದು ಪಾಕಿಸ್ತಾನಕ್ಕೆ ಬಂದು ಬಿಟ್ಟ.


ಯುದ್ಧ ನಿಂತಿತು.


ಮೊದಲಿಗೆ ಪಾಕಿಸ್ತಾನ್ ಕಾರ್ಗಿಲ್ ಯುದ್ಧದೊಂದಿಗೆ ತನಗೇನೂ ಸಂಬಂಧವಿಲ್ಲ 

ಎಂದಿತ್ತು. ಆದರೆ ಅಮೆರಿಕ ನೀಡಿದ ಎಚ್ಛರಿಕೆಯಿಂದ ಯುದ್ಧ ನಿಂತು ಹೋಯಿತು 
ಎಂದರೆ ಏನರ್ಥ?


ಈ ಪ್ರಶ್ನೆಗೆ ಉತ್ತರ ಏನೆಂಬುದು ವಿಶ್ವದ ಎಲ್ಲ ರಾಷ್ಟ್ರಗಳಿಗೂ ಗೊತ್ತು. ಆದರೆ 

ಯಾರೂ ಬಾಯಿಬಿಟ್ಟು ಹೇಳಲಾರರು. ಅವರವರ ಸಂಕಟ ಅವರವರಿಗೆ? ಅವರವರ 

ಉಳಿವು ಅವರವರಿಗೆ ಮುಖ್ಯ. ಒಟ್ಟಿನಲ್ಲಿ ಶಾಂತಿ ಸ್ಥಾಪನೆಯಂತೂ ಆಯಿತು.

ಪರಿಸ್ಥಿತಿ ಇಷ್ಟೆಕ್ಕೆ ನಿಂತಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಆ ರೀತಿ ನಿಂತರೆ ಅದು ಇತಿಹಾಸ ಹೇಗಾಗುತ್ತದೆ?


ಇಲ್ಲೇ ನಾಟಕೀಯ ಬದಲಾವಣೆಯೊಂದು ಸಂಭವಿಸಿತು.



....ಅಮೆರಿಕಾದ ಅಧ್ಯಕ್ಷರಿಂದ ಬೀಳ್ಕೊಡುಗೆ ಪಡೆದು ತನ್ನ ದೇಶಕ್ಕೆ ಮರಳುವ 

ಮುನ್ನ, ಪಾಕಿಸ್ತಾನದ ಪ್ರಧಾನಿ ಈ ರೀತಿ ಹೇಳಿದ:"ನೀವು ಬಯಸಿದಂತೆಯೇ ಪ್ರತ್ಯಕ್ಷ 
ಕಾರ್ಗಿಲ್ ಯುದ್ಧವನ್ನು ನಿಲಿಸುತ್ತೇವೆ. ಆದರೆ ಕಾಶ್ಮೀರ್ ಸ್ವಾತಂತ್ರ್ಯಕ್ಕೋಸ್ಕರ 

ಹಪಹಪಿಸುತ್ತಿರುವ ಜಿಹಾದ್ ವೀರರನ್ನಾಗಲಿ, ಭಾರತದ ಮೇಲೆ ಸೇಡಿನಿಂದ 

ಕುದಿಯುತ್ತಿರುವ ತಾಲಿಬಾನಿಗಳನ್ನಾಗಲಿ ತಡೆಯೋದು ನಮ್ಮಿಂದಾಗದು...."



ಇಬ್ಬರು ರಾಜಕೀಯ ಧುರೀಣರು ಮಾತಾಡುವಾಗ ಇಷ್ಟು ಲೌಕಿಕ ಜಾಣ್ಮೆಯಿಂದಲೇ 

ಮಾತಾಡುತ್ತಾರೆ. ಷರೀಫ್ ಹೇಳುತ್ತಿರುವುದೇನೆಂಬುದನ್ನು ಅರ್ಥ ಮಾಡಿಕೊಳ್ಳದಷ್ಟು ಮುಗ್ಧನಾಗಿರಲಿಲ್ಲ ಅಮೆರಿಕನ್ ಪ್ರೆಸಿಡೆಂಟ್....

'ನಮ್ಮ ಕೆಲಸ ನಾವು ಮಾಡಲು ಬಿಡಿ. ನೀವು ಅಡ್ಡ ಬರಬೇಡಿ. ಚಾಪೆ ಕೆಳಗೆ

 ಹರಡಿಕೊಳ್ಳುವ ನೀರಿನಂತೆ ನಾವು ಗುಟ್ಟಾಗಿ ನಮ್ಮ ಉದ್ದೇಶ 

ಈಡೇರಿಸಿಕೊಳ್ಳುತ್ತೇವೆ. ನೀವು ಬಯಸಿದಂತೆ ಪ್ರತ್ಯಕ್ಷ ಯುದ್ಧ ಮಾತ್ರ 

ಮಾಡೋದಿಲ್ಲ....' ಎನ್ನುತ್ತಿದ್ದಾನೆ ಪಾಕ್ ಪ್ರಧಾನಿ.!



ತನಗೇನೂ ಅರ್ಥವಾಗೊಲ್ಲ ಎನ್ನುವಂತೆ ನುಡಿದ ಅಮೆರಿಕನ್ ಪ್ರೆಸಿಡೆಂಟ್- 

"ಯಾರೋ ಭಯೋತ್ಪಾದಕರು ನಿಮ್ಮ ದೇಶದಲ್ಲಿ ರಹಸ್ಯವಾಗಿ 

ಶಿಬಿರನ್ನೇರ್ಪಡಿಸಿಕೊಂಡು ಭಾರತದ ಮೇಲೆ ದಾಳಿ ಮಾಡಿದರೆ, ಅದಕ್ಕೆ ಪಾಪ, 

ನೀವೇನು ಮಾಡಬಲ್ಲಿರಿ? ನಾವು ಅದರ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ."


(ಈ ಮಾತುಗಳನ್ನಾಡಿದ ಎರಡು ವರ್ಷಗಳಿಗೆ ತಾವು 'ಆಡಿದ ಮಾತುಗಳೆಷ್ಟು ತಪ್ಪು ಎನ್ನುವುದು ಅಮೆರಿಕನ್ನರಿಗೆ ಅರ್ಥವಾಯಿತು)


ಕಾರ್ಗಿಲ್ನಿಂದ ಪಾಕಿಸ್ತಾನದ ಸೇನೆ ಹಿಂದೆ ಸರಿದ ಅನಂತರ ಪರೋಕ್ಷ 

ಯುದ್ಧದಿಂದಾಗಿ ಕಾಶ್ಮೀರದ ಮೇಲೆ ಒತ್ತಡ ಜಾಸ್ತಿಯಾಯಿತು. 

ಮತೋನ್ಮಾನದಿಂದಾಗಿ ಪ್ರಾಣವನ್ನೂ ಬಲಿಕೊಡಲು ಹಿಂತೆಗೆಯದ 'ಮಾನವ 

ಬಾಂಬು'ಗಳನ್ನು ತಯಾರಿಸುವುದನ್ನು ಮಾನವ ಜನಾಂಗ ಹೊಸದಾಗಿ 

ಕಲಿತುಕೊಂಡಿತು. ಕಾಶ್ಮೀರದಲ್ಲಿ ಭಾರತದ ಭದ್ರತಾ ಪಡೆಗಳ ಮೇಲೆ ಮಾರಣ 

ಹೋಮ ಆರಂಭವಾಯಿತು. ಸಹಾನುಭೂತಿಯ ವಾಕ್ಯಗಳನ್ನು ಆಡುವುದರ 

ಹೊರತಾಗಿ ಯಾರೇನು ಮಾಡುವಂತಿದ್ದರು? ಪರೋಕ್ಷ ಯುದ್ಧವೆಂದರೆ 

(ಪ್ರಾಕ್ಸಿದಾರ್) ಎಲ್ಲೋ ಯಾರೋ ಇದ್ದು, ಇಲ್ಲಿ ಧ್ವಂಸ ವಿಧ್ವಂಸ ಸ್ರಷ್ಟಿಸುವುದು.! 

ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದ ಈ ಯುದ್ಧಕ್ಕೆ ಯಾವ 

ದೇಶದಿಂದಲು ಪರಿಹಾರ ಸೂಚಿಸಲಾಗಲಿಲ್ಲ. ಈ ಯುದ್ಧಗಳಿಗೆ ಮುಖ್ಯವಾಗಿ 

ಬಲಿಯಾದದ್ದು-ಭಾರತ, ಇಸ್ರೇಲ್, ಐರ್ಲೆಂಡ್ಗಳು.


ಸರಿಯಾಗಿ ಅದೇ ಸಮಯಕ್ಕೆ ಜಗತ್ತಿನ ವಿವಿಧ ರಾಷ್ಟ್ರಗಳ ರಾಜಧಾನಿಗಳಲ್ಲಿರುವ 

ಅಮೆರಿಕನ್ ರಾಯಭಾರಿ ಕಚೇರಿಗಳಲ್ಲಿ ಒಂದೇ ದಿನ ಬಾಂಬ್ ಸ್ಪೋಟಗಳು 

ಸಂಭವಿಸಿದವು. ನೂರಾರು ಜನ ಮರಣಿಸಿದರು. ಕೆನಡಾ, ಯುರೋಪಿಯನ್ 

ರಾಷ್ಟ್ರಗಳಲ್ಲಿ ಹಾಹಾಕಾರವಾಯಿತು. ಈ ಬಾಂಬ್ ಸ್ಪೋಟಗಳಿಗೆ ಕಾರಣ--ಇಸ್ರೇಲ್ 

ಯಹೂದಿಗಳಿಗೂ ಪ್ಯಾಲೇಸ್ತೀನ್ ಮುಸ್ಲಿಮರಿಗೂ ನಡೆಯುತ್ತಿರುವ ಯುದ್ಧ.!

ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಈ ಯುದ್ಧದಲ್ಲಿ ಅಮೆರಿಕಾದ 

ಬೆಂಬಲ ಇಸ್ರೇಲಿಗಿದೆ. ಅದಕ್ಕೆ ಆಯುಧಗಳನ್ನು ಒದಗಿಸುತ್ತಿರುವುದು ಅಮೆರಿಕವೇ. 

ಪ್ಯಾಲೇಸ್ತೀನ್ ಮುಸ್ಲಿಮರ ಆಗುತ್ತಿರುವ ದಾಳಿಯನ್ನು ಸಹಿಸಲಾಗದೆ, 

ಮತೋನ್ಮಾದ ಸಿದ್ಧಾಂತವನ್ನು ಮೈದುಂಬಿಕೊಂಡು ಒಂದು ಸಂಸ್ಥೆ, 

ಅಮೆರಿಕಾವನ್ನು, ನಿರ್ನಾಮ ಮಾಡಿ ಮಣ್ಣುಗೂಡಿಸಲು ಕಂಕಣ ತೊಟ್ಟಿತು. 

ರಾಯಭಾರ ಕಚೇರಿಗಳಲ್ಲಿ ಬಾಂಬುಗಳನ್ನಿರಿಸುವ ಮೂಲಕ ತನ್ನ ಪ್ರಥಮ ಪ್ರಯತ್ನ 

ಪ್ರಾರಂಭಿಸಿತು. ಜಗತ್ತಿನ ಇತಿಹಾಸದಲ್ಲಿ ಅನಾದಿಕಾಲದಿಂದಲೂ 

ಮುಸ್ಲಿಮರಿಗಾಗುತ್ತಿರುವ ಅನ್ಯಾಯವನ್ನು ಎದುರಿಸಲೆಂದೇ ತಾನು 

ಜನಿಸಿರುವುದಾಗಿ ನಂಬುವ ಒಬ್ಬ ವ್ಯಕ್ತಿ ಈ ಮತೋನ್ಮಾದ ಸಂಸ್ಥೆಗೆ ಮೂಲಪುರುಷ.


ಅವನ ಹೆಸರು - ಒಸಾಮ-ಬಿನ್-ಲಾಡೆನ್.









(ಮುಂದುವರಿಯುವುದು......)

CLICK HERE