೧೧ ಸೆಪ್ಟೆಂಬರ್ ೨೦೦೧
"ಯಾರೋ ಭಯೋತ್ಪಾದಕರು ನಿಮ್ಮ ದೇಶದಲ್ಲಿ ಶಿಬಿರನ್ನೇರ್ಪಡಿಸಿಕೊಂಡು ನೆರೆ
ರಾಷ್ಟ್ರಗಳ ಮೇಲೆ ಕತ್ತಲಲ್ಲಿ ದಾಳಿ ನಡೆಸಿದರೆ, ಅದಕ್ಕೆ ಪಾಪ, ನೀವೇನು
ಮಾಡಬಲ್ಲಿರಿ?" ಎಂದಿದ್ದ ಅಮೆರಿಕ, ಈಗ ಆ ಮಾತು ಹಿಂದೆ ತೆಗೆದುಕೊಳ್ಳಬೇಕಾಗಿ
ಬಂತು. ಅದಕ್ಕೆ ಕಾರಣ 'ಸೆಪ್ಟೆಂಬರ್ ೧೧'ರಂದು ನಡೆದ ಘಟನೆ.
ಆ ದಿನ ನಾಲ್ಕು ವಿಮಾನಗಳು ಅಮೆರಿಕಾದ ಸೈನಿಕ ಬಲವನ್ನೂ, ಗೂಢಚಾರ
ವ್ಯವಸ್ಥೆಯನ್ನು ಅಪಹಾಸ್ಯ ಮಾಡುವಂತೆ ಡಬ್ಲ್ಯೂ. ಟಿ. ಸಿ. ಕಟ್ಟಡಗಳಿಗೆ ಅಪ್ಪಳಿಸಿ
ಪೆಂಟಗಾನ್ ಸೈನಿಕರನ್ನೂಬಲಿ
ತೆಗೆದುಕೊಂಡು ಧ್ವಂಸವಾದವು.
ಊಹೆಗು ನಿಲುಕದ ಈ ಭಯೋತ್ಪಾದಕ
ಚಟುವಟಿಕೆಗೆ
ಜಗತ್ತು ಧಿಗ್ಬ್ರಮೆಗಿಡಾಯಿತು. ಇತ್ತೀಚಿನ
ಕಾಲದಲ್ಲಿ ಇದರಂತಹ ನರರೂಪ ರಾಕ್ಷಸ ಚಟುವಟಿಕೆ ಮತ್ತೊಂದು ನಡೆದಿಲ್ಲ.
ಇದರ ಹಿಂದಿರುವುದು ಒಸಾಮಾ-ಬಿನ್-ಲಾಡೆನ್ ಎನ್ನುವುದು ಅಮೆರಿಕಾದ ನಂಬಿಕೆ.
ಸಾಕ್ಷ್ಯಾಧಾರಗಳಿಲ್ಲ. ಆದರೆ ನಂಬಿಕೆ ಮಾತ್ರ ಬಲವಾಗಿತ್ತು. ಮುಸ್ಲಿಮ್ ಮತ
ರಕ್ಷಣೆಯನ್ನು ತನ್ನ ಹೆಗಲಿಗೇರಿಸ್ಕೊಂಡ ಲಾಡೆನ್, ಒಂದೊಮ್ಮೆ ಪಶ್ಚಿಮ
ಏಷ್ಯಾದಲ್ಲಿರುತ್ತಿದ್ದ. ಅವನ ವಿಧ್ವಂಸಕ ಚಟುವಟಿಕೆಗಳನ್ನು ಸಹಿಸಿಕೊಳ್ಳಲಾಗದೆ
ಮಾತ್ರದೇಶ ಒದ್ದೋಡಿಸಿತ್ತು. ಸೌದಿ ಅರೇಬಿಯಾದಿಂದ ಪರಾರಿಯಾಗಿ
ಅಫಘಾನಿಸ್ತಾನದಲ್ಲಿ ತಲೆಮರೆಸಿಕೊಂಡ.
ಅಸಲಿ ಕಥೆ ಆರಂಭವಾಗಿದ್ದು ಇಲ್ಲೆ. ಒಳ್ಳೆಯದೋ, ಕೆಟ್ಟದ್ದೋ, ಮಾನವರೋ,
ರಾಕ್ಷಸರೋ-ಅದೇನೇ ಇದ್ದರೂ ಮಾತಿಗೂ,ಮತಕ್ಕೂ ಕಟ್ಟುಬೀಳುವ ಸ್ವಭಾವ
ತಾಲಿಬಾನಿಗಳದು. ಇವರು ಲಾಡೆನ್ ಗೆ ಆಶ್ರಯ ನೀಡಿದರು. ಒಂದೊಮ್ಮೆ ಇವರನ್ನು ಲಾಲಿಸಿ ಪ್ರೋತ್ಸಾಹಿಸಿದ್ದು ಅಮೆರಿಕನ್ನರೆ! ಆದರೆ ಭಯೋತ್ಪಾದಕರಿಗೆ
ಆಶ್ರಯ ನೀಡಿದ್ದಕ್ಕೆ ಅಫಘಾನಿಸ್ತಾನದಿಂದ ತಾಲಿಬಾನಿಗಳ ಹೆಸರು ಅಳಿಸಿ
ಹಾಕಬೇಕೆಂದು ಅಮೆರಿಕ ನಿರ್ಧರಿಸಿತು. ವಿಶ್ವದ ರಾಷ್ಟ್ರಗಳ ಸಹಾನುಭೂತಿ
ಪಡೆಯಿತು. ಇಲ್ಲವೆನ್ನುವ ಧೈರ್ಯ ಯಾರಿಗಿರಲು ಸಾಧ್ಯ? ಆದರೆ ಅಲ್ಲೊಂದು ತೊಡಕು ತಲೆಯೆತ್ತಿತು.
ತಾಲಿಬಾನಿಗಳನ್ನು ಒಂದು ದೇಶ ಎಂಬುದಾಗಿ ಮನ್ನಣೆ ನೀಡಿದ ಮೂರು
ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದ್ದುದು ಪಾಕಿಸ್ತಾನ. ತಾಲಿಬಾನಿಗಳಿಗೂ
ಪಾಕಿಸ್ತಾನಿಗಳಿಗೂ ಆಪ್ತರು. ಆದರೆ ಪಾಕಿಸ್ತಾನದ ನೆರವಿಲ್ಲದೆ ಅಫಘನ್
ಸರೋವರದಲ್ಲಿ ಬಚ್ಚಿಟ್ಟುಕೊಂಡ ಲಾಡೆನ್ ಹಿಡಿಯುವುದು ಕಷ್ಟ.! ಆದರೆ ಪಾಕಿಸ್ತಾನ
ಅಮೇರಿಕಕ್ಕೆ ಸಾವಿರಾರು ಕೋಟಿ ಡಾಲರ್ಗಳಷ್ಟು ಸಾಲಗಾರನಾಗಿತ್ತು. ಅಮೆರಿಕ ಆ ಟ್ರಂಪ್ ಕಾರ್ಡ್ಗಳನ್ನು ಬಳಸಿತು.!
"ತಾಲಿಬಾನಿಗಳನ್ನು ನಾಶಮಾಡಲು ನೆರವಾದರೆ, ನೀವು ನಮಗೆ ಕೊಡಬೇಕಿರುವ
ಸಾಲವನ್ನೆಲ್ಲ ಮನ್ನಾ ಮಾಡುತ್ತೇವೆ" ಎಂದು ಒತ್ತಡ ಹೇರಿತು ಅಮೆರಿಕ.
ಪಾಪ. ಪಾಕಿಸ್ತಾನ ಏನು ಮಾಡಬೇಕು? 'ಇಲ್ಲ, ಒಲ್ಲೆ' ಎಂದ ಮರುಕ್ಷಣ ಅದರ ಆರ್ಥಿಕ ವ್ಯವಸ್ಥೆ ಇನ್ನಿಲ್ಲದಂತೆ ಕುಸಿಯುತ್ತದೆ.
ನೀತಿ-ನಿಜಾಯಿತಿ, ಮಾತಿಗೆ ಕಟ್ಟುಬೀಳುವುದು, ಗೆಳೆತನ ಇವ್ಯಾವುವೂ ರಾಜನೀತಿಯಲ್ಲಿ ಶಾಶ್ವತವಲ್ಲ.
ಪಾಕಿಸ್ತಾನ ತಾಲಿಬಾನಿಗಳಿಗೆ ವಿರೋಧವಾಗಿ ಅಮೆರಿಕದೊಂದಿಗೆ ಕೈ ಕೂಡಿಸಿತು.
ಹನ್ನೆರಡು ವರ್ಷಗಳ ಹಿಂದೆ ರಷ್ಯನ್ನರನ್ನು, ಭಾರತೀಯರನ್ನೂ ಅಫಘಾನ್ನಿಂದ ದೂರ
ಮಾಡಲೋಸುಗ ಯಾವ ಗುಂಪನ್ನು ಬಳಿಗೆಳೆದುಕೊಂಡು ಪೋಷಿಸಿ, ಬೆಳೆಸಿದ್ದವೋ
ಈಗ ಆ ಗುಂಪನ್ನು ಬೇರು ಸಹಿತ ನಿರ್ಮೂಲ ಮಾಡಲು ಅಮೆರಿಕ ಪಾಕಿಸ್ತಾನ ಕಂಕಣ ತೊಟ್ಟವು.
ಇಲ್ಲೆ ಭಾರತ ಕಲಿಯಬೇಕಿರುವ ಪಾಠ ಒಂದಿದೆ. ಅದಕ್ಕೋಸ್ಕರವೇ ಇಷ್ಟೊಂದು ಪೀಠಿಕೆ.
" ನೀನು ಬಲಶಾಲಿಯಾದರೆ, ನೀನೇನು ಹೇಳಿದರೂ ಎಲ್ಲರೂ ಕೇಳುತ್ತಾರೆ.
ಇಷ್ಟವಿರಲಿ,ಇಲ್ಲದಿರಲಿ,ನಿಂದೆಲ್ಲಾ ಮಾತಿಗೆಲ್ಲ ತಲೆದೂಗುತ್ತಾರೆ. ನಿನ್ನಲ್ಲಿ ಬಲ
ಇಲ್ಲದಿದ್ದರೆ ನ್ಯಾಯ ನಿನ್ನ ಕಡೆಗಿದ್ದರೂ "ತಮಗೆ ಉಪಯೋಗವಾಗದ ಧರ್ಮ
ಯಾಕೆ ಬಿಡು" ಎಂದುಕೊಳ್ಳುತ್ತಾರೆ. ನಿನ್ನ ನೆರವಿಗೆ ಬರುವುದಿಲ್ಲ. ಅದಕ್ಕೆ ಮೊದಲಿಗೆ
ಬಲ ಸಂಪಾದಿಸು, ಅದಕ್ಕಿಂತಲೂ ಮುಂಚೆ ಧೈರ್ಯ ಸಂಪಾದಿಸು. ನಿನ್ನ
ಆಧೈರ್ಯಕ್ಕೆ ಒಳ್ಳೆಯತನ ಎಂದು ಹೆಸರಿಟ್ಟುಕೊಳ್ಳಬೇಡ."
ಜಗತ್ತಿನ ಎಲ್ಲ ರಾಷ್ಟ್ರಗಳೂ ಅಮೆರಿಕಾರನ್ನು ಬೆಂಬಲಿಸಿದ್ದು ಕೇವಲ ಇದೊಂದು
ಕಾರಣಕ್ಕಾಗಿ! ಲಾಡೆನ್ ನರರೂಪ ರಾಕ್ಷಸನೇ ಇರಬಹುದು. ಆದರೆ ಸಾಕ್ಷಿ,ಪುರಾವೆ
ತೋರಿಸೆಂದು ಯಾರೊಬ್ಬರೂ ಕೇಳಲಿಲ್ಲ. ಇನ್ನೊಂದು ರಾಷ್ಟ್ರದ ಮೇಲೆ
ಬಾಂಬುಗಳ ಮಳೆ ಸುರಿಸಿದರೂ ಕಿಮಕ್ಕೆನ್ನಲಿಲ್ಲ. ಭಾರತದೇಶ
ಕಲಿಯಬೇಕಿರುವುದು ಮತ್ತೊಂದು ವಾಸ್ತವ, ಇದಕ್ಕಿಂತಲೂ ಮಹತ್ತರವಾದದ್ದು ಇನ್ನೊಂದಿದೆ.
ಕಠಿಣ ನಿರ್ಧಾರವೊಂದನ್ನು ಕೈಗೊಂಡಾಗ ವಿರೋಧ ವ್ಯಕ್ತವಾಗುವುದು ಸ್ವಾಭಾವಿಕ!
ಸಹಜ!! ಆದರೆ ಆ ನಿರ್ಧಾರವನ್ನೇ ಬಲವಾಗಿ ಸಮರ್ಥಿಸಿ ಗಟ್ಟಿಯಾಗಿ ನಿಂತರೆ,
ಬಲು ಬೇಗದಲ್ಲೇ ಆ ವ್ಯತಿರೇಕ, ಇಲ್ಲಾಗುತ್ತದೆ, ಜನರಿಗೆ ಅದಕ್ಕಿಂತಲೂ
ಮುಖ್ಯವಾದ ಕೆಲಸಗಳು ಇನ್ನೂ ಸಾಕಷ್ಟಿರುತ್ತವಾದರಿಂದ. ೧೯೮೯ರಲ್ಲಿ ಚೀನಾದ
ತಿಯನಾನ್‌ಮೆನ್ ಚೌಕದಲ್ಲಿ ವಿದ್ಯಾರ್ಥಿಗಳು ಎಬ್ಬಿಸಿದ ದಂಗೆ, ೨೦೦೦ದಲ್ಲಿ
ಅಂದ್ರಪ್ರದೇಶದಲ್ಲಿ ವಿದ್ಯುತ್ ಶುಲ್ಕ ಏರಿಕೆಗೆ ವಿರೋಧ ಪಕ್ಷಗಳು ಎಬ್ಬಿಸಿದ ಗದ್ದಲ...
ಇಂಥವೆಲ್ಲ ಹಾಗೆ ಕರಗಿ ಹೋಗಲು ಕಾರಣ- ನಿರ್ಧಾರಕ್ಕೆ ಅಚಲವಾಗಿ ಅಂಟಿಕೊಂಡು ನಿಂತದ್ದು.!
ತಾಲಿಬಾನಿಗಳ ಮೇಲೆ ಅಮೆರಿಕ ಯುದ್ಧ ಘೋಷಿಸಿದ ಕೂಡಲೇ ಬಹಳ ಕಡೆ
ವಿರೋಧ ಪ್ರದರ್ಶನಗಳು ಕಂಡುಬಂದವು. ಹೈದರಾಬಾದನಲ್ಲಿ ಪುಟ್ಟ
ಹುಡುಗನೊಬ್ಬನಿಗೆ ಲಾಡೆನ್ನಂತೆ ಮೇಕಪ್ ಮಾಡಿ, ಕೈಗೆ ಬಂದೂಕು ನೀಡಿ
ಮೆರವಣಿಗೆ ಮಾಡಲಾಗಿತ್ತು ಕೂಡ! ಈ ಮೆರವಣಿಗೆಗೆ ಪೊಲೀಸರ ರಕ್ಷಣೆ
(ಎಸ್ಕಾರ್ಟ್) ನೀಡಿದ್ದು ನಮ್ಮ ಒಳ್ಳೆಯತನಕ್ಕೂ (?) ಕೈಲಾಗದಿರುವಿಕೆಗೂ (?),
ಓಟುಗಳ ರಾಜಕೀಯ ನಿದರ್ಶನ. ನಮ್ಮ ಹಿಡಿತ ಬಿಗಿಯಾಗಿದೆ ಎನ್ನುವುದು
ಗೊತ್ತಾದರೆ ಎದುರಾಳಿ ಬಾಲ ಬಿಚ್ಚಲಾರ. ಆ ರೀತಿ ಇರಲು ನಮ್ಮಿಂದ
ಸಾಧ್ಯವಾಗಿದ್ದರೆ ನಮ್ಮ ವಿದೇಶಾಂಗ ಮಂತ್ರಿ ಕಂದಹಾರ್ಗೆ ಹೋಗಿ
ಭಯೋತ್ಪಾದಕರ ಕಾಲಿಗೆ ಬೀಳುವ ಅಗತ್ಯವಿರಲಿಲ್ಲ. ಆ ಸಂದರ್ಭದಲ್ಲಿ ನಾವು
ಬಿಡುಗಡೆ ಮಾಡಿದ ಭಯೋತ್ಪಾದಕರು ಸ್ರಷ್ಟಿಸಿದ ವಿಧ್ವಂಸ ಕಾಂಡ ಎಂಥದೆಂಬುದು ಎಲ್ಲರಿಗೂ ಗೊತ್ತಿದ್ದದ್ದೇ.
ಐವತ್ತು ವರ್ಷಗಳ ಹಿಂದೆ ಹೋದರೆ --
ನಿಜಾಮನನ್ನು ಮಣಿಸಿದಂತೆ ಕಾಶ್ಮೀರವನ್ನು ಭಾರತದೊಳಗೆ ಸೇರ್ಪಡೆ
ಮಾಡಿಕೊಂಡಿದಿದ್ದರೆ, ಈ ಸ್ವಾಯತ್ತ ಆಡಳಿತದ ಪ್ರಶ್ನೆಯೇ ತಲೆ ತೆಲೆಯೆತ್ತುತ್ತಿರಲಿಲ್ಲ.
ಆ ರೀತಿ ಮಾಡಿದ್ದರೆ ಆಗ ಗದ್ದಲ ಎದ್ದಿರುತಿತ್ತು ನಿಜ, ಆದರೆ ಎಷ್ಟು ದಿನ ಮುಂದುವರೀಯುತಿತ್ತು?
ಧೈರ್ಯ ಇರಬೇಕು. ಮೆಟ್ಟಿ ನಿಲ್ಲುವ ಬಲ ಇರಬೇಕು! ಎಲ್ಲಕ್ಕಿಂತ ಮುಖ್ಯವಾಗಿ
ರಾಜಕೀಯ ನಾಯಕರೆನಿಸಿಕೊಂಡವರಲ್ಲಿ ಮತಗಳಿಗೋಸ್ಕರ ದೇಶವನ್ನು ಒತ್ತೆ
ಇಡುವ ಹೀನ ಗುಣ, ಇಲ್ಲವಾಗಬೇಕು!!!
ಮುಗಿಯಿತು....ಧನ್ಯವಾದಗಳು...
(Sourse :- "Malegalada ondu sanje" Novel from yandamuri Virendranath.)
No comments:
Post a Comment