ತಾಲಿಬಾನಿಗಳು ಕಾಶ್ಮೀರ್ ಪವಿತ್ರ ಯುದ್ಧ ವೀರರು ಮಾಡುತ್ತಿರುವ ಯುದ್ಧ ಅದು.
ಅದರೊಂದಿಗೆ ನಮ್ಮ ದೇಶಕ್ಕೆ ಯಾವ ಸಂಭಂಧವೂ ಇಲ್ಲ" ಎಂದ.
"ಕಿವಿಯಲ್ಲಿಡೊದಕ್ಕೆ ಪಾಕಿಸ್ತಾನದಲ್ಲಿ ಹೂಗಳು ಎಲ್ಲೂ ಸಿಗೋದಿಲ್ಲ ಮಿಸ್ಟರ್ ಷರೀಫ್,
ಕಾಶ್ಮೀರದಲ್ಲಾದ್ರೆ ಸಿಗುತ್ತದೆ. ಅದಕ್ಕೆ ಬಹುಶಃ ನೀವು ಅದನ್ನು
ಆಕ್ರಮಿಸಿಕೊಳ್ಳಬೇಕೆಂದು ಕೊಳ್ಟಿದ್ದೀರಿ ಅಂತ ಅಂದ್ಕೋತೀನಿ."
"ನೀವೇನು ಮಾತಾಡ್ತಿದಿರೋ ನನಗೆ ಅರ್ಥವಾಗುತ್ತಿಲ್ಲ"
"ಪಾಕಿಸ್ತಾನ ಸೇನಾ ಬೆಂಬಲವಿಲ್ಲದೇ ಕೇವಲ ಕಾಶ್ಮೀರ್
ಯುದ್ಧವೀರರು,ತಾಲಿಬಾನಿಗಳು ಸೇರಿ ಹಿಮಾಲಯ ಶಿಖರಗಳ ಮೇಲೆ ಎಲುಬು
ತೂತು ಕೊರೆಯುವ ಚಳಿಯಲ್ಲಿ, ಬಲಿಷ್ಟ ಭಾರತದ ಸೇನೆಯನ್ನು ಎದುರಿಸಿ
ಹೋರಾಡಿ ಗೆಲ್ಲಬೇಕು ಅಂದ್ಕೊಳ್ತಿದಿರಾ? ಯಾರ ಕಿವಿಲಿ ಹೂವಿಡಬೇಕು ಅಂತ ಇದನ್ನೆಲ್ಲ ಹೇಳ್ತಿದಿರಿ?"
"ಜಮ್ಮು-ಶ್ರೀನಗರಗಳನ್ನು, ಒಂದುಗೂಡಿಸುವ ರಹದಾರಿಯನ್ನು ಕಾರ್ಗಿಲ್ ಬಳಿ
ಆಕ್ರಮಿಸಿದರೆ ಕಾಶ್ಮೀರ್ ಪ್ರತ್ಯೇಕವಾಗಿ ಬಿಡುತ್ತೆ ಮಿಸ್ಟರ್ ಪ್ರೆಸಿಡೆಂಟ್."
"ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕ ಯಾವುದೇ ಎರಡು ದೇಶಗಳ ನಡುವೆ
ಯುದ್ಧ ಆಗೋದನ್ನು ಬಯಸುತ್ತಿಲ್ಲ ಷರೀಫ್. ಯುದ್ಧ ಅಂತೇನಾದರೂ
ಮಾಡೋದಾದ್ರೆ ಅದನ್ನು ಅಮೆರಿಕವೇ ಮಾಡಬೇಕು! ಅದಾದರೂ ಕೇವಲ ಇತರ ದೇಶಗಳಿಗೆ ಶಾಂತಿ-ಭದ್ರತೆಗಳನ್ನೊದಗಿಸುವುದಕ್ಕೋಸ್ಕರ....."
ಪಾಕಿಸ್ತಾನ್ ಪ್ರಧಾನಿ ಮತ್ತೊಮ್ಮೆ ಯೋಚಿಸಿ, ಮೋಡಿ ಎನ್ನುವ ಧೋರಣೆಯಲ್ಲಿ
ನುಡಿದ- " ಅಫಘಾನವನ್ನು ಗೆದ್ದ ನಂತರ ತಾಲಿಬಾನಿಗಳು ಬಲು
ಉತ್ಸಾಹದಿಂದಿದ್ದಾರೆ. 'ಯುದ್ಧ' ಅವರನ್ನು ಬಲು ಉತ್ಸಾಹದಿಂದಿರಿಸುತ್ತದೆ.
ಮತ್ತೊಂದೆಡೆ ಪಾಕ್ ಆಕ್ರಮಿತ ಕಾಶ್ಮೀರದಿಂದ ಸ್ವಾತಂತ್ರ್ಯಯೋಧರು ಅವರಿಗೆ
ಜೊತೆಯಾಗಿದ್ದಾರೆ. ಕಾಶ್ಮೀರಕ್ಕೆ ವಿಮುಕ್ತಿ ದೊರಕಿಸಿಕೊಡಲು ಇದಕ್ಕಿಂತಲೂ
ಒಳ್ಳೆಯ ಅವಕಾಶ ಮತ್ತೊಂದು ಸಿಗೋದಿಲ್ಲ. ಸ್ವಲ್ಪ ನಮ್ಮ ಕಡೆಯಿಂದಲೂ ಯೋಚಿಸಿ"
ಪ್ರೆಸಿಡೆಂಟ್ ನಕ್ಕ. "ಅಮೆರಿಕ ತನ್ನ ಕಡೆಯಿಂದ ಬಿಟ್ಟು ಬೇರಾರ ಕಡೆಯಿಂದಲೂ
ಯೋಚಿಸೊದಿಲ್ಲ ಮಿಸ್ಟರ್ ಪ್ರೈಮ್ ಮಿನಿಸ್ಟರ್, ಈಗಾಗಲೇ ನಾವು ಸಾಕಷ್ಟು
ಮುಖಭಂಗಕ್ಕಿಡಾಗಿದ್ದೇವೆ. ಇರಾಕ್ನಂತಹ ಪುಟ್ಟ ದೇಶವನ್ನು, ಸದ್ದಾಮ್
ಹುಸೇನನನ್ನು ನಿಯಂತ್ರಿಸಲು ನಮ್ಮಿಂದಾಗುತ್ತಿಲ್ಲ. ಇರಾನಿನಲ್ಲಿ ಕೂಡ ಹೆಚ್ಚು ಕಮ್ಮಿ
ಸೋಲುವ ಪರಿಸ್ಥಿತಿಯೇ ತಲೆದೋರಿ ನಿಮ್ಮ ತಾಲಿಬಾನಿಗಳ ಸಹಾಯ
ಪಡೆಯೋಹಾಗಾಗಿದೆ....."ಎಂದು ಕ್ಷಣ ತಡೆದು ಮುಂದುವರೆಸಿದ: "ಈ ಪರಿಸ್ಥಿಯಲ್ಲಿ
ಭಾರತದೊಂದಿಗೆ ಯುದ್ಧವಾದರೆನಾವು ನಿಮಗೇನು ನೆರವು ನೀಡುವ
ಪರಿಸ್ಥಿತಿಯಲ್ಲಿರೊದಿಲ್ಲ. ಭಾರತ ಕೂಡ ಅಷ್ಟು ಸುಲಭವಾಗಿ ಕಾಶ್ಮೀರವನ್ನು
ಬಿಟ್ಟುಕೊಡುವುದಿಲ್ಲ. ಯೋಚನೆ ಮಾಡಿ ನೋಡಿ! ಹಾನಿಗೊಳಗಾಗೋದು ನೀವೇ, ಹೋಗಿ, ಯುದ್ಧ ನಿಲ್ಲಿಸಿ."
ಪಾಕಿಸ್ತಾನದ ಪ್ರಧಾನಿ ಮಾತಾಡಲಿಲ್ಲ. ಮಾತನಾಡಲು ಏನೂ ಇರಲಿಲ್ಲ ಕೂಡ!
ಸಾವಿರಾರು ಮಿಲಿಯನ್ಗಟ್ಟಲೆ ಡಾಲರ್ಗಳನ್ನು ಸಾಲ ನೀಡಿದವನೊಂದಿಗೆ ಒಬ್ಬ
ದುರ್ಬಲ ಏನು ಮಾತಾಡಬಲ್ಲ? ಇನ್ನೊಂದು ಯುದ್ಧಕ್ಕೆ ಮತ್ತೆ ಸಹಾಯ ಮಾಡೆಂದು
ಯಾವ ಬಾಯಲ್ಲಿ ಕೇಳಬಲ್ಲ? ಅದಕ್ಕೆ ಸುಮ್ಮನೆ ಅಲ್ಲಿಂದೆದ್ದು ಪಾಕಿಸ್ತಾನಕ್ಕೆ ಬಂದು ಬಿಟ್ಟ.
ಯುದ್ಧ ನಿಂತಿತು.
ಮೊದಲಿಗೆ ಪಾಕಿಸ್ತಾನ್ ಕಾರ್ಗಿಲ್ ಯುದ್ಧದೊಂದಿಗೆ ತನಗೇನೂ ಸಂಬಂಧವಿಲ್ಲ
ಎಂದಿತ್ತು. ಆದರೆ ಅಮೆರಿಕ ನೀಡಿದ ಎಚ್ಛರಿಕೆಯಿಂದ ಯುದ್ಧ ನಿಂತು ಹೋಯಿತು
ಎಂದರೆ ಏನರ್ಥ?
ಈ ಪ್ರಶ್ನೆಗೆ ಉತ್ತರ ಏನೆಂಬುದು ವಿಶ್ವದ ಎಲ್ಲ ರಾಷ್ಟ್ರಗಳಿಗೂ ಗೊತ್ತು. ಆದರೆ
ಯಾರೂ ಬಾಯಿಬಿಟ್ಟು ಹೇಳಲಾರರು. ಅವರವರ ಸಂಕಟ ಅವರವರಿಗೆ? ಅವರವರ
ಉಳಿವು ಅವರವರಿಗೆ ಮುಖ್ಯ. ಒಟ್ಟಿನಲ್ಲಿ ಶಾಂತಿ ಸ್ಥಾಪನೆಯಂತೂ ಆಯಿತು.
ಪರಿಸ್ಥಿತಿ ಇಷ್ಟೆಕ್ಕೆ ನಿಂತಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಆ ರೀತಿ ನಿಂತರೆ ಅದು ಇತಿಹಾಸ ಹೇಗಾಗುತ್ತದೆ?
ಇಲ್ಲೇ ನಾಟಕೀಯ ಬದಲಾವಣೆಯೊಂದು ಸಂಭವಿಸಿತು.
....ಅಮೆರಿಕಾದ ಅಧ್ಯಕ್ಷರಿಂದ ಬೀಳ್ಕೊಡುಗೆ ಪಡೆದು ತನ್ನ ದೇಶಕ್ಕೆ ಮರಳುವ
ಮುನ್ನ, ಪಾಕಿಸ್ತಾನದ ಪ್ರಧಾನಿ ಈ ರೀತಿ ಹೇಳಿದ:"ನೀವು ಬಯಸಿದಂತೆಯೇ ಪ್ರತ್ಯಕ್ಷ
ಕಾರ್ಗಿಲ್ ಯುದ್ಧವನ್ನು ನಿಲಿಸುತ್ತೇವೆ. ಆದರೆ ಕಾಶ್ಮೀರ್ ಸ್ವಾತಂತ್ರ್ಯಕ್ಕೋಸ್ಕರ
ಹಪಹಪಿಸುತ್ತಿರುವ ಜಿಹಾದ್ ವೀರರನ್ನಾಗಲಿ, ಭಾರತದ ಮೇಲೆ ಸೇಡಿನಿಂದ
ಕುದಿಯುತ್ತಿರುವ ತಾಲಿಬಾನಿಗಳನ್ನಾಗಲಿ ತಡೆಯೋದು ನಮ್ಮಿಂದಾಗದು...."
ಇಬ್ಬರು ರಾಜಕೀಯ ಧುರೀಣರು ಮಾತಾಡುವಾಗ ಇಷ್ಟು ಲೌಕಿಕ ಜಾಣ್ಮೆಯಿಂದಲೇ
ಮಾತಾಡುತ್ತಾರೆ. ಷರೀಫ್ ಹೇಳುತ್ತಿರುವುದೇನೆಂಬುದನ್ನು ಅರ್ಥ ಮಾಡಿಕೊಳ್ಳದಷ್ಟು ಮುಗ್ಧನಾಗಿರಲಿಲ್ಲ ಅಮೆರಿಕನ್ ಪ್ರೆಸಿಡೆಂಟ್....
'ನಮ್ಮ ಕೆಲಸ ನಾವು ಮಾಡಲು ಬಿಡಿ. ನೀವು ಅಡ್ಡ ಬರಬೇಡಿ. ಚಾಪೆ ಕೆಳಗೆ
ಹರಡಿಕೊಳ್ಳುವ ನೀರಿನಂತೆ ನಾವು ಗುಟ್ಟಾಗಿ ನಮ್ಮ ಉದ್ದೇಶ
ಈಡೇರಿಸಿಕೊಳ್ಳುತ್ತೇವೆ. ನೀವು ಬಯಸಿದಂತೆ ಪ್ರತ್ಯಕ್ಷ ಯುದ್ಧ ಮಾತ್ರ
ಮಾಡೋದಿಲ್ಲ....' ಎನ್ನುತ್ತಿದ್ದಾನೆ ಪಾಕ್ ಪ್ರಧಾನಿ.!
ತನಗೇನೂ ಅರ್ಥವಾಗೊಲ್ಲ ಎನ್ನುವಂತೆ ನುಡಿದ ಅಮೆರಿಕನ್ ಪ್ರೆಸಿಡೆಂಟ್-
"ಯಾರೋ ಭಯೋತ್ಪಾದಕರು ನಿಮ್ಮ ದೇಶದಲ್ಲಿ ರಹಸ್ಯವಾಗಿ
ಶಿಬಿರನ್ನೇರ್ಪಡಿಸಿಕೊಂಡು ಭಾರತದ ಮೇಲೆ ದಾಳಿ ಮಾಡಿದರೆ, ಅದಕ್ಕೆ ಪಾಪ,
ನೀವೇನು ಮಾಡಬಲ್ಲಿರಿ? ನಾವು ಅದರ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ."
(ಈ ಮಾತುಗಳನ್ನಾಡಿದ ಎರಡು ವರ್ಷಗಳಿಗೆ ತಾವು 'ಆಡಿದ ಮಾತುಗಳೆಷ್ಟು ತಪ್ಪು ಎನ್ನುವುದು ಅಮೆರಿಕನ್ನರಿಗೆ ಅರ್ಥವಾಯಿತು)
ಕಾರ್ಗಿಲ್ನಿಂದ ಪಾಕಿಸ್ತಾನದ ಸೇನೆ ಹಿಂದೆ ಸರಿದ ಅನಂತರ ಪರೋಕ್ಷ
ಯುದ್ಧದಿಂದಾಗಿ ಕಾಶ್ಮೀರದ ಮೇಲೆ ಒತ್ತಡ ಜಾಸ್ತಿಯಾಯಿತು.
ಮತೋನ್ಮಾನದಿಂದಾಗಿ ಪ್ರಾಣವನ್ನೂ ಬಲಿಕೊಡಲು ಹಿಂತೆಗೆಯದ 'ಮಾನವ
ಬಾಂಬು'ಗಳನ್ನು ತಯಾರಿಸುವುದನ್ನು ಮಾನವ ಜನಾಂಗ ಹೊಸದಾಗಿ
ಕಲಿತುಕೊಂಡಿತು. ಕಾಶ್ಮೀರದಲ್ಲಿ ಭಾರತದ ಭದ್ರತಾ ಪಡೆಗಳ ಮೇಲೆ ಮಾರಣ
ಹೋಮ ಆರಂಭವಾಯಿತು. ಸಹಾನುಭೂತಿಯ ವಾಕ್ಯಗಳನ್ನು ಆಡುವುದರ
ಹೊರತಾಗಿ ಯಾರೇನು ಮಾಡುವಂತಿದ್ದರು? ಪರೋಕ್ಷ ಯುದ್ಧವೆಂದರೆ
(ಪ್ರಾಕ್ಸಿದಾರ್) ಎಲ್ಲೋ ಯಾರೋ ಇದ್ದು, ಇಲ್ಲಿ ಧ್ವಂಸ ವಿಧ್ವಂಸ ಸ್ರಷ್ಟಿಸುವುದು.!
ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದ ಈ ಯುದ್ಧಕ್ಕೆ ಯಾವ
ದೇಶದಿಂದಲು ಪರಿಹಾರ ಸೂಚಿಸಲಾಗಲಿಲ್ಲ. ಈ ಯುದ್ಧಗಳಿಗೆ ಮುಖ್ಯವಾಗಿ
ಬಲಿಯಾದದ್ದು-ಭಾರತ, ಇಸ್ರೇಲ್, ಐರ್ಲೆಂಡ್ಗಳು.
ಸರಿಯಾಗಿ ಅದೇ ಸಮಯಕ್ಕೆ ಜಗತ್ತಿನ ವಿವಿಧ ರಾಷ್ಟ್ರಗಳ ರಾಜಧಾನಿಗಳಲ್ಲಿರುವ
ಅಮೆರಿಕನ್ ರಾಯಭಾರಿ ಕಚೇರಿಗಳಲ್ಲಿ ಒಂದೇ ದಿನ ಬಾಂಬ್ ಸ್ಪೋಟಗಳು
ಸಂಭವಿಸಿದವು. ನೂರಾರು ಜನ ಮರಣಿಸಿದರು. ಕೆನಡಾ, ಯುರೋಪಿಯನ್
ರಾಷ್ಟ್ರಗಳಲ್ಲಿ ಹಾಹಾಕಾರವಾಯಿತು. ಈ ಬಾಂಬ್ ಸ್ಪೋಟಗಳಿಗೆ ಕಾರಣ--ಇಸ್ರೇಲ್
ಯಹೂದಿಗಳಿಗೂ ಪ್ಯಾಲೇಸ್ತೀನ್ ಮುಸ್ಲಿಮರಿಗೂ ನಡೆಯುತ್ತಿರುವ ಯುದ್ಧ.!
ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಈ ಯುದ್ಧದಲ್ಲಿ ಅಮೆರಿಕಾದ
ಬೆಂಬಲ ಇಸ್ರೇಲಿಗಿದೆ. ಅದಕ್ಕೆ ಆಯುಧಗಳನ್ನು ಒದಗಿಸುತ್ತಿರುವುದು ಅಮೆರಿಕವೇ.
ಪ್ಯಾಲೇಸ್ತೀನ್ ಮುಸ್ಲಿಮರ ಆಗುತ್ತಿರುವ ದಾಳಿಯನ್ನು ಸಹಿಸಲಾಗದೆ,
ಮತೋನ್ಮಾದ ಸಿದ್ಧಾಂತವನ್ನು ಮೈದುಂಬಿಕೊಂಡು ಒಂದು ಸಂಸ್ಥೆ,
ಅಮೆರಿಕಾವನ್ನು, ನಿರ್ನಾಮ ಮಾಡಿ ಮಣ್ಣುಗೂಡಿಸಲು ಕಂಕಣ ತೊಟ್ಟಿತು.
ರಾಯಭಾರ ಕಚೇರಿಗಳಲ್ಲಿ ಬಾಂಬುಗಳನ್ನಿರಿಸುವ ಮೂಲಕ ತನ್ನ ಪ್ರಥಮ ಪ್ರಯತ್ನ
ಪ್ರಾರಂಭಿಸಿತು. ಜಗತ್ತಿನ ಇತಿಹಾಸದಲ್ಲಿ ಅನಾದಿಕಾಲದಿಂದಲೂ
ಮುಸ್ಲಿಮರಿಗಾಗುತ್ತಿರುವ ಅನ್ಯಾಯವನ್ನು ಎದುರಿಸಲೆಂದೇ ತಾನು
ಜನಿಸಿರುವುದಾಗಿ ನಂಬುವ ಒಬ್ಬ ವ್ಯಕ್ತಿ ಈ ಮತೋನ್ಮಾದ ಸಂಸ್ಥೆಗೆ ಮೂಲಪುರುಷ.
ಅವನ ಹೆಸರು - ಒಸಾಮ-ಬಿನ್-ಲಾಡೆನ್.
(ಮುಂದುವರಿಯುವುದು......)
No comments:
Post a Comment