Wednesday, 15 October 2014

ಒಂದು ಸಂಜೆ....ಭಾಗ-೪

 ಅಂತಹ ಸಂದರ್ಭದಲ್ಲಿ ಇಡೀ ಜಗತ್ತಿನಾದ್ಯಂತ ಅಫಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಒಪ್ಪಿಗೆ ನೀಡಲು ಮುಂದೋದಗಿ ಬಂದದ್ದು ಕೇವಲ ಮೂರು ರಾಷ್ಟ್ರಗಳು ಮಾತ್ರ.



ಅವುಗಳಲ್ಲಿ ಮುಖ್ಯವಾದುದು ಪಾಕಿಸ್ತಾನ!


ಆ ರೀತಿ ಅದು ಒಬ್ಬಂಟಿಯಾಗಿಬಿಟ್ಟಿತು. ಆದರೆ ತಾಲಿಬಾನಿಗಳು ಬಲು ಬುದ್ಧಿವಂತರು. ಬುದ್ಧಿವಂತಿಕೆ ಎನ್ನುವುದಕ್ಕಿಂತಲೂ "ಗುಳ್ಳೆ ನರಿ" ತಂತ್ರ ಎನ್ನುವುದು ಸಮಂಜಸವಾಗುತ್ತದೆಯೆನೊ!!!


ಅಮೆರಿಕಾವನ್ನು ಒಲಿಸಿಕೊಳ್ಳದಿದ್ದರೆ ಉಳಿಗಾಲವಿಲ್ಲವೆನ್ನುವುದು ಅವರಿಗೆ ಗೊತ್ತಿತ್ತು. ಅದೇ ರೀತಿ ಭಾರತ ದೇಶವನ್ನು ಕೂಡ! ಅದಕ್ಕೆ ರಾಯಭಾರ ಕಳಿಸಿತು.


'ಅಫಘಾನಿಸ್ತಾನದಲ್ಲಿ ಕದ್ದು ಬೆಳೆಯಲಾಗುತ್ತಿರುವ ಗಾಂಜಾ ಬೆಳೆಯನ್ನೆಲ್ಲವನ್ನು ನಾಶ ಮಾಡುತ್ತೇವೆ ; ಭಯೋತ್ಪಾದಕ 

ಚಟುವಟಿಕೆಗಳನ್ನು ತಡೆಗಟ್ಟುತ್ತೇವೆ'ಎಂದು ಅಮೇರಿಕಕ್ಕೆ ಹೇಳಿ ಕಳುಹಿಸಿತು. ತಮ್ಮ ಪ್ರಾಮಾಣಿಕತೆಯನ್ನು 

ಸಾಬೀತುಪಡಿಸಿಕೊಳ್ಳಲೊಸುಗ ನರರೂಪ ರಾಕ್ಷಸ 'ಆಯ್ಷುಲ್ ಖಾನ್ಸಿ' ಎನ್ನುವ ಭಯೋತ್ಪಾದಕನನ್ನು,೧೯೯೫ರ ಜೂನ್ 

ತಿಂಗಳಲ್ಲಿ ಅಮೆರಿಕಾದ ಗೂಢಚಾರ ಸಂಸ್ಥೆಯ ವಶಕ್ಕೊಪ್ಪಿಸಿದರು ತಾಲಿಬಾನಿಗಳು. ಅವನು ೧೯೯೭ರಲ್ಲಿ ಅಮೆರಿಕಾದ 

ಗೂಢಚರನನ್ನು ಕೊಂದು ಬಲೂಚಿಸ್ತಾನಕ್ಕೆ ಓಡಿ ಹೋಗಿದ್ದ. ಅವನನ್ನು ಹಿಡಿದೊಪ್ಪೀಸುವ ಮೂಲಕ ಅಮೇರಿಕಕ್ಕೆ ಹತ್ತಿರವಾಗಲು ತಾಲಿಬಾನ್ ಹವಣಿಸಿತು.



ಅದೇ ರೀತಿ, ಭಾರತದ ವಿಮಾನವನ್ನು ಪಾಕಿಸ್ತಾನಿಭಯೋತ್ಪಾದಕರು ಅಪಹರಿಸಿ ಕಂದಹಾರ್ge

 [ಗಾಂಧಾರಿ ಜನಿಸಿದ ಪ್ರದೇಶ ] ಒಯ್ದಾಗ, ಮರ್ಯಾದಸ್ತನಂತೆ ಮಧ್ಯವರ್ತಿತ್ವ ವಹಿಸಿ, ಸಂಧಿ [?] ಮಾಡಿತು. ಆದಾಗ್ಯೂ 

ಭಾರತ ದೇಶ ತನ್ನ ಮೊದಲಿನ ಮಾತಿಗೆ ಕಟ್ಟು ಬಿದ್ದು ತಾಲಿಬಾನಿಗಳಿಂದ ದೂರವೇ ಉಳಿಯಿತು.

ಆದರೆ, ಅಮೆರಿಕಕ್ಕೆ ಮಾತ್ರ ಕ್ರಮಕ್ರಮೇಣ ತಾಲಿಬಾನಿಗಳ ಮೇಲೆ ಪ್ರೀತಿ ಉಂಟಾಗತೊಡಗಿತು. ಅದಕ್ಕೆ ಕಾರಣ, ಅವರು 

ಅಫೀಮು ಬೆಳೆಯನ್ನು ಧ್ವಂಸ ಮಾಡುತ್ತೇವೆ ಎಂದು ಹೇಳಿದ್ದಲ್ಲ. ಅಂತ ಸಣ್ಣ ಪುಟ್ಟ ಆಮಿಷಗಳಿಗೆಲ್ಲ ಅಮೆರಿಕನ್ನರು 

ಮರುಳಾಗುವಂತರಲ್ಲ. ಅಸಲಿ ಕಾರಣ ಬೇರೆಯದೇ ಇತ್ತು! ಅಷ್ಟು ಹೊತ್ತಿಗೆ ಅಮೆರಿಕ ಇರಾಕನ್ನು ತನ್ನ ಪೂರ್ತಿ ಅಧೀನಕ್ಕೆ 

ತಂದುಕೊಳ್ಳಲಾಗದೆ ನಾನಾ ಯಾತನೆ ಪಡುತಿತ್ತು. ಅದಕ್ಕೆ ಜೊತೆಯಾಗಿ ಇರಾನ್ ಕೂಡ ಅಮೇರಿಕಕ್ಕೆ ವಿರುದ್ಧವಾಗಿತ್ತು.

ಮುಸ್ಲಿಮರಲ್ಲಿ ಸ್ಥೂಲವಾಗಿ ಎರಡು ಪಂಗಡ : ಶಿಯಾ ಮತ್ತು ಸುನ್ನಿ. ಸಾಮಾನ್ಯವಾಗಿ ಒಂದು ಪಂಗಡದವರನ್ನು ಕಂಡರೆ ಇನ್ನೊಂದು ಪಂಗಡದವರಿಗೆ ಆಗದು.




ಇರಾನಿಯವರು ಶಿಯಾ ಪಂಥದವರು!

ಇರಾನಿಗೆ ನೆರೆಯಲ್ಲಿರುವ ತಾಲಿಬಾನಿಗಳು ಸುನ್ನಿಗಳು.! ತಾಲಿಬಾನಿಗಳನ್ನು ಬೇಕು ಮಾಡಿಕೊಂಡು, ಅವರಿಗೆ ಆಯುಧಗಳನ್ನು 
ಒದಗಿಸಿದರೆ  ಸ್ವಾಭಾವಿಕವಾಗಿಯೇ ಶತ್ರುಗಳಾದ ಇರಾನಿಯರಿಗೆ ಮಗ್ಗುಲ ಮುಳ್ಳಾಗುತ್ತಾರೆ! ಇದು ಅಮೆರಿಕಾದ ವಿಚಾರ, 

ಆದ್ದರಿಂದಲೇ ಅದು ತಾಲಿಬಾನಿಗಳ ದುಶ್ಚರ್ಯಗಳನ್ನು ಖಂಡಿಸಲಿಲ್ಲ. ಪಾಕಿಸ್ತಾನಕ್ಕಂತಲೂ ರೊಟ್ಟಿ ಜಾರಿ ತುಪ್ಪದಲ್ಲಿ 

ಬಿದ್ದಂಗಾಯಿತು. ತಾಲಿಬಾನಿಗಳಿಗೆ ಅಮೆರಿಕಾದ ಬೆಂಬಲ ದೊರೆತರೆ, ಇನ್ನು ಭಾರತದ ಬಾಲ ಕತ್ತರಿಸಬಹುದು. ಪಾಕ್ 

ಆಕ್ರಮಿತ ಕಾಶ್ಮೀರದ ಮೂಲಕ ಶ್ರೀನಗರದೊಳಗೆ ಅವರನ್ನು ಕಳಿಸಿಕೊಟ್ಟರೆ ತಾಲಿಬಾನಿಗಳು ತಮ್ಮ ರಕ್ತದಾಹ 

ತೀರಿಸಿಕೊಳ್ಳುತ್ತಾರೆ. ಅಮೆರಿಕಕ್ಕೂ ಏನು ಮಾತಾಡುವ ಅವಕಶವಿರದು.




ಈ ರೀತಿ ಎಲ್ಲ ದಾಳಗಳು ಸರಿಯಾಗಿವೆಯೋ ಇಲ್ಲವೋ ಎಂಬುದನ್ನು ನೋಡಿಕೊಂಡು, ಚದುರಂಗದಲ್ಲಿ ಕೊನೆಯ ನಡೆ ನಡೆಸಿ, ಭಾರತಕ್ಕೆ ಚೆಕ್ ಹೇಳಿತು ಪಾಕಿಸ್ತಾನ.! 




ಆ ಕೊನೆಯ ನಡೆಯ ಹೆಸರು - ಕಾರ್ಗಿಲ್.

೨೦ ಮೇ ೧೯೯೯. 


ಪ್ರಶಾಂತವಾಗಿ ನಿದ್ದೆ ಮಾಡುತ್ತಿದ್ದ ರಕ್ಷಣಾ ಮಂತ್ರಿ ಜಾರ್ಜ್ ಫರ್ನಾಂಡಿಸ್, ಕರ್ತವ್ಯವನ್ನು ಹಗುರವಾಗಿ ಭಾವಿಸಿದ 

ಇಂಟೆಲಿಜೆನ್ಸ್ ಇಲಾಖೆ ಎಚ್ಚೆತ್ತು ಕೊಳ್ಳುವಷ್ಟರಲ್ಲಿ ಮೂರು ಸಾವಿರ ಜನ ಭಾರತೀಯ ಸೈನಿಕರು, ನಾಗರಿಕರು ಮರಣಿಸಿದ್ದರು.


ಭಾರತ ದೇಶ ಶ್ರೀನಗರವನ್ನು ಕಳೆದುಕೊಳ್ಳುವ ಅಪಾಯ ಕಣ್ಣೋಟದ ಮೇರೆಗೆ ಬಂದುಬಿಟ್ಟಿತ್ತು.

ಆ ಪರಿಸ್ಥಿತಿಯೇ ಮುಂದುವರಿದಿದ್ದರೆ ಅಮೇರಿಕಕ್ಕೆ ಬಲು ಮುಜುಗರದ ಪರಿಸ್ಥಿತಿ ಏರ್ಪಟ್ಟಿರುತಿತ್ತು. ಏಕೆಂದರೆ ಆಗಲೇ ಮುಸ್ಲಿಮ್ 

ರಾಷ್ಟ್ರಗಳಾದ ಇರಾಕ್, ಇರಾನ್ಗಳೊಂದಿಗೆ ಜಗಳ ತಂದುಕೊಟ್ಟಿತ್ತು. ಇನ್ನುಳಿದ ಮುಸ್ಲಿಂ ರಾಷ್ಟ್ಟ್ರಗಳು ತಮಗೆ ಬೆಂಬಲ 

ಸೂಚಿಸುತ್ತವೇಯೇ ಹೊರತು, ಆಂತರಿಕವಾಗಿ ತಮ್ಮ ಬಗ್ಗೆ ಅವರಿಗ್ಯಾರಿಗೂ ಗೌರವವಾಗಲೀ ಅಭಿಮಾನವಾಗಲಿ 

ಇಲ್ಲವೆಂಬುದು ಅಮೆರಿಕನ್ನರಿಗೆ ಗೊತ್ತಿತ್ತು. ತಾನೀಗ ಪಾಕಿಸ್ತಾನಕ್ಕೆ ಬೆಂಬಲ ನೀಡಿದರೆ ಏನು ಲಾಭವಾಗುತ್ತದೆ? ಎಂದು ಯೋಚಿಸಿತು.

ಪಾಕಿಸ್ತಾನದ ಆರ್ಥಿಕ ಸ್ಥಿತಿ ಬಲು ದಾರುಣವಾಗಿತ್ತು. ಯುದ್ಧದಲ್ಲಿ ಭಾರತವನ್ನು ಸೋಲಿಸಿ ಶ್ರೀನಗರವನ್ನು ಆಕ್ರಮಿಸಿಕೊಂಡರೂ

 ದೀರ್ಘಾವಧಿಯವರೆಗೆ ಅದನ್ನು ಉಳಿಸಿಕೊಳ್ಳುವುದು ಪಾಕಿಸ್ತಾನದಿಂದಾಗದು. ಅದು [ ಪಾಕಿಸ್ತಾನ] ಈಗಾಗಲೇ ಹತ್ತು ಸಾವಿರ

 ಮಿಲಿಯನ್ ಡಾಲರ್ಗಳಷ್ಟು ಆರ್ಥಿಕ ದುಃಸ್ಥಿತಿಯಲ್ಲಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ ತನ್ನ ಬಳಿಯಿಂದ ಯುದ್ಧ ಸಾಮಗ್ರಿ 

ಖರೀದಿಸುವಷ್ಟು ದುಡ್ಡಿನ ತಾಕತ್ತು ಆ ದೇಶಕ್ಕಿರಲಿಲ್ಲ. ಅದಾಗಲೇ ತನಗೆ ಎರಡು ಸಾವಿರ ಮಿಲಿಯನ್ ಡಾಲರ್ಗಳಿಗಿಂತಲೂ ಜಾಸ್ತಿ ಕೊಡುವುದು ಬಾಕಿ ಇತ್ತು.




ಈ ಸಮಯದಲ್ಲಿ ಭಾರತಕ್ಕೆ ದೂರವಾದರೆ ರಷ್ಯಾ, ಇರಾಕ್,ಇರಾನ್, ಭಾರತ-ಇವೆಲ್ಲ ಒಂದುಗುಡಬಹುದು. ತನ್ನ

 ಸಾರ್ವಭೌಮತ್ವಕ್ಕೆ ಅಪಾಯ ತಪ್ಪಿದ್ದಲ್ಲ!. ತಾಲಿಬಾನಿಗಳು, ಪಾಕಿಸ್ತಾನ ಸ್ವಾತಂತ್ರ್ಯಯುದ್ಧವೀರರು ಕಾಶ್ಮೀರದ ಗಡಿಯಲ್ಲಿ

 ಹೋರಾಡುವುದಕ್ಕಿಂತಲೂ ಇರಾನ್,ಇರಾಕ್‌ಗಳಿಗೆ ಮನಶ್ಶಾಂತಿ ಇಲ್ಲದಂತೆ ಮಾಡಿದರೇನೇ ತನಗೆ ಒಳ್ಳೆಯದು.... 

ಇದೆಲ್ಲವನ್ನೂ ಆಲೋಚಿಸಿಯೇ ಅಮೆರಿಕ ಒಂದು ನಿರ್ಧಾರಕ್ಕೆ ಬಂತು. ತತ್ಕ್ಷಣವೇ ಬರಬೇಕೆಂದು ಪಾಕಿಸ್ತಾನದ ಪ್ರಧಾನಿಗೆ ಹೇಳಿಕಳುಹಿಸಿತು. ಇದಾಗಿದ್ದು ಜುಲೈ ೪ ರಂದು.



ಅಮೆರಿಕಾದ [ ಆಗಿನ] ಅಧ್ಯಕ್ಷ ಬಿಲ್ ಕ್ಲಿಂಟನ್,ಪಾಕಿಸ್ತಾನದ [ ಆಗಿನ] ಪ್ರಧಾನಿ ನವಾಜ್ ಶರೀಫಾರೊಂದಿಗೆ ಪರಿಸ್ಥಿತಿಯನ್ನು ಸಮೀಕ್ಷಿಸಿದರು.




No comments:

Post a Comment

CLICK HERE