ವಿಧಿಬರಹದ ಕರ್ಮಫಲ ಎಂಬೆಲ್ಲ ಸಿದ್ದಾಂತಗಳಿಗೆ ಯಾವ ಸ್ಥಾನ ಬರುತ್ತದೆ?
ಎಂಬೆಲ್ಲ ಪ್ರಶ್ನೆಗಳು ಎದುರಾಗುತ್ತವೆ. ಈ ಚಿಂತನೆಗಳಿಂದ ಹೊರ ನಿಂತು ಒಂದು ಉದಾಹರಣೆಯನ್ನು ನೋಡಿ..
ರಾತ್ರಿ ಮಲಗುವ ಹೋಗುವ ಮುನ್ನ ಮಕ್ಕಳು ತಂದೆಯೊಂದಿಗೆ ಸ್ವಲ್ಪ ಸಮಯ
ಕಳೆಯಲು ಬಂದವು. ಹೋಗುವಾಗ ಕಾಲಿನ ಚಪ್ಪಲಿಗಳನ್ನು ಜೊತೆಗೆ ಒಯ್ಯಲು
ಮರೆತವು. ಬೆಳಿಗ್ಗೆ ಏಳುವಾಗ ಹೊತ್ತಾಗಿತ್ತು. ಧಾವಂತದಲ್ಲಿ ಅವನು ಮಂಚದಿಂದ
ಕೆಳಗಿಳಿಯುತ್ತಿರುವಂತೆಯೇ ಮಕ್ಕಳ ಚಪ್ಪಲಿಗಳ ಮೇಲೆ ಕಾಲಿಟ್ಟ. ಜಾರಿ ಬಿದ್ದ,
ಹೊತ್ತಾಗಿ ಎದ್ದ ಕೋಪ ಬೇರೆ, ಜಾರಿ ಬಿದ್ದ ನೋವು ಸೇರಿಕೊಂಡು ಮಾತುಗಳಾಗಿ
ಹೊರ ಬಿಟ್ಟು. ಮಕ್ಕಳನ್ನು ಬಾಯಿಗೆ ಬಂದಂತೆ ಬೈದು ಕೂಗಾಡಿದ. ಸ್ನಾನ ಮಾಡಿ,
ಗಡ್ಡ ಕೆರೆದುಕೊಳ್ಳುವಾಗ ಸಿಟ್ಟು ಧುಮುಧುಮಿಸುತ್ತಲೆ ಇತ್ತು. ಪರಮೋಶಿಯಾಗಿ
ಹೋಯಿತು. ಬ್ಲೇಡು, ಗಲ್ಲದ ಚರ್ಮ ಸವರಿ, ಗಾಯವಾಗಿ ರಕ್ತ ಜೀನುಗತೊಡಗಿತು.
ಇವನ ಗಲಾಟೆ ಕೇಳಿ ಬಂದ ಪತ್ನಿ ಔಷಧಿ ಹಾಕುವಾಗ ಉರಿ ತಡಯಲಾಗದೆ ಅವಳ
ಮೇಲೆಯೂ ಹರಿಹಾಯ್ದ ಈತ! ತಿಂಡಿ ತಿನ್ನಲೂ ಸಮಯವಿಲ್ಲ ಎಂದು ಗೊಣಗುತ್ತಾ
ಉಪ್ಪಿಟ್ಟನ್ನು ಬಾಯಿಗಿಟ್ಟರೆ ಸೀದ ವಾಸನೆ ಬರುತ್ತಿದೆ. ಉಪ್ಪಿಲ್ಲ. ಸಿಟ್ಟಿನಿಂದ ಉರಿ
ಉರಿದು, ತಿಂಡಿಯನ್ನು ಮೇಜಿನ ಮೇಲೆ ಕುಕ್ಕಿ ಬೈಕು ಹತ್ತಿದ. ಹಿಂದು-ಮುಂದು
ನೋಡದೆ ಹೋಗುತ್ತಿರುವಂತೆ ತಿರುವಿನಲ್ಲಿ ಬರುತ್ತಿರುವ ಟ್ರಕ್ ಕಾಣಲಿಲ್ಲ. ಚಾಲಕನ
ಪ್ರಯತ್ನ ಮೀರಿ ಬೈಕು ಲಾರಿಗೆ ಬಡಿಯಿತು.! ಎಚ್ಚರ ತಪ್ಪಿತು.
ಮತ್ತೆ ಬೋಧ ತಿಳಿದಾಗ ಕೈ-ಕಾಲುಗಳಿಗೆ ಪಟ್ಟಿ ಹಾಕಲಾಗಿತ್ತು. ಪಕ್ಕದಲ್ಲಿ ಕಣ್ಣೀರು
ಸುರಿಸುವ ಪತ್ನಿ, ಮಕ್ಕಳಿದ್ದರು. ಅವರ ಮುಖದಲ್ಲಿ ಒಡೆದು ಕಾಣುತ್ತಿದ್ದ ಪ್ರೀತಿ,
ಧಾವಂತ ಕಂಡು ಇವನ ಹ್ರದಯ ಕರಗಿತ್ತು. ಕಣ್ಣು ಮುಚ್ಚಿಕೊಂಡಾಗ, ಮನಸ್ಸು
ಚಿಂತಿಸಲು ತೊಡಗಿತು. ಇಷ್ಟಾದದ್ದು ತನ್ನಿಂದಲೇ! ಇದು ಅಗತ್ಯವಿರಲಿಲ್ಲ..! ಇದನ್ನು
ನಾನು ಬದಲಿಸ ಬಲ್ಲವನಾಗಿದ್ದೆ. ಯಾವಾಗ ತನಗೆ ಬೆಳಿಗ್ಗೆ ಏಳಬೇಕು ಎಂದು
ತಿಳಿದಿತ್ತೋ, ಸಾಕಷ್ಟು ಸಮಯಕ್ಕೆ ಮುನ್ನವೇ ಅಲಾರಾಂ ಇಡಬಹುದಿತ್ತು.
ಮುನ್ನಾದಿನ ರಾತ್ರಿ ತನಗೆ ಅಷ್ಟು ಸಂತೋಷ ನೀಡಿದ ಮಕ್ಕಳನ್ನು ಚಪ್ಪಲಿ ಬಿಟ್ಟು
ಹೋದರೆಂದು ಬಾಯಿಗೆ ಬಂದಂತೆ ಕೂಗಾಡಿ ಬಯ್ದು ನೋಯಿಸುವ ಅಗತ್ಯವೇ
ಇರಲಿಲ್ಲ! ಇನ್ನೂ ತನ್ನ ಸಿಟ್ಟಿನಿಂದಲೇ ಬಿದ್ದೆ, ಗಾಯ ಮಾಡಿಕೊಂಡೆ. ತನಗೆ
ಸಹಾಯ ಮಾಡಲು ಬಂದಿದ್ದರಿಂದ ತಿಂಡಿಗೆ ಉಪ್ಪು ಹಾಕಲು ಮರೆತಿರಬೇಕು.
ಆದುದರಿಂದಲೇ ಉಪ್ಪಿಟ್ಟು ಸೀದು ಹೋಗಿರಬೇಕು. ಇದೆಲ್ಲ ತನಗ್ಯಾಕೆ ಆವಾಗ
ಅರ್ಥವಾಗಲಿಲ್ಲ? ಎನ್ನಿಸಿತು.
ಅಪಘಾತಕ್ಕೆ ಈಡಾಗುವುದು ಅವನ ವಿಧಿಯಾಗಿತ್ತೆ? ಅಥವಾ ಒಂದಿಷ್ಟು
ಸಂಯಮದಿಂದ ಅದು ವಿಧಿಯೆ ಆಗಿದ್ದರೂ ಅದನ್ನು ಬದಲಾಯಿಸಬಹುದಿತ್ತೇ?
ಮನಸ್ಸು ಮರ್ಕಟನಂತೆ. ಚಲನಶೀಲತೆಯೇ ಅದರ ಸ್ವಭಾವ. ಆದರೆ ನಿರಂತರ
ಪ್ರಯತ್ನದಿಂದ ಅದನ್ನು ಕೂಡ ಪಳಗಿಸಬಹುದು. ಬದುಕನ್ನು ಕಾಣುವ ದ್ರಷ್ಟಿಕೋನವೇ ಬದಲಾಯಿಸಿಕೊಳ್ಳಬಹುದು.
ಅಮೆರಿಕ, ವಿಯೆಟ್ನಾಂ ಯುದ್ಧ ಮುಗಿದ ನಂತರ, ಅಲ್ಲಿನ ಘೋರ ಸನ್ನಿವೇಶವನ್ನು
ಬಿತ್ತರಿಸಲು ದೂರದರ್ಶನ ಕಂಪನಿಗಳ ದಂಡೆ ಅಲ್ಲಿಗೆ ಹೋಯಿತು. ಅಮೆರಿಕನ್ನರ
ಬಾಂಬು ದಾಳಿಯಿಂದ ವಿಯೆಟ್ನಾಂ ಧೂಳಿಪಟವಾಗಿತ್ತು. ಹೆತ್ತವರನ್ನು
ಕಳೆದುಕೊಂಡು ನಿರ್ಗತಿಕರಾಗಿರುವ ಮಕ್ಕಳು, ಉರಿದ ಹೋದ ಮನೆಗಳು,
ಕೊಳೆತು ಹೋದ ಹೆಣಗಳಿಂದ ಹರಡಿದ ರೋಗಗ್ರಸ್ತರು.... ಹೀಗೆ ನರಕ ಸದ್ರಶ
ದೇಶವಾಗಿತ್ತದು.
ಕಂಡವರಲ್ಲಿ ಹೆಚ್ಚಿನವರಿಂದ ಇದನ್ನು ಜೀರ್ಣಿಸಿಕೊಳ್ಳಲಾಗಲೇ ಇಲ್ಲ. ಕೆಲವರ ಮತಿ
ಕೆಟ್ಟು ಹೋಯಿತು. ಕೆಲವರು ಅಪರಾಧಿ ಭಾವದಿಂದ ಆತ್ಮಹತ್ಯೆ ಮಾಡಿಕೊಂಡರು.
ಅವರಲ್ಲಿ ಕೆಲವರು ಮೊದಲ ಆಘಾತದಿಂದ ಚೇತರಿಸಿಕೊಂಡ ಅನಂತರ, ತಮ್ಮ
ದೇಶ ಮಾಡಿದ ತಪ್ಪಿಗೆ, ತಾವೂ ಹೊಣೆಗಾರರೇ. ಆದುದರಿಂದ ಇದನ್ನು ಮರಳಿ
ಸುಸ್ಥಿತಿಗೆ ತರುವ ಕೆಲಸ ಮಾಡುವುದೇ ತಮ್ಮ ಶಿಕ್ಷೆ ಎಂದು ನಿರ್ಧರಿಸಿದರು.
ದುರಂತದ ಚಿತ್ರಣವನ್ನು ಅಮೇರಿಕಕ್ಕೆ ಒಯ್ದು, ಹಳ್ಳಿ ಹಳ್ಳಿ, ನಗರಗಳಲ್ಲಿ ಅದನ್ನು
ಹ್ರದಯ ದ್ರವಿಸಿತು.
ಮಿಲಿಯನ್ಗಳ ಸಂಖ್ಯೆಯಲ್ಲಿ
ಡಾಲರುಗಳು ಹರಿದು
ಬಂದವು.
ಅನಾಥ ಮಕ್ಕಳನ್ನು ದತ್ತು ಪಡೆಯಲು ತಾ ಮುಂದು ನಾ ಮುಂದು ಎಂದು
ಮುಂದಾದರು ಮಂದಿ. ಶಾಲಾ-ಕಾಲೇಜುಗಳು, ಪ್ರಾಥಮಿಕ ಆರೋಗ್ಯ
ಕೇಂದ್ರಗಳು, ವಸತಿ ಸಮುಚ್ಚಯಗಳು ತಯಾರಾದವು. ರಸ್ತೆ ರಿಪೇರಿ ಭರದಿಂದ
ನಡೆಯಿತು. ಹೀಗೆ ಕುಸಿದುಹೋದ ಯುದ್ಧ ಜರ್ಝರಿತ ದೇಶ,
ನೋಡುನೋಡುತ್ತಿರುವಂತೆಯೆ ಚೇತರಿಸಿಕೊಂಡಿತು. ಇಷ್ಟಾದದ್ದು ಕೆಲವೇ ಕೆಲವು
ಮಂದಿಯ ಧನ್ಯಾತ್ಮಕ ದ್ರಷ್ಟಿಕೋನದಿಂದ ಎಂದರೆ ಸರಿಯಾಗುತ್ತದೆ. ಅಂದರೆ,
ಅವರು ಬದುಕನ್ನು ಕಟ್ಟ ಬಯಸಿದರು. ಬದುಕನ್ನು ಬದಲಿಸಿದರು. ಇದೆ ಅದರ
ವಿಧಿಯಾಗಿತ್ತೆ? ಅಥವಾ ಮನೋಬಲ ವಿಧಿಯನ್ನು ಮೀರಿ ನಿಂತಿತೇ?
No comments:
Post a Comment