Wednesday, 15 October 2014

ಒಂದು ಸಂಜೆ....ಭಾಗ-೪

 ಅಂತಹ ಸಂದರ್ಭದಲ್ಲಿ ಇಡೀ ಜಗತ್ತಿನಾದ್ಯಂತ ಅಫಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಒಪ್ಪಿಗೆ ನೀಡಲು ಮುಂದೋದಗಿ ಬಂದದ್ದು ಕೇವಲ ಮೂರು ರಾಷ್ಟ್ರಗಳು ಮಾತ್ರ.



ಅವುಗಳಲ್ಲಿ ಮುಖ್ಯವಾದುದು ಪಾಕಿಸ್ತಾನ!


ಆ ರೀತಿ ಅದು ಒಬ್ಬಂಟಿಯಾಗಿಬಿಟ್ಟಿತು. ಆದರೆ ತಾಲಿಬಾನಿಗಳು ಬಲು ಬುದ್ಧಿವಂತರು. ಬುದ್ಧಿವಂತಿಕೆ ಎನ್ನುವುದಕ್ಕಿಂತಲೂ "ಗುಳ್ಳೆ ನರಿ" ತಂತ್ರ ಎನ್ನುವುದು ಸಮಂಜಸವಾಗುತ್ತದೆಯೆನೊ!!!


ಅಮೆರಿಕಾವನ್ನು ಒಲಿಸಿಕೊಳ್ಳದಿದ್ದರೆ ಉಳಿಗಾಲವಿಲ್ಲವೆನ್ನುವುದು ಅವರಿಗೆ ಗೊತ್ತಿತ್ತು. ಅದೇ ರೀತಿ ಭಾರತ ದೇಶವನ್ನು ಕೂಡ! ಅದಕ್ಕೆ ರಾಯಭಾರ ಕಳಿಸಿತು.


'ಅಫಘಾನಿಸ್ತಾನದಲ್ಲಿ ಕದ್ದು ಬೆಳೆಯಲಾಗುತ್ತಿರುವ ಗಾಂಜಾ ಬೆಳೆಯನ್ನೆಲ್ಲವನ್ನು ನಾಶ ಮಾಡುತ್ತೇವೆ ; ಭಯೋತ್ಪಾದಕ 

ಚಟುವಟಿಕೆಗಳನ್ನು ತಡೆಗಟ್ಟುತ್ತೇವೆ'ಎಂದು ಅಮೇರಿಕಕ್ಕೆ ಹೇಳಿ ಕಳುಹಿಸಿತು. ತಮ್ಮ ಪ್ರಾಮಾಣಿಕತೆಯನ್ನು 

ಸಾಬೀತುಪಡಿಸಿಕೊಳ್ಳಲೊಸುಗ ನರರೂಪ ರಾಕ್ಷಸ 'ಆಯ್ಷುಲ್ ಖಾನ್ಸಿ' ಎನ್ನುವ ಭಯೋತ್ಪಾದಕನನ್ನು,೧೯೯೫ರ ಜೂನ್ 

ತಿಂಗಳಲ್ಲಿ ಅಮೆರಿಕಾದ ಗೂಢಚಾರ ಸಂಸ್ಥೆಯ ವಶಕ್ಕೊಪ್ಪಿಸಿದರು ತಾಲಿಬಾನಿಗಳು. ಅವನು ೧೯೯೭ರಲ್ಲಿ ಅಮೆರಿಕಾದ 

ಗೂಢಚರನನ್ನು ಕೊಂದು ಬಲೂಚಿಸ್ತಾನಕ್ಕೆ ಓಡಿ ಹೋಗಿದ್ದ. ಅವನನ್ನು ಹಿಡಿದೊಪ್ಪೀಸುವ ಮೂಲಕ ಅಮೇರಿಕಕ್ಕೆ ಹತ್ತಿರವಾಗಲು ತಾಲಿಬಾನ್ ಹವಣಿಸಿತು.



ಅದೇ ರೀತಿ, ಭಾರತದ ವಿಮಾನವನ್ನು ಪಾಕಿಸ್ತಾನಿಭಯೋತ್ಪಾದಕರು ಅಪಹರಿಸಿ ಕಂದಹಾರ್ge

 [ಗಾಂಧಾರಿ ಜನಿಸಿದ ಪ್ರದೇಶ ] ಒಯ್ದಾಗ, ಮರ್ಯಾದಸ್ತನಂತೆ ಮಧ್ಯವರ್ತಿತ್ವ ವಹಿಸಿ, ಸಂಧಿ [?] ಮಾಡಿತು. ಆದಾಗ್ಯೂ 

ಭಾರತ ದೇಶ ತನ್ನ ಮೊದಲಿನ ಮಾತಿಗೆ ಕಟ್ಟು ಬಿದ್ದು ತಾಲಿಬಾನಿಗಳಿಂದ ದೂರವೇ ಉಳಿಯಿತು.

ಆದರೆ, ಅಮೆರಿಕಕ್ಕೆ ಮಾತ್ರ ಕ್ರಮಕ್ರಮೇಣ ತಾಲಿಬಾನಿಗಳ ಮೇಲೆ ಪ್ರೀತಿ ಉಂಟಾಗತೊಡಗಿತು. ಅದಕ್ಕೆ ಕಾರಣ, ಅವರು 

ಅಫೀಮು ಬೆಳೆಯನ್ನು ಧ್ವಂಸ ಮಾಡುತ್ತೇವೆ ಎಂದು ಹೇಳಿದ್ದಲ್ಲ. ಅಂತ ಸಣ್ಣ ಪುಟ್ಟ ಆಮಿಷಗಳಿಗೆಲ್ಲ ಅಮೆರಿಕನ್ನರು 

ಮರುಳಾಗುವಂತರಲ್ಲ. ಅಸಲಿ ಕಾರಣ ಬೇರೆಯದೇ ಇತ್ತು! ಅಷ್ಟು ಹೊತ್ತಿಗೆ ಅಮೆರಿಕ ಇರಾಕನ್ನು ತನ್ನ ಪೂರ್ತಿ ಅಧೀನಕ್ಕೆ 

ತಂದುಕೊಳ್ಳಲಾಗದೆ ನಾನಾ ಯಾತನೆ ಪಡುತಿತ್ತು. ಅದಕ್ಕೆ ಜೊತೆಯಾಗಿ ಇರಾನ್ ಕೂಡ ಅಮೇರಿಕಕ್ಕೆ ವಿರುದ್ಧವಾಗಿತ್ತು.

ಮುಸ್ಲಿಮರಲ್ಲಿ ಸ್ಥೂಲವಾಗಿ ಎರಡು ಪಂಗಡ : ಶಿಯಾ ಮತ್ತು ಸುನ್ನಿ. ಸಾಮಾನ್ಯವಾಗಿ ಒಂದು ಪಂಗಡದವರನ್ನು ಕಂಡರೆ ಇನ್ನೊಂದು ಪಂಗಡದವರಿಗೆ ಆಗದು.




ಇರಾನಿಯವರು ಶಿಯಾ ಪಂಥದವರು!

ಇರಾನಿಗೆ ನೆರೆಯಲ್ಲಿರುವ ತಾಲಿಬಾನಿಗಳು ಸುನ್ನಿಗಳು.! ತಾಲಿಬಾನಿಗಳನ್ನು ಬೇಕು ಮಾಡಿಕೊಂಡು, ಅವರಿಗೆ ಆಯುಧಗಳನ್ನು 
ಒದಗಿಸಿದರೆ  ಸ್ವಾಭಾವಿಕವಾಗಿಯೇ ಶತ್ರುಗಳಾದ ಇರಾನಿಯರಿಗೆ ಮಗ್ಗುಲ ಮುಳ್ಳಾಗುತ್ತಾರೆ! ಇದು ಅಮೆರಿಕಾದ ವಿಚಾರ, 

ಆದ್ದರಿಂದಲೇ ಅದು ತಾಲಿಬಾನಿಗಳ ದುಶ್ಚರ್ಯಗಳನ್ನು ಖಂಡಿಸಲಿಲ್ಲ. ಪಾಕಿಸ್ತಾನಕ್ಕಂತಲೂ ರೊಟ್ಟಿ ಜಾರಿ ತುಪ್ಪದಲ್ಲಿ 

ಬಿದ್ದಂಗಾಯಿತು. ತಾಲಿಬಾನಿಗಳಿಗೆ ಅಮೆರಿಕಾದ ಬೆಂಬಲ ದೊರೆತರೆ, ಇನ್ನು ಭಾರತದ ಬಾಲ ಕತ್ತರಿಸಬಹುದು. ಪಾಕ್ 

ಆಕ್ರಮಿತ ಕಾಶ್ಮೀರದ ಮೂಲಕ ಶ್ರೀನಗರದೊಳಗೆ ಅವರನ್ನು ಕಳಿಸಿಕೊಟ್ಟರೆ ತಾಲಿಬಾನಿಗಳು ತಮ್ಮ ರಕ್ತದಾಹ 

ತೀರಿಸಿಕೊಳ್ಳುತ್ತಾರೆ. ಅಮೆರಿಕಕ್ಕೂ ಏನು ಮಾತಾಡುವ ಅವಕಶವಿರದು.




ಈ ರೀತಿ ಎಲ್ಲ ದಾಳಗಳು ಸರಿಯಾಗಿವೆಯೋ ಇಲ್ಲವೋ ಎಂಬುದನ್ನು ನೋಡಿಕೊಂಡು, ಚದುರಂಗದಲ್ಲಿ ಕೊನೆಯ ನಡೆ ನಡೆಸಿ, ಭಾರತಕ್ಕೆ ಚೆಕ್ ಹೇಳಿತು ಪಾಕಿಸ್ತಾನ.! 




ಆ ಕೊನೆಯ ನಡೆಯ ಹೆಸರು - ಕಾರ್ಗಿಲ್.

೨೦ ಮೇ ೧೯೯೯. 


ಪ್ರಶಾಂತವಾಗಿ ನಿದ್ದೆ ಮಾಡುತ್ತಿದ್ದ ರಕ್ಷಣಾ ಮಂತ್ರಿ ಜಾರ್ಜ್ ಫರ್ನಾಂಡಿಸ್, ಕರ್ತವ್ಯವನ್ನು ಹಗುರವಾಗಿ ಭಾವಿಸಿದ 

ಇಂಟೆಲಿಜೆನ್ಸ್ ಇಲಾಖೆ ಎಚ್ಚೆತ್ತು ಕೊಳ್ಳುವಷ್ಟರಲ್ಲಿ ಮೂರು ಸಾವಿರ ಜನ ಭಾರತೀಯ ಸೈನಿಕರು, ನಾಗರಿಕರು ಮರಣಿಸಿದ್ದರು.


ಭಾರತ ದೇಶ ಶ್ರೀನಗರವನ್ನು ಕಳೆದುಕೊಳ್ಳುವ ಅಪಾಯ ಕಣ್ಣೋಟದ ಮೇರೆಗೆ ಬಂದುಬಿಟ್ಟಿತ್ತು.

ಆ ಪರಿಸ್ಥಿತಿಯೇ ಮುಂದುವರಿದಿದ್ದರೆ ಅಮೇರಿಕಕ್ಕೆ ಬಲು ಮುಜುಗರದ ಪರಿಸ್ಥಿತಿ ಏರ್ಪಟ್ಟಿರುತಿತ್ತು. ಏಕೆಂದರೆ ಆಗಲೇ ಮುಸ್ಲಿಮ್ 

ರಾಷ್ಟ್ರಗಳಾದ ಇರಾಕ್, ಇರಾನ್ಗಳೊಂದಿಗೆ ಜಗಳ ತಂದುಕೊಟ್ಟಿತ್ತು. ಇನ್ನುಳಿದ ಮುಸ್ಲಿಂ ರಾಷ್ಟ್ಟ್ರಗಳು ತಮಗೆ ಬೆಂಬಲ 

ಸೂಚಿಸುತ್ತವೇಯೇ ಹೊರತು, ಆಂತರಿಕವಾಗಿ ತಮ್ಮ ಬಗ್ಗೆ ಅವರಿಗ್ಯಾರಿಗೂ ಗೌರವವಾಗಲೀ ಅಭಿಮಾನವಾಗಲಿ 

ಇಲ್ಲವೆಂಬುದು ಅಮೆರಿಕನ್ನರಿಗೆ ಗೊತ್ತಿತ್ತು. ತಾನೀಗ ಪಾಕಿಸ್ತಾನಕ್ಕೆ ಬೆಂಬಲ ನೀಡಿದರೆ ಏನು ಲಾಭವಾಗುತ್ತದೆ? ಎಂದು ಯೋಚಿಸಿತು.

ಪಾಕಿಸ್ತಾನದ ಆರ್ಥಿಕ ಸ್ಥಿತಿ ಬಲು ದಾರುಣವಾಗಿತ್ತು. ಯುದ್ಧದಲ್ಲಿ ಭಾರತವನ್ನು ಸೋಲಿಸಿ ಶ್ರೀನಗರವನ್ನು ಆಕ್ರಮಿಸಿಕೊಂಡರೂ

 ದೀರ್ಘಾವಧಿಯವರೆಗೆ ಅದನ್ನು ಉಳಿಸಿಕೊಳ್ಳುವುದು ಪಾಕಿಸ್ತಾನದಿಂದಾಗದು. ಅದು [ ಪಾಕಿಸ್ತಾನ] ಈಗಾಗಲೇ ಹತ್ತು ಸಾವಿರ

 ಮಿಲಿಯನ್ ಡಾಲರ್ಗಳಷ್ಟು ಆರ್ಥಿಕ ದುಃಸ್ಥಿತಿಯಲ್ಲಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ ತನ್ನ ಬಳಿಯಿಂದ ಯುದ್ಧ ಸಾಮಗ್ರಿ 

ಖರೀದಿಸುವಷ್ಟು ದುಡ್ಡಿನ ತಾಕತ್ತು ಆ ದೇಶಕ್ಕಿರಲಿಲ್ಲ. ಅದಾಗಲೇ ತನಗೆ ಎರಡು ಸಾವಿರ ಮಿಲಿಯನ್ ಡಾಲರ್ಗಳಿಗಿಂತಲೂ ಜಾಸ್ತಿ ಕೊಡುವುದು ಬಾಕಿ ಇತ್ತು.




ಈ ಸಮಯದಲ್ಲಿ ಭಾರತಕ್ಕೆ ದೂರವಾದರೆ ರಷ್ಯಾ, ಇರಾಕ್,ಇರಾನ್, ಭಾರತ-ಇವೆಲ್ಲ ಒಂದುಗುಡಬಹುದು. ತನ್ನ

 ಸಾರ್ವಭೌಮತ್ವಕ್ಕೆ ಅಪಾಯ ತಪ್ಪಿದ್ದಲ್ಲ!. ತಾಲಿಬಾನಿಗಳು, ಪಾಕಿಸ್ತಾನ ಸ್ವಾತಂತ್ರ್ಯಯುದ್ಧವೀರರು ಕಾಶ್ಮೀರದ ಗಡಿಯಲ್ಲಿ

 ಹೋರಾಡುವುದಕ್ಕಿಂತಲೂ ಇರಾನ್,ಇರಾಕ್‌ಗಳಿಗೆ ಮನಶ್ಶಾಂತಿ ಇಲ್ಲದಂತೆ ಮಾಡಿದರೇನೇ ತನಗೆ ಒಳ್ಳೆಯದು.... 

ಇದೆಲ್ಲವನ್ನೂ ಆಲೋಚಿಸಿಯೇ ಅಮೆರಿಕ ಒಂದು ನಿರ್ಧಾರಕ್ಕೆ ಬಂತು. ತತ್ಕ್ಷಣವೇ ಬರಬೇಕೆಂದು ಪಾಕಿಸ್ತಾನದ ಪ್ರಧಾನಿಗೆ ಹೇಳಿಕಳುಹಿಸಿತು. ಇದಾಗಿದ್ದು ಜುಲೈ ೪ ರಂದು.



ಅಮೆರಿಕಾದ [ ಆಗಿನ] ಅಧ್ಯಕ್ಷ ಬಿಲ್ ಕ್ಲಿಂಟನ್,ಪಾಕಿಸ್ತಾನದ [ ಆಗಿನ] ಪ್ರಧಾನಿ ನವಾಜ್ ಶರೀಫಾರೊಂದಿಗೆ ಪರಿಸ್ಥಿತಿಯನ್ನು ಸಮೀಕ್ಷಿಸಿದರು.




Tuesday, 14 October 2014

ಒಂದು ಸಂಜೆ....ಭಾಗ-೩

"ಒಡೆದು ಬಿಡೋಣ" ಎಂದಿತು.

"ಹೇಗೆ? ಯಾರನ್ನ?ಯಾಕೆ?"

"ಅಫಘಾನಿಸ್ತಾನದವರೆಂದರೆ ಕೇವಲ ಮೊಜಹಿದಿನರು, ಪೂಸ್ತುನರಷ್ಟೆ ಅಲ್ಲ, ಇನ್ನೂ ಅನೇಕಾನೇಕ ಗಿರಿಜನ ಪಂಗಡಗಳಿವೆ.

 ನಾವು ಯಾರಿಗೆ ಸಹಾಯ ಮಾಡುತ್ತೇವೆಯೋ ಅವರು ಬಲಿಷ್ಟರಾಗುತ್ತಾರೆ. ನಾವು ಆ ಕೆಲಸಕ್ಕೆ ತೊಡಗಿಕೊಳ್ಳುವುದು ಒಳ್ಳೆಯದು" 



ತಲೆಯಾಡಿಸಿದ ಪಾಕಿಸ್ತಾನ ತತ್‌ಕ್ಷಣ ಕಣಕ್ಕಿಳಿಯಿತು. ಮೋಜಾಹಿದಿನರಿಗೆ ವ್ಯತಿರೇಕವಾಗಿದ್ದ ಮತ್ತೊಂದು ಗುಂಪನ್ನು 

ಪ್ರಚೋದಿಸಿ,ಪ್ರೋತ್ಸಾಹಿಸಿತು. ಕಂದಾಚಾರ, ಕಟ್ಟರ್ ಪ್ರವೃತ್ತಿಯನ್ನು ಅಣುಅಣುವಿನಲ್ಲೂ ತುಂಬಿಕೊಂಡು, ಜೀರ್ಣಿಸಿಕೊಂಡಿದ್ದ 

ಆ ಪಂಗಡ, ಉದಯಸೂರ್ಯನ ನಾಡಿನ ಇತಿಹಾಸವನ್ನು ರಕ್ತಕ್ಷರಗಳಲ್ಲಿ ತಿದ್ದಿ ಬರೆಯಲು ಸಂಕಲ್ಪ ಮಾಡಿತು. ದಯೆ ದಾಕ್ಷಿಣ್ಯ 

ಮುಂತಾದ ಪದಗಳನ್ನು ದೂರ ತಳ್ಳಿತು. ಮುಖ ತೋರಿಸಿದ ಸ್ತ್ರೀಯರನ್ನು ಬುರ್ಖಾ ಧರಿಸಿಲ್ಲವೆನ್ನುವ ಕಾರಣಕ್ಕೆ ಬೀದಿಯಲ್ಲಿ 

ನಿಲ್ಲಿಸಿ ಹಿಂಸಿಸಿತು. ಕದ್ದ ಅಪರಾಧಕ್ಕೆ ಕಲ್ಲುಗಳಿಂದ ಹೊಡೆದು ಸಾಯಿಸುವ ಶಿಕ್ಷೆ ಜಾರಿಗೆ ತಂದಿತು. ಗಂಡಸರಿಗೆ ಗಡ್ಡ ಕಡ್ಡಾಯ

 ಎಂದು ಆಜ್ಞೆ ಮಾಡಿತು. ಸಿನಿಮಾ, ಟಿ. ವಿ.ಗಳನ್ನು ನಿಷೇಧಿಸಿತು. ಮಹಿಳೆಯರು ಶಾಲೆಗಳಲ್ಲಿ, ಆಫೀಸುಗಳಲ್ಲಿ 

ಪ್ರವೇಶಿಸುವಂತಿಲ್ಲ ಎಂದು ನಿರ್ಭಂದ ಹೇರಿತು. ಪಾಕಿಸ್ತಾನದ ಪ್ರೋತ್ಸಾಹದಿಂದ ಅಫಘಾನಿಸ್ತಾನದ ರಾಜಸ್ಥಾನಿ ಕಾಬಲ್ನ 

ಮೇಲೆ ಮುತ್ತಿಗೆ ಹಾಕಿ ವಶಪಡಿಸಿಕೊಂಡಿತು. ಜೀವ ಉಳಿಸಿಕೊಳ್ಳಲು ವಿಶ್ವಸಂಸ್ಥೆಯ ಕಛೇರಿಯ ಕಾಂಪೌಂಡಿನಲ್ಲಿ

 ತಲೆಮರೆಸಿಕೊಂಡಿದ್ದ ಅಫಘಾನ್ನ ಮಾಜಿ ಅಧ್ಯಕ್ಷ ನಾಜಿಬುಲ್ಲನನು ಹೊರಗೆಳೆದು ತಂದು, ಇಡೀ ಜಗತ್ತು 'ಬೇಡ-ಬೇಡ' ಎಂದು

 ಹಾಹಾಕಾರ ಗೈಯುತ್ತಿದ್ದರೂ ಬೀದಿದೀಪದ ಕಂಬಕ್ಕೆ ನೇತು ಹಾಕಿ ಶೂಲಕ್ಕೇರಿಸಿತು. ಅಫಘಾನಿಸ್ತಾನದ ರಾಜ್ಯಾಡಳಿತವನ್ನು 

ಆ ರೀತಿ ತನ್ನ ಕರ್ಕಶ ಕೈಗಳಿಗೆತ್ತಿಕೊಂಡ ಆ ಭಯೋತ್ಪಾದಕ ಪಂಗಡದ ಹೆಸರು- "ತಾಲಿಬಾನ್"



ಜೂನ್ ೨, ೧೯೯೦

ಪಾಕಿಸ್ತಾನದ ಬೆಂಬಲದಿಂದಾಗಿ ತಾಲಿಬಾನರು ಮಿತಿಮೀರಿದರು. ಅಫಘಾನಿಸ್ತಾನದಲ್ಲಿ ಈ ಎಲ್ಲ ಪರಿಣಾಮಗಳಾಗುತ್ತಿದ್ದರೆ, 

ರಷ್ಯಾದ ಪರಿಸ್ಥಿತಿ ಬೇರೊಂದು ರೀತಿ ಇತ್ತು. ರಷ್ಯನ್ ಸೇನೆಗಳು ಅಫಘಾನ್ ನೆಲದಿಂದ ತೆರಳಲಾರಂಭಿಸುವುದಕ್ಕಿಂತ ಎರಡು 
ವರ್ಷ ಮೊದಲು ಜಗತ್ತಿನ ಇತಿಹಾಸದಲ್ಲಿ ಅನೂಹ್ಯ ಪರಿಣಾಮವೊಂದು ಸಂಭವಿಸಿತು..



ಗೋರ್ಬಚೇವ್ ಎನ್ನುವ ರಾಜಕೀಯ ಅರ್ಥಶಾಸ್ತ್ರಜ್ನ "ಪೆರೆಸ್ಟ್ರೊಯಿಕಾ" ಎನ್ನುವ ನೂತನ ಪದವನ್ನು ರಷ್ಯನ್ 

ನಿಘಂಟುವಿನೊಳಗೆ ಸೇರ್ಪಡೆ ಮಾಡಿದ . ಪೆರೆಸ್ಟ್ರೊಯಿಕಾ ಎಂದರೆ 'ಪುನರ್ನಿರ್ಮಾಣ' ಎಂದರ್ಥ. ಅಷ್ಟು ಹೊತ್ತಿಗಾಗಲೇ 

ದಿವಾಳಿಯ ಅಂಚು ತಲುಪಿದ್ದ ರಷ್ಯನ್ನರು ಈ ಪುನರ್ ನಿರ್ಮಾಣವನ್ನು ಸ್ವಾಗತಿಸಿದರು. ಅವರಿಗೆ ಬೇರೆ ದಾರಿಯೇ ಇರಲಿಲ್ಲ. 

ಪರಿಣಾಮ-ರಷ್ಯಾ ಛಿದ್ರ-ವಿಚಿದ್ರವಾಯಿತು. ಕಮ್ಯೂನಿಸಮ್ ಕುಸಿದುಬಿತ್ತು.



ಜೂನ್ ೨, ೧೯೯೦ರಂದು ಅಮೆರಿಕದ ಅಧ್ಯಕ್ಷ  ಬುಷ್,ರಷ್ಯನ್ ಚೀಫ್ ಗೋರ್ಬಚೇವ್ ಸೇರಿ, ಎರಡು ರಾಷ್ಟ್ರಗಳ ನಡುವಿನ 

ಶೀತಲ ಸಮರವನ್ನು ನಿಷೇಧಿಸುತ್ತಾ ಒಪ್ಪಂದಕ್ಕೆ ಸಹಿ ಹಾಕಿದರು. ರಷ್ಯಾ ಸ್ಪರ್ಧೆಯಿಂದ ಹಿಂದೆ ಸರಿದು, ತನ್ನ ಗೌರವ ಉಳಿಸಿಕೊಂಡಿತು.



ಜಗತ್ತಿನಲ್ಲಿ ಅಮೆರಿಕ ಒಂದೇ ಸೂಪರ್ ಪವರ್ ರಾಷ್ಟವಾಗಿ ಉಳಿಯಿತು.!

ಅಷ್ಟರೊಳಗೆ ಅಫಘಾನಿಸ್ತಾನದಲ್ಲಿ ಮೋಜಾಹಿದಿನರಿಗೂ,ತಾಲಿಬಾನರಿಗೂ ನಡುವೆ ಆಂತರಿಕ ಕಲಹ ಶುರುವಾಗಿತ್ತು. 

೫೦,೦೦೦ ಜನ ಕಬೂಲ್ ತೊರೆದು ಓಡಿ ಹೋಗಿದ್ದರು. ಲಕ್ಷಗಟ್ಟಲೆ ಜನ ನಿರಾಶ್ರತರಾಗಿದ್ದರು. ತಾಲಿಬಾನಿಗಳ ದೇಶವನ್ನೆಲ್ಲ 

ಆಕ್ರಮಿಸಿಕೊಳ್ಳುತ್ತ ಮುನ್ನುಗ್ಗುತ್ತಿದ್ದರು. ಇಸ್ಲಾಂ ನಿಯಮಗಳನ್ನು ಕಠಿಣವಾಗಿ ಜಾರಿಗೊಳಿಸುತ್ತಾ ಅಡ್ಡಿಪಡಿಸಿ,ಅಬ್ಯಂತರ 

ಹೇಳಿದವರನ್ನುಉದ್ದುದ್ದಕ್ಕೆ ಸಿಳಿಬಿಡುತ್ತಿದ್ದರು. ಸ್ತ್ರೀಯರ ಬಗ್ಗೆಯೂ ಕನಿಕರ ತೋರಿಸುತ್ತಿರಲಿಲ್ಲ. ತಮ್ಮ ಧರ್ಮ ಹೇಳಿದಂತೆ 

ಮಾಡುತ್ತಿದ್ದೇವೆ ಎಂದು ಹೇಳಿಕೊಂಡೇ ಬುದ್ಧನ ವಿಗ್ರಹಗಳನ್ನು ನೆಲಸಮಗೊಳಿಸಿದರು.



ಜಗತ್ತು ಈ ಎಲ್ಲ ಪರಿಣಾಮಗಳನ್ನು ಕಂಡು, ತಲ್ಲಣಿಸಿ,ಹಾಹಾಕಾರಗೈಯತೊಡಗಿತು. ಆಂತರಿಕ ಸಮಸ್ಯೆಗಳಲ್ಲಿ ಸಿಲುಕಿ

 ಒದ್ದಾಡುತ್ತಿದ್ದ ರಷ್ಯಾ ಯಾವುದನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ.




ಪಾಕಿಸ್ತಾನದ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕಿಕೊಂಡ ಅಡಿಕೆಯಂತಾಯಿತು. ತಾಲಿಬಾನಿಗಳನ್ನು ಸಮರ್ಥಿಸಲೇಬೇಕಾದ 

ಅನಿವಾರ್ಯ ಪರಿಸ್ಥಿತಿ ತಲೆದೋರಿತು. ಇಲ್ಲದಿದ್ದರೆ ಭಾರತವನ್ನು ಬೆಂಬಲಿಸುವ ಗುಂಪು ಅಧಿಕಾರಕ್ಕೆ ಬಂದುಬಿಡುವ 

ಅಪಾಯವಿತ್ತು. ತನ್ನನ್ನು ಈ ವಿಷಮ ಸ್ಥಿತಿಯಿಂದ ಹೊರಗೆಳೆಯಬೇಕೆಂದು ಪಾಕಿಸ್ತಾನ ಅಮೆರಿಕವನ್ನು ಕೇಳಿಕೊಂಡಿತು.



ಆದರೆ ಅಮೇರಿಕಕ್ಕೆ ಈ ಎಲ್ಲ ವ್ಯವಹಾರಗಳ ಬಗ್ಗೆ ಒಂದಿನಿತೂ ಆಸಕ್ತಿ ಉಳಿದಿರಲಿಲ್ಲ. ಯಾವಾಗ ರಷ್ಯಾ ಸ್ಪರ್ಧೆಯಿಂದ ಹಿಂದೆ 

ಸರಿಯಿತೋ ಆಗ ಅಮೇರಿಕಕ್ಕೆ ಪಾಕಿಸ್ತಾನದ ಮೇಲಾಗಲೀ, ಅಫಘಾನಿಸ್ತಾನದ ಮೇಲಾಗಲೀ ಆಸಕ್ತಿ ಯಾಕಿರುತ್ತೆ?

ಆದ್ದರಿಂದಲೇ ತಾನು ಆ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದುಬಿಟ್ಟಿತು.



[ ಪ್ರತಿಯೊಂದು ರಾಷ್ಟ್ರ ತನ್ನ ವಿದೇಶಾಂಗ ನೀತಿಯನ್ನು, ತನ್ನ ಸ್ವಾರ್ಥಕ್ಕನುಗುಣವಾಗಿ ರೂಪಿಸಿಕೊಳ್ಳುತ್ತದೆ. ಇದರಲ್ಲಿ ಶಾಶ್ವತ ಮೈತ್ರಿ,ಇಸಮ್,ಕ್ರತಜ್ಞತೆ ಮುಂತಾದವ್ಯಾವುವು ಇರುವುದಿಲ್ಲ ಎಂದು ಹೇಳುವುದು ಈ ಇದರ ಉದ್ದೇಶ.]



೨೭ ಸೆಪ್ಟೆಂಬರ್, ೧೯೯೬

ಕಾಬೂಲನ್ನು ಆಕ್ರಮಿಸಿಕೊಂಡ ತಾಲಿಬಾನಿಗಳನ್ನು ತಮ್ಮನ್ನು ಅಪಘಾನಿಸ್ತಾನದ ಆಳರಸರೆಂದು ಘೋಷಿಸಿಕೊಂಡರು. ಆದರೆ

 ಜಗತ್ತಿನಲ್ಲಿ ಯಾವುದೇ ರಾಷ್ಟ್ರ್‌ವು ಅವರನ್ನು ಅಧಿಕ್ರತ ಪ್ರತಿನಿಧಿಗಳೆಂದು  ಪರಿಗಣಿಸಿ ಮನ್ನಣೆ ನೀಡಲು ಸಿದ್ದವಿರಲಿಲ್ಲ. ಅಂತ 

ಸಂದರ್ಭದಲ್ಲಿ ಇಡೀ ಜಗತ್ತಿನಾದ್ಯಂತ ಅಫಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಒಪ್ಪಗೆ ನೀಡಲು ಮುಂದೋದಗಿ ಬಂದದ್ದು ಕೇವಲ ಮೂರು ರಾಷ್ಟ್ರಗಳು ಮಾತ್ರ.






[ ಮುಂದುವರಿಯುವುದು........]

Monday, 13 October 2014

ಒಂದು ಸಂಜೆ....ಭಾಗ-೨


ಈ ಎಲ್ಲ ಪೂರ್ವಾಪರ ಆಲೋಚನೆ ಮಾಡಿ ರಷ್ಯಾ ಮುಖ್ಯವಾದುದೊಂದು ನಿರ್ಣಯ ತೆಗೆದುಕೊಂಡಿತು.

ಪರಿಣಾಮ-೧೯೭೮ರ ಏಪ್ರಿಲ್ ೨೭ರಂದು ಬೆಳಿಗ್ಗೆ ಲಕ್ಷಗಟ್ಟಲೆ ರಷ್ಯನ್ ಸೈನಿಕರು, ಸಾವಿರಾರು ಟ್ಯಾಂಕರುಗಳೊಂದಿಗೆ

"ಉದಯಸೂರ್ಯನ ನಾಡಿ"ನೊಳಗೆ ಪ್ರವೇಶಿಸಿದರು. ಅಡ್ಡಬಂದವರನ್ನು ಅಡ್ಡಡ್ಡ ಕತ್ತರಿಸುತ್ತ, ರಕ್ತದಿಂದ ಆ ನೆಲವನ್ನು

 ಕೆಂಪಾಗಿಸುತ್ತಾ ಅರಿಯನ್ ಪ್ರದೇಶವನ್ನು ವಶಪಡಿಸಿಕೊಂಡರು.


ಇದನ್ನೇ "ಏಪ್ರಿಲ್ ಕ್ರಾಂತಿ" [ ಏಪ್ರಿಲ್ ರೆವಲ್ಯೂಷನ್ ]  ಎನ್ನುವುದು.

ಅರಿಯನ್ ಪ್ರಾಂತದಲ್ಲಿ ಗಿರಿಜನರೆಲ್ಲರೂ ಒಟ್ಟೂ ಎರಡು ಕೋಟಿಗಳಿಗಿಂತಲೂ ಜಾಸ್ತಿ ಇದ್ದಿರಲಿಲ್ಲ. ಅಂದರೆ ಭಾರತದಲ್ಲಿ

ಕೇರಳದಂತಹ ರಾಜ್ಯದ ಜನಸಂಖ್ಯೆಗಿಂತಲೂ ಕಮ್ಮಿಯೇ! ಆದರೆ ಅವರು ನಿಸರ್ಗದೊಂದಿಗೆ ಸಹವಾಸ

ಇಟ್ಟುಕೊಂಡಿರುವಂತವರು! ಸ್ವಭಾವಿಕಬಾಗಿಯೇ ಸ್ವಾತಂತ್ರ್ಯ ಪ್ರೇಮಿಗಳು.



ಅವರು ರಷ್ಯನ್ ಸೈನಿಕರ ಜೀವನಗಳನ್ನು ದುರ್ಭಲಗೊಳಿಸಿಬಿಟ್ಟರು. ಬೆಟ್ಟ-ಗುಡ್ಡಗಳ ಕಗ್ಗತ್ತಲ ಗುಹೆಗಳೊಳಗಿಂದ ನುಗ್ಗಿ ಬಂದು

 ಮಿಂಚಿನ ದಾಳಿ ನಡೆಸುತ್ತಿದರು. ಗೆರಿಲ್ಲಾ ಯುದ್ಧದಲ್ಲಿ ರಷ್ಯನ್ ಸೈನಿಕರನ್ನು ಹಣ್ಣು ಹಣ್ಣು ಮಾಡುತ್ತಿದ್ದರು.



ಇತ್ತ ರಶ್ಯನ್ನರೆನು ಕಮ್ಮಿ ಇರಲಿಲ್ಲ. ಜಗತ್ತಿನ ಎರಡು ಪ್ರಬಲ ಶಕ್ತಿಗಳಲ್ಲಿ ಅದು ಒಂದು... ! ರಷ್ಯನ್ನರು ಮತ್ತಷ್ಟು ಕಠಿಣವಾಗಿ

ವರ್ತಿಸಿ, ಹಿಡಿತ ಬಿಗಿ ಮಾಡಿದರು. ಈ ಪ್ರಾಂತದೊಳಗೆ ಅಮೆರಿಕವಾಗಲಿ, ಪಾಕಿಸ್ತಾನವಾಗಲಿ ಕಾಲಿಡಕೂಡದೆನ್ನುವುದು ಅದರ ಉದ್ದೇಶ.


ಪರಿಣಾಮ- "ಉದಯಸೂರ್ಯನ ನಾಡು" ಕೆಂಪೇರಿತು. ಆ ಕೆಂಪಿಗೆ ಕಾರಣವಾಗಿದ್ದು ಅರುಣೋದಯ ಕಾಂತಿಯಲ್ಲ.. ರಕ್ತ..!



ಸಾವಿರಾರು ರಷ್ಯನ್ ಸೈನಿಕರು ಮರಣಿಸಿದರು. ಅತ್ತ ಲಕ್ಷಗಟ್ಟಲೆ ಮೊಜಹಿದಿನರು ಜೀವಕ್ಕೆರವಾದರು. ಆ ಕಾಲದಲ್ಲೇ ಆ

ಪ್ರಾಂತದೆಲ್ಲೆಲ್ಲ ಸುಮಾರು ೪೦ ಲಕ್ಷ ಭೂ ಸ್ಪೋಟಕಗಳು [ ಲ್ಯಾಂಡ್ ಮೈನ್ಸ್ ] ಇದ್ದವೆಂಬುದು ಒಂದು ಅಂದಾಜು.!!




ಆ ರೀತಿ, ಆ ಗುಡ್ಡಗಾಡಿನ ಪ್ರಾಂತ ಹತ್ತು ವರ್ಷಗಳ ಕಾಲ ಭಯಂಕರ ರಣರಂಗವಾಗಿ ಮಾರ್ಪಟ್ಟಿತು. ಒಂದೆಡೆ ರಷ್ಯಾ,

ಮತ್ತೊಂದೆಡೆ ಅಮೆರಿಕಾ- ಎರಡು ಬಲಿಷ್ಠ ರಾಷ್ಟ್ರಗಳು ಪರಸ್ಪರ ಆಡುವ ಆಟದಲ್ಲಿ, ಪಾಪ, ಆ ಪುಟ್ಟ ಪ್ರದೇಶ ಕೇವಲ

ದಾಳವಾಗಿತ್ತು. ಇತೀಹಾಸದುದ್ದಕ್ಕೂ ಹಲವರ ಕೈಗಳಿಗೆ ಸಿಕ್ಕಿ ಸ್ವಾರ್ಥಿಗಳಿಂದಾಗಿ ಪುಟ್ಟ ಪುಟ್ಟ ತಂಡಗಳಾಗಿ ಒಡೆದು, ಬಗೆ

 ಬಗೆಯ ಯುದ್ಧಗಳಿಂದ ನರಳಿ, ನೊಂದು, ಬೇಸತ್ತ ರಾಷ್ಟ ಅದು! ಹಿರಿಯರು ಮಕ್ಕಳ ಕೈಗೆ ಸ್ಲೇಟು-ಬಳಪ ಕೊಟ್ಟು, ಅ,ಆ,ಇ,ಈ

 ಕಲಿಸುವ ಬದಲಿಗೆ ಬಂದೂಕು ಗುರಿ ಇಡುವುದನ್ನು ಕಲಿಸುವ ಪ್ರಾಂತವದು.! ಮನುಷ್ಯನ ಜೀವ ಹುಲ್ಲುಕಡ್ಡಿಗೆ ಸಮವಾಗಿದ್ದರೆ,

ಹುಲ್ಲುಕಡ್ಡಿಗೋಸ್ಕರ ಜೀವ ಬಲಿ ತೆಗೆದುಕೊಳ್ಳುವ ದೇಶ ಅದು.!



ಆ ದೇಶದ ಹೆಸರೇ ಅಪಘಾನಿಸ್ತಾನ್!!!!

೧೫ ಜನೆವರಿ. ೧೯೮೯.

ದಿ ಲ್ಯಾಂಡ್ ಆಫ್ ರೈಸಿಂಗ್ ಸನ್ ನಲ್ಲಿ ರಷ್ಯನ್ ಧ್ವಜ ಹಾರಾಡುತ್ತಿರುವುದು ಅಮೇರಿಕಕ್ಕೆ ಇಷ್ಟವಾಗಲಿಲ್ಲ. ಅದನ್ನು ಗ್ರಹಿಸಿದ

ಪಾಕಿಸ್ತಾನ ಆ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿತು. ತನ್ನೊಂದಿಗೆ ಕೈಗೂಡಿಸಿದರೆ ಅಪಘಾನವನ್ನು ತಮ್ಮ ಹಿಡಿತಕ್ಕೆ

ತಂದುಕೊಳ್ಳಬಹುದೆಂದು ಅಮೇರಿಕಕ್ಕೆ ಆಸೆ ತೋರಿಸಿತು. ಅಮೆರಿಕ ಅದಕ್ಕೆ ತತ್‌ಕ್ಷಣ ಒಪ್ಪಿಕೊಂಡಿತು.



ಅಲ್ಲಿಗಾಗಲೇ, ಪಾಕಿಸ್ತಾನ ರಷ್ಯನ್ನರೊಂದಿಗೆ ಹೊರಡುತ್ತಿದ್ದ ಮೋಜಾಹಿದಿನರಿಗೆ ನೆರವು ನೀಡತೊಡಗಿತ್ತು. ಅಮೆರಿಕ

ಜೊತೆಯಾದ ಮೇಲೆ ಆ ನೆರವು ಮತ್ತಷ್ಟು ತೀವ್ರವಾಯಿತು. ಅದರಿಂದಾಗಿ ಅಫಘಾನಿಸ್ತಾನವನ್ನು ಹಿಡಿತದಲ್ಲಿರಿಸಿಕೊಳ್ಳುವುದು

 ರಷ್ಯನ್ನರಿಗೆ ಕಷ್ಟಸಾಧ್ಯವೆನ್ನಿಸತೊಡಗಿತು. ಅದು ಅಲ್ಲದೆ ರಷ್ಯಾದ ಆರ್ಥಿಕ ಪರಿಸ್ಥಿತಿಯೂ ಹೇಳಿಕೊಳ್ಳುವಷ್ಟು ಚೆನ್ನಾಗಿರಲಿಲ್ಲ.

ಇದೆಲ್ಲದರಿಂದಾಗಿ ದಿನದಿಂದ ದಿನಕ್ಕೆ ಹಿಡಿತ ಸಡಿಲವಾಗತೊಡಗಿತ್ತು.



ಇದೆಲ್ಲದರ ಪರಿಣಾಮವಾಗಿ ೧೪ ಅಕ್ಟೋಬರ್, ೧೯೮೭ರಂದು ಅಫಘಾನಿಸ್ತಾನದಿಂದ ತನ್ನ ಸೇನೆ

ಹಿಂತೆಗೆದುಕೊಳ್ಳುತ್ತಿರುವಾಗಿ ರಷ್ಯಾ ಹೇಳಿಕೆ ನೀಡಿತು. ಆ ರೀತಿ ಸೇನೆ ಹಿಂತೆಗೆದುಕೊಳ್ಳಲು ಸುಮಾರು ಎರಡು ವರ್ಷ

ಬೇಕಾಯಿತು. ಅಂದರೆ, ೧೯೮೯ ಜನೆವರಿಯಲ್ಲಿ ರಷ್ಯನ್ ಸೇನೆಯ ಕೊನೆಯ ಟ್ಯಾಂಕರ್ ಅಫಘಾನಿಸ್ತಾನದ ಗಡಿ ದಾಟಿ

ಹೊರತು ಹೋಯಿತು. ರಷ್ಯನ್ ಸೇನೆ ಪೂರ್ತಿಯಾಗಿ ಅಲ್ಲಿಂದ ಕಾಲ್ತೆಗೆದ ಮರುಕ್ಷಣ ಅಂದುಕೊಂಡಿದ್ದು ಅಂದುಕೊಂಡಂತೆಯೇ

ನಡೆದು ಬಂದಿತ್ತು. ರಷ್ಯನ್ ಸೇನೆ ತೊಲಗಿದ ನಂತರ, ಪಾಕಿಸ್ತಾನಕ್ಕೆ ಆಘಾತವಾಗುವ ಘಟನೆ ನಡೆಯಿತು. ಅಲ್ಲಿಯ ತನಕ

ನಿಶ್ಶಬ್ದವಾಗಿ ತಮ್ಮ ಕೆಲಸ ಮಾಡಿಕೊಂಡು ಬಂದಿದ್ದ ಮೊಜಹಿದಿನರು ತಾವು ಸ್ವತಂತ್ರರು, ಯಾರ ಕೈಕೆಳಗೂ ಇರುವಂಥವರಲ್ಲ

ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಅವರಿಗೆ ಅಷ್ಟೋ ಇಷ್ಟೋ ಒಲವಿದ್ದುದು ಭಾರತದ ಕಡೆಗೆ. ಅದನ್ನವರು ತೋರ್ಪಡಿಸಿದರು ಕೂಡ.



ಅದರಿಂದಾಗಿ ಪಾಕಿಸ್ತಾನಕ್ಕೆ ಗಂಟಲಲ್ಲಿ ಗಾಳ ಚುಚ್ಚಿಕೊಂಡಂತಾಯಿತು. ಭಾರತಕ್ಕೆ ಮಿತ್ರರಾದ "ಪವಿತ್ರ ಯುದ್ಧವೀರರು"

ಅಫಘಾನಿಸ್ತಾನದಲ್ಲಿ ಸ್ಥಿರಗೊಂಡರೆ ತನಗಾಗುವ ಹಾನಿಯ ಬಗ್ಗೆ ಕೂಲಂಕುಷವಾಗಿ ಗೊತ್ತಿತ್ತು. ಅದಕ್ಕೆ ಅಮೆರಿಕಾದತ್ತ ಮುಖ
ಮಾಡಿ "ಏನು ಮಾಡೋಣ?" ಎಂದಿತು..


ಮುಂದುವರಿಯುವುದು.............

Sunday, 12 October 2014

ಒಂದು ಸಂಜೆ....ಭಾಗ-೧



ಪ್ರತಿಯೊಂದು ಕಥೆ ಎಲ್ಲೋ ಒಂದೆಡೆ ಆರಂಭವಾಗಬೇಕು. ಈ ಕಥೆಯನ್ನು ಸುಮಾರು ಸಾವಿರ ವರ್ಷಗಳ ಹಿಂದಿನಿಂದ ಆರಂಭಿಸೋಣ.


ಕ್ರಿ.ಶ.೧೦೨೬

ಖುರಾಸಕ್..... ದಿ ಲ್ಯಾಂಡ್ ಆಫ್ ರೈಸಿಂಗ್ ಸನ್  [ ಉದಯಸೂರ್ಯನ ನಾಡು! ]

                        ರತ್ನಗರ್ಭವೆಂದು ಖ್ಯಾತಿಗಳಿಸಿದ ಭಾರತದೇಶವನ್ನು ದೋಚಿ ಲೂಟಿಮಾಡಲು ಸುಮಾರು ಸಾವಿರ

ವರ್ಷಗಳ ಹಿಂದೆ ಮಹಮ್ಮದ್ ಘಜಿನಿ ಆ ಪ್ರಾಂತ್ಯದಿಂದಲೇ ಪಯಣಿಸಿದ್ದ. ಹಿಮಾಲಯ ಕಣಿವೆಗಳ ನಡುವೆ ಸಾಗಿಬಂದು

ಸೋಮನಾಥ ದೇವಾಲಯವನ್ನು ಧ್ವಂಸ ಮಾಡಿದ.


                         ಅನಂತರ ನೂರು ವರ್ಷಗಳಿಗೆ ಘೋರಿ ಮಹಮ್ಮದ್ ಆ ಪ್ರದೇಶದಿಂದಲೇ ಬಂದು ಟಾರಿಯನ್ ಯುದ್ಧದಲ್ಲಿ

 ಪ್ರಥ್ವೀರಾಜನನ್ನು ಸೋಲಿಸಿದ. ಆಗ ಅದರ ಹೆಸರು ಆರಿಯಾನ ಎಂದಿತ್ತು. ಆರ್ಯರು ವಾಸಿಸಿದ ನಾಡಾದ್ದರಿಂದ ಅದಕ್ಕೆ ಆ

ಹೆಸರು ಬಂದಿದ್ದು ಎನ್ನುತ್ತಾರೆ.

                        ಅದಾದ ನಂತರ ಮುನ್ನೂರು ವರ್ಷಗಳಿಗೆ- ಈ ಬಾರಿ ಇತ್ತಲಿಂದ ಅತ್ತಹೊದ ಅಕ್ಬರ್ ಆ ಪ್ರಾಂತವನ್ನಾಳಿದ.

                         ಪರ್ವತಗಳ ಇತ್ತ ಕಡೆ ಕಾಶ್ಮೀರಿ ಗುಲಾಬಿಗಳು,ಹುಲ್ಲುಗಾವಲುಗಳು! ಅತ್ತಕಡೆ ಬೆಟ್ಟ, ಗುಡ್ಡ,

ಗುಹೆಗಳು,ಬೀಳುನೆಲ, ಮರುಭೂಮಿ! ದಿ ಲ್ಯಾಂಡ್ ಆಫ್ ರೈಸಿಂಗ್ ಸನ್!

                 ಅಲ್ಲಿನವರು ಮಾತನಾಡುವ ಭಾಷೆಯ ಹೆಸರು- ಪುಸ್ತೂ.

                 ಅಲ್ಲಿನ ಪರ್ವತಗಳು, ನದಿ-ತೊರೆಗಳು, ಜಲಪಾತಗಳೂ ಹಾಗೆ ಇದ್ದವು. ಹಿಮಪಾತ, ಹಿಮ, ತೂಫಾನು,

ಮಂಜಿನ ಬಿಂದು... ಇವ್ಯಾವುವೂ ಬದಲಾಗಲಿಲ್ಲ. ರಾಜರು ಬದಲಾದರೂ. ರಾಜ್ಯಗಳ ಸೀಮೆಗಳು ಬದಲಾದವು. ವಂಶಗಳು

 ಬದಲಾದವು. ಕೇವಲ ಹೆಸರುಗಳಷ್ಟೇ ಇತಿಹಾಸ ಪುಟಗಳಲ್ಲಿ ಉಳಿದುಕೊಂಡವು.

                     ಆ ರೀತಿ ಕಾಲಗರ್ಭದಲ್ಲಿ ಎಂಟುನೂರು ವರ್ಷಗಳು ಕರಗಿಹೋದವು.

                     ಎಲ್ಲಿ ಸೌಭಾಗ್ಯ ಇಲ್ಲವೋ ಅಲ್ಲಿ ರಕ್ತಪಾತ ಅನಿವಾರ್ಯ. ಎಲ್ಲಿ ಹಸಿವು ರಾಜ್ಯವಾಳುತ್ತದೋ, ಅಲ್ಲಿ ಖಡ್ಗವೇ

 ಶಾಸನ ಬರೆಯುತ್ತದೆ. ಬೆಳೆ ಬೆಳೆಯದ ಸ್ಥಳದಲ್ಲಿ ನಾಗರಿಕತೆ ಬೆಳೆಯಲೊಲ್ಲೆ ಎನ್ನುತ್ತದೆ. ಹಸಿವಿದ್ದಲಿ ನಂಬಿಕೆ ಉಳಿಯದು.

ಅದಕ್ಕೆ ಆ ಜನಾಂಗ ಒಡೆದು ಚೂರು ಚೂರಾಗಿ ಅನೇಕ ಪಂಗಡಗಳಾಗಿ ಬೇರ್ಪಟ್ಟಿತು.

                      

ದಿ ಲ್ಯಾಂಡ್ ಆಫ್ ರೈಸಿಂಗ್ ಸನ್ ಮತ್ತೂ ನೂರು ವರ್ಷಗಳುರುಳಿದವು.

ಕ್ರಿ.ಶ.೧೯೭೮
                 ಕಾಲಚಕ್ರ ತಿರುಗುತ್ತಲೇ ಇತ್ತು. ಬ್ರಿಟಿಷರು ಈ ನೆಲದಿಂದ ಕಾಲ್ತೆಗೆಯುವ ಮುನ್ನ ಭಾರತ-ಪಾಕಿಸ್ತಾನಗಳನ್ನು

ಬೇರ್ಪಡಿಸಿಯೇ ಹೋದರು. ಜವಾಹರಲಾಲರ ದಯೆಯಿಂದಾಗಿ ಕಾಶ್ಮೀರ ರಾವಣ ಕಾಷ್ಠ ಹೊತ್ತಿಕೊಂಡಿತು. ಅಮೆರಿಕಾ,

ರಷ್ಯಗಳು ಜಗತ್ತಿನ ಎರಡು ಸೂಪರ್ ಪವರ್ ರಾಷ್ಟ್ರಗಳಾಗಿ ಬೆಳೆಯತೊಡಗಿದ್ದವು. ದುರದ್ರಷ್ಟವಶಾತ್ ಭಾರತದೇಶ

ಸಮಾಜವಾದದತ್ತ ಒಲವು ತೋರಿಸಿ ರಷ್ಯಾಕ್ಕೆ ಹತ್ತಿರವಾಯಿತು. ಅದರಿಂದಾಗಿ ಸ್ವಾಭಾವಿಕವಾಗಿಯೇ ಅಮೆರಿಕ

ಪಾಕಿಸ್ತಾನವನ್ನು ಬಳಿಗೆಳೆದುಕೊಂಡಿತು.


                      ಜಗತ್ತಿನ ಇತರ ಭಾಗದಲ್ಲಿ ಇಷ್ಟೆಲ್ಲ ಬದಲಾವಣೆಗಳಾಗುತ್ತಿದ್ದರೂ- "ಉದಯ ಸೂರ್ಯನ ನಾಡು" ಮಾತ್ರ

ಹಾಗೆ ಇತ್ತು. ಆದರೆ ಬ್ರಿಟಿಷರು ಗದ್ದುಗೆ ಏರಿಸಿಹೋದ ಜಹೀರ್ ಶಾ ಮಾತ್ರ ನಿರಂಕುಶನಾದ. ಹಸಿವಿನ ಮರುಭೂಮಿಯಲ್ಲಿ

ಯಾವುದೇ ಇಸಂ ಕೂಡ ಶಾಶ್ವತವಾಗಿ ನೆಲೆ ನಿಲ್ಲಲಾಗಲಿಲ್ಲವೆ! ಜಹೀರ್ ಶಾನಿಗೆ ವಿರುದ್ಧವಾಗಿ ೧೯೭೩ರಲ್ಲಿ ರಷ್ಯನ್ನರ

ಕುಮ್ಮಕ್ಕಿನಿಂದ ಕ್ರಾಂತಿ ತಲೆಯೆತ್ತಿತು. ರಷ್ಯಾದ ಕ್ರಪಕಟಾಕ್ಷವಿದ್ದ ಮಾರ್ಕ್ಸಿಸ್ಟ್ ರಿಪಬ್ಲಿಕನ್ ಪಕ್ಷ ಅಧಿಕಾರಕ್ಕೆ ಬಂತು.

                     

ಆದರೆ ಅದೇ ಪ್ರದೇಶದಲ್ಲಿರುವ ಮತ್ತೊಂದು ಪಂಗಡ ಮೊಜಹಿದಿನರು-ಪುಸ್ತೂನ್ ಭಾಷೆಯಲ್ಲಿ ಮೊಜಹಿದಿನರು ಎಂದರೆ 'ಪವಿತ್ರ

ಯುದ್ಧವೀರರು' ಎಂದರ್ಥ. ಅವರಿಗೆ  ಇನ್ನೊಬ್ಬರ ಅಧೀನದಲ್ಲಿರುವುದೆಂದರೆ ಇಷ್ಟವಿಲ್ಲ. ಆದ್ದರಿಂದ ಕಮ್ಯೂನಿಷ್ಟರ ಮೇಲೆ ಯುದ್ಧ

 ಘೋಷಿಸಿದರು.

                       

 ಪಕ್ಕದಲ್ಲಿ ಒಂದು ಕಣ್ಣಿಟ್ಟೇ ಇದ್ದ ಪಾಕಿಸ್ತಾನಕ್ಕೆ ರಷ್ಯಾದ ಪ್ರಾಬಲ್ಯವನ್ನು ಎದುರಿಸಲು ಒಳ್ಳೆಯ ಅವಕಾಶ ದೊರಕಿದಂತಾಯಿತು.

 ತತ್ ಕ್ಷಣ ಮೋಜಾಹಿದಿನರಿಗೆ ತನ್ನ ಸಹಾಯ ಸಹಕಾರಗಳನ್ನು ಒದಗಿಸಿತು. ಮಾರ್ಕ್ಸಿಸ್ಟ್ ರಿಪಬ್ಲಿಕನ್ ಪಕ್ಷದ ವಿರುದ್ಧ ದಂಗೆ

ಶುರುವಾಯಿತು. ಅದಕ್ಕೆ ಹೇಗೋ ಅಮೆರಿಕಾದ ಒತ್ತಾಸೆ ಇದ್ದೇ ಇತ್ತು.

                           

 ಅದರಿಂದಾಗಿ ರಷ್ಯಾಕ್ಕೆ ಮೈ ಉರಿದುಹೋಯಿತು. ಚಿಕ್ಕದೊಂದು ಪ್ರದೇಶದ ಮೇಲಿನ ತನ್ನ ಹಿಡಿತವನ್ನು ಇನ್ನೊಂದು ಪುಟ್ಟ

ರಾಷ್ಟ ಪಾಕಿಸ್ತಾನ ಪ್ರಶ್ನಿಸುವ ರೀತಿ ವರ್ತಿಸಿದ್ದು ಅದರಿಂದ ಸಹಿಸಲಾಗಲಿಲ್ಲ.! ಮತ್ತೊಂದೆಡೆ ಮೊಜಹಿದಿನರು ಮರ್ಕ್ಸಿಸ್ಟರನ್ನು

ಅಧಿಕಾರದಿಂದಿಳಿಸುವ ಪ್ರಯತ್ನಗಳನ್ನು ತೀವ್ರಗೊಳಿಸಿದ್ದರು. ಎಲ್ಲಕ್ಕಿಂತಲೂ ಮುಖ್ಯವಾಗಿದ್ದ ಮೂರನೆಯ ಕಾರಣ- ಅಮೆರಿಕ

ವಾಮನನಂತೆ ಪಾದ ಊರಲು ಏಷ್ಯಾದಲ್ಲಿ ಒಂದಿಷ್ಟು ಸ್ಥಳ ಲಭಿಸುತ್ತದೆ! ಅಷ್ಟೇ ಅವಕಾಶ ದೊರೆತರೆ ಸಾಕು, ಇಡಿಇಡಿಯಾಗಿ

ಆಕ್ರಮಿಸಿಕೊಂದುಬಿಡುತ್ತದೆ, ಎಂಬುದು ರಷ್ಯಾಕ್ಕೆ ಗೊತ್ತಿತ್ತು.





                               ಈ ಎಲ್ಲ ಪೂರ್ವಾಪರ ಆಲೋಚನೆ ಮಾಡಿ ರಷ್ಯಾ ಮುಖ್ಯವಾದುದೊಂದು ನಿರ್ಣಯ ತೆಗೆದುಕೊಂಡಿತು.






[ ಮುಂದುವರಿಯುವುದು..................]

Saturday, 11 October 2014

ಕರ್ಮಫಲ : ಅನುಭವಿಸಲು ಅಂಜಿಕೆಯೆಕೆ?


ಒಂದೂರಿಗೆ ಒಬ್ಬ ಸಂತರು ಬಂದಿದ್ದರು. ಪ್ರತಿ ದಿನ 

ಸಂಜೆ ಪ್ರವಚನ ಮುಗಿದ ಅನಂತರ ನೆರೆದ ಭಕ್ತರಿಗೆ 

ಕೈ ಮುಟ್ಟಿ ಮಂತ್ರಾಕ್ಷತೆ, ಹಣ್ಣು ಕೊಡುತ್ತಿದ್ದರು. ಒಬ್ಬ 

ಪುಟ್ಟ ಹುಡುಗಿಗೆ ಇದು ತಿಳಿಯಿತು. ಪ್ರವಚನ 

ಕೇಳುವ ಇರಾದೆ ಇರದಿದ್ದರೂ ಹಣ್ಣಿನ ಆಸೆಗೆ 

ಹುಡುಗಿ ಅಂದು ಸಂಜೆ ಸಂತರಲ್ಲಿಗೆ ಹೋದಳು. ಎಂದಿನಂತೆ ಆಶೀರ್ವಾದ ನೀಡುವ ಸಮಯ ಬಂತು. 

ದಡಬಡನೆ ಮಂದಿ ಎದ್ದು ಸಾಲಾಗಿ ನಿಂತರು. ಪಾಪದ ಹುಡುಗಿಗೆ ಇದು ತಿಳಿದಿರಲಿಲ್ಲ. ಅಂತೂ ಇಂತೂ ಹೇಗೋ ಮಧ್ಯೆ ನುಸುಳಿಕೊಂಡಳು.


ಬಹಳ ಹೊತ್ತಿನ ಅನಂತರ ಅವಳ ಪಾಳಿ ಬಂತು. ಸಂತರು ನಸುನಗುತ್ತಾ ಹುಡುಗಿಯ ತಲೆ ಮುಟ್ಟಿ ಹರಸಿ, 

ಅಕ್ಷತೆ ಹಣ್ಣು ಕೈಗಿಟ್ಟರು. ಸಂತರ ಸ್ಪರ್ಶದಿಂದಲೇ, ದರುಶನದಿಂದಲೇ ದಿಖ್ಮುಢಳಾಗಿದ್ದ ಹುಡುಗಿಯ ಧ್ಯಾನ 

ಹಣ್ಣಿನ ಮೇಲಿರಲಿಲ್ಲವೋ ಅಥವಾ ಅವಳ ಪುಟ್ಟ ಕೈಗಳಲ್ಲಿ ಅಷ್ಟು ದೊಡ್ಡ ಹಣ್ಣು ಹಿಡಿಯುವ ಶಕ್ತಿ ಇರಲಿಲ್ಲವೋ 

ತಿಳಿಯದು. ಹಣ್ಣು ಕೈಜಾರಿ ನೆಲಕ್ಕೆ ಬಿತ್ತು. ಬಿದ್ದಿದ್ದು ಉರುಳುತ್ತಾ ಹೋಗಿ ಕೆಸರು ತುಂಬಿದ ಚರಂಡಿ ಸೇರಿತು!

 ಅಷ್ಟರಲ್ಲಿ ಇವಳ ಹಿಂದೆ ನಿಂತಿದ್ದವರು, ಇವಳನ್ನತ್ತ ನೂಕಿ ಮುಂದೆ ಹೋಗಿಯಾಗಿತ್ತು.


ಅಷ್ಟು ಆಸೆಯಿಂದ, ಅಷ್ಟು ಹೊತ್ತು ಕಾದು ಪಡೆದ ಹಣ್ಣು ಕೈಜಾರಿ ಹೋಗಿದ್ದು ಹುಡುಗಿಗೆ ಬಲು 

ದುಖಃವನುಂತುಮಾಡಿಟು. ಮತ್ತೆ ಹಣ್ಣು ಪಡೆಯಲು ಸಾಲಿನಲ್ಲಿ ನಿಂತು ಬರಬೇಕು. ಮತ್ತೆ ಇವಳ ಸರದಿ 

ಬರುವಾಗ ವಿತರಣೆ ಉಂಟೋ ಇಲ್ಲವೋ!? ಇದ್ದರೂ ಎಲ್ಲಿಯೋ ಉಳಿದುಹೋದ, ಕೊಳೆತು/ ಬಾಡಿದ/ 

ದೊರಗುಕಾಯಿ ಸಿಕ್ಕಿದರೆ!? ಇವೆಲ್ಲ ಸಂಶಯಗಳು ಕಾಡಿದವು ಅವಳನ್ನು. ಬಹಳ ಯೋಚಿಸಿ ಕಡೆಗೆ 

ಅವಳೊಂದು ನಿರ್ಧಾರಕ್ಕೆ ಬಂದಳು. "ಏನಾದರೂ ಸೈ, ಪ್ರಯತ್ನ ಮಾಡದೆ ಇರಬಾರದು" ಹೀಗೆಂದುಕೊಂಡು ಮತ್ತೆ ಸಾಲಿನಲ್ಲಿ ನಿಂತುಕೊಂಡಳು.


ಇವಾಗ ಸಾಲು ಇನ್ನೂ ಬೆಳೆದಿತ್ತು ಅಥವಾ ಅವಳಿಗೆ ಹಾಗೆನಿಸಿತ್ತು. ಸಾಲಿನಲ್ಲಿ ಮುಂದೆ 

ನಡೆಯುತ್ತಿರುವಂತೆಯೇ ಅವಳ ಮನಸ್ಸಿನಲ್ಲಿ ಪ್ರಶ್ನೆಗಳೆದ್ದವು. ಇಷ್ಟು ಮಂದಿ ಹಣ್ಣು ಪಡೆಯುತ್ತಿದ್ದಾರೆ. ಯಾರ

 ಕೈಯಿಂದಲೂ ಹಣ್ಣು ಜಾರಿ ಬೀಳುವುದು ಕಾಣುತ್ತಿಲ್ಲ. ಹಾಗಿರುವಾಗ ನನ್ನ ಕೈಯಿಂದ ಮಾತ್ರ ಏಕೆ ಬಿತ್ತು? 

ನನ್ನ ಕೈ ಸಣ್ಣದಾಗಿರುವುದರಿಂದಲೇ? ನಾನು ಹಣ್ಣನ್ನು ಸ್ವೀಕರಿಸುವಾಗ ಗಮನವಿರಲಿಲ್ಲವೋ? ಸಂತರು

 ಕೊಡುವುದರಲ್ಲಿ ಹೆಚ್ಚು-ಕಮ್ಮಿ ಆಯಿತೇ? ಅಥವಾ ನನ್ನ ಪ್ರಾಪ್ತಿಯಲ್ಲಿ ಹಣ್ಣು ಇರದಿರುವುದರಿಂದಲೇ? ಈಗ 

ಎರಡನೆಯ ಬಾರಿ ಏನಾಗಬಹುದು? ಹಿಂದಿನ ಬಾರಿ ನಡೆದ ತಪ್ಪು ಸರಿಮಾಡಿಕೊಳ್ಳುವುದೆಂತು? ಹೀಗೆಲ್ಲ

ಹುಡುಗಿ ಯೋಚಿಸಿದಳು. ಮನಸ್ಸಿನ್ನಲ್ಲಿಯೆ ಗುಣಾಕಾರ ಭಾಗಾಕಾರ ಹಾಕಿ, ನಾನಾ ರೀತಿಯಲ್ಲಿ ಹಣ್ಣು ತೆಗೆದುಕೊಳ್ಳುವ ಅಭ್ಯಾಸ ನಡೆಸಿದಳು.


ಹೀಗೆ ತನ್ನಲ್ಲಿಯೇ ತಾನು ಮಗ್ನಳಾಗುತ್ತಾ ಹೆಜ್ಜೆ ಹಾಕುತ್ತಿರುವವಳಿಗೆ ತನ್ನ ಸರದಿ ಬಂದದ್ದು ತಿಳಿಯಲೇ ಇಲ್ಲ. 

ಮೊದಲ ಸಲ ಒಂದೊಂದು ಹೆಜ್ಜೆಯೂ ಎಷ್ಟು ದೀರ್ಘವಾಗಿದೆ ಎಂದು ಕಾತರಿಸುತ್ತಿದ್ದವಳಿಗೆ ಈ ಬಾರಿ ಹೊತ್ತು

 ಕಳೆದದ್ದೇ ತಿಳಿದಿರಲಿಲ್ಲ. ಫಕ್ಕನೆ ತಾನು ಸಂತರ ಮುಂದೆ ನಿಂತಿರುವುದು ಗಮನಕ್ಕೆ ಬಂತು.


ಸಂತರು ಇವಳನ್ನು ಕಂಡು ನಸುನಗುತ್ತಿದ್ದರು. ಇವಳ ಗೊಂದಲ ಕಂಡು " ಮಗು, ನಿನ್ನ ಗೊಂದಲ 

ನನಗಾರ್ಥವಾಗುತ್ತಿದೆ. ಮೊದಲ ಬಾರಿಗೆ ನೀನು ನನ್ನಿಂದ ಹಣ್ಣು ಪಡೆದ ಕ್ಷಣ ನನಗೆ ಅದು ಒಳಗಿನಿಂದ 

ಕೊಳೆತು ಹುಳ ಬಿದ್ದಿದೆ ಎಂದು ತಿಳಿಯಿತು. ಆದುದರಿಂದ ಅದನ್ನು ನಿನ್ನ ಕೈಯಿಂದ ಕೆಳಗೆ ಬೀಳುವಂತೆ 

ನೋಡಿಕೊಂಡೆ. ಕೂಡಲೇ ಇನ್ನೊಂದು ಕೊಡಬಹುದಿತ್ತು. ಆದರೆ ಆವಾಗ ನಿನಗೆ ಸುಲಭದಲ್ಲಿಸಿಕ್ಕಿದರ 

ಮೌಲ್ಯ ತಿಳಿಯುತ್ತಿರಲಿಲ್ಲ. ಮತ್ತೆ ನಿನ್ನ ತಾಳ್ಮೆ, ಹಣ್ಣು ಪಡೆಯುವ ನಿರ್ಧಾರ ಎಷ್ಟು ಬಲವಾಗಿದೆ ಎಂದು 

ಪರೀಕ್ಷಿಸಬೇಕು ಎಂದೆನಿಸಿತು. ಧ್ರತಿಗೆಡದೆ ನೀನು ಮತ್ತೆ ಸಾಲಿನಲ್ಲಿ ನಿಂತಿದ್ದನ್ನು ಕಂಡಿತು. ಹಾಗೆಂದು 

ಮೆಚ್ಚುಗೆಯಿಂದ ಅತ್ಯುತ್ತಮವಾದ ಹಣ್ಣನ್ನು ನಿನಗಾಗಿ ತೆಗೆದಿರಿಸಿದ್ದೇನೆ,ತೆಗೆದುಕೊ"...ಎಂದು ಹಣ್ಣನ್ನು ಅವಳ ಕೈಯಲ್ಲಿಟ್ಟರು.


ಇದು ಬದುಕು,ಬಯಕೆಗಳು,ಕಾಮನೆಗಳು ಹಲವು. ಇವೆಲ್ಲದರ ಹುಟ್ಟು ಮನಸ್ಸಿಂದ. ಮೂರ್ತರೂಪ ಮಾತ್ರ 

ಹೊರಗೆ. ಈ ಕಾಮನೆಗಳ ತೀವ್ರರೂಪದಿಂದ ಮತ್ತು ಕರ್ಮಗಳಿಂದ ಇವುಗಳು ಪ್ರಾಪ್ತಿಯಾಗುತ್ತವೆ. 

ಪ್ರಾಪ್ತಿಯನ್ನು ನಾವು ಸ್ವೀಕರಿಸುವ ರೀತಿಯ ಪರೀಕ್ಷೆಯು ಕೆಲವೊಮ್ಮೆ ನಡೆಯುತ್ತದೆ. ಫಲ ಇನ್ನೇನು ಕೈಯಲ್ಲಿ

 ಬಿತ್ತು ಎನ್ನುವಾಗ ಜಾರಿಹೋಗುತ್ತದೆ. ಹತಾಶೆಯಿಂದ ಮರಳಿ ಪ್ರಯತ್ನ ಮಾಡದೆ ಹಿನ್ನೆಡದವ 

ಸೋಲುತ್ತಾನೆ. ಸೋಲು ಒಪ್ಪಿಕೊಳ್ಳದೆ ಮತ್ತೆ ಪ್ರಯತ್ನ ಮಾಡಿದವ ಆ ಪ್ರಯತ್ನಬಲದಿಂದಲೇ ಗೆಲ್ಲುತ್ತಾನೆ. 

ಕರ್ಮಫಲವನ್ನು ಹಿಮ್ಮೆಟ್ಟಿಸುವ ಶಕ್ತಿಯು ಮನೋಬಲಕ್ಕಿದೆ. ಹಿಮ್ಮೆಟ್ಟಿಸುವುದು ಮಾತ್ರ ಅಳಿಸಿ ಹಾಕಲಾರೆವು.

 ಮುಂದೆ ಮತ್ತೆಲ್ಲಿಯೋ ಮತ್ತೊಂದು ಈ ಕರ್ಮಫಲವನ್ನು ಅನುಭವಿಸಲೇಬೇಕು. ಇದು ಪ್ರಕ್ರತಿ ನಿಯಮ.

Friday, 10 October 2014

ಕೂಡಿ ಬಾಳುವುದೇ ಯಶಸ್ಸಿನ ಸೂತ್ರ

ಆಮೆ ಮತ್ತು ಮೊಲದ ಓಟದ ಸ್ಪರ್ದೆಯ ಕಥೆ ಎಲ್ಲರೂ ಕೇಳಿರುತ್ತಾರೆ. ಆದರೆ ಇದನ್ನು ಇಂದಿನ 

ಮ್ಯಾನೇಜ್ಮೆಂಟ್ ದ್ರಷ್ಟಿಯಲ್ಲಿ ಕಂಡವರು ಬಹುಶಃ ಕೆಲವೇ ಕೆಲವು ಮಂದಿ ಎನಬಹುದು. ಹಾಗೆಂದರೇನು? ಮತ್ತೊಮ್ಮೆ ಕಥೆ ಓದೋಣ...

ಒಂದಾನೊಂದು ಸಲ ಆಮೆ ಮತ್ತು ಮೊಲದ ಮಧ್ಯೆ ಓಟದ ಸ್ಪರ್ಧೆ ನಡೆಯಿತು. ಸಮಾನರಲ್ಲಿ ಸ್ಪರ್ಧೆ 

ನಡೆದರೆ ಅದಕ್ಕೊಂದು ಅರ್ಥವಿರುತ್ತದೆ. ಆದರೆ ಅಸಮಾನರ ಮಧ್ಯೆ ನಡೆವ ಸ್ಪರ್ಧೆ ಅರ್ಥಹೀನ. ಇಲ್ಲಿಯೂ 

ಹಾಗೆ, ಮೊಲ ವೇಗದ ಓಟಕ್ಕೆ ಹೆಸರಾದದ್ದು, ಆಮೆ ನಿಧಾನ ನಡಿಗೆಯ ಸಂಕೇತ. ಯಾವುದೇ ಕೆಲಸ 

ನಿಧಾನವಾಗಿ ನಡಿಯುತ್ತಿದೆ ಎಂದಾದರೆ "ಆಮೆಯ ನಡಿಗೆಯಲ್ಲಿ" ಎಂಬ ಮಾತಿನಲ್ಲಿ ಅದರ ಗತಿಯನ್ನು ಸಾಂಕೇತಿಕವಾಗಿ ಸೂಚಿಸುತ್ತಾರೆ.

ಇಲ್ಲಿ ನಿಗದಿತ ದಿನ, ಕಾಡಿನ ರಾಜ ಸಿಂಹದ ಉಪಸ್ಥಿಯಲ್ಲಿ ಹಾಗೂ ಉಸ್ತುವಾರಿಯಲ್ಲಿ ಸ್ಪರ್ಧೆ ಶುರುವಾಯಿತು. 

ಶುರುವಾದ ಸಂಕೇತ ಬರುತ್ತಲೇ ಮೊಲ ಬಿಟ್ಟ ಬಾಣದಂತೆ ಓಡಿತು. ಸುಮಾರು ಹೊತ್ತಿನ ಅನಂತರ, ತನ್ನ 

ಪ್ರತಿಸ್ಪರ್ಧಿ ಎಲ್ಲಿದೆಯೋ ನೋಡೋಣ ಎಂದು ಒಂದು ಕ್ಷಣ ನಿಂತು ತಿರುಗಿ ನೋಡಿದರೆ ಆಮೆಯ ಸುಳಿವೇ 

ಇಲ್ಲ! ಸರಿ,ಸ್ವಲ್ಪ ಹೊತ್ತು ವಿಶ್ರಮಿಸಿ ಓಟ ಮುಂದುವರಿಸಿದರಾಯಿತು. ಏನಾದರೂ ವಿಜಯ ತನ್ನದೇ ಎಂಬ

 ಅತಿ ಆತ್ಮವಿಶ್ವಾಸದಿಂದ ಮೊಲ ಮರವೊಂದರ ನೆರಳಲ್ಲಿ ಅಡ್ಡಾಯಿತು. ಅಲ್ಲಿ ಅದಕ್ಕೆ ಗಾಢ ನಿದ್ದೆ ಬಂತು. 

ಇತ್ತ ಆಮೆ ಒಂದು ಕ್ಷಣವೂ ವ್ಯರ್ಥ ಮಾಡದೆ, ತನ್ನಿಂದಾದಷ್ಟು ವೇಗವಾಗಿ ನಡೆದು ಗುರಿ ಮುಟ್ಟಿತು. ಅದನ್ನು 

ವಿಜಯಿ ಎಂದು ಘೋಷಿಸಿದರು. ಇಲ್ಲಿಗೆ ಈಸೋಪನ ದ್ರಷ್ಟಾಂತ ಕಥೆ ಮುಗಿಯುತ್ತದೆ.


ನಮ್ಮ ಕಥೆ ಇಲ್ಲಿಂದ ಶುರುವಾಗುತ್ತದೆ. ಮೊಲಕ್ಕೆ ಭಾರೀ ಅವಮಾನವಾಯಿತು. ಮುಂಬರುವ ಜನಾಂಗ 

ತನ್ನನ್ನು ಕೀಳಾಗಿ ಕಾಣುತ್ತದೆ. ಆಮೆಯಂತ ನಿಧಾನಗತಿಯ ಪ್ರಾಣಿಯಿಂದ ಸೋಲು ಕಂಡ ವೇಗದ ಓಟಗಾರ 

ಎಂದು ತನ್ನ ಹೆಸರು  ಪಠ್ಯಪುಸ್ತಕಗಳಲ್ಲಿ ದಾಖಲಾಗುತ್ತದೆ ಎಂದೆಲ್ಲ ಚಿಂತಿಸಿ ಹಣ್ಣಾಯಿತು. ಕಡೆಗೊಂದು ದಿನ 

ಸಿಂಹರಾಜನ ಮುಂದೆ ನಿಂತು ತನ್ನ ದುಖಃ ಹೇಳಿಕೊಂಡಿತು. ಹೇಗಾದರೂ ಮಾಡಿ ಈ ಕೆಟ್ಟ ಹೆಸರು 

ಅಳಿಸಿಹಾಕಬೇಕು. ಅದಕ್ಕೆಂದು ಮತ್ತೊಮ್ಮೆ ಸ್ಪರ್ಧೆ ಏರ್ಪಡಿಸಬೇಕು ಎಂದೆಲ್ಲ ಬೇಡಿಕೊಂಡಿತು.


ಮೊಲದ ಅಹಂಕಾರಕ್ಕೆ ಧಕ್ಕೆ ತಗುಲಿದ್ದಕ್ಕೆ ಕಾಡಿನ ಪ್ರಾಣಿಗಳೆಲ್ಲ ಒಳಗೊಳಗೇ ಸಂತೋಷವೇ ಆಗಿದ್ದರೂ,

 ಸಿಂಹಕ್ಕೆ ಇದರ ದುಖಃ ಕಂಡು ಮನಸ್ಸು ಕರಗಿತು. ಸರಿ, ಮತ್ತೊಮ್ಮೆ ಸ್ಪರ್ಧೆ ನಡೆಸುವ 

ತಯಾರಿಯಾಯಿತು. ಈ ಸಲ ಮೊಲ ನಿದ್ದೆ ಮಾಡಲಿಲ್ಲ. ಒಂದೇ ಉಸುರಿನಲ್ಲಿ ಓಡುತ್ತಾ ಗುರಿ ಮುಟ್ಟಿ ವಿಜಯಿ ಎಂದು ಘೋಷಿಸಲ್ಪಟ್ಟಿತು.



- ಇಲ್ಲಿ ಒಂದು ನೀತಿ ಇದೆ. ಒಮ್ಮೆ ಒಂದು ಕೆಲಸದಲ್ಲಿ ಸೋಲು ಕಂಡರೆ, ಹಿಡಿದ ಕೆಲಸವನ್ನು ಬಿಡಬಾರದು. 

ಮತ್ತೆ ಪ್ರಯತ್ನಿಸಬೇಕು. ಪೂರ್ತಿಯಾಗಿ ಆ ಕೆಲಸದಲ್ಲಿ ತೊಡಗಿಸಿಕೊಂಡಾಗ ಜಯ ಪ್ರಾಪ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ. ನಿರಂತರ ಪ್ರಯತ್ನ ಯಶಸ್ಸಿನ ಗುಟ್ಟು.



ಇಲ್ಲಿಗೂ ಕಥೆ ಮುಗಿಯಲಿಲ್ಲ. ಈಗ ಚಿಂತೆ ಮಾಡುವ ಸರದಿ ಆಮೆಯದಾಯಿತು. ಈ ಸಲ ಸ್ಪರ್ಧೆ ನಡೆಯುವ

 ಹಾದಿಯನ್ನು ಸಿಂಹವೇ ನಿರ್ಧರಿಸಿ,ಕೊನೆಯ ಕ್ಷಣದಲ್ಲಿ ಸ್ಪರ್ಧಿಗಳಿಗೆ ತಿಳಿಸಿತು. ಸರಿ, ಮೊಲ ಹಿಂದಿನ 

ತಪ್ಪಿನಿಂದ ಪಾಠ ಕಲಿತಿದ್ದರಿಂದ ಒಂದೇ ಸಮನೆ ಗುರಿಯತ್ತ ಓಡಿತು. ಮುಕ್ಕಾಲು ಹಾದಿ ಕ್ರಮಿಸಿ ಥಟ್ಟನೆ 

ನಿಂತಿತು. ಏಕೆ ಗೊತ್ತೇನು? ದಾರಿಯಲ್ಲಿ ಹರಿವ ತೊರೆ ಇತ್ತು. ಮೊಲಕ್ಕೆ ಈಜು ತಿಳಿಯದಲ್ಲ! ಆಮೆ 

ಹಿಂದಿನಿಂದ ಬಂದು ನೀರಿಗಿಳಿದು ಈಜಿ ಗುರಿಮುಟ್ಟಿ, ವಿಜಯಿ ಎಂದು ಘೋಷಿಸಲ್ಪಟ್ಟಿತು.ಮೊಲ ಪ್ರತಿಕೂಲ ಪರಿಸ್ಥಿತಿಯಿಂದ ಸೋತು ಹೋಗಿತ್ತು.



- ಇಲ್ಲಿಯೂ ನೀತಿ ಇದೆ. ಸೋಲೊಪ್ಪದೆ ಮುನ್ನಡೆಯಬೇಕು. ಆದರೆ ಶಕ್ತಿಯಿಂದ ಸಾಧಿಸಲಾಗದ್ದನ್ನು ಯುಕ್ತಿಯಿಂದ ಸಾಧಿಸಬೇಕು.



ಈಗ ಮೊಲ ಮತ್ತೆ ಸಿಂಹರಾಜನಲ್ಲಿ, ಮತ್ತೊಮ್ಮೆ ಸ್ಪರ್ಧೆಯಾಗಲೇ ಬೇಕೆಂದು, ಈ ಸಲ ಗೆಲ್ಲದಿದ್ದರೆ ತಾನು

 ಬದುಕಿದ್ದು ಸತ್ತಂತೆ ಎಂದು ಗೋಳಾಡಿ ಮತ್ತೊಮ್ಮೆ ಅದನ್ನು ಒಪ್ಪಿಸಿತು. " ಈ ಸ್ಪರ್ಧೆಯಲ್ಲಿ ಗೆದ್ದವನೇ 

ಅಂತಿಮವಾಗಿ ವಿಜಯಿ ಎಂದು ನಿರ್ಧರಿಸಲಾಗುವುದು. ಮತ್ತೊಮ್ಮೆ ಯಾವ ಕಾರಣಕ್ಕೂ ಸ್ಪರ್ಧೆ 

ನಡೆಸುವಂತೆ ಕೇಳಬಾರದು" ಎಂಬ ನಿಯಮದಂತೆ ಒಪ್ಪಿದ ಕಾಡಿನ ರಾಜ. ಈ ಬಾರಿಯ ನಿಯಮದಂತೆ 

ಹತ್ತು ನಿಮಿಷದಲ್ಲಿ ಗುರಿ ಮುಟ್ಟುವವ ಗೆದ್ದವ ಮತ್ತು ಹಾದಿ ಹಿಂದಿನ ಬಾರಿಯದ್ದೆ  ಎನ್ನಲಾಗಿತ್ತು. ಏಕೆಂದರೆ, ಈ ಹತ್ತು ನಿಮಿಷದ ಮಿತಿಯಲ್ಲಿ ಇಬ್ಬರೂ ಸೋಲುತ್ತಿದ್ದರು ನೋಡಿ.


ಸ್ಪರ್ಧೆಯ ದಿನ ಮೊಲ ಆಮೆಯ ಕಿವಿಯಲ್ಲಿ ಏನನ್ನೋ ಹೇಳಿತು. ಆಮೆ ಒಪ್ಪಿದಂತೆ ತಲೆಯಾಡಿಸಿತು. ಒಡಲು

 ಶುರುಮಾಡುವ ಸಂಕೇತ ಬರುತ್ತಿರುವಂತೆ ಆಮೆ ಮೊಲದ ಬೆನ್ನೇರಿತು. ಮೊಲ ಓಡುತ್ತಾ  ತೊರೆಯ ತೀರ 

ಮುಟ್ಟಿತು. ಮುಟ್ಟುತ್ತಿರುವಂತೆ ಆಮೆ ನೀರಿಗೆ ಇಳಿಯಿತು. ಮೊಲ ಅದರ ಬೆನ್ನೇರಿತು. ಆಮೆ ಈಜಿ ತೊರೆಯ 

ಆ ದಡ ಸೇರುತ್ತಿರುವಂತೆ ಆಮೆ ಮತ್ತೆ ಮೊಲದ ಬೆನ್ನೇರಿತು. ಮೊಲ ನಿಗದಿತ ಸಮಯಕ್ಕಿಂತ ಅರ್ಧ ಸಮಯದಲ್ಲಿ ಗುರಿ ಸೇರಿತು.



- ಇಲ್ಲಿಯ ನೀತಿ ಬದುಕಿನ ಯಶಸ್ಸಿನ ಸೂತ್ರಗಳಲ್ಲಿ ಮುಖ್ಯವಾದದ್ದು."ಕೂಡಿ ಬಾಳಿದರೆ ಸ್ವರ್ಗ, ಒಡೆದು ನಡೆದರೆ ಅದೇ ನರಕ". ಆದುದರಿಂದ ಕೂಡಿ ಬಾಳುವುದನ್ನೇ ರೂಢಿಸಿಕೊಳ್ಳೋಣ.



[ ಕಥೆ ಹೇಳಿದವರು : ಡಾ. ಜಿ. ಕೆ. ಪ್ರಭು.]

Thursday, 9 October 2014

ಯುಗ ಪರಿವರ್ತನೆ... ಭಾಗ-೨


ಒಬ್ಬ ಪರವೂರಿನ ಸಂತೆಗೆ ಸಾಮಾನು ಸಾಗಿಸ್ಟ್ತಿದ್ದ. ಅದಕ್ಕೆ ಪಕ್ಕದ

ಮನೆಯತನ ಕತ್ತೆಯನ್ನು ಬಾಡಿಗೆಗೆ ತೆಗೆದುಕೊಂಡಿದ್ದ. ಕಟ್ಟೆಯ

ಯಜಮಾನನೂ ಇವನೊಂದಿಗೆ ಸಂತೆಗೆ ಹೊರಟ. ಮಟಮಟ

ಮಧ್ಯಾಹ್ನವಾದಾಗ ಕತ್ತೆಯನ್ನು ಆಚೆ ಬಿಟ್ಟು ಇಬ್ಬರು ಹಂಚಿಕೊಂಡು ರೊಟ್ಟಿ
ತಿಂದು ನೀರು ಕುಡಿದರು. ಸ್ವಲ್ಪ ವಿಶ್ರಮಿಸಲು ಅತ್ತಿತ್ತ ನೋಡಿದರೆ

ಎಲ್ಲಿಯೂ ನೆರಳು ಕಾಣಲಿಲ್ಲ. ಬಿಸ್ಲಿ ಸುಡುತ್ತಿತ್ತು. ಕಟ್ಟೆ ನಿಂತಲ್ಲಿಯೇ

 ತೂಕಡಿಸುತ್ತಿತ್ತು. ಅದರ ನೆರಳಲ್ಲಿ ಒಂದಿಷ್ಟು ಅಡ್ಡಗೋಣ ಎಂದು ಕತ್ತೆ

ಬಾಡಿಗೆ ಪಡೆದವ ಸೂಚಿಸಿದ. ಕೂಡಲೇ ಕಟ್ಟೆಯ ಮಾಲೀಕನ ಪಿತ್ತ

ನೆತ್ತಿಗೇರಿತು. "ನಾನು ಕಟ್ಟೆಯ ನೆರಳನ್ನು ನಿನಗೆ ಕೊಡಲ್ಲಿಲ್ಲ. ಬಾರಿ

ಕತ್ತೆಯನ್ನು ಮಾತ್ರ ಸಾಮಾನು ಹೊರಲು ಕೊಟ್ಟಿದ್ದೆ. ಆದುದರಿಂದ ಕತ್ತೆಯ ನೆರಳಿಗೆ ಬೇರೆಯೇ  ಬಾಡಿಗೆ ಕೊಡಬೇಕು, ಇಲ್ಲವೇ ನೆರಳನ್ನು ಉಪಯೋಗಿಸಬಾರದು" ಎಂದ.


ಮಾತಿಗೆ ಮಾತು ಬೆಳೆದು ಕೈ ಕೈ ಸೇರಿತು. ಇಬ್ಬರು ಗುಡ್ದಾಡುತ್ತಿರುವಂತೆಯೇ ಗಲಾಟೆಗೆ ಹೆದರಿದ ಕತ್ತೆ 'ಹ್ರೀಂ....'ಕಾರ ಮಾಡುತ್ತಾ ಓಡಿ ಹೋಯಿತು,



ಒಂದಾಗಿ ಪಯಣಿಸಿದ್ದು,ರೊಟ್ಟಿ ಹಂಚಿಕೊಂಡು ಊಟ ಮಾಡಿದ್ದು ಸತ್ಯಯುಗ, ನಶ್ವರವಾದ ನೆರಳಿಗಾಗಿ ಗುಡ್ದಾದಿದ್ದು ಕಲಿಯುಗ.

CLICK HERE