Saturday, 11 October 2014

ಕರ್ಮಫಲ : ಅನುಭವಿಸಲು ಅಂಜಿಕೆಯೆಕೆ?


ಒಂದೂರಿಗೆ ಒಬ್ಬ ಸಂತರು ಬಂದಿದ್ದರು. ಪ್ರತಿ ದಿನ 

ಸಂಜೆ ಪ್ರವಚನ ಮುಗಿದ ಅನಂತರ ನೆರೆದ ಭಕ್ತರಿಗೆ 

ಕೈ ಮುಟ್ಟಿ ಮಂತ್ರಾಕ್ಷತೆ, ಹಣ್ಣು ಕೊಡುತ್ತಿದ್ದರು. ಒಬ್ಬ 

ಪುಟ್ಟ ಹುಡುಗಿಗೆ ಇದು ತಿಳಿಯಿತು. ಪ್ರವಚನ 

ಕೇಳುವ ಇರಾದೆ ಇರದಿದ್ದರೂ ಹಣ್ಣಿನ ಆಸೆಗೆ 

ಹುಡುಗಿ ಅಂದು ಸಂಜೆ ಸಂತರಲ್ಲಿಗೆ ಹೋದಳು. ಎಂದಿನಂತೆ ಆಶೀರ್ವಾದ ನೀಡುವ ಸಮಯ ಬಂತು. 

ದಡಬಡನೆ ಮಂದಿ ಎದ್ದು ಸಾಲಾಗಿ ನಿಂತರು. ಪಾಪದ ಹುಡುಗಿಗೆ ಇದು ತಿಳಿದಿರಲಿಲ್ಲ. ಅಂತೂ ಇಂತೂ ಹೇಗೋ ಮಧ್ಯೆ ನುಸುಳಿಕೊಂಡಳು.


ಬಹಳ ಹೊತ್ತಿನ ಅನಂತರ ಅವಳ ಪಾಳಿ ಬಂತು. ಸಂತರು ನಸುನಗುತ್ತಾ ಹುಡುಗಿಯ ತಲೆ ಮುಟ್ಟಿ ಹರಸಿ, 

ಅಕ್ಷತೆ ಹಣ್ಣು ಕೈಗಿಟ್ಟರು. ಸಂತರ ಸ್ಪರ್ಶದಿಂದಲೇ, ದರುಶನದಿಂದಲೇ ದಿಖ್ಮುಢಳಾಗಿದ್ದ ಹುಡುಗಿಯ ಧ್ಯಾನ 

ಹಣ್ಣಿನ ಮೇಲಿರಲಿಲ್ಲವೋ ಅಥವಾ ಅವಳ ಪುಟ್ಟ ಕೈಗಳಲ್ಲಿ ಅಷ್ಟು ದೊಡ್ಡ ಹಣ್ಣು ಹಿಡಿಯುವ ಶಕ್ತಿ ಇರಲಿಲ್ಲವೋ 

ತಿಳಿಯದು. ಹಣ್ಣು ಕೈಜಾರಿ ನೆಲಕ್ಕೆ ಬಿತ್ತು. ಬಿದ್ದಿದ್ದು ಉರುಳುತ್ತಾ ಹೋಗಿ ಕೆಸರು ತುಂಬಿದ ಚರಂಡಿ ಸೇರಿತು!

 ಅಷ್ಟರಲ್ಲಿ ಇವಳ ಹಿಂದೆ ನಿಂತಿದ್ದವರು, ಇವಳನ್ನತ್ತ ನೂಕಿ ಮುಂದೆ ಹೋಗಿಯಾಗಿತ್ತು.


ಅಷ್ಟು ಆಸೆಯಿಂದ, ಅಷ್ಟು ಹೊತ್ತು ಕಾದು ಪಡೆದ ಹಣ್ಣು ಕೈಜಾರಿ ಹೋಗಿದ್ದು ಹುಡುಗಿಗೆ ಬಲು 

ದುಖಃವನುಂತುಮಾಡಿಟು. ಮತ್ತೆ ಹಣ್ಣು ಪಡೆಯಲು ಸಾಲಿನಲ್ಲಿ ನಿಂತು ಬರಬೇಕು. ಮತ್ತೆ ಇವಳ ಸರದಿ 

ಬರುವಾಗ ವಿತರಣೆ ಉಂಟೋ ಇಲ್ಲವೋ!? ಇದ್ದರೂ ಎಲ್ಲಿಯೋ ಉಳಿದುಹೋದ, ಕೊಳೆತು/ ಬಾಡಿದ/ 

ದೊರಗುಕಾಯಿ ಸಿಕ್ಕಿದರೆ!? ಇವೆಲ್ಲ ಸಂಶಯಗಳು ಕಾಡಿದವು ಅವಳನ್ನು. ಬಹಳ ಯೋಚಿಸಿ ಕಡೆಗೆ 

ಅವಳೊಂದು ನಿರ್ಧಾರಕ್ಕೆ ಬಂದಳು. "ಏನಾದರೂ ಸೈ, ಪ್ರಯತ್ನ ಮಾಡದೆ ಇರಬಾರದು" ಹೀಗೆಂದುಕೊಂಡು ಮತ್ತೆ ಸಾಲಿನಲ್ಲಿ ನಿಂತುಕೊಂಡಳು.


ಇವಾಗ ಸಾಲು ಇನ್ನೂ ಬೆಳೆದಿತ್ತು ಅಥವಾ ಅವಳಿಗೆ ಹಾಗೆನಿಸಿತ್ತು. ಸಾಲಿನಲ್ಲಿ ಮುಂದೆ 

ನಡೆಯುತ್ತಿರುವಂತೆಯೇ ಅವಳ ಮನಸ್ಸಿನಲ್ಲಿ ಪ್ರಶ್ನೆಗಳೆದ್ದವು. ಇಷ್ಟು ಮಂದಿ ಹಣ್ಣು ಪಡೆಯುತ್ತಿದ್ದಾರೆ. ಯಾರ

 ಕೈಯಿಂದಲೂ ಹಣ್ಣು ಜಾರಿ ಬೀಳುವುದು ಕಾಣುತ್ತಿಲ್ಲ. ಹಾಗಿರುವಾಗ ನನ್ನ ಕೈಯಿಂದ ಮಾತ್ರ ಏಕೆ ಬಿತ್ತು? 

ನನ್ನ ಕೈ ಸಣ್ಣದಾಗಿರುವುದರಿಂದಲೇ? ನಾನು ಹಣ್ಣನ್ನು ಸ್ವೀಕರಿಸುವಾಗ ಗಮನವಿರಲಿಲ್ಲವೋ? ಸಂತರು

 ಕೊಡುವುದರಲ್ಲಿ ಹೆಚ್ಚು-ಕಮ್ಮಿ ಆಯಿತೇ? ಅಥವಾ ನನ್ನ ಪ್ರಾಪ್ತಿಯಲ್ಲಿ ಹಣ್ಣು ಇರದಿರುವುದರಿಂದಲೇ? ಈಗ 

ಎರಡನೆಯ ಬಾರಿ ಏನಾಗಬಹುದು? ಹಿಂದಿನ ಬಾರಿ ನಡೆದ ತಪ್ಪು ಸರಿಮಾಡಿಕೊಳ್ಳುವುದೆಂತು? ಹೀಗೆಲ್ಲ

ಹುಡುಗಿ ಯೋಚಿಸಿದಳು. ಮನಸ್ಸಿನ್ನಲ್ಲಿಯೆ ಗುಣಾಕಾರ ಭಾಗಾಕಾರ ಹಾಕಿ, ನಾನಾ ರೀತಿಯಲ್ಲಿ ಹಣ್ಣು ತೆಗೆದುಕೊಳ್ಳುವ ಅಭ್ಯಾಸ ನಡೆಸಿದಳು.


ಹೀಗೆ ತನ್ನಲ್ಲಿಯೇ ತಾನು ಮಗ್ನಳಾಗುತ್ತಾ ಹೆಜ್ಜೆ ಹಾಕುತ್ತಿರುವವಳಿಗೆ ತನ್ನ ಸರದಿ ಬಂದದ್ದು ತಿಳಿಯಲೇ ಇಲ್ಲ. 

ಮೊದಲ ಸಲ ಒಂದೊಂದು ಹೆಜ್ಜೆಯೂ ಎಷ್ಟು ದೀರ್ಘವಾಗಿದೆ ಎಂದು ಕಾತರಿಸುತ್ತಿದ್ದವಳಿಗೆ ಈ ಬಾರಿ ಹೊತ್ತು

 ಕಳೆದದ್ದೇ ತಿಳಿದಿರಲಿಲ್ಲ. ಫಕ್ಕನೆ ತಾನು ಸಂತರ ಮುಂದೆ ನಿಂತಿರುವುದು ಗಮನಕ್ಕೆ ಬಂತು.


ಸಂತರು ಇವಳನ್ನು ಕಂಡು ನಸುನಗುತ್ತಿದ್ದರು. ಇವಳ ಗೊಂದಲ ಕಂಡು " ಮಗು, ನಿನ್ನ ಗೊಂದಲ 

ನನಗಾರ್ಥವಾಗುತ್ತಿದೆ. ಮೊದಲ ಬಾರಿಗೆ ನೀನು ನನ್ನಿಂದ ಹಣ್ಣು ಪಡೆದ ಕ್ಷಣ ನನಗೆ ಅದು ಒಳಗಿನಿಂದ 

ಕೊಳೆತು ಹುಳ ಬಿದ್ದಿದೆ ಎಂದು ತಿಳಿಯಿತು. ಆದುದರಿಂದ ಅದನ್ನು ನಿನ್ನ ಕೈಯಿಂದ ಕೆಳಗೆ ಬೀಳುವಂತೆ 

ನೋಡಿಕೊಂಡೆ. ಕೂಡಲೇ ಇನ್ನೊಂದು ಕೊಡಬಹುದಿತ್ತು. ಆದರೆ ಆವಾಗ ನಿನಗೆ ಸುಲಭದಲ್ಲಿಸಿಕ್ಕಿದರ 

ಮೌಲ್ಯ ತಿಳಿಯುತ್ತಿರಲಿಲ್ಲ. ಮತ್ತೆ ನಿನ್ನ ತಾಳ್ಮೆ, ಹಣ್ಣು ಪಡೆಯುವ ನಿರ್ಧಾರ ಎಷ್ಟು ಬಲವಾಗಿದೆ ಎಂದು 

ಪರೀಕ್ಷಿಸಬೇಕು ಎಂದೆನಿಸಿತು. ಧ್ರತಿಗೆಡದೆ ನೀನು ಮತ್ತೆ ಸಾಲಿನಲ್ಲಿ ನಿಂತಿದ್ದನ್ನು ಕಂಡಿತು. ಹಾಗೆಂದು 

ಮೆಚ್ಚುಗೆಯಿಂದ ಅತ್ಯುತ್ತಮವಾದ ಹಣ್ಣನ್ನು ನಿನಗಾಗಿ ತೆಗೆದಿರಿಸಿದ್ದೇನೆ,ತೆಗೆದುಕೊ"...ಎಂದು ಹಣ್ಣನ್ನು ಅವಳ ಕೈಯಲ್ಲಿಟ್ಟರು.


ಇದು ಬದುಕು,ಬಯಕೆಗಳು,ಕಾಮನೆಗಳು ಹಲವು. ಇವೆಲ್ಲದರ ಹುಟ್ಟು ಮನಸ್ಸಿಂದ. ಮೂರ್ತರೂಪ ಮಾತ್ರ 

ಹೊರಗೆ. ಈ ಕಾಮನೆಗಳ ತೀವ್ರರೂಪದಿಂದ ಮತ್ತು ಕರ್ಮಗಳಿಂದ ಇವುಗಳು ಪ್ರಾಪ್ತಿಯಾಗುತ್ತವೆ. 

ಪ್ರಾಪ್ತಿಯನ್ನು ನಾವು ಸ್ವೀಕರಿಸುವ ರೀತಿಯ ಪರೀಕ್ಷೆಯು ಕೆಲವೊಮ್ಮೆ ನಡೆಯುತ್ತದೆ. ಫಲ ಇನ್ನೇನು ಕೈಯಲ್ಲಿ

 ಬಿತ್ತು ಎನ್ನುವಾಗ ಜಾರಿಹೋಗುತ್ತದೆ. ಹತಾಶೆಯಿಂದ ಮರಳಿ ಪ್ರಯತ್ನ ಮಾಡದೆ ಹಿನ್ನೆಡದವ 

ಸೋಲುತ್ತಾನೆ. ಸೋಲು ಒಪ್ಪಿಕೊಳ್ಳದೆ ಮತ್ತೆ ಪ್ರಯತ್ನ ಮಾಡಿದವ ಆ ಪ್ರಯತ್ನಬಲದಿಂದಲೇ ಗೆಲ್ಲುತ್ತಾನೆ. 

ಕರ್ಮಫಲವನ್ನು ಹಿಮ್ಮೆಟ್ಟಿಸುವ ಶಕ್ತಿಯು ಮನೋಬಲಕ್ಕಿದೆ. ಹಿಮ್ಮೆಟ್ಟಿಸುವುದು ಮಾತ್ರ ಅಳಿಸಿ ಹಾಕಲಾರೆವು.

 ಮುಂದೆ ಮತ್ತೆಲ್ಲಿಯೋ ಮತ್ತೊಂದು ಈ ಕರ್ಮಫಲವನ್ನು ಅನುಭವಿಸಲೇಬೇಕು. ಇದು ಪ್ರಕ್ರತಿ ನಿಯಮ.

No comments:

Post a Comment

CLICK HERE