ಪ್ರತಿಯೊಂದು ಕಥೆ ಎಲ್ಲೋ ಒಂದೆಡೆ ಆರಂಭವಾಗಬೇಕು. ಈ ಕಥೆಯನ್ನು ಸುಮಾರು ಸಾವಿರ ವರ್ಷಗಳ ಹಿಂದಿನಿಂದ ಆರಂಭಿಸೋಣ.
ಕ್ರಿ.ಶ.೧೦೨೬
ಖುರಾಸಕ್..... ದಿ ಲ್ಯಾಂಡ್ ಆಫ್ ರೈಸಿಂಗ್ ಸನ್ [ ಉದಯಸೂರ್ಯನ ನಾಡು! ]
ರತ್ನಗರ್ಭವೆಂದು ಖ್ಯಾತಿಗಳಿಸಿದ ಭಾರತದೇಶವನ್ನು ದೋಚಿ ಲೂಟಿಮಾಡಲು ಸುಮಾರು ಸಾವಿರ
ವರ್ಷಗಳ ಹಿಂದೆ ಮಹಮ್ಮದ್ ಘಜಿನಿ ಆ ಪ್ರಾಂತ್ಯದಿಂದಲೇ ಪಯಣಿಸಿದ್ದ. ಹಿಮಾಲಯ ಕಣಿವೆಗಳ ನಡುವೆ ಸಾಗಿಬಂದು
ಸೋಮನಾಥ ದೇವಾಲಯವನ್ನು ಧ್ವಂಸ ಮಾಡಿದ.
ಅನಂತರ ನೂರು ವರ್ಷಗಳಿಗೆ ಘೋರಿ ಮಹಮ್ಮದ್ ಆ ಪ್ರದೇಶದಿಂದಲೇ ಬಂದು ಟಾರಿಯನ್ ಯುದ್ಧದಲ್ಲಿ
ಪ್ರಥ್ವೀರಾಜನನ್ನು ಸೋಲಿಸಿದ. ಆಗ ಅದರ ಹೆಸರು ಆರಿಯಾನ ಎಂದಿತ್ತು. ಆರ್ಯರು ವಾಸಿಸಿದ ನಾಡಾದ್ದರಿಂದ ಅದಕ್ಕೆ ಆ
ಹೆಸರು ಬಂದಿದ್ದು ಎನ್ನುತ್ತಾರೆ.
ಅದಾದ ನಂತರ ಮುನ್ನೂರು ವರ್ಷಗಳಿಗೆ- ಈ ಬಾರಿ ಇತ್ತಲಿಂದ ಅತ್ತಹೊದ ಅಕ್ಬರ್ ಆ ಪ್ರಾಂತವನ್ನಾಳಿದ.
ಪರ್ವತಗಳ ಇತ್ತ ಕಡೆ ಕಾಶ್ಮೀರಿ ಗುಲಾಬಿಗಳು,ಹುಲ್ಲುಗಾವಲುಗಳು! ಅತ್ತಕಡೆ ಬೆಟ್ಟ, ಗುಡ್ಡ,
ಗುಹೆಗಳು,ಬೀಳುನೆಲ, ಮರುಭೂಮಿ! ದಿ ಲ್ಯಾಂಡ್ ಆಫ್ ರೈಸಿಂಗ್ ಸನ್!
ಅಲ್ಲಿನವರು ಮಾತನಾಡುವ ಭಾಷೆಯ ಹೆಸರು- ಪುಸ್ತೂ.
ಅಲ್ಲಿನ ಪರ್ವತಗಳು, ನದಿ-ತೊರೆಗಳು, ಜಲಪಾತಗಳೂ ಹಾಗೆ ಇದ್ದವು. ಹಿಮಪಾತ, ಹಿಮ, ತೂಫಾನು,
ಮಂಜಿನ ಬಿಂದು... ಇವ್ಯಾವುವೂ ಬದಲಾಗಲಿಲ್ಲ. ರಾಜರು ಬದಲಾದರೂ. ರಾಜ್ಯಗಳ ಸೀಮೆಗಳು ಬದಲಾದವು. ವಂಶಗಳು
ಬದಲಾದವು. ಕೇವಲ ಹೆಸರುಗಳಷ್ಟೇ ಇತಿಹಾಸ ಪುಟಗಳಲ್ಲಿ ಉಳಿದುಕೊಂಡವು.
ಆ ರೀತಿ ಕಾಲಗರ್ಭದಲ್ಲಿ ಎಂಟುನೂರು ವರ್ಷಗಳು ಕರಗಿಹೋದವು.
ಎಲ್ಲಿ ಸೌಭಾಗ್ಯ ಇಲ್ಲವೋ ಅಲ್ಲಿ ರಕ್ತಪಾತ ಅನಿವಾರ್ಯ. ಎಲ್ಲಿ ಹಸಿವು ರಾಜ್ಯವಾಳುತ್ತದೋ, ಅಲ್ಲಿ ಖಡ್ಗವೇ
ಶಾಸನ ಬರೆಯುತ್ತದೆ. ಬೆಳೆ ಬೆಳೆಯದ ಸ್ಥಳದಲ್ಲಿ ನಾಗರಿಕತೆ ಬೆಳೆಯಲೊಲ್ಲೆ ಎನ್ನುತ್ತದೆ. ಹಸಿವಿದ್ದಲಿ ನಂಬಿಕೆ ಉಳಿಯದು.
ಅದಕ್ಕೆ ಆ ಜನಾಂಗ ಒಡೆದು ಚೂರು ಚೂರಾಗಿ ಅನೇಕ ಪಂಗಡಗಳಾಗಿ ಬೇರ್ಪಟ್ಟಿತು.
ದಿ ಲ್ಯಾಂಡ್ ಆಫ್ ರೈಸಿಂಗ್ ಸನ್ ಮತ್ತೂ ನೂರು ವರ್ಷಗಳುರುಳಿದವು.
ಕ್ರಿ.ಶ.೧೯೭೮
ಕಾಲಚಕ್ರ ತಿರುಗುತ್ತಲೇ ಇತ್ತು. ಬ್ರಿಟಿಷರು ಈ ನೆಲದಿಂದ ಕಾಲ್ತೆಗೆಯುವ ಮುನ್ನ ಭಾರತ-ಪಾಕಿಸ್ತಾನಗಳನ್ನು
ಬೇರ್ಪಡಿಸಿಯೇ ಹೋದರು. ಜವಾಹರಲಾಲರ ದಯೆಯಿಂದಾಗಿ ಕಾಶ್ಮೀರ ರಾವಣ ಕಾಷ್ಠ ಹೊತ್ತಿಕೊಂಡಿತು. ಅಮೆರಿಕಾ,
ರಷ್ಯಗಳು ಜಗತ್ತಿನ ಎರಡು ಸೂಪರ್ ಪವರ್ ರಾಷ್ಟ್ರಗಳಾಗಿ ಬೆಳೆಯತೊಡಗಿದ್ದವು. ದುರದ್ರಷ್ಟವಶಾತ್ ಭಾರತದೇಶ
ಸಮಾಜವಾದದತ್ತ ಒಲವು ತೋರಿಸಿ ರಷ್ಯಾಕ್ಕೆ ಹತ್ತಿರವಾಯಿತು. ಅದರಿಂದಾಗಿ ಸ್ವಾಭಾವಿಕವಾಗಿಯೇ ಅಮೆರಿಕ
ಪಾಕಿಸ್ತಾನವನ್ನು ಬಳಿಗೆಳೆದುಕೊಂಡಿತು.
ಜಗತ್ತಿನ ಇತರ ಭಾಗದಲ್ಲಿ ಇಷ್ಟೆಲ್ಲ ಬದಲಾವಣೆಗಳಾಗುತ್ತಿದ್ದರೂ- "ಉದಯ ಸೂರ್ಯನ ನಾಡು" ಮಾತ್ರ
ಹಾಗೆ ಇತ್ತು. ಆದರೆ ಬ್ರಿಟಿಷರು ಗದ್ದುಗೆ ಏರಿಸಿಹೋದ ಜಹೀರ್ ಶಾ ಮಾತ್ರ ನಿರಂಕುಶನಾದ. ಹಸಿವಿನ ಮರುಭೂಮಿಯಲ್ಲಿ
ಯಾವುದೇ ಇಸಂ ಕೂಡ ಶಾಶ್ವತವಾಗಿ ನೆಲೆ ನಿಲ್ಲಲಾಗಲಿಲ್ಲವೆ! ಜಹೀರ್ ಶಾನಿಗೆ ವಿರುದ್ಧವಾಗಿ ೧೯೭೩ರಲ್ಲಿ ರಷ್ಯನ್ನರ
ಕುಮ್ಮಕ್ಕಿನಿಂದ ಕ್ರಾಂತಿ ತಲೆಯೆತ್ತಿತು. ರಷ್ಯಾದ ಕ್ರಪಕಟಾಕ್ಷವಿದ್ದ ಮಾರ್ಕ್ಸಿಸ್ಟ್ ರಿಪಬ್ಲಿಕನ್ ಪಕ್ಷ ಅಧಿಕಾರಕ್ಕೆ ಬಂತು.
ಆದರೆ ಅದೇ ಪ್ರದೇಶದಲ್ಲಿರುವ ಮತ್ತೊಂದು ಪಂಗಡ ಮೊಜಹಿದಿನರು-ಪುಸ್ತೂನ್ ಭಾಷೆಯಲ್ಲಿ ಮೊಜಹಿದಿನರು ಎಂದರೆ 'ಪವಿತ್ರ
ಯುದ್ಧವೀರರು' ಎಂದರ್ಥ. ಅವರಿಗೆ ಇನ್ನೊಬ್ಬರ ಅಧೀನದಲ್ಲಿರುವುದೆಂದರೆ ಇಷ್ಟವಿಲ್ಲ. ಆದ್ದರಿಂದ ಕಮ್ಯೂನಿಷ್ಟರ ಮೇಲೆ ಯುದ್ಧ
ಘೋಷಿಸಿದರು.
ಪಕ್ಕದಲ್ಲಿ ಒಂದು ಕಣ್ಣಿಟ್ಟೇ ಇದ್ದ ಪಾಕಿಸ್ತಾನಕ್ಕೆ ರಷ್ಯಾದ ಪ್ರಾಬಲ್ಯವನ್ನು ಎದುರಿಸಲು ಒಳ್ಳೆಯ ಅವಕಾಶ ದೊರಕಿದಂತಾಯಿತು.
ತತ್ ಕ್ಷಣ ಮೋಜಾಹಿದಿನರಿಗೆ ತನ್ನ ಸಹಾಯ ಸಹಕಾರಗಳನ್ನು ಒದಗಿಸಿತು. ಮಾರ್ಕ್ಸಿಸ್ಟ್ ರಿಪಬ್ಲಿಕನ್ ಪಕ್ಷದ ವಿರುದ್ಧ ದಂಗೆ
ಶುರುವಾಯಿತು. ಅದಕ್ಕೆ ಹೇಗೋ ಅಮೆರಿಕಾದ ಒತ್ತಾಸೆ ಇದ್ದೇ ಇತ್ತು.
ಅದರಿಂದಾಗಿ ರಷ್ಯಾಕ್ಕೆ ಮೈ ಉರಿದುಹೋಯಿತು. ಚಿಕ್ಕದೊಂದು ಪ್ರದೇಶದ ಮೇಲಿನ ತನ್ನ ಹಿಡಿತವನ್ನು ಇನ್ನೊಂದು ಪುಟ್ಟ
ರಾಷ್ಟ ಪಾಕಿಸ್ತಾನ ಪ್ರಶ್ನಿಸುವ ರೀತಿ ವರ್ತಿಸಿದ್ದು ಅದರಿಂದ ಸಹಿಸಲಾಗಲಿಲ್ಲ.! ಮತ್ತೊಂದೆಡೆ ಮೊಜಹಿದಿನರು ಮರ್ಕ್ಸಿಸ್ಟರನ್ನು
ಅಧಿಕಾರದಿಂದಿಳಿಸುವ ಪ್ರಯತ್ನಗಳನ್ನು ತೀವ್ರಗೊಳಿಸಿದ್ದರು. ಎಲ್ಲಕ್ಕಿಂತಲೂ ಮುಖ್ಯವಾಗಿದ್ದ ಮೂರನೆಯ ಕಾರಣ- ಅಮೆರಿಕ
ವಾಮನನಂತೆ ಪಾದ ಊರಲು ಏಷ್ಯಾದಲ್ಲಿ ಒಂದಿಷ್ಟು ಸ್ಥಳ ಲಭಿಸುತ್ತದೆ! ಅಷ್ಟೇ ಅವಕಾಶ ದೊರೆತರೆ ಸಾಕು, ಇಡಿಇಡಿಯಾಗಿ
ಆಕ್ರಮಿಸಿಕೊಂದುಬಿಡುತ್ತದೆ, ಎಂಬುದು ರಷ್ಯಾಕ್ಕೆ ಗೊತ್ತಿತ್ತು.
ಈ ಎಲ್ಲ ಪೂರ್ವಾಪರ ಆಲೋಚನೆ ಮಾಡಿ ರಷ್ಯಾ ಮುಖ್ಯವಾದುದೊಂದು ನಿರ್ಣಯ ತೆಗೆದುಕೊಂಡಿತು.
[ ಮುಂದುವರಿಯುವುದು..................]
No comments:
Post a Comment