Monday, 13 October 2014

ಒಂದು ಸಂಜೆ....ಭಾಗ-೨


ಈ ಎಲ್ಲ ಪೂರ್ವಾಪರ ಆಲೋಚನೆ ಮಾಡಿ ರಷ್ಯಾ ಮುಖ್ಯವಾದುದೊಂದು ನಿರ್ಣಯ ತೆಗೆದುಕೊಂಡಿತು.

ಪರಿಣಾಮ-೧೯೭೮ರ ಏಪ್ರಿಲ್ ೨೭ರಂದು ಬೆಳಿಗ್ಗೆ ಲಕ್ಷಗಟ್ಟಲೆ ರಷ್ಯನ್ ಸೈನಿಕರು, ಸಾವಿರಾರು ಟ್ಯಾಂಕರುಗಳೊಂದಿಗೆ

"ಉದಯಸೂರ್ಯನ ನಾಡಿ"ನೊಳಗೆ ಪ್ರವೇಶಿಸಿದರು. ಅಡ್ಡಬಂದವರನ್ನು ಅಡ್ಡಡ್ಡ ಕತ್ತರಿಸುತ್ತ, ರಕ್ತದಿಂದ ಆ ನೆಲವನ್ನು

 ಕೆಂಪಾಗಿಸುತ್ತಾ ಅರಿಯನ್ ಪ್ರದೇಶವನ್ನು ವಶಪಡಿಸಿಕೊಂಡರು.


ಇದನ್ನೇ "ಏಪ್ರಿಲ್ ಕ್ರಾಂತಿ" [ ಏಪ್ರಿಲ್ ರೆವಲ್ಯೂಷನ್ ]  ಎನ್ನುವುದು.

ಅರಿಯನ್ ಪ್ರಾಂತದಲ್ಲಿ ಗಿರಿಜನರೆಲ್ಲರೂ ಒಟ್ಟೂ ಎರಡು ಕೋಟಿಗಳಿಗಿಂತಲೂ ಜಾಸ್ತಿ ಇದ್ದಿರಲಿಲ್ಲ. ಅಂದರೆ ಭಾರತದಲ್ಲಿ

ಕೇರಳದಂತಹ ರಾಜ್ಯದ ಜನಸಂಖ್ಯೆಗಿಂತಲೂ ಕಮ್ಮಿಯೇ! ಆದರೆ ಅವರು ನಿಸರ್ಗದೊಂದಿಗೆ ಸಹವಾಸ

ಇಟ್ಟುಕೊಂಡಿರುವಂತವರು! ಸ್ವಭಾವಿಕಬಾಗಿಯೇ ಸ್ವಾತಂತ್ರ್ಯ ಪ್ರೇಮಿಗಳು.



ಅವರು ರಷ್ಯನ್ ಸೈನಿಕರ ಜೀವನಗಳನ್ನು ದುರ್ಭಲಗೊಳಿಸಿಬಿಟ್ಟರು. ಬೆಟ್ಟ-ಗುಡ್ಡಗಳ ಕಗ್ಗತ್ತಲ ಗುಹೆಗಳೊಳಗಿಂದ ನುಗ್ಗಿ ಬಂದು

 ಮಿಂಚಿನ ದಾಳಿ ನಡೆಸುತ್ತಿದರು. ಗೆರಿಲ್ಲಾ ಯುದ್ಧದಲ್ಲಿ ರಷ್ಯನ್ ಸೈನಿಕರನ್ನು ಹಣ್ಣು ಹಣ್ಣು ಮಾಡುತ್ತಿದ್ದರು.



ಇತ್ತ ರಶ್ಯನ್ನರೆನು ಕಮ್ಮಿ ಇರಲಿಲ್ಲ. ಜಗತ್ತಿನ ಎರಡು ಪ್ರಬಲ ಶಕ್ತಿಗಳಲ್ಲಿ ಅದು ಒಂದು... ! ರಷ್ಯನ್ನರು ಮತ್ತಷ್ಟು ಕಠಿಣವಾಗಿ

ವರ್ತಿಸಿ, ಹಿಡಿತ ಬಿಗಿ ಮಾಡಿದರು. ಈ ಪ್ರಾಂತದೊಳಗೆ ಅಮೆರಿಕವಾಗಲಿ, ಪಾಕಿಸ್ತಾನವಾಗಲಿ ಕಾಲಿಡಕೂಡದೆನ್ನುವುದು ಅದರ ಉದ್ದೇಶ.


ಪರಿಣಾಮ- "ಉದಯಸೂರ್ಯನ ನಾಡು" ಕೆಂಪೇರಿತು. ಆ ಕೆಂಪಿಗೆ ಕಾರಣವಾಗಿದ್ದು ಅರುಣೋದಯ ಕಾಂತಿಯಲ್ಲ.. ರಕ್ತ..!



ಸಾವಿರಾರು ರಷ್ಯನ್ ಸೈನಿಕರು ಮರಣಿಸಿದರು. ಅತ್ತ ಲಕ್ಷಗಟ್ಟಲೆ ಮೊಜಹಿದಿನರು ಜೀವಕ್ಕೆರವಾದರು. ಆ ಕಾಲದಲ್ಲೇ ಆ

ಪ್ರಾಂತದೆಲ್ಲೆಲ್ಲ ಸುಮಾರು ೪೦ ಲಕ್ಷ ಭೂ ಸ್ಪೋಟಕಗಳು [ ಲ್ಯಾಂಡ್ ಮೈನ್ಸ್ ] ಇದ್ದವೆಂಬುದು ಒಂದು ಅಂದಾಜು.!!




ಆ ರೀತಿ, ಆ ಗುಡ್ಡಗಾಡಿನ ಪ್ರಾಂತ ಹತ್ತು ವರ್ಷಗಳ ಕಾಲ ಭಯಂಕರ ರಣರಂಗವಾಗಿ ಮಾರ್ಪಟ್ಟಿತು. ಒಂದೆಡೆ ರಷ್ಯಾ,

ಮತ್ತೊಂದೆಡೆ ಅಮೆರಿಕಾ- ಎರಡು ಬಲಿಷ್ಠ ರಾಷ್ಟ್ರಗಳು ಪರಸ್ಪರ ಆಡುವ ಆಟದಲ್ಲಿ, ಪಾಪ, ಆ ಪುಟ್ಟ ಪ್ರದೇಶ ಕೇವಲ

ದಾಳವಾಗಿತ್ತು. ಇತೀಹಾಸದುದ್ದಕ್ಕೂ ಹಲವರ ಕೈಗಳಿಗೆ ಸಿಕ್ಕಿ ಸ್ವಾರ್ಥಿಗಳಿಂದಾಗಿ ಪುಟ್ಟ ಪುಟ್ಟ ತಂಡಗಳಾಗಿ ಒಡೆದು, ಬಗೆ

 ಬಗೆಯ ಯುದ್ಧಗಳಿಂದ ನರಳಿ, ನೊಂದು, ಬೇಸತ್ತ ರಾಷ್ಟ ಅದು! ಹಿರಿಯರು ಮಕ್ಕಳ ಕೈಗೆ ಸ್ಲೇಟು-ಬಳಪ ಕೊಟ್ಟು, ಅ,ಆ,ಇ,ಈ

 ಕಲಿಸುವ ಬದಲಿಗೆ ಬಂದೂಕು ಗುರಿ ಇಡುವುದನ್ನು ಕಲಿಸುವ ಪ್ರಾಂತವದು.! ಮನುಷ್ಯನ ಜೀವ ಹುಲ್ಲುಕಡ್ಡಿಗೆ ಸಮವಾಗಿದ್ದರೆ,

ಹುಲ್ಲುಕಡ್ಡಿಗೋಸ್ಕರ ಜೀವ ಬಲಿ ತೆಗೆದುಕೊಳ್ಳುವ ದೇಶ ಅದು.!



ಆ ದೇಶದ ಹೆಸರೇ ಅಪಘಾನಿಸ್ತಾನ್!!!!

೧೫ ಜನೆವರಿ. ೧೯೮೯.

ದಿ ಲ್ಯಾಂಡ್ ಆಫ್ ರೈಸಿಂಗ್ ಸನ್ ನಲ್ಲಿ ರಷ್ಯನ್ ಧ್ವಜ ಹಾರಾಡುತ್ತಿರುವುದು ಅಮೇರಿಕಕ್ಕೆ ಇಷ್ಟವಾಗಲಿಲ್ಲ. ಅದನ್ನು ಗ್ರಹಿಸಿದ

ಪಾಕಿಸ್ತಾನ ಆ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿತು. ತನ್ನೊಂದಿಗೆ ಕೈಗೂಡಿಸಿದರೆ ಅಪಘಾನವನ್ನು ತಮ್ಮ ಹಿಡಿತಕ್ಕೆ

ತಂದುಕೊಳ್ಳಬಹುದೆಂದು ಅಮೇರಿಕಕ್ಕೆ ಆಸೆ ತೋರಿಸಿತು. ಅಮೆರಿಕ ಅದಕ್ಕೆ ತತ್‌ಕ್ಷಣ ಒಪ್ಪಿಕೊಂಡಿತು.



ಅಲ್ಲಿಗಾಗಲೇ, ಪಾಕಿಸ್ತಾನ ರಷ್ಯನ್ನರೊಂದಿಗೆ ಹೊರಡುತ್ತಿದ್ದ ಮೋಜಾಹಿದಿನರಿಗೆ ನೆರವು ನೀಡತೊಡಗಿತ್ತು. ಅಮೆರಿಕ

ಜೊತೆಯಾದ ಮೇಲೆ ಆ ನೆರವು ಮತ್ತಷ್ಟು ತೀವ್ರವಾಯಿತು. ಅದರಿಂದಾಗಿ ಅಫಘಾನಿಸ್ತಾನವನ್ನು ಹಿಡಿತದಲ್ಲಿರಿಸಿಕೊಳ್ಳುವುದು

 ರಷ್ಯನ್ನರಿಗೆ ಕಷ್ಟಸಾಧ್ಯವೆನ್ನಿಸತೊಡಗಿತು. ಅದು ಅಲ್ಲದೆ ರಷ್ಯಾದ ಆರ್ಥಿಕ ಪರಿಸ್ಥಿತಿಯೂ ಹೇಳಿಕೊಳ್ಳುವಷ್ಟು ಚೆನ್ನಾಗಿರಲಿಲ್ಲ.

ಇದೆಲ್ಲದರಿಂದಾಗಿ ದಿನದಿಂದ ದಿನಕ್ಕೆ ಹಿಡಿತ ಸಡಿಲವಾಗತೊಡಗಿತ್ತು.



ಇದೆಲ್ಲದರ ಪರಿಣಾಮವಾಗಿ ೧೪ ಅಕ್ಟೋಬರ್, ೧೯೮೭ರಂದು ಅಫಘಾನಿಸ್ತಾನದಿಂದ ತನ್ನ ಸೇನೆ

ಹಿಂತೆಗೆದುಕೊಳ್ಳುತ್ತಿರುವಾಗಿ ರಷ್ಯಾ ಹೇಳಿಕೆ ನೀಡಿತು. ಆ ರೀತಿ ಸೇನೆ ಹಿಂತೆಗೆದುಕೊಳ್ಳಲು ಸುಮಾರು ಎರಡು ವರ್ಷ

ಬೇಕಾಯಿತು. ಅಂದರೆ, ೧೯೮೯ ಜನೆವರಿಯಲ್ಲಿ ರಷ್ಯನ್ ಸೇನೆಯ ಕೊನೆಯ ಟ್ಯಾಂಕರ್ ಅಫಘಾನಿಸ್ತಾನದ ಗಡಿ ದಾಟಿ

ಹೊರತು ಹೋಯಿತು. ರಷ್ಯನ್ ಸೇನೆ ಪೂರ್ತಿಯಾಗಿ ಅಲ್ಲಿಂದ ಕಾಲ್ತೆಗೆದ ಮರುಕ್ಷಣ ಅಂದುಕೊಂಡಿದ್ದು ಅಂದುಕೊಂಡಂತೆಯೇ

ನಡೆದು ಬಂದಿತ್ತು. ರಷ್ಯನ್ ಸೇನೆ ತೊಲಗಿದ ನಂತರ, ಪಾಕಿಸ್ತಾನಕ್ಕೆ ಆಘಾತವಾಗುವ ಘಟನೆ ನಡೆಯಿತು. ಅಲ್ಲಿಯ ತನಕ

ನಿಶ್ಶಬ್ದವಾಗಿ ತಮ್ಮ ಕೆಲಸ ಮಾಡಿಕೊಂಡು ಬಂದಿದ್ದ ಮೊಜಹಿದಿನರು ತಾವು ಸ್ವತಂತ್ರರು, ಯಾರ ಕೈಕೆಳಗೂ ಇರುವಂಥವರಲ್ಲ

ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಅವರಿಗೆ ಅಷ್ಟೋ ಇಷ್ಟೋ ಒಲವಿದ್ದುದು ಭಾರತದ ಕಡೆಗೆ. ಅದನ್ನವರು ತೋರ್ಪಡಿಸಿದರು ಕೂಡ.



ಅದರಿಂದಾಗಿ ಪಾಕಿಸ್ತಾನಕ್ಕೆ ಗಂಟಲಲ್ಲಿ ಗಾಳ ಚುಚ್ಚಿಕೊಂಡಂತಾಯಿತು. ಭಾರತಕ್ಕೆ ಮಿತ್ರರಾದ "ಪವಿತ್ರ ಯುದ್ಧವೀರರು"

ಅಫಘಾನಿಸ್ತಾನದಲ್ಲಿ ಸ್ಥಿರಗೊಂಡರೆ ತನಗಾಗುವ ಹಾನಿಯ ಬಗ್ಗೆ ಕೂಲಂಕುಷವಾಗಿ ಗೊತ್ತಿತ್ತು. ಅದಕ್ಕೆ ಅಮೆರಿಕಾದತ್ತ ಮುಖ
ಮಾಡಿ "ಏನು ಮಾಡೋಣ?" ಎಂದಿತು..


ಮುಂದುವರಿಯುವುದು.............

No comments:

Post a Comment

CLICK HERE