ಒಬ್ಬ ಪರವೂರಿನ ಸಂತೆಗೆ ಸಾಮಾನು ಸಾಗಿಸ್ಟ್ತಿದ್ದ. ಅದಕ್ಕೆ ಪಕ್ಕದ
ಮನೆಯತನ ಕತ್ತೆಯನ್ನು ಬಾಡಿಗೆಗೆ ತೆಗೆದುಕೊಂಡಿದ್ದ. ಕಟ್ಟೆಯ
ಯಜಮಾನನೂ ಇವನೊಂದಿಗೆ ಸಂತೆಗೆ ಹೊರಟ. ಮಟಮಟ
ಮಧ್ಯಾಹ್ನವಾದಾಗ ಕತ್ತೆಯನ್ನು ಆಚೆ ಬಿಟ್ಟು ಇಬ್ಬರು ಹಂಚಿಕೊಂಡು ರೊಟ್ಟಿ
ತಿಂದು ನೀರು ಕುಡಿದರು. ಸ್ವಲ್ಪ ವಿಶ್ರಮಿಸಲು ಅತ್ತಿತ್ತ ನೋಡಿದರೆ
ಎಲ್ಲಿಯೂ ನೆರಳು ಕಾಣಲಿಲ್ಲ. ಬಿಸ್ಲಿ ಸುಡುತ್ತಿತ್ತು. ಕಟ್ಟೆ ನಿಂತಲ್ಲಿಯೇ
ತೂಕಡಿಸುತ್ತಿತ್ತು. ಅದರ ನೆರಳಲ್ಲಿ ಒಂದಿಷ್ಟು ಅಡ್ಡಗೋಣ ಎಂದು ಕತ್ತೆ
ಬಾಡಿಗೆ ಪಡೆದವ ಸೂಚಿಸಿದ. ಕೂಡಲೇ ಕಟ್ಟೆಯ ಮಾಲೀಕನ ಪಿತ್ತ
ನೆತ್ತಿಗೇರಿತು. "ನಾನು ಕಟ್ಟೆಯ ನೆರಳನ್ನು ನಿನಗೆ ಕೊಡಲ್ಲಿಲ್ಲ. ಬಾರಿ
ಕತ್ತೆಯನ್ನು ಮಾತ್ರ ಸಾಮಾನು ಹೊರಲು ಕೊಟ್ಟಿದ್ದೆ. ಆದುದರಿಂದ ಕತ್ತೆಯ ನೆರಳಿಗೆ ಬೇರೆಯೇ ಬಾಡಿಗೆ ಕೊಡಬೇಕು, ಇಲ್ಲವೇ ನೆರಳನ್ನು ಉಪಯೋಗಿಸಬಾರದು" ಎಂದ.
ಮಾತಿಗೆ ಮಾತು ಬೆಳೆದು ಕೈ ಕೈ ಸೇರಿತು. ಇಬ್ಬರು ಗುಡ್ದಾಡುತ್ತಿರುವಂತೆಯೇ ಗಲಾಟೆಗೆ ಹೆದರಿದ ಕತ್ತೆ 'ಹ್ರೀಂ....'ಕಾರ ಮಾಡುತ್ತಾ ಓಡಿ ಹೋಯಿತು,
ಒಂದಾಗಿ ಪಯಣಿಸಿದ್ದು,ರೊಟ್ಟಿ ಹಂಚಿಕೊಂಡು ಊಟ ಮಾಡಿದ್ದು ಸತ್ಯಯುಗ, ನಶ್ವರವಾದ ನೆರಳಿಗಾಗಿ ಗುಡ್ದಾದಿದ್ದು ಕಲಿಯುಗ.
No comments:
Post a Comment