Wednesday, 8 October 2014

ಯುಗ ಪರಿವರ್ತನೆ... ಭಾಗ-೧


ಶ್ರೀಮಂತನೊಬ್ಬನಿಗೆ ಯಾವುದೋ ಕಾರಣದಿಂದ ಕಣ್ಣಿನ ದ್ರಷ್ಟಿ ಹೋಯಿತು. 

ವಿಚಾರಿಸಿ ನೋಡಲಾಗಿ ಒಬ್ಬ ಪ್ರಖ್ಯಾತ ಪರಿಣಿತ ನೇತ್ರ ವೈದ್ಯರಿದ್ದಾರೆಂದೂ 

ದುಬಾರಿ 'ಫೀಸು' ಅವರದಾದರೂ ರೋಗ ಗುಣವಾಗುವುದು ಖಾತ್ರಿ ಎಂದು 

ತಿಳಿದುಬಂತು. ಸರಿ, ಆ ವೈದ್ಯರನ್ನು ಮನೆಗೆ ಕರೆಸಲಾಯಿತು. ಕೂಲಂಕುಷ 

ತಪಾಸಣೆಯ ಅನಂತರ ವೈದ್ಯರು ಚಿಕಿತ್ಸೆ ನಡೆಸಲು ಒಪ್ಪಿದರು. ಮತ್ತೆ ತಮ್ಮ ಶುಲ್ಕದ ಮೊತ್ತವನ್ನು ಸೂಚಿಸಿದರು.



ಶ್ರೀಮಂತ ರೋಗಿ ಏನೂ ವ್ಯವಹಾರದಲ್ಲಿ ಹಿಂದುಳಿದಿರಲಿಲ್ಲನಿಗದಿತ ಸಮಯದಲ್ಲಿ ತಮ್ಮ ದ್ರಷ್ಟಿ ಮರಳಿದರೆ ಅವರು ಹೇಳಿದ ಮೊತ್ತಕ್ಕೆ ಮತ್ತೊಂದಿಷ್ಟು ಸೇರಿಸಿ 

ನೀಡುವುದಾಗಿಯೂ, ಒಂದು ವೇಳೆ ಚಿಕಿತ್ಸೆ ವಿಫಲವಾದರೆ ವೈದ್ಯರೇ ಆ ಮೊತ್ತವನ್ನು

 ತನಗೆ ಕೊಡಬೇಕೆಂದು ಪಟ್ಟು ಹಿಡಿದ. ವೈದ್ಯರಿಗೆ ತಮ್ಮ ಸಾಮರ್ಥ್ಯದಲ್ಲಿ ನಂಬಿಕೆ 

ಇತ್ತು. ಆದುದರಿಂದ ಶ್ರೀಮಂತನ ಷರತ್ತಿಗೆ ಒಪ್ಪಿದರು. ಲೆಕ್ಕಕ್ಕೆ ಇರಲಿ ಎಂದು 

ನಾಲ್ಕು ಮಂದಿ ಗಣ್ಯರ ಉಪಸ್ಥಿತಿಯಲ್ಲಿ ಕರಾರು ಪತ್ರ ತಯಾರಿಸಿ ಸಹಿ ಮಾಡಿದರು,ರೋಗಿ ಮತ್ತು ವೈದ್ಯರಿಬ್ಬರು.



ಚಿಕಿತ್ಸೆ ಮೊದಲಾಯಿತು. ವೈದ್ಯರು ಮಾತು ಕೊಟ್ಟಂತೆಯೇ ನಿಗದಿತ ಸಮಯಕ್ಕೆ 

ಸರಿಯಾಗಿ ರೋಗಿಗೆ ಸಂಪೂರ್ಣ ದ್ರಷ್ಟಿ ಮರಳಿತು. ಆದರೆ ರೋಗಿ ಇದನ್ನು ಒಪ್ಪಲು 

ತಯಾರಿಲಿಲ್ಲ.! ತನಗೆ ಏನೂ ಕಾಣುವುದಿಲ್ಲ. ಆದುದರಿಂದ ತಾನು ವೈದ್ಯರಿಗೆ ಶುಲ್ಕ

 ಅವನ ದ್ರಷ್ಟಿ ನೀಡುವುದಿಲ್ಲ. ಬದಲಾಗಿ ಅವರೇ ತನಗೆ ಹಣ ಕೊಡಬೇಕು ಎಂದು 

ಹಟ ಹಿಡಿದ. ವೈದ್ಯರಿಗೆ ಅವನ ದ್ರಷ್ಟಿ ಮರಳಿರುವುದರಲ್ಲಿ ಸಂದೇಹವೇ ಇರಲಿಲ್ಲ. 

ಹಣದಸೆಯಿಂದ ಈ ನಾಟಕ ಆಡುತ್ತಿದ್ದಾನೆ. ಇವನಿಗೆ ಬುದ್ದಿ ಕಲಿಸಬೇಕು ಎಂದು 

ಯೋಚಿಸಿ, ಕರಾರು ಪತ್ರದಲ್ಲಿ ವೀಕ್ಷಕ ಸಾಕ್ಷಿಗಳಾಗಿದ್ದವರಿಗೆ ದೂರು ನೀಡಿ, ಪಂಚಾಯಿತಿಗೆ ಕರೆದರು.


ಅವರೂ ಪರೀಕ್ಷಿಸಿದರು. ದ್ರಷ್ಟಿ ಸರಿಯಾಗಿದೆ ಎಂಬ ತೀರ್ಮಾನಕ್ಕೆ ಬಂದರು. 

ಶ್ರೀಮಂತ ಬಿಲ್ಕುಲ್ ಒಪ್ಪಲಿಲ್ಲ. ತನಗೆ "ಇನ್ನೂ ಕಾಣುವುದಿಲ್ಲ" ಎಂಬುದೇ ಅವನ 

ಮಂತ್ರವಾಗಿತ್ತು. ಕಡೆಗೆ ಪರಿಪರಿಯಾಗಿ ಬಿಡಿಸಿ ವಿಚಾರಿಸಿದಾಗ ಅವನೆಂದ " ನನ್ನ

 ಕೋಣೆಯಲ್ಲಿ ಬೆಲೆಬಾಳುವ ವಸ್ತುಗಳಿದ್ದವು. ದ್ರಷ್ಟಿ ಹೋಗುವ ಮುನ್ನ 

ನಾನವುಗಳನ್ನು ಕಣ್ಣಾರೆ ನೋಡಿದೆ. ಸ್ವಲ್ಪ ದ್ರಷ್ಟಿ ಬಂದ ಅನಂತರ ಕೆಲವು 

ಮಾಯವಾಗಿರುವುದು ನನ್ನ ಗಮನಕ್ಕೆ  ಬಂತು. ಇದರ ಕಾರಣ ಕಂಡು 

ಹಿಡಿಯಬೇಕು ಎಂದು ಹೊಂಚು ಹಾಕಿದೆ. ಇ ವೈದ್ಯರು ಪ್ರತಿ ಸಲ ಬಂದು 

ಹೋಗುವಾಗ ಒಂದೊಂದೇ ವಸ್ತುಗಳು ಮಾಯವಾಗುತ್ತಿರುವುದು ಕಂಡಿತು. 

ಹಾಗೆಂದರೆ, ನನ್ನ ಚಿಕಿತ್ಸೆ ಅರ್ಧದಲ್ಲಿ ನಿಂತುಹೋಗಬಹುದು ಎಂದುಕೊಂಡು ಪೂರ್ತಿ

 ಕಣ್ಣು ಬರುವವರೆಗೆ ಬಾಯಿ ಮುಚ್ಚಿಕೊಂಡು ಸುಮ್ಮನಾದೆ. ಹಾಗೆಂದು ನಾನೇನು

 ಇವರನ್ನು ಕಳ್ಳರೆಂದು ದೂಷಿಸುತ್ತಿಲ್ಲ. ಆದರೆ ನನ್ನ ವಸ್ತುಗಳು ಮರಳಿ ನನಗೆ 

ಕಾಣುವವರೆಗೆ ನನಗೆ ದ್ರಷ್ಟಿ ಮರಳಿದೆ ಎಂದು ಒಪ್ಪಲು ಸಿದ್ದನಿಲ್ಲ".ವೈದ್ಯರು 

ನಾಚಿಕೆಯಿಂದ ಕುಗ್ಗಿಹೋದರಂತೆ ಮತ್ತು ತಾವು ಕದ್ದ ಸಮಸ್ತ ವಸ್ತುಗಳನ್ನು ಮರಳಿಸಿ

 ಶ್ರೀಮಂತನ ಕ್ಷಮೆ ಕೇಳಿದರು ಎಂಬಲ್ಲಿಗೆ ಕಥೆ ಮುಗಿಯುತ್ತದೆ. ಇದು ಬಹಳ ಸಲ

 ನಾವೇಲ್ಲರೂ ಕೇಳಿದ ಒಂದು ಹಳೆಯ ಸಾಮಾನ್ಯ ನೀತಿ ಕಥೆ. ಆದರೆ ಇಂದು ಇದಾರೆ ಅಂತ್ಯ ಬದಲಾಗಿದೆ. ಅದು ಹೀಗಿದೆ :-


ವೈದ್ಯರು ಲೆಕ್ಕ ಹಾಕಿ ನೋಡಿದರು. ಒಂದು ವೇಳೆ ಶ್ರೀಮಂತ ತನ್ನ ಶುಲ್ಕ 

ನೀಡದಿದ್ದರೆ ನಷ್ಟವೇನು ಇಲ್ಲ. ನಿಜವಾಗಿಯೂ ಔಷಧೀಯ ಬೆಲೆ ಬಿಟ್ಟರೆ, ತಮ್ಮ 

ಕೆಲಸದ ಬೆಲೆ ತೀರಾ ನಗಣ್ಯ!. ಆದರೆ ತಾನವನಲ್ಲಿಂದ ಒಯ್ದ ವಸ್ತುಗಳು ಅಮೂಲ್ಯ.

 ಹಾಗೆಂದವರು ತಮಗಾದ ಅವಮಾನ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಅವರು 

ಎತ್ತರದ ಸ್ವರದಲ್ಲಿ " ಯಾವ ಸಾಮಾನುಗಳೋ? ಎಲ್ಲಿದ್ದವೋ?, ಯಾರು 

ಕದ್ದವರೋ? ನನಗಂತೂ ತಿಳಿಯದು. ಈ ಮನುಷ್ಯ ತನ್ನ ಜಿಪುಣತನಕ್ಕೆ 

ಹೆಸರಾದವ. ಕಣ್ಣಿಗೆ ದ್ರಷ್ಟಿ ಬಂತು. ನನ್ನ ಚಿಕಿತ್ಸೆ ಫಲಪ್ರದವಾಯಿತು. ಆದರೆ ಹಣ

 ಬಿಚ್ಚಲು ತಯಾರಿಲ್ಲ ಇವ. ಹಾಗೆಂದೇ ಈ ನಾಟಕ ಮಾಡುತ್ತಿದ್ದಾನೆ. ಎಷ್ಟೋ ಮಂದಿ 

ಬಡವರಿಗೆ ಧರ್ಮಕ್ಕೆ ಚಿಕಿತ್ಸೆ ಮಾಡಿದ್ದೇನೆ. ಇವನನ್ನೂ ಅದೇ ಸಾಲಿನವನು 

ಎಂದುಕೊಂಡು ಇವನ ಶುಲ್ಕವನ್ನು ಮಾಫಿ ಮಾಡುತ್ತೇನೆ" ಎಂದು ಹೋದರಂತೆ.


ಮೊದಲನೆಯದು ಸತ್ಯಯುಗ. ಎರಡನೆಯದು ಕಲಿಯುಗ ಎನ್ನುತ್ತಾರಂತೆ.

No comments:

Post a Comment

CLICK HERE