Saturday, 26 November 2016

ಗುರುಭ್ಯೋ ನಮಃ

ತನ್ನ ಗುರುವಿಗೆ ಜನ್ಮ ನೀಡುವವ ಶಿಷ್ಯ.
ಮಹಾಭಾರತದ ಮಹಾಯುದ್ಧರಂಗದಲ್ಲಿ ಅರ್ಜುನ ನಿರ್ವೀರ್ಯನಾಗಿ ಯುದ್ಧವನೊಲ್ಲೆ ಎಂದು ಶಸ್ತ್ರತ್ಯಾಗ ಮಾಡಿದ. ದುಷ್ಟದಮನ ಕ್ಷತ್ರಿಯನ ಬದುಕು. ಅವನನ್ನು ಕರ್ತವ್ಯಮುಖನನ್ನಾಗಿ ಮಾಡಲು ಗುರುವಾಗಿ ಬಂದ ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯನ್ನು ಉಪದೇಶಿಸಿದ. ಜಗತ್ತಿಗೆ ಗುರುವಾದ.


anandjoshi9.blogspot.in
Image have all standard licence belongs to Concerned person. Copying is purely offensive.
ನಚಿಕೇತ ತಂದೆಯ ಮಾತನ್ನು ಸತ್ಯವಾಗಿಸಲು ಯಮಪುರಿಗೆ ಹೋದ. ಯಮನಿರಲಿಲ್ಲ ಅಲ್ಲಿ. ಕಾದು ಕುಳಿತ ನಚಿಕೇತ. ಮೂರು ದಿನಗಳ ಅನಂತರ ಮರಳಿದ ಯಮಧರ್ಮ ಬ್ರಾಹ್ಮಣ ವಟುವನ್ನು ಅನ್ನಾಹಾರಗಳಿಲ್ಲದೇ ಕಾಯಿಸಿದ ತಪ್ಪಿಗಾಗಿ ಮೂರು ವರ ಕೇಳುವಂತೆ ಹೇಳಿದ. ನಚಿಕೇತ ಮೂರನೆಯ ವರವಾಗಿ ಬ್ರಹ್ಮಜ್ಞಾನ ಉಪದೇಶಿಸು ಎಂದ. ಇಂದ್ರ ಪದವಿಯ ಆಮಿಷ ಒಡ್ಡಿದರೂ ಒಡಂಬಡಲಿಲ್ಲ. ಕಡೆಗೂ ಸೋತ ಯಮಧರ್ಮ ಪರಮಸತ್ಯ ದರ್ಶನ ಮಾಡಿಸಿದ. ಕಠೋಪನಿಷತ್ತೆಂಬ ಜ್ಞಾನನಿಧಿ ಜಗತ್ತಿಗೆ ಲಭ್ಯವಾಯಿತು.

ಹೀಗೆ ಉದ್ಧವ, ವಿಧುರ, ವಶಿಷ್ಠ, ಭಿಷ್ಮಾಚಾರ್ಯರಂಥ ಅಸಂಖ್ಯ 'ಗುರು'ವರ್ಯರ ಪರಂಪರೆ ಇದೆ ನಮಗೆ. ಧರ್ಮರಾಯ, ಶ್ರೀರಾಮಚಂದ್ರ, ಶಬರಿ, ಅನುಸೂಯೆ,.ಸೀತೆಯರು ಆದರ್ಶರಾಗಿದ್ದಾರೆ.


anandjoshi9.bogspot.in
Image have all standard licence belongs to Concerned person. Copying is purely offensive.


ಒಂದು ಸಲ ಅಕ್ಬರ ಬಾದಷಾಹನಿಗೆ ತನ್ನ ಪ್ರಜೆಗಳು ತನಗೆ ವಿಧೇಯರಾಗಿದ್ದರೋ ಇಲ್ಲವೋ, ನನ್ನ ಮೇಲವರಿಗೆ ಪ್ರೀತಿ, ಗೌರವಗಳಿವೆಯೋ, ಇಲ್ಲವೋ ಎಂಬ ಸಂದೇಹ ಉಂಟಾಯಿತು. ಸಭೆಯಲ್ಲಿ ಪ್ರಶ್ನೆ ಕೇಳಿದ. ಪ್ರತಿಯೊಬ್ಬ ಸಭಾಸದನೂ ಖಂಡಿತಕ್ಕೂ ಇದೆ. ನಿಮಗಾಗಿ ನಮ್ಮ ಪ್ರಜೆಗಳು ಜೀವ ನೀಡಲೂ ಸಿದ್ಧರು ಎಂದೆಲ್ಲ ಉತ್ತರಿಸಿದರು.

ಆದರೆ ಬೀರಬಲ್ಲನ ಉತ್ತರ ಬೇರೆಯಾಗಿತ್ತು. ವಿಧೇಯತೆ ಇರಬಹುದು, ಆದರದು ನಮ್ಮ ಮೇಲಿನ ಹೆದರಿಕೆಯಿಂದಲೇ ಹೊರತು ಪ್ರೀತಿ, ಗೌರವಗಳಿಂದಲ್ಲ ಎಂದ ಖಡಾಖಂಡಿತವಾಗಿ. ಸಹಜವಾಗಿ ಅಕ್ಬರನಿಗೆ ಇದು ರುಚಿಸಲಿಲ್ಲ. ಸತ್ಯ ಯಾವಾಗಲೂ ಕಹಿಯೇ ನೋಡಿ. ಸರಿ, ಅದನ್ನು ಸಾಬೀತುಪಡಿಸಿ ತೋರಿಸು ಎಂದ ಬೀರಬಲ್ಲನಿಗೆ.


anandjoshi9.blogspot.in
Image have all standard licence belongs to Concerned person. Copying is purely offensive.
ಬೀರಬಲ್ಲ ಒಂದು ಫರ್ಮಾನು ಹೊರಡಿಸಿದ. "ಅಕ್ಬರನಿಗೆ ಒಂದು ದೊಡ್ಡ ಬಾನೆ ತುಂಬಾ ಹಾಲು ಬೇಕಾಗಿದೆ. ಸಮಸ್ತರೂ ಒಂದೊಂದು ತಂಬಿಗೆ ಹಾಲು ತಂದು ಅರಮನೆ ಅಂಗಳದಲ್ಲಿರುವ ಬಾನೆಗೆ ಸುರಿಯಬೇಕು" ಎಂದಿತ್ತು. ಸರಿ, ನಿಗದಿತ ದಿನ ಜನ ಸಾಲುಕಟ್ಟಿ, ತಂಬಿಗೆ ಹಿಡಿದು ಬಂದರು. ಸಂಜೆಯಾಗುತ್ತಿರುವಂತೆ ಬಾನೆ ತುಂಬಿತು. ಅಕ್ಬರ ಸ್ವತಃ ಅದರ ಮುಚ್ಚಳ ತೆರೆದ. ಆಹಾ! ಬಾನೆ ತುಂಬಾ ಬರೀ ನೀರು ಮಾತ್ರ ತುಂಬಿತ್ತು. ಎಲ್ಲರೂ ಹಾಲು ತರುತ್ತಾರೆ, ನಾನು ಒಬ್ಬ ಮಾತ್ರ ನೀರು ತಂದರೆ ಯಾರಿಗೂ ತಿಳಿಯುವುದಿಲ್ಲ ಎಂದು ಚಿಂತಿಸಿದ್ದರು.

ಮತ್ತೊಮ್ಮೆ ಡಂಗುರ ಸಾರಲಾಯಿತು. "ಹೋದಸಲದಂತಾಗಬಾರದೆಂದು ಸ್ವತಃ ಬಾದಷಾಹರೇ ಉಸ್ತುವಾರಿ ವಹಿಸುವವರಿದ್ದಾರೆ. ಹಾಲು ತರಬೇಕು" ಮತ್ತೊಮ್ಮೆ ಜನ ಸಾಲುಗಟ್ಟಿ, ತಂಬಿಗೆ ಹಿಡಿದು ಬಂದರು. ಸಂಜೆಯಾಗುತ್ತಿರುವಂತೆ ಬಾನೆ ತುಂಬಿತು. ಆ ದಿನ ಸ್ವತಃ ಅಕ್ಬರನೇ ಸಭಾಸದರೊಂದಿಗೆ ಬಾನೆಯ ಮುಂದಿನ ವೇದಿಕೆಯಲ್ಲಿ ಕುಳಿತು ಬರುವ ಮಂದಿಯನ್ನು ಗಮನಿಸುತ್ತಿದ್ದ. ಬಾನೆಯ ಮುಚ್ಚಳ ತೆರೆಯಲಾಯಿತು. ಬಾನೆ ತುಂಬಾ ಹಾಲು ತುಂಬಿತ್ತು.


ಗಮನಿಸುವವನಿದ್ದಾನೆ ಎನ್ನುವಾಗ ತಪ್ಪು ಮಾಡಲು ಮನಸ್ಸು ಹೆದರುತ್ತದೆ. 
anandjoshi9.blogspot.in
Image have all standard licence belongs to Concerned person. Copying is purely offensive.
ಇದಕ್ಕೆಂದೇ ನಮ್ಮ ಪರಂಪರೆ ಗುರುವಿಗೊಂದು ಉನ್ನತ ಸ್ಥಾನ ಕಲ್ಪಿಸಿಟ್ಟಿತ್ತು. ಮೊದಲ ಹಂತದ 'ಆಸಕ್ತನಿಗೆ ಹಾದಿ ತೋರಿಸಲೆಂದೂ, ಹಾದಿ ತಪ್ಪಿದವನಿಗೆ ಸರಿ ಹಾದಿ ತೋರಿಸಲೆಂದಿರಬಹುದು. ಅದರ ಕಲಿತದ್ದನ್ನು ಗಮನಿಸಿ, ತಪ್ಪುಗಳಿದ್ದಲ್ಲಿ ತಿದ್ದಿ, ಹಾದಿ ತಪ್ಪದಂತೆ ನೋಡಿಕೊಳ್ಳುವವನೇ 'ಗುರು'.


ತಿಳಿದ, ತಿಳಿಯದ ಅಸಂಖ್ಯ ರೀತಿಯಲ್ಲಿ ಮಾರ್ಗದರ್ಶನ ಮಾಡಿದವರೆಲ್ಲರೂ 'ಗುರು'ವೇ. ಒಂದೇ ಒಂದು ಅಕ್ಷರ ಕಲಿಸಿದವನೂ ಗುರು ಎನ್ನುತ್ತದೆ ನಮ್ಮ ಪರಂಪರೆ.

ಇದಿಷ್ಟು ಕಣ್ಣಿಗೆ ಕಾಣುವ 'ಗುರು'. ಆದರೆ ನಮ್ಮೊಳಗೆ ಅಂತರ್ಗತವಾಗಿದ್ದು, ಕೈ ಹಿಡಿದು ನಡೆಸುವ ಅದಮ್ಯ ಶಕ್ತಿಯೊಂದಿದೆ. ಅದು ಪರಮಗುರು. 
ಜೀವ ಮೂಲ ಸೃಷ್ಟಿಯೊಂದಿಗೆ ಹುಟ್ಟಿತು. ಆ ಕ್ಷಣ ನಡೆದ ಘಟನೆ ಅದರ ಚಿತ್ತದಲ್ಲಿ ದಾಖಲಾಯಿತು. ಬೌತಿಕ ವಸ್ತುಗಳ ಸಂಪರ್ಕದಿಂದ ದೇಹಧಾರಣೆಯಾಯಿತು. ಭವಚಕ್ರದ ಪರಿಭ್ರಮಣಕ್ಕೆ ಮೊದಲಾಯಿತು. ಕರ್ಮಲೇಪ ಉಂಟಾಯಿತು. ಎಷ್ಟು ಬಾರಿ ಹುಟ್ಟಿದೇವೋ, ಸತ್ತೆವೋ ಎಂತೆಥ ದೇಹಗಳಾದವೋ!

ಇವೆಲ್ಲದರ ಅನುಭವ, ಅರಿವಿನ ಜ್ಞಾನ, ಜೀವದೊಂದಿಗೆ,ದೇಹದಿಂದ ದೇಹಕ್ಕೆ ಪಯಣಿಸುತ್ತದೆ. ಈ ಅನುಭವದ ಅರಿವೇ ಮುಕ್ತಿ. ಜೀವ ಬುದ್ಧಿಯನ್ನು ಸದಾ ಎಚ್ಚರಿಸುತ್ತದೆ. ಸತ್ಪಥದತ್ತ ಎಳೆಯುತ್ತದೆ. ಆದುದರಿಂದ ಅದೇ ಪರಮಗುರು.

ಒಳಗಿದ್ದು ನಡೆಸುವ, ಹೊರಗಿನಿಂದ ಹಾದಿ ತೋರಿಸುವ, ಇಲ್ಲಿಯವರೆಗೆ ಆಗಿಹೋದ, ಮುಂದೆ ಬರಲಿರುವ ಸಮಸ್ತಗುರುಗಳಿಗೆ, ಪರಂಪರೆಗಳಿಗೆ ನಮಿಸೋಣ.



Copyright © 2015-16 by Anand Joshi
All rights reserved. No part of this publication may be reproduced, distributed, or transmitted in any form or by any means, including photocopying, recording, or other electronic or mechanical methods, without the prior written permission of the publisher, except in the case of brief quotations embodied in critical reviews and certain other noncommercial uses permitted by copyright law. For permission requests, write to the publisher, addressed “Attention: Permissions Coordinator,” at the address below. 

anandjoshi9@live.com
+91-9483998343 )   

Account ID: pub-2871201476498332 Client ID: ca-pub-2871201476498332

Saturday, 5 November 2016

EARLY BIRD CATCHES THE WORMS

There are many idioms and proverbs that express a gospel truth in a concise manner. 

One of them is the 'Early Bird Catches the worm'. This proverb was first encountered in Tohh ray's book.


Early bird catches the worm
Image have all standard licence belongs to Concerned person. Copying is purely offensive.
The "Worm" comes out of the ground early in the morning and the "bird" that searches early gets the "worm", clearly a bird starts searching for food early it catches the worm soon. 

Bird here, refers to a person and worm refers to an opportunity. To grab the opportunity and to make effective use of it, this proverb ignites the importance of being punctual and disciplined to achieve success.
Early Bird Cacthes the Worms
Image have all standard licence belongs to Concerned person. Copying is purely offensive.

The bird that rises earlier that the other birds goes in search of a prey and it gets s many worms as possible. 

This situation or statement advises us to act in proper time. Similarly, if one is not serious in doing his duties and has the habit of post-pointing things, one may lose the opportunities of success and not get the desired result. When we try to work hard at a later stage, it may be of no use.


It is truly said, "don't count every hour in the day, make every hour in the day count". Opportunities do not come for mere asking, we must try to do our best and leave no stone upturned, while the time is on our ride, the advantage is ours, and the cards are in our hands we must keep them close to our chest and play safe. Once thrown carelessly,we may have to repent ever afterwards. Samuel smites says, "lost wealth may be replace by industry, lost knowledge by study, lost health by temperance and medicine but lost time gone forever."


EARLY BIRD CATCHES THE WORMS
Image have all standard licence belongs to Concerned person. Copying is purely offensive.
The most important characteristics of tie is its preciousness, value and prices, minute is enough to win, a second is enough to make you the richest man in the world., fraction of a second can make a difference between life and death, so every minute store house of chances. Therefore, we must not allow such precious time to slip away.

So, if one want to succeed in life, one must  dispel laziness, remove 'take it as an attitude and stop fruitless spending time. Time is a sort of river of passing  events and strong are its currents.

It is the most basic truth of life that we should never allow our golden time to  away from us.

Time is very powerful and one can kneel down in front of it but never defeat it and must always remember the phrase. 


(This article having all the standard licences belongs to the concerned person. Copying is punishable offence)

Story Courtesy : Sneha.S.Hegde


Tuesday, 1 November 2016

ಮುಕ್ತ

'ಆಧ್ಯಾತ್ಮ ಸಾಧಕ ತಾನು' ಎಂದು ನಂಬಿದವನೊಬ್ಬ ಇದ್ದ. ನಿಜವಾದ ಸಾಧು ಸಂತರು ಆ ಊರಿಗೆ ಬಂದಾಗ ಜನ ಓಲೈಸುವುದನ್ನು ಕಂಡಾಗ ಅವನಿಗೆ ಅಸೂಯೆ ಎನಿಸುತಿತ್ತು. ಇಂಥ ಸಾಧಕ ತಾನು, ತನ್ನನ್ನು ಗುರುತಿಸಿ ಗೌರವಿಸದೇ ಈ ಹುಂಬ ಮಂದಿ ಯಾರ್ಯಾರನ್ನೋ ದೇವರೆಂದು, ಗುರುವೆಂದು ತಿಳಿದು ಬೆಸ್ತು ಬೀಳುತ್ತಿದ್ದಾರೆ ಎಂದು ಒಳಗೊಳಗೇ ಅಲವೊತ್ತುಕೊಳ್ಳುತ್ತಿದ್ದ.

MUKTA
image have all standard licence belongs to Concerned person. Copying is purely offensive.
ಒಂದು ಸಲ ಹೀಗಾಯಿತು. ನಿಜಕ್ಕೂ ಆಧ್ಯಾತ್ಮದ ಮೇಲಿನ ಮಜಲುಗಳನ್ನು ಮುಟ್ಟಿದ ಸಂತರೊಬ್ಬರು ಆ ಊರಿಗೆ ಬಂದರು. ಜನ ಸಾಲುಗಟ್ಟಿ ಬಂದು ಅವರಿಗೆ ಅಡ್ಡಬಿದ್ದರು. ಹಣ್ಣು-ಹೂಗಳು ರಾಶಿ ಬಿದ್ದವು. ತಟ್ಟೆ ಕಾಣಿಕೆ ಹಣದಿಂದ ತುಂಬಿತು. ಇವನೂ ಬಂದು ಸಂತರ ಮುಂದೆ ನಿಂತ. ಆದರೆ ಕೈ ಮುಗಿಯಲಿಲ್ಲ. "ಸ್ವಾಮೀ, ನಾನೂನಿಮ್ಮಂತೆಯೇ ಸಾಧಕ. ಆದರೂ ಸಾಧನೆ ಫಲ ನೀಡುತ್ತಿಲ್ಲ. ನಿಮ್ಮಂಥ ಜನಪ್ರಿಯತೆ ನನ್ನದಾಗುತ್ತಿಲ್ಲ. ಏನು ಮಾಡಲಿ?" ಎಂದ.

ಸಂತರು ಗಮನವಿಟ್ಟು ನೋಡಿದರು. ಅಹಂಕಾರವೊಂದನ್ನು ಬಿಟ್ಟರೆ ಸರ್ವ ವಿಧದಲ್ಲೂ ಸಾಧಕನ ಲಕ್ಷಣಗಳಿವೆ ಎಂದು ಅರ್ಥ ಮಾಡಿಕೊಂಡರು. ಕಿರು ನಗುತ್ತಾ  "ಮಗು, ಸುಲಭದ ಹಾದಿ ಇದೆ. ಸಮುದ್ರ ತೀರದ ಮರಳಿನ ಮೇಲೆ ಕುಳಿತು ತಪಸ್ಸು ಮಾಡಿದರಾಯಿತು. ಒಂದು ಕಮಂಡಲ ತೆಗೆದುಕೊಂಡು ಸಮುದ್ರ ತೀರಕ್ಕೆ ಹೋಗು. ಕಮಂಡಲದ ತುಂಬಾ ನೀರನ್ನು ಸಮುದ್ರದಿಂದ ತುಂಬಿ ತಾ. ಸಾಧ್ಯವಿರುವಷ್ಟು ಹೊತ್ತು ಸಮುದ್ರ ಮತ್ತು ಕಮಂಡಲದಲ್ಲಿರುವ

 ನೀರನ್ನು ಕುರಿತು ತಪಿಸು. ಅನಂತರ ಕಮಂಡಲದ ನೀರನ್ನು ನಿಧಾನವಾಗಿ ಸಾಗರಕ್ಕೆ ಸುರಿ. ಒಂದೆರಡು ತಿಂಗಳು ಬೇಕಾಗಬಹುದು. ಅನಂತರ ನಿನಗೇನನಿಸುತ್ತದೋ ಬಂದು ತಿಳಿಸು" ಎಂದರು.

(This Article is having all standard licence. Copying is punishable offence.)
ಇವನಿಗೆ ಸಂತೋಷವಾಯಿತು. ಕಡೆಗೂ ತಾನು ಜನಪ್ರಿಯನಾಗಬಹುದೆಂದು ಉಬ್ಬಿದ. ಮಾರನೆಯ ದಿನದಿಂದ ದಿನಚರಿ ಗುರುಗಳ ಆದೇಶದಂತೆ ನಡೆಯತೊಡಗಿತು. ಒಂದು ವಾರ ಕಳೆಯಿತು. ಬಹಳ ಬದಲಾವಣೆ ಏನೂ ಕಂಡುಬರಲಿಲ್ಲ. ಒಂದು ದಿನ ಸಮುದ್ರದಿಂದ ನೀರನ್ನು ತುಂಬಿಸಿಕೊಳ್ಳುತ್ತಿರುವಾಗ, ಈ ಕಮಂಡಲದಲ್ಲಿಯೇ ಯಾಕೆ ನೀರನ್ನು ತುಂಬಿಸಿಕೊಳ್ಳಬೇಕು ? ಈ ನೀರೂ ಸಮುದ್ರದ ಒಂದು ಭಾಗವೇ ಆಗಿದೆಯಲ್ಲಾ? ಹಾಗಿರುವಾಗ ಇಡೀ ಸಮುದ್ರವನ್ನೇ ಕುರಿತು ಚಿಂತಿಸುವಂತೆ ಗುರು ಹೇಳಿಲ್ಲವೇಕೆ? ಎಂಬೆಲ್ಲ ಪ್ರಶ್ನೆಗಳು ಎದುರಾದವು.

MUKTA
image have all standard licence belongs to Concerned person. Copying is purely offensive.
ಎಷ್ಟು ಹೊತ್ತು ಕಳೆಯಿತೋ! ಅದರ ಪರಿವೆಯೇ ಇರಲಿಲ್ಲ ಅವನಿಗೆ. ಕತ್ತಲಾಯಿತು ಯಾರೋ ಬೆನ್ನು ತಟ್ಟಿ ಎಬ್ಬಿಸಿದರು. ಮನೆಗೆ ಹೋದರು ಪ್ರಶ್ನೆಗಳು ಬೆನ್ನು ಬಿಡಲಿಲ್ಲ. ನಿದ್ದೆ ದೂರವಾಯಿತಂದು. ಮಾರನೆಯ ದಿನ ಮತ್ತದರ ಮುಂದಿನ ದಿನಗಳು ಹೀಗೇ ಕಳೆದವು. ಒಂದು ದಿನ ಸತ್ಯ ಹೊಳೆಯಿತು. ಅನಂತಸಾಗರ, ವಿಶ್ವವನ್ನು ಆವರಿಸಿರುವ ಅನಂತಾನಂತ ವಿಶ್ವ ಚೈತನ್ಯ, ಈ ಕಮಂಡಲ ತಾನು. ಅದು ಸಾಗರದ ಒಂದು ಭಾಗ. 'ಅದು ಪರಮಾತ್ಮ ಇದು ಆತ್ಮ' ಎಂದು ಜನ ಹೇಳುವುದೂ ಇದನ್ನೇ ಒಂದು ಅರ್ಥದಲಿ ನಾನೇ ಅದು, ಅದೇ ನಾನು'ಎಂದಿತು ಒಳ ಮನಸ್ಸು.


ಇಷ್ಟರಲ್ಲಿ ಜನ ಇವನನ್ನು ಗುರುತಿಸಿದ್ದರು. ಗಂಟೆಗಟ್ಟಲೆ ಒಂದು ಕಮಂಡಲದ ತುಂಬಾ ನೀರನ್ನು ಎದುರಿಗಿಟ್ಟಿಕೊಂಡು ಮೈಮರೆತು ಕುಳಿತುಕೊಳ್ಳುವ ಇವನು ಯಾರೋ ದೊಡ್ಡ ಸಾಧಕನೋ ಸಂತನೋ ಇರಬೇಕು ಎಂದುಕೊಂಡಿದ್ದರು. ಹಾರ, ಹಣ್ಣುಗಳು, ನೈವೇದ್ಯಕ್ಕೆ ಹಾಲು ಬರತೊಡಗಿತು. ಜನ ಬಂದು ಬಂದು ಅಡ್ಡ ಬಿದ್ದರು. ನಮ್ಮ ತೊಂದರೆಗಳನ್ನು ಪರಿಹರಿಸುವಂತೆ ಬೇಡತೊಡಗಿದರು. ಕೆಲವರ ಸಮಸ್ಯೆಗಳು ಜಾದೂ ಮಾಡಿದಂತೆ ಕರಗಿ ಹೋಗಿವೆ ಎಂಬ ವದಂತಿ ಹರದ್ದಿತು. ಇವನು ಮಹಾನ್ ಸಂತನಾದ.

(This Article is having all standard licence. Copying is punishable offence.)

ಆದರೆ ಇವನಿಗೆ ಇದಾವುದೂ ಬೇಕಿರಲಿಲ್ಲ.  ಅವನಿಗೆ ಅರಿವಿಲ್ಲದಂತೆ ಅವನ ಅಹಂಕಾರ, ಕೀರ್ತಿ,ಕಾಮನೆ ಅಳಿದುಹೋಗಿದ್ದವು. ಸೂರ್ಯನ ಕಿರಣ ಸ್ಪರ್ಶದಿಂದ ಕಳವಳ ಕರಗಿ ಹೋಗಿತ್ತು. ಒಂದು ದಿನ ಇವನು ಅಲ್ಲಿಂದ ದೂರಕ್ಕೆ ಹೊರತುಹೋದ.


ಇದು ಮನುಷ್ಯ ಕಾಣಾಬಹುದಾದ,ಅನುಭವಿಸಬಹುದಾದ ಅಂತಿಮ ಸತ್ಯ. ಇದನ್ನೇ ನಮ್ಮ ಪ್ರಾಚೀನರು ಅನೇಕ ವಿಧದಲ್ಲಿ ತಿಳಿಸಿಟ್ಟುಹೋದರು. "ಅಹಂ ಬ್ರಹ್ಮಾಸ್ಮಿ" ಎಂದರು. 




MUKTA
Image have all standard licence belongs to Concerned person. Copying is purely offensive.
'ಅಸತ್ಯದಿಂದ ಸತ್ಯದೆಡೆಗೆ , ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮರತ್ವದ ಕಡೆಗೆ ಕೈ ಹಿಡಿದು ನಡೆಸು ಎಂದು ಬೇಡಿದರು. ನಮ್ಮ ಮೂಲ ಸ್ವರೂಪದ ತಿಳಿವಳಿಕೆ ಇಲ್ಲದಿರುವುದೇ ಈ ಸತ್ಯದರ್ಶನದ ಬೆಳಕಿನಲ್ಲಿ ಬದುಕುವುದೇ ಜೀವನ, ಎಲ್ಲರೂ ಸುಖವಾಗಿ ಬದುಕಲಿ"ಎಂದು ಮನದಾಳದಿಂದ ಹಾರೈಸಲು ಶಕ್ಯನಾದವನೇ 'ಮುಕ್ತ'.

ತಾನು ತಿಳಿದವ ಎಂಬ ಅಹಂಕಾರವೂ ಪ್ರಗತಿಗೆ ಮಾರಕ, ಹಾಗೆ ತನಗೇನೂ ತಿಳಿಯದು ಎಂದು ಹಿಂದುಳಿಯುವುದು ಕೆಟ್ಟದ್ದೇ. ತಿಳಿದಿದೆ ಎಂಬ ಅರಿವಿರಲಿ. ಅಹಂಕಾರ ಬೇಡ. ತಿಳಿಯದ್ದನ್ನು ತಿಳಿಯುವ ದಾಹವಿರಲಿ, ಕೀಳರಿಮೆ ಬೇಡ. ಇದು ಸಂತುಲಿತ ಬದುಕಿಗೆ ಬುನಾದಿ.


Friday, 28 October 2016

ಬೆಳಕಿನ ಹಬ್ಬ ಸಮಸ್ತರಿಗೆ ಮಂಗಳ ತರಲಿ

ಇದೊಂದು ಚಂದದ ಕಥೆ ಒಂದು ವಿಧದಲ್ಲಿ ದೃಷ್ಟಾಂತ ಕಥೆಯೂ ಹೌದು. ಬಹಳ ಹಿಂದೆ ಪ್ರಾಚೀನ ಕಾಲದಲ್ಲಿ ಬೆಂಕಿಯ ಬೆಳಕಿನ ಉಪಯೋಗ ತಿಳಿದವರು ಕೆಲವೇ ಕೆಲವು ಮಂದಿ ಇದ್ದರು. ಆದರೆ ಅವರಿಗೂ ಬೆಂಕಿ ಲಭ್ಯವಿರಲಿಲ್ಲ. ಏಕೆಂದರೆ, ದೂರದ ಪರ್ವತದ ಮೇಲೆ, ಕೋಟೆಮನೆ ಕಟ್ಟಿಕೊಂಡಿದ್ದ ರಾಕ್ಷಸನೊಬ್ಬ ಜಗತ್ತಿನ ಎಲ್ಲಾ  ಬೆಂಕಿ, ಬೆಳಕನ್ನೂ ಅಂಕೆಯಲ್ಲಿಟ್ಟುಕೊಂಡಿದ್ದ. ಅಥವಾ ಹಾಗೆಂದು ಪ್ರತೀತಿ ಇತ್ತು. ಕಂಡವರಿರಲಿಲ್ಲ ಎನ್ನುವ  ಮಾತು ಬೇರೆ. ಹಾಗೆಂದು ಪ್ರಯತ್ನಿಸಿದವರಿದ್ದವರಂತೆ. ಅದೂ ದಂತಕಥೆಯಾಗಿತ್ತೇ ಹೊರತು ಈ ತಲೆಮಾರಿನಲ್ಲಿರಲಿಲ್ಲ.



ಹೀಗಿದ್ದರಿಂದ ಜನ ಕತ್ತಲಾಗುವ ಮೊದಲೇ ಗೂಡು ಸೇರಿಕೊಳ್ಳುತ್ತಿದ್ದರು. ಹಸಿ ಹಸಿ ತಿನ್ನುತ್ತಿದ್ದರು. ಚಳಿಯಲ್ಲಿ ನಡುಗುತ್ತಾ ನರಳುತ್ತಿದ್ದರು. ಹೀಗಿದ್ದೂ ಯಾರೂ ಬೆಂಕಿ ತರುವ ಮನಸ್ಸು ಮಾಡಿರಲಿಲ್ಲ ಎಂಬುದೇ ಆಶ್ಚರ್ಯದ ಮಾತಾಗಿತ್ತು. ಹೀಗೆ ಬಹಳ ಕಾಲದ ಅನಂತರ ತುಂಬು ಕುಟುಂಬದ ಹುಡುಗನೊಬ್ಬನಿಗೆ ರಾಕ್ಷಸನ ಕಥೆ ತಿಳಿಯಿತು. ಮನಸ್ಸಿನಲ್ಲೊಂದು ಸಣ್ಣ ಬೀಜ ಬಿತ್ತು, ಬೆಂಕಿ ಎಂದರೇನು? ಅದರ ಬೆಳಕೆಂದರೇನು? ಹೇಗಿರಬಹುದು ಬೆಳಕಿನೊಂದಿಗಿನ ಬದುಕು! ಎಂದೆಲ್ಲಾ ಯೋಚಿಸಿದ. ಕಡೆಗೊಂದು ದಿನ ಬೆಳಕನ್ನು ಕಾಣದಿದ್ದರೆ ಬದುಕು ವ್ಯರ್ಥ ಎನ್ನುವಲ್ಲಿಗೆ ಬೆಳಕಿನ ಗೀಳು ಬಲವಾಯಿತು. ಹೆತ್ತವರಲ್ಲಿ ಹೇಳಿಕೊಂಡ. ಅವರು ಕಾಣದ ರಕ್ಕಸನ ಬಗ್ಗೆ ಕಥೆಗಳನ್ನು ಹೇಳುತ್ತಾ " ಬೇಡಪ್ಪಾ, ಅವನು ನಿನ್ನನ್ನು ತಿಂದು ಹಾಕುತ್ತಾನೆ, ಬೇಡ." ಎಂದು ತಿಳಿ ಹೇಳಿದರು..


Happy dipavali
Image have all standard licence belongs to Concerned person. Copying is purely offensive.

ಹುಡುಗನ ಚಿಂತನೆ ನಿರ್ಧಾರವಾಯಿತು. ಈ ಸಾವು ಎಂದರೇನು? ಎಂಬ ಹೊಸ ಪ್ರಶ್ನೆ ಹುಟ್ಟಿತು. ಸರಿ, ಒಂದು ದಿನ ಯಾರಿಗೂ ಹೇಳದೇ ಕೇಳದೆ ರಾಕ್ಷಸನನ್ನು ಹುಡುಕಿಕೊಂಡು ಹೊರಟ. ಎಷ್ಟೋ  ದಿನದ ಪಯಣದ ಅನಂತರ ದೂರದಲ್ಲಿ ಕೋಟೆಮನೆ ಕಂಡಿತು. ಕತ್ತಲಲ್ಲಿ ಅದರ ಕಿಟಕಿ, ಬಾಗಿಲುಗಳಿಂದ ಬೆಳಕು ಹೊರಹೊಮ್ಮುತ್ತಿರುವುದು ಕಾಣುತಿತ್ತು.

ಹುಡುಗ ಮೆಲ್ಲಮೆಲ್ಲನೆ ನಡೆದು, ಪೌಳಿಗೋಡೆ ಏರಿ, ಮನೆಯ ಕಿಟಕಿಯಿಂದ ಒಳಗೆ ಹಣಕಿದ. ಒಳಗ್ಯಾವ ರಕ್ಕಸನೂ ಕಾಣಲಿಲ್ಲ. ಬದಲಿಗೆ ಸುಂದರಾಂಗ ಯುವಕನೊಬ್ಬ ಏನನ್ನೋ ಓದುತ್ತಿದ್ದ. ಹುಡುಗ ಕಿಟಕಿ ಹಾರಿ  ಒಳಗೆ ಬಂದು ಈ ಸುಂದರಾಗನ ಮುಂದೆ ನಿಂತ. "ಬೆಳಕು ಹುಡುಕಿ ಬಂದೆಯೇನು? ಬಲು ದೂರದಿಂದ, ಬಲು ಶ್ರಮವಹಿಸಿ ಬಂದಿರುವಂತಿದೆ. ಸರಿ, ಮೊದಲು ಬೆಳಕಿನ ಬಗ್ಗೆ ತಿಳಿದುಕೊಳ್ಳಬೇಕು. ಇದಕ್ಕೆ ಅಧ್ಯಯನ, ಅಭ್ಯಾಸ ಬೇಕು. ಅನಂತರ ಅದನ್ನು ಸರಿಯಾದ ರೀತಿಯಲ್ಲಿ ಅಗತ್ಯಕ್ಕನುಗುಣವಾಗಿ ಉಪಯೋಗಿಸಬಹುದು. ಬೆಳಕಿನ ಮೂಲ ಬೆಂಕಿ. ಹೆಚ್ಚು ಕಡಿಮೆಯಾದರೆ ಜಗತ್ತನ್ನೇ ಸುಟ್ಟು ಹಾಕಬಲ್ಲದು. ಅಡುಗೆಗೂ ಉಪಯೋಗಿಸಬಹುದು, ಶವ ದಹನಕ್ಕೂ ಉಪಯೋಗಿಸಬಹುದು, ಅನಂತರ ನೀನು ಬೆಳಕನೊಯ್ಯಲು ಯೋಗ್ಯನೋ ಇಲ್ಲವೋ ಎಂದು ನಿರ್ಧರಿಸಬೇಕು" ಎಂದ ಸುಂದರಾಂಗ.


Happy DEEpavali
Image have all standard licence belongs to Concerned person. Copying is purely offensive.

ಹುಡುಗ ಒಪ್ಪಿದ. ಅವನು ಹುಟ್ಟಿದ್ದೇ ಬೆಳಕನ್ನು ಅರಿಯಲು. ಹಗಲೂ ರಾತ್ರಿ ತಪಿಸಿದ. ನಿದ್ದೆಯಲ್ಲೂ ಬೆಳಕನ್ನು ಜಪಿಸಿದ. ಬೆಳಕಿನ ಮೂಲ ಬೆಂಕಿ. ಅಂದರೆ ತಪಿಸುವುದು ಮಂಥನ. ನಿರಂತರ ಧ್ಯಾನದಿಂದ ಮಾತ್ರವೇ ಇದು ಸಾಕಾರವಾಗುತ್ತದೆ. ಹಾಗೆ ಆಯಿತು. ಹುಡುಗನಿಗೆ ಬೆಂಕಿಯನ್ನಿತ್ತ ಸುಂದರಾಂಗ. ಅದರ ಬೆಳಕಿನಲ್ಲೆ ಮನೆಗೆ ಮರಳಿದ. ಅವನು ತಂದ ಪುಟ್ಟ ಹಣತೆಯಿಂದ ಸಾವಿರಾರು ದೀಪಗಳನ್ನು ಹೊತ್ತಿಸಲಾಯಿತು.  ಜಗತ್ತೇ ಬೆಳಗಿತು ಎನ್ನುತ್ತದೆ ಕಥೆ.


"ಅದು, ಎಲ್ಲವನ್ನೂ ನಡೆಸುತ್ತದೆ, ಅದು ಸ್ವತಃ ಚಲಿಸದು. ಅದು ದೂರದಲ್ಲಿದೆ, ಅದೇ ಹತ್ತಿರದಲ್ಲೂ ಇದೆ. ಅದು ಎಲ್ಲದರ ಒಳಗಿದೆ, ಅದೇ ಎಲ್ಲದರ ಹೊರಗೆಯೂ ಇದೆ" ಬೆಳಕಿನ ಸ್ವರೂಪವನ್ನು ಯಜುರ್ವೇದ ವಿವರಿಸುವ ಪರಿ ಇದು. ಸರ್ವವ್ಯಾಪಿಯಾದ ಈ 'ಜೀವ', 'ಆತ್ಮ, 'ಚೈತನ್ಯ' ಎಂಬೆಲ್ಲ ಹೆಸರುಗಳಿಂದ ನಾವು ಕಾಣಲು ಕಾತರಿಸುವ ಬೆಳಕನ್ನು ಮೂರ್ತರೂಪದಲ್ಲಿ ಆರಾಧಿಸುವುದೇ 'ದೀಪಾರಾಧನೆ'


ಬೆಳಕು "ಅದಲ್ಲ, ಇದಲ್ಲ'' ಅವುಗಳೆಲ್ಲ ನಾವು ಮನುಷ್ಯರು, ನಮ್ಮ ಅನುಕೂಲಕ್ಕಾಗಿ, ಗುರುತಿಗಾಗಿ ಕಲ್ಪಿಸಿಕೊಂಡ ಶಬ್ದಗಳು ಮಾತ್ರ. ಶಬ್ಡಸ್ವರೂಪಿಗೆ ಯಾವುದೇ ಆಯಾಮಗಳಿಲ್ಲ ಎನ್ನುತ್ತದೆ ನಮ್ಮ ಪ್ರಾಚೀನರ ಜ್ಞಾನ. ಈ ಬೆಳಕು ಜಗತ್ತನ್ನೇ ಬೆಳಗಿಸಲಿ, ನಮ್ಮ ಓದುಗರ, ಓದುಗರಲ್ಲದವರ, ಇಂದು ಹಿಂದೆ ಮುಂದೆ ಬರಲಿರುವ ಸಮಸ್ತ ಜೀವಜಾಲಕ್ಕೆ ಮಂಗಳವನ್ನುಂಟು ಮಾಡಲಿ ಎಂದು ಹಾರೈಸೋಣ, ಒಂದಾಗಿ ಬೆಳೆಕಿನೆಡೆಗೆ ನಡೆಯೋಣ..

ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
ಬೆಳಕಿನ ಹಬ್ಬ ಸಮಸ್ತರಿಗೆ ಮಂಗಳ ತರಲಿ.




Tuesday, 25 October 2016

ಸತ್ಯ ದರ್ಶನ



ಬಿಂಬಸಾರ ರಾಜ ಮಗಧ ರಾಜ್ಯವನ್ನು ಆಳುತ್ತಿದ್ದ ಕಾಲವದು. ಆಗೊಮ್ಮೆ ಮಹಾವೀರ ಜೈನಮತ ಪ್ರತಿಪಾದಕ, ಆ ದಾರಿಯಾಗಿ ಪಯಣಿಸುತ್ತಿದ್ದ. ವಿಶ್ರಾಂತಿಗೆಂದು ಊರ ಹೊರಗಿನ ಮರಗಳ ತೋಪಿನಲ್ಲಿ ಬಿಡು ಬಿಟ್ಟಿದ್ದ. ಪ್ರತಿದಿನ ಬೆಳಿಗ್ಗೆ ಸಂಜೆ ಜನಸಾಗರ ಆ ತೋಪಿನೆಡೆಗೆ ಹೋಗುವುದನ್ನು ರಾಜ ಬಿಂಬಸಾರ ಗಮನಿಸಿದ. ಪ್ರತಿ ದಿನ ಹೀಗೆ ಮಂದಿ ಹೋಗುವುದೆಲ್ಲಿಗೆ ಎಂದು ವಿಚಾರಿಸಲಾಗಿ ಅವರು ಮಹಾಮುನಿಯ ದರ್ಶನಕ್ಕಾಗಿ ಹೋಗುತ್ತಾರೆ ಎಂದು ತಿಳಿದು ಬಂತು.




Image have all standard licence belongs to Concerned person. Copying is purely offensive.


ಬಿಂಬಸಾರನಿಗೆ ಆಶ್ಚರ್ಯವಾಯಿತು. ತಾನು ಈ ದೇಶದ ರಾಜ. ತಾನು ಹೇಳಿಕಳಿಸಿದರೆ, ಕೆಲವೊಮ್ಮೆ ಒತ್ತಾಯದಿಂದ ಈ ಅರಮನೆಯ ಆವರಣಕ್ಕೆ ಬರುತ್ತಾರೆ. ಇಲ್ಲದಿದ್ದರೆ ಯಾರೂ ಈ ಅಂಗಳದಲ್ಲಿ ಕಾಲಿಡುವುದಿಲ್ಲ. ಅಂಗಳ ಹೋಗಲಿ, ಅರಮನೆಯ ಮುಂದಿರುವ ರಸ್ತೆಯಲ್ಲಿ ನಡೆಯುವುದೂ ಇಲ್ಲ. ಅಂಥವರು ಈಗ ಹೀಗೆ ದಂಡು ಕಟ್ಟಿಕೊಂಡು ಯಾರನ್ನೋ ಕಾಣಲು ಹೋಗುವುದೆಂದರೇನು? ಏನಿದೆ ಅವನಲ್ಲಿ ಅಂಥ ವಿಶೇಷ? ಎಂದುಕೊಂಡು ಮಹಾವೀರ ಮುನಿಗಳ ಬಗ್ಗೆ ವಿಚಾರಿಸಲು ಶುರು ಮಾಡಿದ.ಕಡೆಗೆ ತಿಳಿದು ಬಂದದ್ದೇನೆಂದರೆ, ಮುನಿಗಳಿಗೆ ಸತ್ಯದರ್ಶನವಾಗಿದೆಯಂತೆ. ಆದುದರಿಂದ ಅವರು ಮಹ್ಹಾತ್ಮಾರಂತೆ. ಅವರ ದರುಶನದಿಂದ ಮಂಗಳವಾಗುವುದಂತೆ. ಆದುದರಿಂದ ಮಂದಿ ಹೀಗೆಲ್ಲ ಮುಗಿಬೀಳುತ್ತಾರಂತೆ. ಹೇಗಾದರೂ ಮಾಡಿ ಈ ಸತ್ಯವನ್ನು ತನ್ನದಗಿರಿಸಿಕೊಳ್ಳಬೇಕೆಂಬ ಯೋಚನೆ ಬಿಂಬಸಾರನ ತಲೆಗೆ ಹೊಕ್ಕಿತು. ಸುಲಭವಾದ ಉಪಾಯವೆಂದರೆ, ಇದ್ದವರಿಂದ ಅದನ್ನು ಕೊಂಡುಕೊಳ್ಳುವುದು.ಸರಿ, ತಟ್ಟೆ ತುಂಬಾ ಹೊನ್ನು ತುಂಬಿ ಮಂತ್ರಿಗಳಿಗೆ ಸತ್ಯ ತರುವಂತೆ ಹೇಳಿದ. ಹೋದ ಮಂತ್ರಿಗಳು ಬರಿಗೈಲಿ ಮರಳಿ ಬಂದರು. ಮುನಿಗಳು ಇವರತ್ತ ನೋಡಿ ನಸುನಕ್ಕರು ಮಾತ್ರವಂತೆ. ಸರಿ, ಸ್ವತಃ ಚಕ್ರವರ್ತಿಯೇ ಹೊರಟ ಸತ್ಯ ತರಲು. ಹಿಂದಿನಿಂದ ಗಡಿ ತುಂಬಿದ ಧನವೂ ಹೊರಟಿತು. ಎಲ್ಲವನ್ನೂ ಮುನಿಯ ಪದತಲದಲ್ಲಿಟ್ಟು ಬಿಂಬಸಾರ ತನ್ನ ಬೇಡಿಕೆ ಮುಂದಿಟ್ಟ. ಮುನಿಗಳು ಇವನನ್ನು ದಿಟ್ಟಿಸಿ ನೋಡಿ ನಸುನಕ್ಕರು ಅಷ್ಟೇ. ಸರಿ, ಬಿಂಬಸಾರನಿಗೆ ತನ್ನ ಉಡುಗೊರೆ ಕಡಿಮೆಯಾಗಿರಬೇಕು, ಆದಕ್ಕೆ ಇವರು ಒಪ್ಪುತ್ತಿಲ್ಲ ಎಂದುಕೊಂಡ. ಬಂದಿದ್ದ ಗಾಡಿ ಎರಡಾಯಿತು, ನಾಲ್ಕಾಯಿತು, ಹತ್ತಾಯಿತು.ಕಿಂಚಿತ್ ಬದಲಾವಣೆಯೂ ಮಹಾವೀರರ ಕಡೆಯಿಂದ ಬರಲಿಲ್ಲ. ಕಡೆಗೆ ಬಿಂಬಸಾರ ತಲೆಯ ಮೇಲಿನ ಕಿರೀಟ, ಪಟ್ಟದ ಕತ್ತಿ, ಮುದ್ರೆಯುಂಗುರಗಳನ್ನು ಅವರ ಮುಂದಿಟ್ಟು ಈಗಲಾದರೂ ಸತ್ಯ ದಯಪಾಲಿಸಿ ಎಂದ.
ಆಗ ಮುನಿಗಳು ಬಾಯಿಬಿಟ್ಟರು, "ರಾಜನ್, ಈ ಸತ್ಯವನ್ನು ಹುಡುಕುತ್ತಾ ನಾನು ಬದುಕಿನ ನಲವತ್ತು ವರ್ಷಗಳನ್ನು ಕಳೆದಿದ್ದೇನೆ. ನಾನೊಬ್ಬ ರಾಜಕುಮಾರನಾಗಿದ್ದೆ ಎಂಬುದು ನಿನಗೆ ತಿಳಿದಿರಬೇಕು. ಈ ಸತ್ಯಕ್ಕಾಗಿ ನಾನು ರಾಜ್ಯವನ್ನೂ ತ್ಯಜಿಸಿದೆದುದರಿಂದ ಆದುದರಿಂದ ಅದನ್ನು ಮಾರಲಾರೆ. ಮತ್ತೆ ದಾನ ಮಾಡಲಾರೆ. ಒಂದು ವಿಚಾರವಿದೆ. ನಿನ್ನ ರಾಜ್ಯದಲ್ಲಿ ಇಂಥ ಒಬ್ಬ ಮನುಷ್ಯನಿದ್ದಾನೆ. ಆವನಿಗೂ ಸತ್ಯದರ್ಶನವಾಗಿದೆ. ಬಹುಶಃ ನಿನಗೆ ಅವನಿಂದ ಉಪಯೋಗವಾಗಬಹುದು, ಹೋಗಿ ನೋಡು" ಎಂದರು.




Image have all standard licence belongs to Concerned person. Copying is purely offensive.



ಬಿಂಬಸಾರ 'ಆ' ಮನುಷ್ಯನನ್ನರಸಿ ಹೋದ. ಅವನೊಬ್ಬ ಹಾದಿ, ಬೀದಿಗಳ ಕಸ ಗುಡಿಸುವ ಬಡಮಾಲಿ. ಅರಮನೆಯ ಶುಭ್ರಮನೆಯಲ್ಲಿದ್ದ ಹೊನ್ನ ರಥ ಕೊಳಗೇರಿಯ ಮನೆಯ ಮುಂದೆ ನಿಂತೊಡನೆ ಗಡಬಡಿಸಿ 'ಆ' ಮನುಷ್ಯ ಎದ್ದು ಹೊರಗೆ ಬಂದ. ಮಹಾರಾಜರ ಮುಂದಿಟ್ಟ ಬೇಡಿಕೆ ಕೇಳಿದ, ಮತ್ತೆ ಹೇಳಿದ : "ಮಹಾಪ್ರಭೋ, ನಾನೋರ್ವ ಬಡ ಕೂಲಿ. ಸತ್ಯವಿದೆ ನನ್ನಲ್ಲಿಯವುದೇ ಪ್ರತಿಫಲ ಬೇಡ ನನಗೆ. ನಾನು ನನ್ನ ಸತ್ಯವನ್ನು ನಿಮಗೆ ನೀಡಬಲ್ಲೆ. ಆದರೆ, ನೀವದನ್ನು ತೆಗೆದುಕೊಳ್ಳಬಲ್ಲಿರಾ?. ಸ್ವೀಕರಿಸಲು ಪಕ್ವವಾಗಿದೆಯೇ ನಿಮ್ಮ ಬುದ್ಧಿ, ಮನಸ್ಸು, ದೇಹ? ನಾನು ಅದರ ಬಗ್ಗೆ ಮಾತನಾಡಿದರೆ, ನಿಮಗೆ ಕೇಳಿಸುವುದು ಕೇವಲ ಭಾಷೆಯ, ಪದಗಳ ಚಮತ್ಕಾರ ಮಾತ್ರ. ಸತ್ಯಗಳನ್ನು ಪದಗಳೊಳಗೆ ಸೇರಿಸಲಾಗದು. ಮತ್ತು ನಾನು ಕಂಡ, ಕಾಣುವ ಸತ್ಯ ನಿಮ್ಮ ಸತ್ಯವಾಗದು. ಸತ್ಯದರ್ಶನ ಒಂದು ವೈಯಕ್ತಿಕ ಆತ್ಮಾನುಭವ. ಪದಗಳೊಳಗೆ ಹೆಣೆಯುವ ಕಸರತ್ತಲ್ಲ" ಎಂದ ನಮ್ರತೆಯಿಂದ.ಇಂದು ಪದಗಳ ಕಸರತ್ತು ನಡೆಯುತ್ತಿದೆ. ಸಾಹಿತ್ಯಾತ್ಮಕ ಅಲಂಕಾರದೊಂದಿಗೆ ಮಠಾಧಿಪತಗಳ, ಆಧ್ಯಾತ್ಮಿಕ ನೇತಾರರೆಂದು ಬೀಗುವವರ, ಅದಕ್ಕೆಂದೇ ಅಸಂಖ್ಯ ಪುಸ್ತಕ, ಪತ್ರಿಕೆಗಳಿಂದ ಪುಂಖಾನುಪುಂಖವಾಗಿ ಹೊರಬರುತ್ತಿದೆ. ಜನರು ಇದೇ "ಸತ್ಯ" ಎಂದು ನಂಬುತ್ತಾರೆ. ಕೆಲವರು ನಂಬುವ ನಟನೆ ಮಾಡುತ್ತಾರೆ. ಏಕೆಂದರೆ, ಯಾವುದಾದರೂ ಒಂದು ಮತ, ಜಾತಿ, ಪಂಥ ಯಾ ಗುರುವಿನೊಂದಿಗೆ ತಮ್ಮನು ಬಹಿರಂಗವಾಗಿ ಗುರುತಿಸಿಕೊಳ್ಳುವುದು ಒಂದು ಪ್ರತಿಷ್ಠೆಯ ಸಂಗತಿ ಅದಕ್ಕೆ ಅಲ್ಲವೇ??

Monday, 24 October 2016

ನಾವ್ಯಾರು? ಭಾಗ-೨

ನಾನು, ನನ್ನ ಸಂಸಾರ, ನನ್ನ ಕೆಲಸ, ಸ್ಥಾನಮಾನ, ಸಿರಿ ಸಂಪತ್ತು, ನನ್ನ ಸಾಧನೆ ಇತ್ಯಾದಿ ನಾನಾ ರೂಪದ 'ನಾನು' ತನ್ನ ಕಾದಂಭ ಬಾಹುಗಳಿಂದ ನಮ್ಮನ್ನು ಕಬಳಿಸಿ ಹಾಕುತ್ತದೆ. ಗೊಂದಲದಲ್ಲಿ ನಿಜವಾದ 'ನಾನ್ಯಾರು' ಎಂಬ ಪ್ರಶ್ನೆ ಗಮನಕ್ಕೆ ಬರುವುದೇ ಇಲ್ಲ. ಈ ಬಗ್ಗೆ ತಿಳಿವಳಿಕೆ ಮುರುಟಿ ಹೋಗುತ್ತದೆ. ಹೇಗಿದೆ ಈ 'ನಾನೆಂಬ' ಅಹಂಕಾರ !!?

ಒಂದು ದೃಷ್ಟಾಂತ ಕಥೆ ಹೀಗಿದೆ :
aham brahasmi
Image have all standard licence belongs to Concerned person. Copying is purely offensive.
ಮರಕುಟಿಗ ಒಂದು ಮರದ ಕೊಂಬೆಯ ಮೇಲೆ ಕುಳಿತು ತನ್ನ ಕೊಕ್ಕಿನಿಂದ ಮರ ಕೊರೆಯುತ್ತಿತ್ತು. ಆ ಕ್ಷಣಕ್ಕೆ ಸಿಡಿಲು ಬಡಿದು ಕೊಂಬೆ ತುಂಡಾಗಿ ನೆಲಕ್ಕೆ ಬಿತ್ತು. ಮರಕುಟಿಗನ ಅಹಂಕಾರ ಪುಟಿದೆದ್ದಿತು. "ನಾನೆಂಥ ಬಲಶಾಲಿ ಎಂದು ಜಗತ್ತಿಗೇ ಗೊತ್ತಾಯಿತು. ಒಂದು ಕೊಕ್ಕಿನ ಹೊಡೆತಕ್ಕೆ ಕೊಂಬೆಯೇ ಮುರಿದು ಬಿತ್ತು ನೋಡು" ಎಂದು ಹಾಡಿಕೊಂಡು ಕಾಡು ತಿರುಗಿತು.

ಈ ಅಹಂಕಾರವೇ ಆಂತರ್ಯದ ಒಳಗಿಳಿಯುವಲ್ಲಿನ ಅಡ್ಡಿ. 

ಬದುಕಿನಲ್ಲಿ ಬರುವ ಸುಖ-ದುಃಖ, ಸ್ಥಾನಮಾನ, ಸಿರಿತನ, ಬಡತನ ಎಲ್ಲವೂ ಕಳೆದ ಜನುಮಗಳ ಕರ್ಮಶೇಷದಿಂದ ಪ್ರಾಪ್ತವಾಗುವಂತವು. ಅದನ್ನು ನಮ್ಮದೇ ಸಾಧನೆ ಎಂದುಕೊಳ್ಳುವುದು ಮಾಯೆ. ಈ ಮಾಯೆಯನ್ನು ಗುರುತಿಸಿ, ಅದರ ಆವರಣದಿಂದ ಹೊರಬರುವುದೇ ಬದುಕಿನ ಗುರಿ. ನಾವು ನಾವಲ್ಲ.
Image have all standard licence belongs to Concerned person. Copying is purely offensive.


ಹೀಗೆ ಬಳುವಳಿಯಾಗಿ ಬಂದ ವಂಶಾನುಗತ  ಸ್ವಭಾವಗಳು, ದೇಹಪ್ರಕೃತಿ, ಪರಿಸರ ಇದೆಲ್ಲದರೊಂದಿಗೆ ನಾವೇ ರೂಪಿಸಿ ಜೊತೆಗೆ ತಂದ 'ವಿಧಿ' ಎಂಬ ಜನುಮಾಂತರದ ಕರ್ಮಗಳು.

ಸಂತ ಮೊದಲು ಶ್ರೀಗಂಧ, ಬೆಳ್ಳಿ, ಚಿನ್ನ, ವಜ್ರ ವೈಢೂರ್ಯಗಳ ನಿಧಿ ತೋರಿಸುತ್ತಾನೆ. ಎಲ್ಲಿ ಮನಸ್ಸು ಚಿಂತನೆಗೆ ಹತ್ತಿತೋ ಕರ್ಮಪಾಕದ ಬಾವಿಯೊಳಗಿಳಿದು, ಜಯಿಸಿ ಹೊರಬರುವ ಹಾದಿ ತೋರಿಸುವ ಆಶ್ವಾಸನೆ ನೀಡುತ್ತಾನೆ.
ಮರಕುಟಿಗ ನವಿಲಾಗುತ್ತದೆ. ಬದುಕು ಭವಮುಕ್ತವಾಗುತ್ತದೆ.

Wednesday, 19 October 2016

ನಾವ್ಯಾರು? ಭಾಗ-೧

ಒಬ್ಬ ಕಾಡಿನಲ್ಲಿದ್ದ ಒಣಗಿದ ಮರ ಕಡಿದು, ಸಿಗಿದು ಹೊರೆ ಕಟ್ಟಿ ಪೇಟೆಗೆ ಹೊತ್ತಿಕೊಂಡು ಹೋಗಿ ಮಾರಿ, ಬಂದ ಒಂದಿಷ್ಟು ಕಾಸುಗಳಿಂದ ಕುಟುಂಬದ ಹೊಟ್ಟೆ ಹೊರೆಯುವವನಿದ್ದ.

ಒಂದು ದಿನ ಸರ್ವಸಂಗ ಪರಿತ್ಯಾಗಿಯೊಬ್ಬ ಎದುರಾದ ಇವನಿಗೆ. ತನ್ನ ಕಷ್ಟಗಳನ್ನು ಅವನೊಂದಿಗೆ ಹೇಳಿಕೊಂಡು ಪರಿಹಾರ ಬೇಡಿದ.
ಸಂತನೆಂದ, "ಪರಿಹಾರ ಇದೆ. ಆದರೆ, ನೀನು ತೊಂದರೆಗಳನ್ನು ಎದುರಿಸಲು ತಯಾರಿರಬೇಕು. ನೀನೀಗ ಕಾಡಿನ ಅಂಚಿನಿಂದ ಕಟ್ಟಿಗೆ ಸಂಗ್ರಹಿಸುತ್ತಿರುವೆ. ಒಂದಿಷ್ಟು ಸ್ವಲ್ಪ ಕಾಡಿನ ಒಳಗಡೆ ಹೋಗಿ ನೋಡು. ಉಪಾಯೋಗವಾಗಬಹುದು". ಸರಿ ಎಂದು ಇವನು ಕಾಡಿನ ಒಳಹೊಕ್ಕ.


Who are we?
Image Source : Google Images


ಹೆದರಿಕೆ ಹಿಂದೆಳೆಯುತ್ತಿದ್ದರೂ ಒಂದಿಷ್ಟು ಧೈರ್ಯದಿಂದ ಕಾಡಿನ ಒಳಗಡೆ ನಡೆದ. ಕಾಡಿನ ಒಳಗಡೆ ಥಂಡಿಯಾಗಿ ಶ್ರೀಗಂಧದ ಮರಗಳು.!! ಒಂದು ವರ್ಷ ಕೂತು ತಿನ್ನುವಷ್ಟು ಕಾಸು ಸಿಕ್ಕಿತು...

ಮಾರನೆಯ ದಿನ ಸಂತನನ್ನು ಕಂಡು ಕೃತಜ್ಞತೆ ತಿಳಿಸಿದ.  ಸಂತ ನಸುನಗುತ್ತಾ ಹೇಳಿದ "ಇದು ಒಂದು ಹೆಜ್ಜೆಯಾಯಿತು. ಇನ್ನೆರಡು ಹೆಜ್ಜೆ ಮುಂದಿಡು. ಏನಾಗುವುದೋ ನೋಡೋಣ" ಎಂದ.

ಕೆಲವು ದಿನಗಳ ಅನಂತರ ಇವ ಇನ್ನೂ ಮುಂದೆ ಹೋದ. ಅಲ್ಲಿ ಭರ್ಜರಿ ಬೆಳ್ಳಿಯ ನಿಕ್ಷೇಪವಿತ್ತು. ಸಂತ ಮತ್ತೂ ಮುಂದೆ ಹೋಗುವಂತೆ ಆಗ್ರಹಿಸಿದ. ಅಲ್ಲಿ ಚಿನ್ನ, ವಜ್ರದ ಅಪಾರ ನಿಧಿ ಸಿಕ್ಕಿತು. ಕಟ್ಟಿಗೆ ಮಾರುವ ಬಡವ ಸಿರಿವಂತನಾದ. ತಾನೊಂದು ಕಾಲದಲ್ಲಿ ಪಡುತ್ತಿದ್ದ ಕಷ್ಟಗಳನ್ನು ಮರೆತುಬಿಟ್ಟ. ಆದರೂ ನನ್ನನ್ನು ಈ ಸ್ಥಿತಿಗೆ ತಂದ ಸಂತ ಅವನ ನೆನಪಿನಲ್ಲಿ ಸ್ಥಿರವಾಗಿದ್ದ.

ಒಮ್ಮೆ ಅವನನ್ನು ಕಂಡು ತನ್ನೊಂದು ಸಂದೇಹ ಪರಿಹರಿಸಿಕೊಳ್ಳಬೇಕೆನಿಸಿತು. ಹೋಗಿ, ಅವನ ಮುಂದೆ ಕುಳಿತು ತನ್ನ ಅನುಮಾನ ಮುಂದಿಟ್ಟ. ಅದು ಹೀಗಿತ್ತು : "ನಿಮಗೆ ಕಾಡಿನ ಮಧ್ಯದಲ್ಲಿದ್ದ ಅಪಾರ ನಿಧಿಯ ಅರಿವಿತ್ತು. ಅದನ್ನು ನೀವೇ ಉಪಯೋಗಿಸಿಕೊಂಡು, ಸಿರಿವಂತರಾಗಿ . ಸುಖವಾಗಿರದೇ, ಈ ಕಾಡಂಚಿನಲ್ಲಿ ಮುರುಕು ಗುಡಿಸಲಿನಲ್ಲಿ, ಕಾಲಕಾಲಕ್ಕೆ ಅನ್ನಾಹಾರಗಳಿಲ್ಲದೆ ಬಳಲುವುದೇಕೆ?"


Who are we?
Image Source : Google Images
ಸಂತ ಉತ್ತರಿಸಿದ " ಇವೆಲ್ಲಕ್ಕೂ ಮಿಗಿಲಾದ ಸಂಪತ್ತೊಂದು ನನ್ನೊಳಗೆ ವ್ಯಾಪಕವಾಗಿದೆ. ಅದರ ಮುಂದೆ ಈ ಸಂಪತ್ತು ತೀರಾ ನಗಣ್ಯ. ಮತ್ತೆ ಇದರ ಅಗತ್ಯವೂ ನನಗಿಲ್ಲ. ನಿಜವಾದ ಸಂಪತ್ತನ್ನು ಹೊಂದುವಾಸೆ ಇದ್ದರೆ, ಎಲ್ಲವನ್ನೂ ಬಿಟ್ಟು ಬಾ. ಈ ಮರದ ಕೆಳಗೆ ನನ್ನೊಂದಿಗಿರು. ಅದನ್ನು ಹೊಂದುವ ಬಗ್ಗೆ ಕಲಿಸುತ್ತೇನೆ." ಎಂದ.



ನಾನು, ನನ್ನ ಸಂಸಾರ, ನನ್ನ ಕೆಲಸ, ಸ್ಥಾನಮಾನ, ಸಿರಿ ಸಂಪತ್ತು, ನನ್ನ ಸಾಧನೆ ಇತ್ಯಾದಿ ನಾನಾ ರೂಪದ 'ನಾನು' ತನ್ನ ಕದಂಭ ಬಾಹುಗಳಿಂದ ನಮ್ಮನ್ನು ಕಬಳಿಸಿ ಹಾಕುತ್ತದೆ. ಗೊಂದಲದಲ್ಲಿ ನಿಜವಾದ 'ನಾನ್ಯಾರು' ಎಂಬ ಪ್ರಶ್ನೆ ಗಮನಕ್ಕೆ ಬರುವುದೇ ಇಲ್ಲ. ಇದೆ 'ನಾನೆಂಬ' ಅಹಂಕಾರ!!?



ಭೌತಿಕ ವಿಷಯಸುಖವೇ ಸುಖವೆಂಬ ಚಿಂತನೆಗೆ ನಾವು ಹೊಂದುಕೊಂಡಿದ್ದೇವೆ. ಅದೇ ಬದುಕಾಗಿ ಹೋಗಿದೆ. ಒಂದು ಸಣ್ಣ ಕಿಡಿಯಿಂದ ಮೊದಲಾಗುವ ಈ ಭಾವ,ಒಂದರಿಂದ ಎರಡಾಗಿ, ನಾಲ್ಕಾಗಿ ಮತ್ತೆ ಸಹಸ್ರ ಬಹುವಾಗಿ ನಮ್ಮನ್ನು ತನ್ನಲ್ಲಿ ಸೆಳೆದು ಜೀರ್ಣಿಸಿಕೊಳ್ಳುತ್ತದೆ. ನಮ್ಮ ಅಹಂಕಾರಕ್ಕೆ ಈ ಭೌತಿಕ ವಿಜಯ ನೀರೆರೆದು ಬೃಹತೃಕ್ಷವಾಗಿ  ಬೆಳೆಸುತ್ತದೆ. 




                                                                                                                           --ಮುಂದುವರೆಯುವುದು......

CLICK HERE