Tuesday 1 November 2016

ಮುಕ್ತ

'ಆಧ್ಯಾತ್ಮ ಸಾಧಕ ತಾನು' ಎಂದು ನಂಬಿದವನೊಬ್ಬ ಇದ್ದ. ನಿಜವಾದ ಸಾಧು ಸಂತರು ಆ ಊರಿಗೆ ಬಂದಾಗ ಜನ ಓಲೈಸುವುದನ್ನು ಕಂಡಾಗ ಅವನಿಗೆ ಅಸೂಯೆ ಎನಿಸುತಿತ್ತು. ಇಂಥ ಸಾಧಕ ತಾನು, ತನ್ನನ್ನು ಗುರುತಿಸಿ ಗೌರವಿಸದೇ ಈ ಹುಂಬ ಮಂದಿ ಯಾರ್ಯಾರನ್ನೋ ದೇವರೆಂದು, ಗುರುವೆಂದು ತಿಳಿದು ಬೆಸ್ತು ಬೀಳುತ್ತಿದ್ದಾರೆ ಎಂದು ಒಳಗೊಳಗೇ ಅಲವೊತ್ತುಕೊಳ್ಳುತ್ತಿದ್ದ.

MUKTA
image have all standard licence belongs to Concerned person. Copying is purely offensive.
ಒಂದು ಸಲ ಹೀಗಾಯಿತು. ನಿಜಕ್ಕೂ ಆಧ್ಯಾತ್ಮದ ಮೇಲಿನ ಮಜಲುಗಳನ್ನು ಮುಟ್ಟಿದ ಸಂತರೊಬ್ಬರು ಆ ಊರಿಗೆ ಬಂದರು. ಜನ ಸಾಲುಗಟ್ಟಿ ಬಂದು ಅವರಿಗೆ ಅಡ್ಡಬಿದ್ದರು. ಹಣ್ಣು-ಹೂಗಳು ರಾಶಿ ಬಿದ್ದವು. ತಟ್ಟೆ ಕಾಣಿಕೆ ಹಣದಿಂದ ತುಂಬಿತು. ಇವನೂ ಬಂದು ಸಂತರ ಮುಂದೆ ನಿಂತ. ಆದರೆ ಕೈ ಮುಗಿಯಲಿಲ್ಲ. "ಸ್ವಾಮೀ, ನಾನೂನಿಮ್ಮಂತೆಯೇ ಸಾಧಕ. ಆದರೂ ಸಾಧನೆ ಫಲ ನೀಡುತ್ತಿಲ್ಲ. ನಿಮ್ಮಂಥ ಜನಪ್ರಿಯತೆ ನನ್ನದಾಗುತ್ತಿಲ್ಲ. ಏನು ಮಾಡಲಿ?" ಎಂದ.

ಸಂತರು ಗಮನವಿಟ್ಟು ನೋಡಿದರು. ಅಹಂಕಾರವೊಂದನ್ನು ಬಿಟ್ಟರೆ ಸರ್ವ ವಿಧದಲ್ಲೂ ಸಾಧಕನ ಲಕ್ಷಣಗಳಿವೆ ಎಂದು ಅರ್ಥ ಮಾಡಿಕೊಂಡರು. ಕಿರು ನಗುತ್ತಾ  "ಮಗು, ಸುಲಭದ ಹಾದಿ ಇದೆ. ಸಮುದ್ರ ತೀರದ ಮರಳಿನ ಮೇಲೆ ಕುಳಿತು ತಪಸ್ಸು ಮಾಡಿದರಾಯಿತು. ಒಂದು ಕಮಂಡಲ ತೆಗೆದುಕೊಂಡು ಸಮುದ್ರ ತೀರಕ್ಕೆ ಹೋಗು. ಕಮಂಡಲದ ತುಂಬಾ ನೀರನ್ನು ಸಮುದ್ರದಿಂದ ತುಂಬಿ ತಾ. ಸಾಧ್ಯವಿರುವಷ್ಟು ಹೊತ್ತು ಸಮುದ್ರ ಮತ್ತು ಕಮಂಡಲದಲ್ಲಿರುವ

 ನೀರನ್ನು ಕುರಿತು ತಪಿಸು. ಅನಂತರ ಕಮಂಡಲದ ನೀರನ್ನು ನಿಧಾನವಾಗಿ ಸಾಗರಕ್ಕೆ ಸುರಿ. ಒಂದೆರಡು ತಿಂಗಳು ಬೇಕಾಗಬಹುದು. ಅನಂತರ ನಿನಗೇನನಿಸುತ್ತದೋ ಬಂದು ತಿಳಿಸು" ಎಂದರು.

(This Article is having all standard licence. Copying is punishable offence.)
ಇವನಿಗೆ ಸಂತೋಷವಾಯಿತು. ಕಡೆಗೂ ತಾನು ಜನಪ್ರಿಯನಾಗಬಹುದೆಂದು ಉಬ್ಬಿದ. ಮಾರನೆಯ ದಿನದಿಂದ ದಿನಚರಿ ಗುರುಗಳ ಆದೇಶದಂತೆ ನಡೆಯತೊಡಗಿತು. ಒಂದು ವಾರ ಕಳೆಯಿತು. ಬಹಳ ಬದಲಾವಣೆ ಏನೂ ಕಂಡುಬರಲಿಲ್ಲ. ಒಂದು ದಿನ ಸಮುದ್ರದಿಂದ ನೀರನ್ನು ತುಂಬಿಸಿಕೊಳ್ಳುತ್ತಿರುವಾಗ, ಈ ಕಮಂಡಲದಲ್ಲಿಯೇ ಯಾಕೆ ನೀರನ್ನು ತುಂಬಿಸಿಕೊಳ್ಳಬೇಕು ? ಈ ನೀರೂ ಸಮುದ್ರದ ಒಂದು ಭಾಗವೇ ಆಗಿದೆಯಲ್ಲಾ? ಹಾಗಿರುವಾಗ ಇಡೀ ಸಮುದ್ರವನ್ನೇ ಕುರಿತು ಚಿಂತಿಸುವಂತೆ ಗುರು ಹೇಳಿಲ್ಲವೇಕೆ? ಎಂಬೆಲ್ಲ ಪ್ರಶ್ನೆಗಳು ಎದುರಾದವು.

MUKTA
image have all standard licence belongs to Concerned person. Copying is purely offensive.
ಎಷ್ಟು ಹೊತ್ತು ಕಳೆಯಿತೋ! ಅದರ ಪರಿವೆಯೇ ಇರಲಿಲ್ಲ ಅವನಿಗೆ. ಕತ್ತಲಾಯಿತು ಯಾರೋ ಬೆನ್ನು ತಟ್ಟಿ ಎಬ್ಬಿಸಿದರು. ಮನೆಗೆ ಹೋದರು ಪ್ರಶ್ನೆಗಳು ಬೆನ್ನು ಬಿಡಲಿಲ್ಲ. ನಿದ್ದೆ ದೂರವಾಯಿತಂದು. ಮಾರನೆಯ ದಿನ ಮತ್ತದರ ಮುಂದಿನ ದಿನಗಳು ಹೀಗೇ ಕಳೆದವು. ಒಂದು ದಿನ ಸತ್ಯ ಹೊಳೆಯಿತು. ಅನಂತಸಾಗರ, ವಿಶ್ವವನ್ನು ಆವರಿಸಿರುವ ಅನಂತಾನಂತ ವಿಶ್ವ ಚೈತನ್ಯ, ಈ ಕಮಂಡಲ ತಾನು. ಅದು ಸಾಗರದ ಒಂದು ಭಾಗ. 'ಅದು ಪರಮಾತ್ಮ ಇದು ಆತ್ಮ' ಎಂದು ಜನ ಹೇಳುವುದೂ ಇದನ್ನೇ ಒಂದು ಅರ್ಥದಲಿ ನಾನೇ ಅದು, ಅದೇ ನಾನು'ಎಂದಿತು ಒಳ ಮನಸ್ಸು.


ಇಷ್ಟರಲ್ಲಿ ಜನ ಇವನನ್ನು ಗುರುತಿಸಿದ್ದರು. ಗಂಟೆಗಟ್ಟಲೆ ಒಂದು ಕಮಂಡಲದ ತುಂಬಾ ನೀರನ್ನು ಎದುರಿಗಿಟ್ಟಿಕೊಂಡು ಮೈಮರೆತು ಕುಳಿತುಕೊಳ್ಳುವ ಇವನು ಯಾರೋ ದೊಡ್ಡ ಸಾಧಕನೋ ಸಂತನೋ ಇರಬೇಕು ಎಂದುಕೊಂಡಿದ್ದರು. ಹಾರ, ಹಣ್ಣುಗಳು, ನೈವೇದ್ಯಕ್ಕೆ ಹಾಲು ಬರತೊಡಗಿತು. ಜನ ಬಂದು ಬಂದು ಅಡ್ಡ ಬಿದ್ದರು. ನಮ್ಮ ತೊಂದರೆಗಳನ್ನು ಪರಿಹರಿಸುವಂತೆ ಬೇಡತೊಡಗಿದರು. ಕೆಲವರ ಸಮಸ್ಯೆಗಳು ಜಾದೂ ಮಾಡಿದಂತೆ ಕರಗಿ ಹೋಗಿವೆ ಎಂಬ ವದಂತಿ ಹರದ್ದಿತು. ಇವನು ಮಹಾನ್ ಸಂತನಾದ.

(This Article is having all standard licence. Copying is punishable offence.)

ಆದರೆ ಇವನಿಗೆ ಇದಾವುದೂ ಬೇಕಿರಲಿಲ್ಲ.  ಅವನಿಗೆ ಅರಿವಿಲ್ಲದಂತೆ ಅವನ ಅಹಂಕಾರ, ಕೀರ್ತಿ,ಕಾಮನೆ ಅಳಿದುಹೋಗಿದ್ದವು. ಸೂರ್ಯನ ಕಿರಣ ಸ್ಪರ್ಶದಿಂದ ಕಳವಳ ಕರಗಿ ಹೋಗಿತ್ತು. ಒಂದು ದಿನ ಇವನು ಅಲ್ಲಿಂದ ದೂರಕ್ಕೆ ಹೊರತುಹೋದ.


ಇದು ಮನುಷ್ಯ ಕಾಣಾಬಹುದಾದ,ಅನುಭವಿಸಬಹುದಾದ ಅಂತಿಮ ಸತ್ಯ. ಇದನ್ನೇ ನಮ್ಮ ಪ್ರಾಚೀನರು ಅನೇಕ ವಿಧದಲ್ಲಿ ತಿಳಿಸಿಟ್ಟುಹೋದರು. "ಅಹಂ ಬ್ರಹ್ಮಾಸ್ಮಿ" ಎಂದರು. 




MUKTA
Image have all standard licence belongs to Concerned person. Copying is purely offensive.
'ಅಸತ್ಯದಿಂದ ಸತ್ಯದೆಡೆಗೆ , ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮರತ್ವದ ಕಡೆಗೆ ಕೈ ಹಿಡಿದು ನಡೆಸು ಎಂದು ಬೇಡಿದರು. ನಮ್ಮ ಮೂಲ ಸ್ವರೂಪದ ತಿಳಿವಳಿಕೆ ಇಲ್ಲದಿರುವುದೇ ಈ ಸತ್ಯದರ್ಶನದ ಬೆಳಕಿನಲ್ಲಿ ಬದುಕುವುದೇ ಜೀವನ, ಎಲ್ಲರೂ ಸುಖವಾಗಿ ಬದುಕಲಿ"ಎಂದು ಮನದಾಳದಿಂದ ಹಾರೈಸಲು ಶಕ್ಯನಾದವನೇ 'ಮುಕ್ತ'.

ತಾನು ತಿಳಿದವ ಎಂಬ ಅಹಂಕಾರವೂ ಪ್ರಗತಿಗೆ ಮಾರಕ, ಹಾಗೆ ತನಗೇನೂ ತಿಳಿಯದು ಎಂದು ಹಿಂದುಳಿಯುವುದು ಕೆಟ್ಟದ್ದೇ. ತಿಳಿದಿದೆ ಎಂಬ ಅರಿವಿರಲಿ. ಅಹಂಕಾರ ಬೇಡ. ತಿಳಿಯದ್ದನ್ನು ತಿಳಿಯುವ ದಾಹವಿರಲಿ, ಕೀಳರಿಮೆ ಬೇಡ. ಇದು ಸಂತುಲಿತ ಬದುಕಿಗೆ ಬುನಾದಿ.


No comments:

Post a Comment

CLICK HERE