Friday, 6 February 2015

ಅನುಕಂಪ - ಅನುರಾಗದ ಸಾಮಗಾನ "ಮೈತ್ರೀ" ಭಾಗ-೧


ಅನುಕಂಪ - ಅನುರಾಗದ ಸಾಮಗಾನ "ಮೈತ್ರೀ"   ಭಾಗ-೧



ಒಮ್ಮೆ ದೆವತೆಗಳು ಭಗವಂತನಲ್ಲಿ ಒಂದು ಪ್ರಶ್ನೆ ಕೇಳಿದರಂತೆ, "ದೇವಾ, ಕಲ್ಲಿಗಿಂತ ಬಲವಾದುದೇನಾದರೂ ಇದೆಯೇ?" ಭಗವಂತ ಉತ್ತರಿಸಿದ,

 "ಹೌದು, ಕಲ್ಲಿಗಿಂತ ಕಠಿಣವಾದುದು ಕಬ್ಬಿಣ, ಕಬ್ಬಿಣದಿಂದ ತಯಾರಾದ ಸುತ್ತಿಗೆ ಕಲ್ಲನ್ನೂ ಒಡೆದು ಪುಡಿಮಾಡಬಲ್ಲದು." ದೇವತೆಗಳಿಗೆ ಆಶ್ಚರ್ಯವಾಯಿತು.

 ಮತ್ತೆ ಕೇಳಿದರು, "ಕಬ್ಬಿಣಕ್ಕಿಂತ ಶಕ್ತಿಯುತವಾದುದೇನಾದರೂ ಇದೆಯೆನು?", "ಹೌದು, ಬೆಂಕಿಯಲ್ಲಿ ಕಾಸಿದರೆ ಕಬ್ಬಿಣ ಕರಗಿ ನೀರಾಗುತ್ತದೆ.

ಆದುದರಿಂದ ಕಬ್ಬಿಣ ಕರಗಿಸಬಲ್ಲ ಬೆಂಕಿ ಕಬ್ಬಿಣಕ್ಕಿಂತ ಶಕ್ತಿಯುತವಾದುದು", "ಬೆಂಕಿಗಿಂತ ಶಕ್ತಿಯುತವಾದುದೂ ಏನಾದರೂ ಇರಬಹುದು ಅಲ್ಲವೇ?" ಎಂದರು ದೆವತೆಗಳು.

"ಬೆಂಕಿ ಎಷ್ಟೇ ಬಲವತ್ತರವಾಗಿ ಉರಿಯುತ್ತಿರಲಿ, ಅದನ್ನು ಆರಿಸುವುದು ನೀರು. ಆದುದರಿಂದ ನೀರು ಬೆಂಕಿಗಿಂತ ಬಲಶಾಲಿ" ಎಂದುತ್ತರ ಬಂತು.

ಹಾಗಾದರೆ ನೀರಿಗಿಂತ ಬಲಶಾಲಿ ಯಾರು?" ಎಂದಾಯಿತು.

"ನೀರನ್ನು ಹಾರಿಸಬ್ಲ್ಲದು ಗಾಳಿ. ಎಂಥ ಮಳೆ ಸುರಿಯುತ್ತಿದ್ದರೂ ವೇಗವಾಗಿ ಬೀಸುವ ಗಾಳಿ ಅದನ್ನು ಚದುರಿಸಬಲ್ಲದು.

ಆದುದರಿಂದ ನೀರಿಗಿಂತ ಗಾಳಿ ಬಲಶಾಲಿ" ಎಂದುತ್ತರಿಸಿದ ಭಗವಂತ ಕಡೆಗೆ ಹೀಗೆ ಹೇಳಿದ, "ಇವೆಲ್ಲವೂ ಅವುಗಳ ಸ್ಥಾನದಲ್ಲಿ ಬಲಶಾಲಿಗಳೇ.

 ಆದರೆ, ಇವೆಲ್ಲದಕ್ಕಿಂತ ಬಲಶಾಲಿಯಾದುದು ಒಂದಿದೆ. ಅದು "ಮೈತ್ರೀ". ಅನುಕಂಪ, ಕರುಣೆ, ಪ್ರೇಮಗಳ ಸಮ್ಮಿಳಿತ ರೂಪವೇ "ಮೈತ್ರೀ".

ಇದು ಸಮಸ್ತ ಚರಾಚರಗಳ ಮನೋಮೂಲದಲ್ಲಿದೆ. ಜಗತ್ತು ಶಾಂತಿಯಿಂದ ಬಾಳಬೇಕಾದರೆ ಇದು ಅತ್ಯಗತ್ಯ.

 ಮತ್ತೆ ಇದು ತನಗೆ ತಾನೆ ಮಾಡಿಕೊಳ್ಳುವ ಸೇವೆಯೂ ಹೌದು. ನಾನು ಬ್ರಹ್ಮ ಎಂದಾದರೆ ಸಮಸ್ತ ಜಗತ್ತಿನ ಅಣುವೂ ಬ್ರಹ್ಮನೇ.

 ಆದುದರಿಂದ ಈ 'ಬ್ರಹ್ಮ'ನ ಆರಾಧನೆಯ ಪ್ರಥಮ ಹಾಗೂ ಪ್ರಮುಖ ಪುಷ್ಪ. ಇದಕ್ಕಿಂತ ಪ್ರಬಲವಾದುದು ಯಾವುದೂ ಇಲ್ಲ" ಎಂದ ಭಗವಂತ.



ಮುಂದುವರಿಯುವುದು......

No comments:

Post a Comment

CLICK HERE