Saturday 7 February 2015

ಅನುಕಂಪ - ಅನುರಾಗದ ಸಾಮಗಾನ ಮೈತ್ರೀ ಭಾಗ-2


ಅನುಕಂಪ - ಅನುರಾಗದ ಸಾಮಗಾನ ಮೈತ್ರೀ ಭಾಗ-2

ಪರಮ ಸಾತ್ವಿಕನೊಬ್ಬನಿಗೆ ಸಾವು ಬಂತು. ಸಾವಿನ ಅನಂತರ ಅವನು ಪಿಶಾಚಿಯಾದ. ಈ ಪಿಶಾಚಿ ಸ್ಥಿತಿಯಲ್ಲೂ ಅವನು ಸಾತ್ವಿಕನಾಗಿಯೇ ಇದ್ದುದರಿಂದ ಅವನಿಗೆ ಸಹಚರರೇ ಇಲ್ಲದಂತಾಯಿತು.

ಏಕೆಂದರೆ, ಈ ಸ್ಥಿತಿಯಲ್ಲೂ ಅವನು ಯಾರಿಗೂ ತೊಂದರೆಯಗದಂತೆ ಬದುಕುತ್ತಿದ್ದುದರಿಂದ ಬೇರೆ ದೆವ್ವಗಳು ಅವನನ್ನು ದೂರವೇ ಇಟ್ಟಿದ್ದವು.

 ಈ ಏಕಾಂಗಿತನದಿಂದ ಬೇಸತ್ತು ಅವನು  ತನಗೊಂದು ಜೊತೆಗರನನ್ನು ನೀಡುವಂತೆ ಭಗವಂತನಲ್ಲಿ ಬೇಡಿದ.

ದೇವರು ಒಪ್ಪಿದ. "ಶನಿವಾರ ಸಂಜೆ, ಸೂರ್ಯ ಕಂತುವ ಹೊತ್ತಿನಲ್ಲಿ ಯಾರಾದರೂ ಅಪಮ್ರತ್ಯುವಿಗೆ ಬಲಿಯಾದರೆ, ಅಂಥವರು ನಿನ್ನ ಜೊತೆಗಾರರಾಗುತ್ತಾರೆ" ಎಂದ.

ಸರಿ, ಇವನು "ಶನಿವಾರ ಸಂಜೆ ಅಪಮ್ರತ್ಯುವಿಗಿಡಾಗುವ" ವ್ಯಕ್ತಿಯ ಹುಡುಕಾಟ ಶುರುವಾಯಿತು.

ಶನಿವಾರವೇ, ಸೂರ್ಯ ಮುಳುಗುವ ಹೊತ್ತಿಗೆ, ಅಪಮ್ರತ್ಯುವಿಗೇ ತುತ್ತಾಗುವ ಸಾಧ್ಯತೆ ಎಷ್ಟಿರುತ್ತದೆ?

ಎಂದೋ ಅಪರೂಪಕ್ಕೆ ವರುಷಕ್ಕೋ ಎರಡು ವರುಷಗಳಿಗೋ ಒಮ್ಮೆ ಬರುವ ಸಾಧ್ಯತೆ ಇದ್ದರೆ ಇದ್ದೀತು! ಹೀಗೆ ಇರುವಾಗ ಇವ ಅಂಥ ಘಟನೆ ನಡೆಯುವ ಸ್ಠಳಕ್ಕೆ ಹೋಗಿ ಕಾದು ಕುಳಿತುಕೊಳ್ಳುತ್ತಿದ್ದ.

ಆಹಾ! ಇಂದಾದರೂ ಒಂದು ಜೊತೆ ಸಿಗುತ್ತದೆ ಎಂದು ಸಂತೊಷಿಸುತ್ತಿದ್ದ.

ಆದರೆ, ಆ ಘಟನೆ ಘಟಿಸುವ ಕ್ಷಣ ಬಂದಾಗ ಅವನ ಹ್ರದಯ ದ್ರವಿಸುತಿತ್ತು.

ಬಂಧು-ಬಾಂಧವರ ಮುಖ ನೋಡಿದಾಗ, ಈ ವ್ಯಕ್ತಿಯ ವಿಯೋಗದಿಂದ ಅವರು ಅನುಭವಿಸುವ ನೋವಿನ ಅರಿವಾಗುತ್ತಿತ್ತು.

ಕೂಡಲೇ ಇವ ಓಡಿಹೋಗಿ ಆ ವ್ಯಕ್ತಿಯನ್ನು ಉಳಿಸುತ್ತಿದ್ದ. "ಭಗವಂತ, ಈ ಬಾರಿ, ಈ ವ್ಯಕ್ತಿಯನ್ನು ರಕ್ಷಿಸು.

ಮುಂದೆ ಎಂದಾದರೂ ಯಾರಾದರೂ ಸಿಗುವವರೆಗೆ ನಾನು ಎಕಾಂಗಿಯಾಗಿ ಕಾಯಲು ತಯಾರಿದ್ದೇನೆ.

ನಾನು ಯಾವುದೇ ಸಣ್ಣ ಒಳ್ಳೆಯ ಕೆಲಸ ಮಾಡುವುದಾದರೆ ಅದರ ಪುಣ್ಯಬಲದಿಂದ ಈ ವ್ಯಕ್ತಿಯನ್ನು ಬದುಕಿಸು" ಎಂದು ಬೇಡುತ್ತಿದ್ದ.

ಭಗವಂತ ನಸುನಗುತ್ತಾ "ಅಸ್ತು" ಎನ್ನುತ್ತಿದ.

ಒಂದಲ್ಲ, ಎರಡಲ್ಲ, ನೂರಾರು ಬಾರಿ ಇದು ಹೀಗೆ ನಡೆಯಿತು.

ಸಾತ್ವಿಕ ಪಿಶಾಚಿ ಕಡೆಗೂ ಎಕಾಂಗಿಯಾಗಿಯೇ ಉಳಿಯಿತು. ಏಕೆಂದರೆ ಅದರ ಹ್ರದಯದಲ್ಲಿ "ಮೈತ್ರಿ" ತುಂಬಿತ್ತು.
ತನಗಿಂತ ಹೆಚ್ಹಾಗಿ ಪರರ ಬಗ್ಗೆ ಕಾಳಜಿ ತುಂಬಿತ್ತು.


ಮುಕ್ತಾತ್ಮ ಜಗತ್ತಿಗೆ ಬೆಲ್ಲದಂತಿದ್ದರೂ ತಾನು ಮಾತ್ರ ಕಲ್ಲಿನಂತೆ ನಿಸ್ಪ್ರಹ.

ಜಗದ ಸಮಸ್ತ ಜೀವರಾಶಿಗಳಲ್ಲಿ ಅವನಿಗೆ 'ತಾನೆ' ಕಂಡುಬರುತ್ತದೆ. ತನ್ನೊಳಗೆ ಸಮಸ್ತ ಬ್ರಹ್ಮಾಂಡದ ಇರುವಿಕೆಯ ಅನುಭವವಾಗುತ್ತದೆ.

 ಸದಾ ಸುಖಿ ಇಂಥವ. ಆನಂದವೇ ಇವನ ನಿರಂತರ ಮನೊಭಾವ. ಇವನೇ ಪರಮ ಆತ್ಮ. ಇವನೇ ಮುಕ್ತಾತ್ಮ. ಇವನೇ ವಿಶ್ವ ಚೈತನ್ಯದ ಸಾಕಾರರೂಪ.  

No comments:

Post a Comment

CLICK HERE