ಅವರು ಶಾಲಾ ಮಕ್ಕಳ ಬಿಸಿಯೂಟದ ಉದ್ಘಾಟನೆ ಮಾಡಿದ ಸಂದರ್ಭದಲ್ಲಿ ನಡೆದ ಘಟನೆ ಇದು.
ಉದ್ಘಾಟನೆಯ ಅನಂತರ ಡಾ| ಕಲಾಂ ಮಕ್ಕಳ ಜೊತೆಯಲ್ಲಿ ಭೋಜನ
ಮಾಡಿದರು. ಊಟ ಮಾಡುತ್ತಾ ಪಕ್ಕದಲ್ಲಿ ಕುಳಿತು ಊಟ ಮಾಡುತ್ತಿದ್ದ ಹುಡುಗರನ್ನು
ಮಾತನಾಡಿಸತೊಡಗಿದರು. ಭವಿಷ್ಯದ ಬಗ್ಗೆ ಅವರ ಚಿಂತನೆ ಎಂಬುದು ಅವರ
ಮಾತುಕತೆಯ ವಿಷಯವಾಗಿತ್ತು.
ಇವರ ಪ್ರಶ್ನೆಗೆ ಹಲವು ಉತ್ತರಗಳು ಕೇಳಿಬಂದವು. ರೈತನಾಗುವುದರಿಂದ
ಖಗೋಳ ವಿಜ್ಞಾನಿಯಾಗುವವರೆಗೆ ನಾನಾ ವ್ರತ್ತಿಗಳಲ್ಲಿ ತೊಡಗುವ
ಉತ್ತರಗಳಿದ್ದವು. ಸಮಾಧಾನದಿಂದ ಕೇಳಿದ ಕಲಾಂ, "ಚೆನ್ನಾಗಿದೆ, ಮಹತ್ತರವಾದ
ಗುರಿಗಳೇ ಎಲ್ಲ! ಇವೆಲ್ಲಕ್ಕೂ ಮೀರಿದ ಒಂದು ಕನಸು ನಿಮ್ಮಲ್ಲಿ ಬೆಳೆಯಬೇಕು.
ಇಂದು ಈ ಮಧ್ಯಾಹ್ನದ ಬಿಸಿಯೂಟದ ಯೋಜನೆಯಿಂದ ನಿಮ್ಮ ವಿಧ್ಯಬ್ಯಾಸ
ಸುಗಮವಾಗುತ್ತಿದೆ. ಅಲ್ಲವೇ? ಇದರಿಂದ ನೀವೆಲ್ಲ ಮುಂದೆ ಓದುವುದು
ಸಾಧ್ಯವಾಗುತ್ತದೆ. ಮುಂದೆ ನಿಮ್ಮ ನಿಮ್ಮ ಕನಸುಗಳು ಸಾಕಾರವಾದಾಗ, ನೀವು
ಇಂಥ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಕನಿಷ್ಟ ಹತ್ತು
ಮಂದಿಗಾದರೂ ಒಬ್ಬೊಬ್ಬರು ಊಟದ ವ್ಯವಸ್ಥೆಗೆ ಸಹಾಯ ಮಾಡುವ ಚಿಂತನೆ
ಮಾಡಬೇಕು. ಇದು ನಿಮ್ಮಿಂದಾಗಬಹುದಾದ ಅತ್ಯಂತ ಹಿರಿಯ ಸಾಮಾಜಿಕ ಸೇವೆ.
ಇಂಥ ಕನಸಿರಬೇಕು" ಎಂದರು.
ಇದನ್ನು ಕೇಳುತ್ತಿದ್ದ ಹುಡುಗನೊಬ್ಬ ಎದ್ದು ನಿಂತು ಹೀಗೆಂದ. "ಸರ್, ನನ್ನ ಕನಸು
ಸ್ವಲ್ಪ ಬೇರೆಯಾಗಿದೆ. ಯಾವ ವಿದ್ಯಾರ್ಥಿಯೂ ಫ್ರೀ ಊಟ ಸಿಗುತ್ತದೆ ಎಂದು
ಶಾಲೆಗೆ ಬರುವಂತಿರಬಾರದು. ಸತ್ವಯುಕ್ತ ಊಟದ ಡಬ್ಬಿ ತರುವಂತಿರಬೇಕು.
ದೂರದಿಂದ ಬರುವವರಿಗಾಗಿ ಪ್ರತಿಯೊಂದು ಶಾಲೆಯಲ್ಲೂ ಶುದ್ಧ, ಸತ್ವಪೂರ್ಣ
ಊಟವನ್ನು ವಿದ್ಯಾರ್ಥಿ ಬೆಲೆ ತೆತ್ತು ಕೊಳ್ಳುವ ವ್ಯವಸ್ಥೆ ಇರಬೇಕು. ನನ್ನ ಭಾರತದಲ್ಲಿ
ಯಾರೂ ತುತ್ತು ಅನ್ನಕ್ಕಾಗಿ ಸರಕಾರ ಸಮಾಜದತ್ತ ನೋಡುವಂತಿರಬಾರದು."
ಡಾ| ಕಲಾಂ ಒಂದು ಕ್ಷಣ ಉತ್ತರಿಸಲಿಲ್ಲ. ಅನಂತರ ಆ ಹುಡುಗನ ಬೆನ್ನು ತಟ್ಟಿ, "ನಿನ್ನ
ಕನಸು ನನ್ನದಕ್ಕಿಂತ ಹೆಚ್ಚು ಸಧ್ರಢವಾಗಿದೆ. ನೀನೇ ಹೇಳಿದ್ದೆ ನಿಜವಾಗಬೇಕು. ಇದೆ
ಭಾರತದ ಸಹಜ ಸ್ಥಿತಿಯಾಗಲೀ" ಎಂದರು ತುಂಬಿಬಂದ ಸ್ವರದಲ್ಲಿ.
ನಾವು "ಹಗಲುಕನಸು" ಎನ್ನುತ್ತೇವೆ. 'ಅವ ಬರೀ ಕನಸುಗಾರ'. 'ಸ್ವಪ್ನ ಸಾಮ್ರಾಜ್ಯ
ವಿಹಾರಿ' ಎನ್ನುತ್ತೇವೆ. ಮನುಷ್ಯ ಕನಸನ್ನೇ ಕಾಣದಿದ್ದರೆ, ಇಂದು ಬಹುಶಃ ಈ
ಸ್ಥಿತಿಯಲ್ಲಿ ಇರುತ್ತಿರಲಿಲ್ಲವೇನೋ? ವೈಜ್ಞಾನಿಕವಾಗಿ, ಆರ್ಥಿಕವಾಗಿ ಜಗತ್ತು
ಬೆಳೆಯುತ್ತಿರಲಿಲ್ಲವೇನೋ! ಆದರೆ ಕನಸು ಕಾಣುವವ ಬರೀ ತನ್ನ ಕನಸಿನ
ಜಗತ್ತಿನಲ್ಲಿ ಕಳೆದುಹೋದರೂ ಪ್ರಯೋಜನವಿಲ್ಲವಲ್ಲ. ಸಾರ್ಥಕ ಕನಸುಗಳನ್ನು
ಸಾಕಾರಗೊಳಿಸುವತ್ತ ಹೆಜ್ಜೆ ಇಟ್ಟರೆ ಮಾತ್ರ ಕನಸುಗಳಿಗೊಂದು ಅರ್ಥ ಬರುತ್ತದೆ.
ಮುಂದುವರಿಯುವುದು.......
No comments:
Post a Comment