Monday, 3 November 2014

ಮನಸ್ಸು ಬಗ್ಗಡವಾಗದಿರಲಿ .....ಭಾಗ - ೨

ಶ್ರದ್ಧೆ ಮತ್ತು ಸತತ ಪ್ರಯತ್ನವೇ ಸಾಧನೆಯ ಸಾಧನ. ಒಂದೂರಲ್ಲಿ ಪರಮ

 ಭಕ್ತೆಯಾದ ವ್ರದ್ಧಯೊಬ್ಬಳಿದ್ದಳು. ಅವಳಿಗೆ ಸಾವಿರ ಜನರಿಗೆ  ಊಟ ಹಾಕಿದರೆ 

ಮೋಕ್ಷ ಸಿಗುತ್ತದೆ, ಭಗವಂತನ ಸಾಕ್ಷಾತ್ಕಾರವಾಗುತ್ತದೆ ಎಂದು ಯಾರೋ 

ಹೇಳಿದರು. ಕಡು ಬಡವಳಾದುದರಿಂದ ಸಾವಿರ ಮಂದಿಗೆ ಊಟ ಮಾಡಿಸುವ ಶಕ್ತಿ 

ಅವಳಿಗಿರಲಿಲ್ಲ. ಪರಮ ಭಕ್ತೆಯೊಬ್ಬನಿಗೆ ಊಟ ಹಾಕಿದರೆ ಸಾಕು. ಅದು ಸಾವಿರ 

ಮಂದಿಗೆ ಸಲ್ಲುತ್ತದೆ ಎಂದುಕೊಂಡು, ಸಂತ ಏಕನಾಥರಲ್ಲಿಗೆ ಹೋಗಿ, ತನ್ನಲಿಗೆ 

ಊಟಕ್ಕೆ ಆಹ್ವಾನಿಸಿ, ತನ್ನ ಉದ್ದೇಶ ತಿಳಿಸಿದಳು. ಇವಳ ಮುಗ್ಧ ಭಕ್ತಿಗೆ 
ಮಾರುಹೋಗಿ  ಸಂತ ಏಕನಾಥರು ಒಪ್ಪಿದರು.


ತನ್ನ ಶಕ್ತಿ ಮೀರಿ ಸುಗ್ರಾಸ ಭೋಜನ ತಯಾರಿಸಿ, ವ್ರದ್ಧೆ ಏಕನಾಥರಿಗೆ ಬಡಿಸಿದಳು. 

ಸಾಕ್ಷಾತ್ ಭಗವಂತನಿಗೆ ಉಣಿಸುತ್ತಿದ್ದೇನೆ ಎಂಬ ತಾದಾತ್ಮ್ಯ ಭಕ್ತಿಗಳಿಂದ 

ಬಡಿಸಿದಳು. ಎಲ್ಲಿಯವರೆಗೆಂದರೆ, ಒಂದಿಷ್ಟು ಉಪ್ಪಿನಕಾಯಿ, ಒಂದು ಹೋಳಿಗೆಯ 

ತುಂಡನ್ನು ತಾನೇ ಬಾಯಿಗಿಟ್ಟಳು. ಸಂತರು ವಿಷ್ಣು ಸಹಸ್ರನಾಮ ಜಪಿಸುತ್ತಾ ಊಟ 

ಮಾಡಿ ಮುಗಿಸಿದರು. ವ್ರದ್ಧೆ ಅವರ ಮುಂದೆ ತಾಂಬೂಲದ ತಟ್ಟೆ ಇಟ್ಟು, ಎಲೆ ಎತ್ತಲು

 ಕೈ ಹಾಕಿದಳು. ಏನಾಶ್ಚರ್ಯ! ಅವಳು ಒಂದು ಎಲೆ ಎತ್ತುತ್ತಿರುವಂತೆ ಅದರ ಕೆಳಗೆ

 ಮತ್ತೊಂದು ಎಲೆ ಕಾಣುತ್ತಿತ್ತು. ಎತ್ತಿ ಹಾಕಿದ ಎಲೆಗಳ ರಾಶಿ ಬಿತ್ತು. ಸರಿಯಾಗಿ 

ಒಂದು ಸಾವಿರ ಎಲೆಗಳಿದ್ದವು! ಅಂದರೆ ಭಗವಂತ ಒಂದು ಸಾವಿರ ಮುಖದಿಂದ ಭಕ್ತಳ ನೈವಿದ್ಯ ಗ್ರಹಣ ಮಾಡಿದ್ದ.


ಬಗ್ಗಡ ರಹಿತ ತಿಳಿ ಮನಸ್ಸಿನ ಫಲ ಇದು. ಏನೂ ಇಲ್ಲದ ಕಡೆ ಬೇಕಾದುದ್ಡನ್ನು 

ಇಡಬಹುದು. ಏನೂ ಇಲ್ಲದ ಮನಸ್ಸಿನಲ್ಲಿ ಭಗವಂತನನ್ನು ನೆಲೆಗೊಳಿಸಬಹುದು.

No comments:

Post a Comment

CLICK HERE