ಸಮೀಪಿಸುತ್ತಿರುವಂತೆ ಸೂರ್ಯದೇವ ನೆತ್ತಿಯ ಮೇಲೆ ಬಂದ. ಬಿಸಿಲ ಜಳಕ್ಕೆ
ಎಲ್ಲರೂ ಬಾಯಾರಿ ಬಸವಳಿದಿದ್ದರು. ಬುದ್ಧದೇವನ ಪ್ರಿಯ ಶಿಷ್ಯನಿಗೆ, ತನ್ನ
ಗುರುವೂ ಬಾಯಾರಿರುವುದು ಗಮನಕ್ಕೆ ಬಂತು. "ಗುರುವೇ, ನಾವು ಬರುವ
ಹಾದಿಯಲ್ಲಿ ಹರಿವ ತೊರೆಯೊಂದನ್ನು ಅನತಿ ದೂರದಲ್ಲಿ ಕಂಡಿದ್ದೇನೆ. ಓduತ್ತಾ
ಹೋಗಿ ನೀರು ತರುತ್ತೇನೆ" ಎಂದವನೇ, ಗುರುವಿನ ಮುಖದ ಮೇಲೆ
ಮೂಡಿದಮಂದಹಾಸವನ್ನೇ ಅನುಮತಿ ಎಂದು ಅರ್ಥೈಸಿಕೊಂಡು, ನೀರು ತರಲು ಹೊರtu ಬಂದ.
ಅವನೆಣಿಸಿದಂತೆ ತೊರೆಯೊಂದು ಶುಭ್ರ ನೀರು ತುಂಬಿಕೊಂಡು ಹರಿಯುತ್ತಿತ್ತು.
ಆದರೆ ನೀರು ತುಂಬಿಸಿಕೊಳ್ಳುವ ಕಡೆ, ಬಾಗಿದ ಮರದ ರೆಂಬೆಗಳಿಂದ ಉದುರಿದ
ಎಲೆಗಳು ಕೊಳೆತು, ನೀರು ಬಗ್ಗಡ ಎನಿಸಿತು. "ಛೆ, ಗುರುವಿಗೆ ಇಂಥ ಕೊಳಕು
ನೀರು ಯೋಗ್ಯವಲ್ಲ." ಎಂದುಕೊಂಡು ಕೈಗಳಿಂದ ತೇಲುತ್ತಿರುವ ಎಲೆಗಳನ್ನು
ಅತ್ತಿತ್ತ ಸರಿಸಲು ನೋಡಿದ. ಅಲ್ಲಿಯವರೆಗೆ ನಿಶ್ಚಲವಾಗಿದ್ದ ನೀರು
ಆಲುಗಾಡುತ್ತಿರುವಂತೆಯೇ ಕೊಳೆತಿದ್ದರೂ ನೀರಿನಲ್ಲಿ ಕಡದಿಹೋಗದ ಎಲೆಗಳು
ನೀರಿನೊಂದಿಗೆ ಸೇರಿಕೊಂಡು, ಕೆಟ್ಟ ವಾಸನೆ ಬರಲು ಶುರುವಾಯಿತು. ಸ್ವಲ್ಪವೇ
ಮುಂದೆ ಹೋದರೆ ಶುಭ್ರ ನೀರು ತುಂಬಿಕೊಳ್ಳಬಹುದು. ಅಲ್ಲಿಗೆ ಹೋಗುವುದೇ ಸರಿ
ಎಂದುಕೊಂಡು ಆನಂದ ನೀರಿಗಿಳಿದ.
ಇವನು ನೀರಿನಲ್ಲಿ ಎರಡು ಹೆಜ್ಜೆ ಹಾಕುತ್ತಿದ್ದಂತೆಯೇ ಅಲ್ಲಿಯವರೆಗೆ ತಳದಲ್ಲಿ
ಸೇರಿಕೊಂಡಿದ್ದ ಕೊಳಕು ಮೇಲೆದ್ದು ಬಂತು. ಈಗ ಕಾಲಿಟ್ಟಾಗಿದೆ, ಕೊಳಕು
ಕಡದಿಕೊಂಡಾಗಿದೆ! ಹಿಂದೆ ಬರುವಂತಿಲ್ಲ! ಮುಂದೆ ಹೋಗುವಂತಿಲ್ಲ! ನೀರು ಕದಡಿ
ಕುಡಿಯಲು ಅಯೋಗ್ಯವಾಗಿದೆ. ಆನಂದನಿಗೆ ದುಖಃವಾಯಿತು, ಛೇ! ತನ್ನ
ಗುರುವಿಗೆ ಹೇಳಿದಂತೆ ನಡೆಯಲು ಆಗಲಿಲ್ಲವಲ್ಲ ಎಂದು ಚಡಪಡಿಸುತ್ತಲೇ ಮರಳಿ
ಬಂದ ಹಾಗೂ ನಡೆದುದ್ಡನ್ನೆಲ್ಲ ತಿಳಿಸಿದ.
ಗೌತಮ ಬುದ್ಧನ ಮುಖದಲ್ಲಿ ಮತ್ತೆ ನಸುನಗು ಮೂಡಿತು. " ಹೌದೇನು? ಈಗ ಮತ್ತೆ
ಅಲ್ಲಿಗೆ ಹೋಗು. ಏನಾಗಿದೆ ಎಂದು ನೋಡು. ನೀರು ಸಿಕ್ಕರೂ ಸಿಗಬಹುದು"
ಎಂದ. ಸರಿ, ಆನಂದ ಮರಳಿ ತೊರೆಗೆ ಬಂದ. ಆಹಾ! ಏನಾಶ್ಚರ್ಯ. ಬಗ್ಗಡವೆಲ್ಲಾ
ತಳ ಸೇರಿತ್ತು. ಕೊಳಕಿನ ಸುಳಿವಿರಲಿಲ್ಲ. ಶುಭ್ರ, ಸ್ವಚ್ಛ ನೀರು ಹರಿಯುತ್ತಿತ್ತು!
ಆನಂದ ನೀರು ತುಂಬಿ ತಂದು ಗುರುವಿನ ಮುಂದಿಟ್ಟ. ಅವನ ಮುಖದ ಮೇಲಿದ್ದ
ಪ್ರಶ್ನೆಗೆ ಉತ್ತರವಾಗಿ ಗೌತಮ ಬುದ್ಧ ಹೀಗೆಂದ-
"ನೀನು ಮೊದಲು ನೋಡಿದಾಗ ಕೊಳೆತ ಎಲೆಗಳಿಂದ ನೀರು ಕಲುಷಿತವಾಗಿದೆ
ಎಂಬಂತೆ ಕಾಣುತಿತ್ತು. ಮೇಲುನೋಟಕ್ಕೆ ಹಾಗೆ ಕಂಡರೂ ವಾಸ್ತವ
ಬೇರೆಯಾಗಿತ್ತು. ಪ್ರಾಪಂಚಿಕ ಮಾಯೆಯಿಂದ, ಬದುಕಿನ ಸತ್ಯ ಮರೆಯಾಗುವಂತೆ,
ತಳದ ನೀರು ಶುದ್ಧವಾಗಿತ್ತು. ನೀನು ನಿನ್ನ ಕಾತರದಿಂದ ವಾಸ್ತವ ಮತ್ತು
ಮಾಯೆಯನ್ನು ಕಲಸಿದೆ. ಸಾಲದೆಂಬಂತೆ ನೀರಿಗಿಳಿದೆ. ನೀರು ಇನ್ನೂ
ಬಗ್ಗಡವಾಯಿತು. ಬದುಕೂ ಹೀಗೆ - ನಾನಾ ರೂಪದ ಮಾಯೆಗಳು ಕಾಮನೆಗಳ
ರೂಪದಿಂದ ಬರುತ್ತವೆ. ಅವು ಕಾಲಕ್ರಮೇಣ ಸತ್ವ ಕಳೆದುಕೊಂಡು ಕೊಳೆಯುತ್ತವೆ.
ಜನ್ಮದಿಂದ ಜನ್ಮಕ್ಕೆ ವಾಸನೆಗಳಾಗಿ ಬೆಂಬತ್ತಿ ಬರುತ್ತವೆ. ಸಮಚಿತ್ತದಿಂದ
ಬದುಕನ್ನು ವಿಶ್ಲೇಷಿಸುತ್ತಾನೆ. ಬಗ್ಗಡ ತಳಕ್ಕಿಳಿಯುತ್ತದೆ. ಬುದ್ಧಿ ನಿಶ್ಚಳವಾಗುತ್ತದೆ.
ಯುಕ್ತಾಯುಕ್ತತೆ ಸ್ವಚ್ಛವಾಗುತ್ತದೆ.
ಈಗ ದಾಹ ತಣಿಸಿಕೊಳ್ಳುವ ಸಮಯ. ಬದುಕಿನ ಮೂಲ ಧ್ಯೇಯವಾದ ಸತ್ಯವನ್ನು
ಅರ್ಥಮಾಡಿಕೊಂಡು, ಬುದ್ಧನಾಗುವ ಹಾದಿಯಲ್ಲಿ ನಡೆಯುವ ಸಮಯ. ಇದಕ್ಕೆ
ಶರಣಾಗತಿಯೇ ಮುಖ್ಯ. 'ಬುದ್ಧನಾಗಿರುವವನಿಗೆ ಶರಣಾಗು, ಬುದ್ಧರ ಸಂಗಕ್ಕೆ
ಶರಣಾಗು' ಎಂದು ಉಪದೇಶಿಸಿದ ಗೌ-ತಮ ಬುದ್ಧ.
ಮುಂದುವರಿಯುವುದು......
No comments:
Post a Comment