Monday, 12 June 2017

‘ಅವಳಿ’ಗೆ ನಮನ

ರಾಮಾಯಣ, ಮಹಾಭಾರತದ ಕಥೆಗಳು ಭಾರತೀಯರ ಬದುಕಿನ ಒಂದು ಅಂಗ.

ಸಾವಿರಾರು ವರ್ಷಗಳ ಹಿಂದೆ ಬರೆಯಲ್ಪಿಟ್ಟದ್ದರೂ ಅವುಗಳಲ್ಲಿನ ಮೌಲ್ಯಗಳನ್ನು ಇಂದೂ ಬದುಕಿಗೆ ಅಳವಡಿಸಿಕೊಳ್ಳಬಹುದು ಎಂಬ ಮಾತಿದೆ.

ಹೌದೇನು? ಯಾವ ಮೌಲ್ಯಗಳನ್ನು?

ರಾಮಾಯಣವನ್ನು, ಅದರಲ್ಲಿನ ಕೆಲವು ಪಾತ್ರಗಳನ್ನು ವಿಶ್ಲೇಷಿಸೋಣ.

ರಾಮ ಸೀತೆಯ ಕೈಹಿಡಿದ. ಕೋಮಲೆ, ರಾಜಕುಮಾರ ಪತಿಯನ್ನೆ ಪರದೈವ ಎಂದು ನಂಬಿದ ಸೀತೆ ಪತಿಗೃಹಕ್ಕೆ ಬಂದಳು.

ರಾಮಚಂದ್ರ ಪಟ್ಟಾಭಿಷೇಕಕ್ಕೆ ತಯಾರಿಯಾಗುತ್ತಿರುವಂತೆ, ಕೈಕೆಯಿ ತನ್ನ ಮಗ ಭರತನಿಗೆ ಪಟ್ಟ ಕಟ್ಟುವ ಹಾಗೂ ಶ್ರೀರಾಮನನ್ನು ವನವಾಸಕ್ಕಟ್ಟುವ ಬೇಡಿಕೆ ಮುಂದಿಟ್ಟಳು.


ಅದೂ ದಶರಥ ಹಿಂದೆಂದೋ ಕೊಟ್ಟ ವಚನಕ್ಕೆ ಅನುಸಾರವಾಗಿಯೇ ಎಂಬುದನ್ನು ಮರೆಯಲಾಗದು. ಪಿತೃವಚನಕ್ಕೆ ಬಧ್ಹನಾದ ರಾಮ ಕಾಡಿಗೆ ಹೊರಟ.


ಸೀತೆ ಹಿಂದೆ ಉಳಿದು, ಅರಮನೆಯಲ್ಲಿ ಸುಖವಾಗಿರಬಹುದಿತ್ತು. ಆದರೆ, ಅವಳೂ ಪತಿಯ ಸುಃಖ ದುಃಖಗಳಲ್ಲಿ ಸಮಭಾಗಿತ್ವದ ಕರ್ತವ್ಯ ಪಾಲನೆಗಾಗಿ ರಾಮನ ಹಿಂದೆ ನಡೆದಳು.


ಅಲ್ಲಿ ಏನೇನು ಕಷ್ಟಗಳನ್ನು ಅನುಭವಿಸಿದಳೋ, ನೀರಿಗಾಗಿ, ಹಸಿವಿನಿಂದ ಬಳಲಿದಳೋ ದಾಖಲೆಗಳಿಲ್ಲ. ಮುಂದೆ ಸೀತಾಪಹರಣವಾಯಿತು.ರಾವಣ ಕ್ರೂರ, ಭೀಬತ್ಸರೂಪಿ ರಾಕ್ಷಸಿಯರ ಕಾವಲಿನಲ್ಲಿ ಅವಳನು ವನವೊಂದರಲ್ಲಿ ಸೆರೆ ಇಟ್ಟ.


ಮರವೊಂದರ ಕೆಳಗೆ ಸದಾ ಭೀತಿಯ ಛತ್ರದಡಿ, ರಾವಣನ ಕ್ರೂರ ಅಸಾಧು ಮಾತುಗಳನ್ನು ಕೇಳಿಸಿಕೊಳ್ಳುತ್ತಾ, ಸೀತೆ ದಿನ ಕಳೆದಳು.

ಮುಂದೆ ರಾಮ, ರಾವಣರ ಯುದ್ಧ ನಡೆದು, ಸೀತಾ ತಾಯಿಗೆ ಬಿಡುಗಡೆ ದೊರಕಿತು. ಸಾಮ್ರಾಜ್ಞಿಯಾದಳು.

ಇಲ್ಲಿಗೂ ಅವಳ ದುರ್ದಶೆ ಕೊನೆಯಾಗಲಿಲ್ಲ. ಯಾರೋ ಒಬ್ಬ ಅನಾಮಿಕನ ಮಾತಿಗೆ ಬೆಲೆಕೊಟ್ಟು ಶ್ರೀರಾಮಚಂದ್ರ ಗರ್ಭೀಣಿ ಸೀತೆಯನ್ನು ತ್ಯಾಗ ಮಾಡಿದ.

ಅಲ್ಲಿಂದಲೇ ಮುಂದೆ ಸೀತೆ ಭೂ ತಾಯಿಯಲ್ಲಿ ಒಂದಾದಳು. ಇಷ್ಟು ಕಥೆ.


ಒಂದು ಚಿಂತನಾರ್ಹ ವಿಷಯ ಇಲ್ಲಿದೆ. ಸೀತೆಯಂತೆ ಶ್ರೀರಾಮಚಂದ್ರನು ಹಲವು ವರ್ಷಗಳ ಕಾಲ ಏಕಾಂಗಿಯಾಗಿದ್ದ. ಪತ್ನಿ ವಿಯೋಗ,ವಿರಹದಿಂದ ನೊಂದಿದ್ದ ಅವನ ಶೀಲವನ್ನು ಯಾರೂ ಶಂಕಿಸಲಿಲ್ಲ.
ಏಕೆ?

ತನ್ನನ್ನು ಅಕಾರಣ ತ್ಯಜಿಸಿದಾಗಲೂ, ಸೀತೆ ಪ್ರತಿಭಟಿಸಲಿಲ್ಲ. ತನ್ನ ಪತಿಯ ನಿರ್ಧಾರವೇ ಸಾಧುವಾದುದೆಂದು ಸಾಧಿಸಿದಳು. ಅವಳು ಎಂದೂ ಪತಿಯ ಪತ್ನಿನಿಷ್ಠೆಯನ್ನು ಶಂಕಿಸಲಿಲ್ಲವಲ್ಲ!


ಹಾಗಾದರೆ ಶೀಲ, ನಿಷ್ಠೆಗಳು ಸ್ತ್ರೀಗೆ ಮಾತ್ರ ಅನ್ವಯಿಸುತ್ತವೆಯೇ?ಮಹಾಭಾರತದ ದ್ರೌಪದಿಯನ್ನು ಐವರು ವಿವಾಹವಾದರು. ಅದೂ ಅವರ ತಾಯಿಯ ಅಣಿಯಂತೆ. ಮಾತೃವಾಕ್ಯ ಪರಿಪಾಲನೆ ಮಾಡಿದ ವೀರಾಧಿವೀರ ಪಾಂಡವರು ದ್ರೌಪದಿಯ ಒಪ್ಪಿಗೆ ಕೇಳಲಿಲ್ಲ!


ಅವಳ ಬೇಕು ಬೇಡಗಳನ್ನು ಅರಿಯಲಿಲ್ಲ. ಮುಂದೆ ಧರ್ಮರಾಯ, ಧರ್ಮದ ಸಾಕಾರಮೂರ್ತಿ ತನ್ನ ತಮ್ಮಂದಿರೊಂದಿಗೆ ಪತ್ನಿಯನ್ನು ದ್ಯೂತಕ್ಕೆ ಪಣವಾಗಿ ಬಳಸಿಕೊಂಡ.

ಅವಳನ್ನು ಒಂದು ವಸ್ತುವನ್ನಾಗಿ ಪರಿಗಣಿಸಿದ.ಗೆಲ್ಲುವ ಸಾಧ್ಯತೆಯೇ ಇರಲಿಲ್ಲ. ಸೋತ.

ಅವಳ ಮುಡಿ ಹಿಡಿದು ತುಂಬಿದ ಸಭೆಗೆ ಎಳೆದು ತರಲಾಯಿತು. ರಜಸ್ವಲೆಯಾಗಿದ್ದ. ಏಕವಸ್ತ್ರಧಾರಿಣಿಯನ್ನು ತೊಡೆ ತಟ್ಟಿ 'ಬಾ ನನ್ನ ತೊಡೆ ಏರು' ಎಂದು ಕರೆದ ದುರ್ಯೋಧನ.


ವಯೋವೃದ್ಧರು, ಜ್ಞಾನವೃದ್ಧರು ಇದ್ದ ತುಂಬಿದ ಸಭೆಯಲ್ಲಿ ಒಬ್ಬರೂ ಈ ಅನ್ಯಾಯದ ವಿರುದ್ಧ ಚಕಾರವೆತ್ತಲಿಲ್ಲ. ವಿವಸ್ತ್ರಳನ್ನಾಗಿ ಮಾಡಲು ಅವಳ ಸೀರೆ ಸೆಳೆದ ದುಶ್ಯಾಸನ.

ಗಂಡ ಸತ್ತಾಗ ಹೆಂಡತಿಯನ್ನೂ ಅವನ ಚಿತೆಯ ಮೇಲಿಟ್ಟು ಜೀವಂತವಾಗಿ ಸುಟ್ಟು ಹಾಕಿದ ಸಂಸ್ಕೃತಿ ನಮ್ಮದು.

ಅವಳ ತಲೆ ಬೋಳಿಸಿ, ಕೆಂಪು ಸೀರೆ ಉಡಿಸಿ, ಚಾಪೆಯ ಮೇಲೆ ಮಲಗಿಸಿ, ಒಂದೇ ಹೊತ್ತು ಊಟ ಹಾಕಿ, ಶುಭ ಸಮಾರಂಭಗಳಿಂದ ಹೊರಹಾಕುತ್ತಿದ್ದರು.


Image have all standard licence belongs to Concerned person. Copying is purely offensive.


ಆದರೆ, ಒಬ್ಬನೇ ಒಬ್ಬ ಗಂಡೂ 'ಪತಿ'ಯಾಗಿ ಹೆಂಡತಿಯ ಚಿತೆಯಲ್ಲಿ ಸಹಗಮನ ಮಾಡಿದ ದಾಖಲೆ ಇಲ್ಲ.

ಪತ್ನಿಯ ನೆನಪಿನಲ್ಲಿ ಸುಖಭೋಗಗಳನ್ನು ತ್ಯಾಗಮಾಡಿದವನೇ ಇಲ್ಲ! ಹೆಣ್ಣನ್ನು ಬಲತ್ಕಾರದಿಂದ ಒಂದು ಛಾಯೆಯನ್ನಾಗಿ ಮಾಡಲಾಯಿತು.

ಅವಳು ಪತಿಯೆಂಬ ರೂಪವನ್ನು ಬದುಕಿನ ಗುರಿಯಾಗಿ, ಸರ್ವಸ್ವವಾಗಿ ಒಪ್ಪಿಕೊಳ್ಳುವಂತೆ ಮಾಡಲಾಯಿತು. ಇಂದೂ ಇದು ಬದಲಾಗಲಿಲ್ಲ.

ಹೆಣ್ಣು ಸರ್ವ ರಂಗಗಳಲ್ಲಿಯೂ ಕಾಲಿಟ್ಟಿದ್ದಾಳೆ.

ಗಂಡಿನಂತೆ ಕೂದಲು ಕತ್ತರಿಸಿಕೊಂಡು, ಜೀನ್ಸ್ ಶರ್ಟ್ ಧರಿಸುತ್ತಾಳೆ. ಹೊರಗೆ ದುಡಿಯುತ್ತಾಳೆ.

ಆಂತರ್ಯದಲ್ಲಿ ಶತಶತಮಾನಗಳಿಂದ ವಂಶವಾಹಿನಿಗಳಲ್ಲಿ ಅಚ್ಚೊತ್ತಿದ ಗಂಡಿನ ಸರ್ವಶ್ರೇಷ್ಠತೆಯ ರೂಪ, ದಬ್ಬಾಳಿಕೆ, ಶೋಷಣೆಗಳ ಭೀಕರತೆ, ಪುರುಷ ವೇಷಭೂಷಣ, ರೂಪಗಳ ಅನುಕರಣೆಯಾಗಿ ಹೊರಬಿಳುತ್ತಿದೆ.


ಗಂಡಾಗ ಬಯಸುತ್ತಾಳೆ. ಆದರೆ, ಅವಳ ಸಹಜ ಸ್ವಭಾವವು ಬದಲಾಗಿಲ್ಲ. ಪತ್ನಿತ್ವ, ಮಾತೃತ್ವದ ಕೋಮಲ ಭಾವನೆಗಳಿನ್ನೂ ಹಸಿಯಾಗಿವೆ.

ಗೃಹಸ್ವಾಮಿನಿಯಾಗಿ, ಪತ್ನಿಯಾಗಿ, ತಾಯಿಯಾಗಿ ಬದುಕುವ ಅದಮ್ಯ ಸ್ವಭಾವವು ಒಂದು ಕಡೆ, ನೋವುಗಳಿಗೆ ಕಾರಣನಾದ ಪುರುಷನೇ ತಾನಾಗಿ ಅವುಗಳಿಂದ ಬಿಡುಗಡೆ ಹೊಂದದ ಸುಪ್ತ ಕಾಮನೆ ಇನ್ನೊಂದು ಕಡೆ!

ಇಬ್ಬಗೆಯ ಈ ಒತ್ತಡದಲ್ಲಿ ನಲುಗುತ್ತಿದ್ದಾಳೆ ಇಂದಿನ ಸ್ತ್ರೀ! ಪ್ರಪಂಚಾದ್ಯಂತ ದ್ರೌಪದಿಯರೂ, ಸೀತೆಯರೂ ಇನ್ನೂ ಜೀವಂತವಾಗಿದ್ದಾರೆ.

ಎಲ್ಲಿಯೋ ಕೆಲವರು ಮಾತ್ರ ಈ ಚೌಕಟ್ಟಿನಿಂದ ಹೊರಬಂದಿದ್ದಾರೆ ಎಂದುಕೊಂಡಿದ್ದೇವೆ.

ಶತಮಾನಗಳಿಂದ ನೋವುಂಡು, ಇಷ್ಟೇಲ್ಲಾ ಶೋಷಣೆಯಲ್ಲೂ ಮನುಷ್ಯ ಸಂತತಿಯನ್ನು ಉಳಿಸಿ, ಬೆಳೆಸಿದ 'ಅವಳಿ'ಗೆ ನಮನ.

Copyright © 2017-18 by Anand Joshi All rights reserved. No part of this publication may be reproduced, distributed, or transmitted in any form or by any means, including photocopying, recording, or other electronic or mechanical methods, without the prior written permission of the publisher, except in the case of brief quotations embodied in critical reviews and certain other noncommercial uses permitted by copyright law. For permission requests, write to the publisher, addressed “Attention: Permissions Coordinator,” at the address below. 
 anandajoshi@datamail.in +91-9483998343 ) 

Tuesday, 23 May 2017

ಆಯ್ಕೆ ನಮ್ಮದು The Choice is Ours

ಕಾಡೊಂದರಲ್ಲಿ ತಪಸ್ಸಿನಿಂದ ವಿಶೇಷ ಶಕ್ತಿಗಳನ್ನು ಸಂಪಾದಿಸಿದ್ದ ಸನ್ಯಾಸಿಯೊಬ್ಬನಿದ್ದ. ಒಮ್ಮೆ ಅವನ ಆಶ್ರಮಕ್ಕೆ ಬೆಕ್ಕೊಂದು ಬಂದು ಸೇರಿಕೊಂಡಿತು. ಅಲ್ಲಿಯವರೆಗೆ ಏಕಾಂಗಿಯಾಗಿಯೇ ಇದ್ದವನಿಗೆ ಇದರ ಬರುವಿಕೆ ಮುದ ತಂದಿತು. ಅದು ಇವನಿಗೆ ತೊಂದರೆ ಕೊಡದೆ ತನ್ನ ಪಾಡಿಗೆ ತಾನಿತ್ತು. ಕೆಲವು ಕಾಲ ಕಳೆಯಿತು. ಆ ಹಾದಿಯಾಗಿ ಬಂದ ತೋಳವನ್ನು ಕಂಡ ಬೆಕ್ಕು ಜೀವ ಭಯದಿಂದ ಹೆದರಿ ಸನ್ಯಾಸಿಯ ಮಡಿಲು ಹತ್ತಿ ಅಡಗಿಕೊಂಡಿತು. ಬೆಕ್ಕಿನ ಸಂಕಟ ಕಂಡ ಸನ್ಯಾಸಿ ತನ್ನ ಶಕ್ತಿಯಿಂದ ಬೆಕ್ಕನ್ನೇ ತೊಳವನ್ನಾಗಿ ಬದಲಾಯಿಸಿದ.

A hermit lives in forest and he had some special powers gained. Once a cat came and joined his ashram. Until that time alone hath brought equal to its availability. Cat didn't gave any trouble to his devotional rituals.

One day a wolf came in the way of Ashram. Cat saw the wolf coming in path and afraid and ran in to Monks lap and hide. Hermit felt remorse on cat and He converted Cat to Wolf with his special Powers.


ತೋಳ ಕೆಲವು ಕಾಲ ನಿರ್ಭಯವಾಗಿ ಓಡಾಡಿಕೊಂಡಿತ್ತು. ಕೆಲವು ದಿನಗಳ ನಂತರ ಕಾಡಿನಲ್ಲಿ ಒಂದು ಹುಲಿ ಅದನ್ನಟ್ಟಿಸಿಕೊಂಡು ಬಂತು. ತೋಳ ಮತ್ತೆ ಸಂನ್ಯಾಸಿಗೆ ಶರಣಾಯಿತು. ಸರಿ, ಸನ್ಯಾಸಿ ತೋಳವನ್ನು ಹುಲಿಯಾಗಿ ಬದಲಾಯಿಸಿದ. ಹೀಗೆ ಹುಲಿ ಆನೆಯಾಯಿತು. ಸಿಂಹ ಆನೆಯನ್ನು ಅಟ್ಟಿಸಿಕೊಂಡು ಬಂದಿದ್ದಕ್ಕೆ ಸಿಂಹವಾಯಿತು. ಇಷ್ಟಾದರೂ ಅದರ ಒಳಗೆ ಬದಲಾದ ಪ್ರಾಣಿಗಳ ಧೈರ್ಯ ಸ್ಥೈರ್ಯಗಳು ಬೆಳೆಯಲಿಲ್ಲ.


ಆಯ್ಕೆ ನಿಮ್ಮದು_Choice is yours
Image have all standard licence belongs to Concerned person. Copying is purely offensive.
Now wolf roaming without anyones fear. But some days later a Tiger followed wolf to hunt. again Wolf came to monk's Ashram to take shelter. Again  monk converted wolf to Tiger.. like this Tiger became elephant. Elephant became lion. But its inner fear didn't went. It's still Cat from inside. 


ಆಂತರ್ಯ ಬೆಕ್ಕಿನದೇ ಆಗಿತ್ತು.
ನಾವು ಹೊರಗಿನಿಂದ ಹೇಗೆ ಇರಲಿ, ಒಳಗೂ ಪಕ್ವವಾಗಿದ್ದರೆ ಮಾತ್ರ ವ್ಯಕ್ತಿ, ವ್ಯಕ್ತಿತ್ವಕ್ಕೆ ಮೆರಗು.
Regardless How we show off from outside, we feel same in the Inside than only there is a meaning to that Personality. 

ಸಿಂಹವಾಗಿ ಬದಲಾಗಿದ್ದ ಬೆಕ್ಕು ತನ್ನ ಘರ್ಜನೆಗೆ ತಾನೇ ಮನಸೋತಿತು. ಬೇಕಿರಲಿ, ಬೇಡವಾಗಿರಲಿ ಕಂಡ ಕಂಡ ಪ್ರಾಣಿಗಳನ್ನು ಕೊಂದು ಹಾಕುತಿತ್ತು. ಚಿಕ್ಕ ಪುಟ್ಟ ಪ್ರಾಣಿಗಳ ಸಂತತಿಯೇ ಅಳಿವಿನಂಚಿಗೆ ಬಂತು. ಮಿಕ್ಕವು ಕಾಡನ್ನೇ ತೊರೆದು ಹೋದವು. ಈಗ ಸಿಂಹಕ್ಕೆ ಹೊಸ ಆಪತ್ತು ಎದುರಾಗಿತ್ತು. ಇಡೀ ಕಾಡು ಸುತ್ತಿದರೂ ಒಂದೇ ಒಂದು ಪ್ರಾಣಿಯೂ ಸಿಗಲಿಲ್ಲ. ಹೊಟ್ಟೆಯ ಹಸಿವಿಗಿಂತ ಆಹಾರ ಸಿಗುವುದೋ ಇಲ್ಲವೋ ಎಂಬ ಆತಂಕವೇ ಹೆಚ್ಚಾಗಿತ್ತು ಎಂದರೆ ಸರಿಯೇನೋ.

Cat now became Lion. Its fell in love with its own roar and it started to kill animals if its needed or not.Hunting animals became its habit.All small creatures came to endangered with Lions bad habit. Some of the animals left the forest in the fear of lion.

So Lion didn't get any food after sometime. Lion became tensed. It didn't had any food.  


ಹೀಗೆ ತಿರುಗಾಡುತ್ತಾ ಸಿಂಹ ನದಿಯ ತೀರಕ್ಕೆ ಬಂತು. ಸ್ನಾನಕ್ಕೆ ಬಂದ ಸನ್ಯಾಸಿ ಕಂಡ. ಹಿಂದು ಮುಂದು ಯೋಚಿಸದೇ ಅವನತ್ತ ಹೆಜ್ಜೆ ಹಾಕಿತು. ಯುಕ್ತಾಯುಕ್ತ ವಿವೇಚನೆ ಕಳೆದುಕೊಂಡು ತನ್ನ ಜನ್ಮದಾತನನ್ನೇ ಕೊಲ್ಲಲು ತಯಾರಾಯಿತು. ಸನ್ಯಾಸಿ ನಸುನಗುತ್ತಾ ಮಂತ್ರಜಲ ಪ್ರೋಕ್ಷಿಸಿದ. ಸಿಂಹ ಮ್ಯಾಂ ಮ್ಯಾಂ ಎನ್ನುತ್ತಾ ಮತ್ತೆ ಬೆಕ್ಕಾಗಿ ಬದಲಾಯಿತು.

Thus, wandering lion came to the shore of the river. The monk had seen bathing. Thinking a step toward him, laid back and front. Prudence had turned out to kill him who give life of Lion. 
Monk smiled and through holy water on lion and Lion became Cat again.

ಒಂದು ಕಾಲದಲ್ಲಿ ರಾಜ ತನ್ನ ಸಮರ್ಥ ಮಂತ್ರಿ ಮಂಡಲದ ಸಲಹೆಯಂತೆ ರಾಜ್ಯವಾಳುತ್ತಿದ್ದ. ಧರ್ಮ ಮಾರ್ಗ ತಪ್ಪದಂತೆ ಪ್ರಾಜ್ಞರೊಬ್ಬರು ಗೂರುರೂಪದಿಂದ ಬೆನ್ನೆಲುಬಾಗಿರುತ್ತಿದ್ದರು. ಪ್ರಜೆಗಳ ಹಿತವೇ ರಾಜ್ಯಾಡಳಿತದ ಮೂಲಮಂತ್ರವಾಗಿರುತಿತ್ತು. ರಾಜ ಪ್ರಜೆಗಳನ್ನು ತನ್ನ ಮಕ್ಕಳಂತೆ ಪಾಲಿಸುತಿದ್ದರೆ, ಪ್ರಜೆಗಳು ಅವನನ್ನು 'ಪ್ರತ್ಯಕ್ಷದೇವತೆ' ಎಂಬ ಭಾವದಿಂದ ನೋಡುತಿದ್ದರು. ಯಾರೂ ಅವರವರ ಮಿತಿ ದಾಟುತ್ತಿರಲಿಲ್ಲ. ಇದರಿಂದಲೇ ಬದುಕು ಶಾಂತವಾಗಿರುತಿತ್ತು.

At a time when the King on the advice of the competent Ministry of kingdoms. A GURU was always be with the king to show the path of Dharma. Public wealth and Health was the always first priority to King. Public also treat the King as 'A real seen GOD' Public never cross the lines of law. That's why their life was in peace.

ಎಲ್ಲಿ ಬದಲಾಯಿತು ಇದು? ಎಂಬ ಪ್ರಶ್ನೆ ಏಳುವುದು ಸಹಜ. ಹೀಗೆ ಸಮೃದ್ಧವಾಗಿದ್ದ ನಾಡಿಗೆ, ಅದರ ಸಿರಿಗಾಗಿ ಕೆಲವರು ಬಂದರು. ಸಾವಿರಾರು ಒಂಟೆ, ಕುದುರೆಗಳ ಮೇಲೆ ಹೇರಿಕೊಂಡು ಭಾರತದ ಐಶ್ವರ್ಯ ಸಾಗಿಸಿದರು. ಅದರಲ್ಲಿ ಕೆಲವರಿಗೆ ಈ ನೆಲದ ಕಣ್ಣು ಬಿಟ್ಟು. ಶಾಶ್ವತವಾಗಿ ಈ ಹೊನ್ನ ನಾಡನ್ನು ತಮ್ಮದಾಗಿ ಮಾಡಿಕೊಳ್ಳುವ ಹುನ್ನಾರ ನಡೆಯಿತು.

Then Where is it changed? Its quit normal that this question arise. In this peaceful city Some people came for wealth. They carried all the richness with them. Some of them planned to loot the land as well.

ಯಾವುದೇ ದೇಶದ ಬೇರುಗಳು ಅದರ ಸಂಸ್ಕೃತಿಯಲ್ಲಿರುತ್ತವೆ, ಭಾಷೆಯಲ್ಲಿರುತ್ತವೆ. ಅದರ ಬೇರುಗಳನ್ನೇ ಕತ್ತರಿಸಿದರೆ ಸೈ, ಏಕತೆಯೆಂಬ ವೃಕ್ಷ ನೆಲಕಚ್ಚುತ್ತದೆ. ಇಲ್ಲಿಯೂ ಹಾಗೆಯೇ ಆಯಿತು. ನಮ್ಮ ವ್ಯವಸಾಯ ಹಾಗೂ ಶಿಕ್ಷಣಗಳೆಂಬ ಬೇರುಗಳಿಗೆ ಕೊಡಲಿ ಹಾಕಲಾಯಿತು. ಚಿಂತನೆ ಆಚಾರ, ವ್ಯವಹಾರಗಳಲ್ಲಿ ವಿದೇಶಿಯರಾದ ಹೊರಗೆ ಕಾಣುವ, ಸಿಪ್ಪೆ ಮಾತ್ರ ಭಾರತೀಯ ರೂಪದವರಾಗಿ ನಾವು ಬದಲಾಗಿ ಹೋದೆವು. 


Choice is yours
Image have all standard licence belongs to Concerned person. Copying is purely offensive.
Every country's roots were in its Culture and language. If you cut the roots the equality tree will fall down. Same thing happened here too. They cut down our education system and farming system. 

We became outsiders with the name of Culture,Thinking and in Business.

ಆಳುವವ ಎರಡು ಶತಮಾನಗಳ ಕಾಲ ನಡೆಸಿದ ನಿರಂತರ ಕ್ರೌರ್ಯದಿಂದ ಪಾರಾಗಲು ಬಾಗಿದ ತಲೆ,ಬೆನ್ನು ಮೇಲೆತ್ತಲೇ ಇಲ್ಲ. ಇಂದಿಗೂ ಆಳುವವ ತನ್ನ ಹಿಂದಿನವರು ಬಿಟ್ಟು ಹೋದ ಹೆಜ್ಜೆಗಳಲ್ಲೇ ಹೆಜ್ಜೆ ಹಾಕುತ್ತಿದ್ದಾನೆ. ಅಂದಿನಂತೆ ಇಂದೂ ಒಂಟೆ, ಕುದುರೆಗಳ ಮೇಲಲ್ಲ. ವಿಮಾನ, ಹಡಗುಗಳನ್ನೇರಿ ನಮ್ಮ ಸಂಪತ್ತು ವಿದೇಶ ಸೇರಿತ್ತಿದೆ. ಇದರಲ್ಲಿ ನ್ಯಾಯ ಬಾಹಿರ, ನ್ಯಾಯ ಸಮ್ಮತ ಎರಡೂ ಇವೆ. ಒಂದು ರೀತಿಯಲ್ಲಿ ಸಿಂಹವಾದ ಬದಲಾದ ಬೆಕ್ಕು ಸಂನ್ಯಾಸಿಯನ್ನೇ ಕಬಳಿಸಲು ಹೊರಟಿದೆ. 

The bent head does not spin back to escape the continuous cruelty that the ruler has for two centuries. The ruler of this day is stepping on his steps left behind by his predecessors.Our treasures are abandoned in the airplanes and ships. It is both fair and not fair too. In a way, the lion has turned out to be a cat catapult.



ಇಷ್ಟೀಗ ಸಮಸ್ಯೆಯಾಯಿತು. ಕೊನೆ ಎಂತು? ಅದು ಸನ್ಯಾಸಿಯ ಕೈಯಲ್ಲಿದೆ. ತಾನು ತನ್ನದೇ ಸೃಷ್ಟಿಯ ಹೊಟ್ಟೆ ಸೇರಬೇಕೋ ಬೇಡವೋ? ಆಯ್ಕೆ ಅವನದು. ಎದ್ದು ನಿಂತು ಮಂತ್ರಜಲ ಪ್ರೋಕ್ಷಿಸಿದರೆ ಬದುಕಿದೆವು ಅಲ್ಲವೇ? ದೇಶಪ್ರೇಮ ಎಂಬ ಮಂತ್ರ ಜಲ ಇದು. ಆತ್ಮಾಭಿಮಾನವೇ ಇದರ ಅಂತಃಶಕ್ತಿ, ನಾವೊಂದು ಭವ್ಯ ಪರಂಪರೆಯ ಸಂತಾನ, ಅದನ್ನುಳಿಸಿ, ಬೆಳೆಸಬೇಕಾದುದೇ ನಮ್ಮ ಕರ್ತವ್ಯ. ಇಷ್ಟನ್ನು ನಾವು ತಿಳಿದು, ನಮ್ಮ ಎಳೆಯರಿಗೆ ತಿಳಿಸಿ ಹೇಳಬೇಕಾದುದು ಇಂದಿನ ಅಗತ್ಯ.


Copyright © 2015-16 by Anand Joshi All rights reserved. No part of this publication may be reproduced, distributed, or transmitted in any form or by any means, including photocopying, recording, or other electronic or mechanical methods, without the prior written permission of the publisher, except in the case of brief quotations embodied in critical reviews and certain other noncommercial uses permitted by copyright law. For permission requests, write to the publisher, addressed “Attention: Permissions Coordinator,” at the address below. 

 anandajoshi@datamil.in 
+91-9483998343 

 Account ID: pub-2871201476498332 Client ID: ca-pub-2871201476498332



Tuesday, 25 April 2017

ನಮ್ಮ ಪ್ರಾಚೀನರ ಸಂಪನ್ನ ಜ್ಞಾನ 'ವಿಜ್ಞಾನ'

ಉಜ್ಜಯಿನಿಯ ಮಹಾರಾಜನಿಗೆ ಪುತ್ರೋತ್ಸವವಾಗಿತ್ತು. ಅಪರೂಪಕ್ಕೆ ಹುಟ್ಟಿದ ಕಂದನ ಆಗಮನದಿಂದ ಹೆತ್ತವರು ಮಾತ್ರವಲ್ಲ, ಇಡೀ ರಾಜ್ಯವೇ ಸಂಭ್ರಮಿಸುತ್ತಿತ್ತು. ಮಗುವಿನ ಭವಿಷ್ಯ ತಿಳಿಯಲು ಮಹಾರಾಜ ತನ್ನ ಆಸ್ಥಾನದ ಜ್ಯೋತಿಷ್ಯ ಶಿರೋಮಣಿ 'ಮಿಹಿರಾಚಾರ್ಯ'ರರಿಗೆ ಕರೆ ಕಳುಹಿಸಿದ. ಜನ್ಮಕಾಲವನ್ನು ಕೇಳಿದ ಮಿಹಿರಾಚಾರ್ಯರ ತಲೆ ತಗ್ಗಿತು. ಹೊರಬರಲು ತಡಕಾಡುತ್ತಾ ಗಂಟಲಲ್ಲೇ ಭಂದಿಯಾಗಿದ್ದ ಶಬ್ದಗಳನ್ನು ಬಲು ಕಷ್ಟದಿಂದ ಹೊರಹಾಕಿದ ಮಿಹಿರಚಾರ್ಯ "ಈ ಹುಡುಗ ಅಲ್ಪಾಯುಷಿ, ತನ್ನ ಐದನೆಯ ಜನ್ಮದಿನ ಕಾಣಲಾರ". ರಾಜಕುಟುಂಬಕ್ಕೆ ಸಿಡಿಲು ಬಡಿದಂತಾಯಿತು. ಮಿಹಿರಾಚಾರ್ಯರ ಬಾಯಿಂದ ಹೊರಬಿದ್ದ ಯಾವುದೇ ಮಾತು ವ್ಯರ್ಥವಾದುದಿಲ್ಲ."ಸೂಕರದಿಂದ ಸಾವು" ಎಂದಿದ್ದರು ಆಚಾರ್ಯರು.

ಹೀಗಾಗಿ ಹುಡುಗನಿಗಾಗಿ ಒಂದು ಸುಭದ್ರ ಅರಮನೆ ತಯಾರಾಯಿತು. ನೊಣವೂ ಒಳಗೆ ನುಸುಳಲಾಗದಷ್ಟು ಭದ್ರತೆಯಲ್ಲಿ ಹುಡುಗ ಬೆಳೆಯತೊಡಗಿದ. ಅಂದು ಆಚಾರ್ಯರಿತ್ತ ಗಡುವಿನ ಕೊನೆಯ ದಿನ. ಗಳಿಗೆಗೊಮ್ಮೆಯಂತೆ ಭಟರು ಹುಡುಗನ ಕ್ಷೇಮ ಸಮಾಚಾರ ತರುತ್ತಿದರು. ಸೂರ್ಯಾಸ್ತವಾಯಿತು. ಸುದ್ದಿ ಹೊತ್ತು ಬಂದ ಭಟನ ಮುಖ ಬಿಳುಚಿಕೊಂಡಿತ್ತು. ಕಾತರದಿಂದ ಶುಭ ಸಮಾಚಾರಕ್ಕಾಗಿ ಕಾಯುತ್ತಿದ್ದ ನಾಡು ಸುದ್ದಿ ಕೇಳಿ ನಡುಗಿಹೋಯಿತು. ಹುಡುಗ ಸೂಕರದಿಂದ ಮೃತನಾಗಿದ್ದ.

ರಾಜ್ಯ ಲಾಂಛನ 'ವರಾಹ'ವನ್ನು ಹೊತ್ತ ಬಾವುಟ, ರಾಜಕುಮಾರ ಆಡುತ್ತಿದ್ದ ಛತ್ತಿನ ಮೇಲೆ ಹಾರಾಡುತ್ತಿತ್ತು. ಆಡುತ್ತಾ ಹುಡುಗ ಬಾವುಟದ ಹಗ್ಗ ಎಳೆದಿದ್ದ. ಭಾರದ ಬಾವುಟದ ಕೋಲು ಬುಡದಿಂದ ಕಳಚಿಕೊಂಡು ಅವನ ದೇಹದ ಮೇಲೆ ಬಿದ್ದು ಅವನೆದೆಯನ್ನು ಸೀಳಿತ್ತು!! ಮಿಹಿರಚಾರ್ಯ "ವರಾಹ ಮಿಹಿರಾಚಾರ್ಯ" ಎಂದೇ ಇಂದಿಗೂ ಪ್ರಸಿದ್ಧ.
Varaha Mihira astrologer
Image have all standard licence belongs to
Concerned person. Copying is purely offensive.

ಇಂದಿಗೂ ಇವರು ಬರೆದ ಬೃಹತ್ ಜಾತಕ ಸೂತ್ರಗಳ ಅಧಾರದ ಮೇಲೆ ಪಂಚಾಂಗಗಳನ್ನು ಬರೆಯಲಾಗುತ್ತದೆ.ಸೂರ್ಯೋದಯ ಅಸ್ತ, ಚಂದ್ರೋದಯ ಅಸ್ತಗಳನ್ನೂ, ಗ್ರಹಣ, ನಕ್ಷತ್ರೋದಯಗಳನ್ನು ಅತ್ಯಂತ ಕರಾರುವಕ್ಕಾಗಿ ದಾಖಲಿಸಿದ ಅದ್ಭುತ ಈ ಗ್ರಂಥ. ಗಣಿತದ ದೃಷ್ಠಿಯಿಂದ ನೋಡಿದರೆ ಇಂದಿಗೂ ಇದರಲ್ಲಿ ಕೆಲವೇ ಕೆಲವು ೦.೯ ಪ್ರತಿಶತ ವ್ಯತ್ಯಾಸ ಕಂಡು ಬರುತ್ತದೆ.

ಇನ್ನು ಭಾಸ್ಕರಾಚಾರ್ಯರ 'ಲೀಲಾವತಿ'ಎಂಬ ಕೃತಿ ಇಂದಿನ ಟ್ರಿಗ್ನಾಮಿಟ್ರಿ, ಜ್ಯಾಮಿಟ್ರಿ, ಕ್ಯಾಲುಕ್ಯಲಸ್ ಬೀಜಗಣಿತ, ಗೋಳಾಧ್ಯಾಯ, ಗ್ರಹಗಣಿತ ಇತ್ಯಾದಿಗಳಲ್ಲಿ ಇಂದಿನ ಸಂಶೋಧನೆಗಳಿಗೆ ಸರಿಸಾಟಿ ಅಥವಾ ಅವುಗಳನ್ನು ಮೀರಿ ನಿಲ್ಲುತ್ತದೆ. ಹೀಗೆ ಆರ್ಯಭಟ ಮುಂತಾದ ಹಲವು ಹತ್ತು ಮಂದಿ ಪ್ರಕಾಂಡ ಪಂಡಿತರ ಪಟ್ಟಿಯೇ ಇದೆ. ಭಾರತದ ಜ್ಯೋತಿರ್ವಿಜ್ಞಾನ, ವೈದ್ಯಕೀಯ ವಿಜ್ಞಾನ ಇಂದು ಮುಂದುವರೆದಿದೆ ಎನ್ನುತ್ತೇವೆ. ಇದಕ್ಕಿರುವ ಇತಿಹಾಸ ಗರಿಷ್ಠ ಐದುನೂರು ವರ್ಷಗಳು ಮಾತ್ರ ಆದರೆ, ಕ್ರಿ.ಪೂ. ನಾಲ್ಕನೇಯ ಶತಮಾನದಲ್ಲಿದ್ದ ಸುಶ್ರುತ ಪ್ರಸಿದ್ಧ ಶಸ್ತ್ರ ಚಿಕಿತ್ಸನಾಗಿದ್ದ. ಇವನು ದಾಖಲಿಸಿರುವ ಶ್ರುತ ಸಂಹಿತೆಯಲ್ಲಿ ಚರ್ಮಕ್ಕೆ ಏಳು ಪದರಗಳಿವೆ ಎನ್ನಲಾಗಿದೆ.

ಇಂದಿನ ವೈದ್ಯಕೀಯ ಪದ್ಧತಿ ಮೊನ್ನೆ ಮೊನ್ನೆಯವರೆಗೆ ಎರಡು ಪದರುಗಳನ್ನು ಗುರುತಿಸಿತ್ತು. ಎಲೆಕ್ಟ್ರಾನ್ ಸೂಕ್ಞ್ಮದರ್ಶಕದ ಆವಿಷ್ಕಾರದ ಅನಂತರವೂ ಐದು ಪದರಗಳನ್ನು ಮಾತ್ರ ಗುರುತಿಸಲು ಸಾಧ್ಯವಾಗಿದೆ. ಸುಶ್ರುತ ಮಹರ್ಷಿ ಅವಿಷ್ಕರಿಸಿ ಚಾಲ್ತಿಯಲ್ಲಿ ತಂದ ಮೂಗಿನ ಶಸ್ತ್ರಕ್ರಿಯೆ ರೈನೋಪ್ಲಾಸ್ತಿಯನ್ನು ಶಸ್ತ್ರಚಿಕಿತ್ಸಕರು ಇಂದಿಗೂ ಅನುಸರಿಸುತ್ತಿದ್ದಾರೆ. ಚರಕ, ಸುಶ್ರುತ, ವಾಗ್ಬಟರು ರಚಿಸಿದ ಗ್ರಂಥಗಳ ಆಧಾರದ ಮೇಲೆ ಇಂದಿಗೂ ವೈದ್ಯರು ಚಿಕಿತ್ಸೆ ನಡೆಸುತ್ತಿದ್ದಾರೆ. ಶಸ್ತ್ರಕ್ರಿಯೆಯಂಥ ಸಂಕೀರ್ಣ ಚಿಕಿತ್ಸೆಗೆ ದೇಹದ ಒಳಗಿನ ಅವಯವಗಳ ಸಂಪೂರ್ಣ ಜ್ನಾನವಿರಬೇಕು. ಸಾವಿರಾರು ವರ್ಷಗಳ ಹಿಂದೆ ಭರತಭೂಮಿಯಲ್ಲಿ ಅತ್ಯಂತ ಮುಂದುವರಿದ ವೈದ್ಯವಿಜ್ಞಾನ ಚಾಲ್ತಿಯಲ್ಲಿತ್ತು.
FromIndiaWithLove
Image have all standard licence belongs to
Concerned person. Copying is purely offensive
.

ವಿಶ್ವದ ಹುಟ್ಟು ಬೆಳವಣಿಗೆ ಹಾಗೂ ಅಂತ್ಯದ ಬಗ್ಗೆ ಅತ್ಯಂತ ನಿಖರವಾಗಿ ನಮ್ಮ ಪ್ರಾಚೀನರು ಪುರುಷಸೂಕ್ತ, ವೇದ ಇತ್ಯಾದಿಗಳಲ್ಲಿ ಸೂಕ್ತ ಋಕ್ಕುಗಳ ರೂಪದಲ್ಲಿ ವಿವರಿಸಿದ್ದಾರೆ. ಮಹಾಭಾರತ, ರಾಮಾಯಣಗಳಲ್ಲಿ ವಿಮಾನದ ಉಲ್ಲೇಖವಿದೆ. ಅತ್ಯಂತ ಶಕ್ತಿಶಾಲಿಯಾದ ಬ್ರಹ್ಮಾಸ್ತ್ರ, ವಾರುಣಾಸ್ತ್ರ, ವಾಯವ್ಯಾಸ್ತ್ರ, ಕುಶಿಕಾಸ್ತ್ರಗಳ ಮಾತು ಬರುತ್ತವೆ. ರಾಮಾಯಣದಲ್ಲಿ ರಾವಣ ಸಂಹಾರವಾದ ಅನಂತರ ಶ್ರೀರಾಮಚಂದ್ರ ಸಮಸ್ತ ವಾನರ ಸೇನೆಯೊಂದಿಗೆ ನಂದಿ ಗ್ರಾಮಕ್ಕೆ ಬರುವ ವಿಷಯವಿದೆ. ವಿಶೇಷವೇನು ಇದರಲ್ಲಿ ಎಂದರೆ, ಅವನು ಆಕಾಶಮಾರ್ಗವಾಗಿ ಪಯಣಿಸಿದ ಪುಷ್ಪಕ ವಿಮಾನ ಪ್ರಯಾಣಿಕರ ಗಾತ್ರಕ್ಕೆ ತಕ್ಕಂತೆ ಹಿಗ್ಗುತ್ತಿತ್ತು ಎಂಬುದು.

ಹರಪ್ಪಾ, ಮೊಹೆಂಜೋದಾರೋ, ಲೊಧಾಲಗಳ, ಸಿಂಧೂ ನಾಗರಿಕತೆಗಳ ಕಾಲಮಾನವನ್ನು ಇತಿಹಾಸ ತಜ್ಞರು ಕ್ರಿ.ಪೂ.೨೫೦೦ರಿಂದ ಕ್ರಿ.ಪೂ.೧೫೦೦ ಎಂದು ಗುರುತಿಸಿದ್ದಾರೆ. ಅಲ್ಲಿ ಸಿಕ್ಕಿದ ಆವೆಮಣ್ಣಿನ ಫಲಕಗಳಲ್ಲಿ ಲಿಪಿ ಇದೆ. 
ಇಂದು 'ಕುತುಬ್ ಮಿನಾರ್' ಎಂದು ಕರೆಯಲ್ಪಡುವ ಮೆಹರೋಲಿಯ ಕಬ್ಬಿಣದ ೨೩ ಅಡಿ, ೮ ಅಂಗುಲ ಎತ್ತರದ, ೧.೫ ಅಡಿ ವ್ಯಾಸದ, ೬ ಟನ್ ತೂಗುವ, ತುಕ್ಕು ಹಿಡಿಯದ ಕಂಬ ಒಂದೆ ಮೂಸೆಯಲ್ಲಿ ಎರಕ ಹೊಯ್ದದ್ದು!

ಭಾರತೀಯ ಬಲು ಬುದ್ಧಿವಂತ ಸಭ್ಯತೆಯ ಒಂದು ಹಿಸ್ಸೆ. ಜಗತ್ತಿನ ಉಳಿದ ಭಾಗಗಳಲ್ಲಿ ಮನುಷ್ಯರು ಬೇಟೆಯಾಡಿ ಬದುಕುತ್ತಿದ್ದ ಕಾಲದಲ್ಲಿ, ಭಾರತೀಯ ಅತ್ಯಂತ ಮುಂದುವರಿದ ಯಜ್ಞವಿಜ್ಞಾನವನ್ನು ಅರ್ಥಮಾಡಿಕೊಂಡಿದ್ದ. 

'ಕೋಯಿ ಲೌಟಾದೆ ಮೇರೆ ಬೀತೆ ಹುವೆ ದಿನ್
ಬೀತೆ ಹುವೆ ದಿನ್ ಯೇ (ಹಮಾರೇ)ಮೇರೆ ಪ್ಯಾರೆ ಪಲಕಿನ್..'
"ಕಳೆದು ಹೋದ ದಿನಗಳನ್ನು ಮರಳಿಸಿ ಯಾರಾದರೊಬ್ಬರು..
ಕಳೆದು ಹೋದ ದಿನಗಳವೂ..ನನ್ನ ಪ್ರೀತಿಯ ಕ್ಷಣಗಳು.."

ಮರಳಿ ಬರಲಿ ಈ ನಮ್ಮ ಭವ್ಯತೆಯ ದಿನಗಳು ಎಂದು ಹಾರೈಸುತ್ತದೆ ಮನಸ್ಸು...

Tuesday, 4 April 2017

ದೇವರು ಎಂಬ ಜಿಜ್ಞಾಸೆ

ಆರು ವರ್ಷದ ಮಗು ಅಪರೂಪದ ಹೃದಯರೋಗದಿಂದ ಬಳಲುತ್ತಿದ್ದ. ಊರಿನ ವೈದ್ಯರು ಬದುಕುವುದು ಮೂರು ತಿಂಗಳು ಮಾತ್ರ ಎಂದು ಭವಿಷ್ಯ ನುಡಿದಿದ್ದರು. ಕಂಗಾಲಾದ ಹೆತ್ತವರು ಖ್ಯಾತ ವೈದ್ಯರಲ್ಲಿ ಚಿಕಿತ್ಸೆಗಾಗಿ ಬಂದಿದ್ದರು. ಮಗುವಿನ ಕೂಲಂಕುಷ ತಪಾಸಣೆ ನಡೆಸಿದಾಗ, ಇನ್ನೂ ಪ್ರಯೋಗಾವಸ್ಥೆಯಲ್ಲಿರುವ ಅತ್ಯಂತ ಕ್ಷಿಷ್ಟಕರವಾದ, ತೆರೆದ ಹೃದಯದ ಶಸ್ತ್ರಕ್ರಿಯೆಯಿಂದ ಮಾತ್ರ ಮಗುವಿನ ಆರೋಗ್ಯ ಸುಧಾರಿಸಬಹುದಾದ ಸಾಧ್ಯತೆ ಇರಬಹುದು ಎಂದು ಕಂಡು ಬಂತು. 


ಒಂದು ವೇಳೆ ಆ ಚಿಕಿತ್ಸೆ ನಡೆಸಿದಿದ್ದಲ್ಲಿ ಮಗು ಮೂರು ತಿಂಗಳು ಬದುಕುವುದೂ ಸಂದೇಹಾಸ್ಪದವಾಗಿತ್ತು.  ಹಾಗೆಯೇ ಚಿಕಿತ್ಸೆ ನಡೆಸುತ್ತಿರುವಾಗಲೇ ಮಗು ಸಾಯುವ ಸಾಧ್ಯತೆಯೂ ಇತ್ತು. ಇವೆಲ್ಲವನ್ನೂ ಹೆತ್ತವರಿಗೆ ವಿವರವಾಗಿ ತಿಳಿಸಲಾಯಿತು. ಅಳೆದು ಸುರಿದು ಅನ್ಯಮಾರ್ಗ ಇರದ್ದನ್ನು ಅರಿತು ಅವರು ಶಸ್ತ್ರಚಿಕಿತ್ಸೆಗೆ ಒಪ್ಪಿದರು. ದಿನ ನಿಗದಿಯಾಯಿತು.

ದೇವರು ಎಂಬ ಜಿಜ್ಞಾಸೆ
Image have all standard licence belongs to Concerned person. Copying is purely offensive.
ನಿಗದಿಯಾದ ದಿನದ ಹಿಂದಿನ ಸಂಜೆ ವೈದ್ಯರು ಮಗು ಮತ್ತವನ ಹೆತ್ತವರನ್ನು ಕಾಣಲು ಹೋದರು. ಇವರನ್ನು ಕಂಡ ಹುಡುಗ ನಸುನಗುತ್ತಾ "ಅಂಕಲ್, ನೀವು ನಾಳೆ ನನಗೆ ಚಿಕಿತ್ಸೆ ನೀಡುವೀರಲ್ಲವೇ?" ಎಂದು ಕೇಳಿದ. ವೈದ್ಯರು ಹೌದೆಂದು ತಲೆ ಆಡಿಸಿದರು. ಹುಡುಗ ಮತ್ತೆ ಕೇಳಿದ " ನೀವು ನನ್ನ ಹೃದಯ ಕತ್ತರಿಸಿಸುವವರಿದ್ದಿರಂತೆ, ಹೌದಾ?"  ಮತ್ತೆ ಹೌದೆಂದರು ವೈದ್ಯರು. 



"ಹಾಗಾದರೆ, ನನ್ನದೊಂದು ವಿನಂತಿ ಇದೆ.  ನನ್ನಮ್ಮ ಯಾವಾಗಲೂ ದೇವರು ಹೊರಗಿಲ್ಲ, ಮನುಷ್ಯರ ಹೃದಯದಲ್ಲಿದ್ದಾನೆ ಎನ್ನುತ್ತಿರುತ್ತಾಳೆ. ನನ್ನ ಹೃದಯದಲ್ಲೂ ಅವನು ಇದ್ದಾನೆ ಅಲ್ಲವೇ? ಈಗ ನೀವು ನನ್ನ ಹೃದಯ, ಸೀಳಿದಾಗ ಅವನು ನಿಮಗೆ ಕಂಡುಬರುತ್ತಾನೆ, ಅಲ್ಲವೇ? ನೀವು ಗಮನವಿಟ್ಟು ಅವನು ಹೇಗಿದ್ದಾನೆ ಎಂದು ನೋಡಬೇಕು . ನಾನು ಎಚ್ಚರಗೊಂಡ ಅನಂತರ ನನಗೆ ಹೇಳಬೇಕು, ಆಗಬಹುದೇ?" ಎಂದನಂತೆ.




ವೈದ್ಯರ ಹೃದಯ ಅವನ ಮುಗ್ಧ ಸುಂದರ ಕೋರಿಕೆ ಕೇಳಿ ದ್ರವಿಸಿತು. ತಲೆ ಸವಾರಿ, "ಆಗಬಹುದು ಮಗು, ಅವನನ್ನು ಕಾಣುವಷ್ಟು ಬಲಿತವ ನಾನಲ್ಲ. ಆದರೆ, ಒಂದು ವೇಳೆ ಅವನು ಕಂಡರೆ ನಿನಗೆ ಖಂಡಿತ ತಿಳಿಸುತ್ತೇನೆ." ಎಂದುತ್ತರಿಸಿದರು.
ಶಸ್ತ್ರಚಿಕಿತ್ಸೆ ಶುರುವಾಯಿತು. ಹೃದಯದ ಕೆಲಸವನ್ನು ಯಂತ್ರಕ್ಕೊಪ್ಪಿಸಿ ಅದಕ್ಕೆ ರಕ್ತ ಹರಿದು ಬರದಂತೆ ಬಸಿದು, ಹೃದಯ ಸಿಗಿದು, ಒಳಗಿರುವ ವಿಕೃತಿಯನ್ನು ಸರಿಪಡಿಸಲಾಯಿತು. ಎಲ್ಲ ಸರಿಯಾದ ಅನಂತರ ರಕ್ತಪರಿಚಲನೆಯನ್ನು ಯಂತ್ರದಿಂದ ತಪ್ಪಿಸಿ, ಹೃದಯಕ್ಕೆ ಹರಿಸಲಾಯಿತು. 



ಆದರೆ ಹೃದಯಕ್ಕೆ ಏನು ಧಕ್ಕೆಯಾಗಿತ್ತೊ ಏನೋ ಅದು ಕೆಲಸ ಮಾಡಲು ಶುರು ಮಾಡಲೇ ಇಲ್ಲ. ಅದಕ್ಕೆ ರಕ್ತ ಹರಿದು ಬರಲೇ ಇಲ್ಲ. ಅಂದರೆ, ಮಗು ಬದುಕುವುದು ಅಸಂಭವವಾಗಿತ್ತು. ಆ ಕ್ಷಣ ಮಗುವಿನ ಹಿಂದಿನ ದಿನದ ಮಾತುಗಳು ವೈದ್ಯರಿಗೆ ನೆನಪಾದವು. ಹೃದಯ ತುಂಬಿ, ಕಣ್ಣೀರಾಗಿ ಹರಿಯಿತು. ಕನ್ನಡಕ ತೆಗೆದು ಕೈಮುಗಿದು, "ಭಗವಂತ, ನನ್ನ ಶಕ್ತಿಗನುಸಾರವಾಗಿ ಪ್ರಯತ್ನಿಸಿದ್ದೇನೆ. ಫಲ ಕಾಣುತ್ತಿಲ್ಲ. ಮುಂದಿನದು ನಿನ್ನ ಕೈಯಲ್ಲಿದೆ. ನಿನ್ನನ್ನು ನೋಡುವಾಸೆ ಎಂದ ಹುಡುಗ. ಅದಕ್ಕಾಗಿಯಾದರೂ ಬದುಕಿಸು ಇವನನ್ನು ಸ್ವಾಮೀ" ಎಂದು ಪ್ರಾರ್ಥಿಸತೊಡಗಿದರು. ಮನಸ್ಸು ಅವನಲ್ಲೇ ಒಂದಾಯಿತು.





ಯಾರೋ ರಟ್ಟೆ ಅಲುಗಾಡಿಸಿದಂತಾಗಿ ಎಚ್ಚರವಾಯಿತು. ಸಹವೈದ್ಯ, "ಸರ್ , ಸರ್ ನೋಡಿ ಹೃದಯ ಬಡಿದುಕೊಳ್ಳುತ್ತಿದೆ. ಆಪರೇಷನ್ ಫಲಕಾರಿಯಾಯಿತು. ಅಭಿನಂದನೆಗಳು." ಎನ್ನುತ್ತಿದ್ದ.





ಅರವಳಿಕೆಯಿಂದ ಎಚ್ಚರವಾಗಿ ಇವರ ಮುಖ ನೋಡುತ್ತಿದ್ದಂತೆಯೇ ಹುಡುಗ ಕ್ಷೀಣ ಧ್ವನಿಯಿಂದ, "ನೀವು ದೇವರನ್ನು ಕಂಡಿರೇನು?"ಎಂದ.  ಇವರು ಅವನ ಕೈಹಿಡಿದು, "ಇಲ್ಲ ಮಗು, ಆದರೆ ಅವನಿರುವನ್ನು ಅನುಭವಿಸಿದೆ. ಅವನನ್ನು ನೋಡಲಿಲ್ಲಿ ಅನುಭವಿಸಲು ಸಾಧ್ಯ ಎನಿಸುತ್ತದೆ ನನಗೆ."ಎಂದುತ್ತರಿಸಿದರು.


ದೇವರು ಎಂಬ ಜಿಜ್ಞಾಸೆ
Image have all standard licence belongs to Concerned person. Copying is purely offensive

ದುರ್ಭರವಾದ ಕ್ಷಣದಲ್ಲಿ ಮನಸ್ಸನ್ನು ಪರಬ್ರಹ್ಮನಲ್ಲಿರಿಸಲು ಸಾಧ್ಯವಾದರೆ ಅದೇ ಜೀವನ್ಮುಕ್ತಿ.

ಬದುಕು ಇಂದ್ರಿಯಗಳಿಂದ, ಹಾಗೇ ಬದುಕಿನೊಂದಿಗೆ ಮಾಯೆ. ಮಾಯೆ ಎಂದರಿತು ಅದರ ಗೋಜಲುಗಳಿಗೆ ಪಕ್ಕಾಗದೇ ಹೊರನಿಂತು, "ಇದು ಇಷ್ಟೇ, ಇದಕ್ಕಿಂತ ಮಿಗಿಲಾದುದನ್ನು ಕಾಣುವುದೇ ಜೀವನದ ಗುರಿ" ಎಂದುಕೊಂಡಾಗ ಜೀವ ವಿಕಸಿಸುತ್ತದೆ. ಎಲ್ಲಿ ಈ ಭಾವ ಬಂತೋ ಅವನು ಜೀವನದಲ್ಲಿ ಇದ್ದೂ ಇಲ್ಲದವ, ಮುಕ್ತಿ, ಅಲ್ಲಿ ಜಗತ್ತಿಗಾಗಿ  ಮರುಗುವ, ಸಹಾಯ ಹಸ್ತಚಾಚುವ ಹುಟ್ಟುತ್ತಾನೆ.

(ಕಥೆ ಹೇಳಿದವರು ಡಾ| ಗುರುರಾಜ ಕರ್ಜಗಿ.)
Copyright © 2017-18 by Anand Joshi All rights reserved. No part of this publication may be reproduced, distributed, or transmitted in any form or by any means, including photocopying, recording, or other electronic or mechanical methods, without the prior written permission of the publisher, except in the case of brief quotations embodied in critical reviews and certain other noncommercial uses permitted by copyright law. For permission requests, write to the publisher, addressed “Attention: Permissions Coordinator,” at the address below. 
 anandajoshi@datamail.in +91-9483998343 
 Account ID: pub-2871201476498332 Client ID: ca-pub-2871201476498332

Friday, 10 February 2017

Breaking the bonds of KARMA

In conditions life we are committing things at every step even without knowing it. The reason we are sinning unknowingly is that we have been in ignorance from our every birth.
This ignorance is prominent despite so many educational institutions. Why? because despite so many big, big universities, none of them is teaching of atma-tattva for the science of the soul.
BREAKING THE BONDS OF KARMA
Image have all standard licence belongs to Concerned person. Copying is purely offensive.

Therefore people remain in ignorance,  and they continue to sin and suffer the reactions. That is started in the Srimad Bhagavatam (5.5.3):parabhavas tavad abodha-jato yavan na jijnasata atma tattvam.
This foolishness will continue until one comes to the platform of understanding self-realization.
Otherwise, all these universities and Institutions for imparting knowledge are a continuation of that same ignorance and foolishness. Unless one comes to the point of asking  “What am I? What is God? What is this world? What is my relationship with God and this world?” and finds proper answers, One continuos to be  foolish like an animal and is subjected to transmigration from one body to another in different species of life. This is the result of ignorance.


(video belongs to Sadhguru. Yogi, mystic, visionary and poet, Sadhguru is a spiritual master with a difference. An arresting blend of profundity and pragmatism, his life and work serve as a reminder that yoga is not an esoteric discipline from an outdated past, but a contemporary science, vitally relevant to our times. Probing, passionate and provocative, insightful, logical and unfailingly witty, Sadhguru’s talks have earned him the reputation of a speaker and opinion-maker of international renown.)
So, the modern civilization is very risky. One may feel comfortable as a successful Businessman or politician, or one may think oneself comfortable because of being born in rich Nation like America, but these statuses  of life are temporary. They will have to change, and we do not know what kind of miseries we will have to suffer in our next life because of our sinful activities. so if one does not begin cultivating transcendental knowledge, then one's life is very risky. Suppose a healthy man is living in a contaminated place. is his life not at risk? He may become infected by diseases at any moment. Therefore we should work to dissipate our ignorance through cultivation of transcendental knowledge.

Image have all standard licence belongs to Concerned person. Copying is purely offensive.

A good example of how we commit sins unknowingly is eating. In the Bhagavad-gita Krishna says that His devotees are freed from sin because they eat only the remnants of food that has been offered to Him. But, He says, those who cook for themselves eat only sin. The difference between cooking here in this temple and cooking in some ordinary house is that our cooking and eating a relieving us from sin, while the cooking and eating of a non-devotee are simply  entangling him more and more in sin. The cooking and eating appear  the same, but they are different. Here there is no sin  because the food is being cooked and eaten for Krishna.


(Copyright © 2016-17 by Anand Joshi All rights reserved. No part of this publication may be reproduced, distributed, or transmitted in any form or by any means, including photocopying, recording, or other electronic or mechanical methods, without the prior written permission of the publisher, except in the case of brief quotations embodied in critical reviews and certain other noncommercial uses permitted by copyright law.)

Thursday, 5 January 2017

GOOD AND THE LAW OF KARMA

Among the vast ancient Sanskrit writings known as the Vedas, the 108 Upanishads contain the philosophical essence.

INDIAN CULTURE AND VALUES
Image have all standard licence belongs to Concerned person. Copying is purely offensive.

And among all the Upanishads the Ishopanishad is considered the foremost. In the following essay, we learn the truth about the Supreme Lord, The laws governing his material and spiritual energies, and how to break free of the bondage of Karma. 

The Ishopanishad states that the supreme personality of godhead is "perfect and complete".  'Part of the lord's complete arrangement for this material world is his process of creation, maintenance and destruction. 

Every living being in this material world has a fixed schedule of 6 changes: birth, growth, maintenance, and the production of by products, diminution and destruction. This is the law of material nature. A flower is born as a bud. It grows remains fresh for 2 or 3 days, produces a seed, gradually withers, and then is finished. You cannot stop this by you are so called material science. To try to do so is Avidya, ignorance. 

INDIAN CULTURE AND VALUES
Image have all standard licence belongs to Concerned person. Copying is purely offensive.

Sometimes people foolishly think that by scientific advancement man will become immortal. This is nonsense. You cannot stop the material laws. Therefore in the Bhagavad Gita (7.14) Lord Krishna says that the material energy is duratyaya, impossible to overcome by material means. Material nature consists of three modes, or gunas: sattva-guna, rajo-guna and tamo-guna, or the modes of goodness passion and the ignorance. 

Another meaning of guna is "Rope". 

Rope is made by twisting fibre in threefold process. First the fibre is twisted in three small strands, and three of them are twisted together, then again three of those twisted together. In this way Rope becomes very strong. Similarly the three modes of nature: goodness passion and strong. ignorance--are mixed, after which they produce some by product. Then they are mixed again and again and then again. Thus they are "twisted together" in innumerable times. 


In this way the material energy binds you are more and more. 

By your own efforts you cannot get out of this bondage which is known as pavarga. Pa-varga is is set of fifth letters in the Sanskrit Devanagari alphabet. 
It contains the letters pa, pha,ba, bha and ma. 

INDIAN CULTURE AND VALUES
Image have all standard licence belongs to Concerned person. Copying is purely offensive.

Pa stands for parishrama, "hard labour". Every living entity in this world is struggling very hard to maintain himself and survive. This is called that hard struggle for existence. 


Pha stands for phena, "foam". When a horse works very hard foam comes out of its mouth, similarly when we are tired from working very hard, our tongue may become dry and some foam forms in our mouth. Everyone is working very hard for sense gratification. So much so that foam is coming from their mouth. 

Ba represents bandha, "Bondage". In spite of all our efforts, we remain bound up by the ropes of the material modes of nature. 

Bha stands or Bhaya, "fear".  In material life one is always in a blazing fire of fear, since no one knows what will happen next. 

And ma represent mratyu, "death". All our hopes and plans for happiness and security in this world are ended by death. So Krishna consciousness nullifies this pavarga process.

 In other words by taking to Krishna  consciousness one attains apavarga, where there is no hard struggle for existence and no material bondage, fear or death. Pavarga symptomizes this material world, but when you add the prefix "a" to pavarga, that means it is nullified. Our Krishna consciousness movement is the part of Apavarga.

Unfortunately  people do not know of these things and therefore they are wasting their lives. This modern civilization is a soul-killing Civilization. People are killing themselves because they do not know what real life is. They are simply living like animals. 

The animal does not know what life is, So he simply works under the laws of nature undergoing gradual evolution. But when you get this human form of life, you have responsibility to live in different way. 

Here is a chance for you become Krishna conscious and solve all all problems. But if you don't----if you continue to act like animals--- you will again have to enter the cycle birth and death and transmigrate through 84,00,000 species of life. 

It will take many many millions of years to come back to the human form of life. For example the sun sign you are seeing now you will not see again until after 24 hours. Everything in nature moves in a cycle. So if you lose this opportunity of elevating yourself then you again must enter the cycle of transmigration. Nature's law is very strong.


Friday, 2 December 2016

'ತುಲಸಿ'ಯಾಗುವ ಭಾಗ್ಯ ಲಭಿಸಲಿ!

ಸುಮಾರು ೧೫-೧೬ನೆಯ ಶತಮಾನದ ಸಂತ ಕವಿ, ಶ್ರೀರಾಮಚಂದ್ರನ ಪರಮ ಭಕ್ತಶ್ರೀ ತುಲಸೀದಾಸ ಗೋಸ್ವಾಮಿ.



ಶ್ರೀರಾಮಚಂದ್ರನನ್ನು ಪ್ರೀತಿಸಿ, ಧ್ಯಾನಿಸಿ, ಬೇಡಿ, ಕಾಡಿ, ಹೆದರಿಸಿ ತನ್ನ 'ವಿನಯ ಪತ್ರಿಕಾ' ಎಂಬ ಮಹಾಕೃತಿಯ ಮೇಲೆ ಶ್ರೀರಾಮಚಂದ್ರನೇ ಸ್ವಯಂ ಸ್ವೀಕೃತಿಯ ಹಸ್ತಾಕ್ಷರ ಹಾಕುವಂತೆ ಮಾಡಿದವನು. ಶ್ರೀರಾಮಚರಿತ ಮಾನಸ, ತುಲಸಿ ರಾಮಾಯಣ ಎಂದೇ ಜನಪ್ರಿಯವಾಗಿರುವ ಮೇರುಕೃತಿಯ ಕರ್ತನೀತ. ಇಂಥ ಮಹಾಸಂತನ ಬದುಕಿನ ಒಂದು ಘಟನೆ ಇದು ಎನ್ನುತ್ತಾರೆ. ಭಾವದಲ್ಲಿಯೇ ಸಂಪೂರ್ಣ ಮುಳುಗಿದ ತುಲಸಿಯನ್ನು ಭಗವಂತನ ದಾಸನಾಗಿ ಪರಿವರ್ತಿಸಿದ ಕಥೆ ಇದು.


ANANDJOSHI9.BLOGSPOT.IN
Image have all standard licence belongs to Concerned person. Copying is purely offensive.
ತುಲಸಿ ದಾಸರ ವಿವಾಹ 'ರತ್ನಾವಲೀ' ಎಂಬ ಸುಂದರ ಕನ್ಯೆಯೊಂದಿಗೆ ನಡೆಯಿತಂತೆ. ಆ ಕ್ಷಣದಿಂದ ತುಲಸಿ ಎಂಬ ಯುವಕ ಅಕ್ಷರಶಃ "ರತ್ನಾವಲೀ" ದಾಸನಾದ. ಒಂದು ದಿನವೂ ಅವಳಿಂದ ಆಗಲಿರಲಾಗದ ಮೋಹದ ಪರೆಯೊಂದು ಅವನನ್ನು ಕವಿಯಿತು.

ಹೀಗಿರಲು ಒಂದು ದಿನ ತುಲಸಿ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ರತ್ನಾವಲಿಗೆ ತವರಿಗೆ ಹೋಗಬೇಕಾದ ತುರ್ತು ಪರಿಸ್ಥಿತಿ ಬಂತು. ಹಾಗೇ ಪತಿಗೆ ತಿಳಿಸದೇ ಹೊರಟು ಹೋದಳು. ಸಂಜೆ ಮನೆಗೆ ಮರಳಿದ ತುಲಸಿಗೆ ಪತ್ನಿ ಇಲ್ಲದ್ದು ತಿಳಿಯಿತು. ರಾತ್ರಿ "ಪೂರ್ತಿ ಅವಳನ್ನು ಆಗಲಿರಬೇಕಾದ ಯೊಚನೆಯಿಂದಲೇ ಕಂಗಾಲಾಗಿ ಹೋದನವನು. ಸುರಿವ ಮಳೆ, ಗುಡುಗು, ಸಿಡಿಲುಗಳ ಆರ್ಭಟವನ್ನು ಲೆಕ್ಕಿಸದೆ ಮಾವನ ಮನೆಯತ್ತ ಓಡುತ್ತಾ ಹೋದ. ಅದರ ಹಾದಿಯಲ್ಲಿ ನದಿ ತುಂಬಿ ಹರಿಯುತಿತ್ತು.
ಪ್ರವಾಹದಲ್ಲಿ ನದಿ ದಾಟುವುದೆಂತು? ಒಬ್ಬನೇ ಒಬ್ಬ ಅಂಬಿಗನ ದೋಣಿ ಕಾಣುತ್ತಿರಲಿಲ್ಲ. ಈಗಂತೂ ತುಲಸಿ ಹುಚ್ಚನಂತಾದ. ಅತ್ತಿತ್ತ ಅಲೆದಾಡಿ ಯಾವುದಾದರೂ ಉಪಾಯ ಕಾಣುವುದೋ ಎಂದು ಹುಡುಕುತ್ತಿದ್ದವನಿಗೆ ಹಲಗೆಯ ತುಂಡಿನಂತಥದ್ದೇನೋ ಕಂಡಿತು. ಹಿಂದು ಮುಂದು ಆಲೋಚಿಸದೇ ತುಲಸಿ ಅದರ ಮೇಲೆ ಬೋರಲು ಬಿದ್ದ.  ಕೈಗಳನ್ನೇ ಹರಿಗೋಲಿನಂತೆ ಉಪಯೋಗಿಸುತ್ತಾ ಆಚೆ ದಡ ಸೇರಿದ.

ಸೇರಿದವನೇ ರತ್ನಾವಾಲಿಯ ಮನೆಯತ್ತ ಓಡಿದ. ಸರಿ ರಾತ್ರಿಯಾಗಿತ್ತು. ಮನೆಯಲ್ಲಿ ಒಂದೇ ಒಂದು ದೀಪವೂ ಉರಿಯುತ್ತಿರಲಿಲ್ಲ. ಬಾಗಿಲು ತಟ್ಟಿದರೆ ಉತ್ತರವಿಲ್ಲ. ಮನೆಗೊಂದು ಸುತ್ತು ಬಂದ. ತಾರಸಿಯಿಂದ ಹಗ್ಗವೊಂದು ನೇತಾಡುತ್ತಿರುವುದು ಕಂಡಿತು. "ಆಹಾ! ನಾನು ಬರುವುದನ್ನು ನಿರೀಕ್ಷಿಸಿ ನನ್ನ ಮನದನ್ನೆ ಹಗ್ಗ ಕಟ್ಟಿಟ್ಟಿದ್ದಾಳೆ" ಎಂದುಕೊಂಡು ತಾರಸಿ ಹತ್ತಿ ತೆರೆದ ಕಿಟಕಿಯ ಮೂಲಕ ಹೆಂಡತಿಯ ಕೋಣೆ ಸೇರಿದ.

ಗಾಢನಿದ್ದೆಯಲ್ಲಿದ್ದ ಪತ್ನಿಯನ್ನು ಎಬ್ಬಿಸಿದ. ಇವನ ಅವತಾರ ಕಂಡು ಅವಳು ದಂಗಾದಳು. ಹಗ್ಗದ ಕಥೆ ಕೇಳಿ, "ತಾನು ಹೇಗೆ ಮಾಡಿದ್ದೇ ಇಲ್ಲ" ಎಂದಳು. " ನಿಮ್ಮ  ಈ ನಶ್ವರ ದೇಹದ ಮೇಲಿನ ಮೋಹದ ನೂರರ ಒಂದು ಪಾಲು ಶ್ರೀರಾಮಚಂದ್ರನ ಚರಣಾರವಿಂದಗಳಲ್ಲಿ ಇಟ್ಟರೆ ಭವದಿಂದಲೇ ಮುಕ್ತಿ ಸಿಗುತ್ತಿತ್ತು ಎಂದಳು. ಅವಳ ಈ ಒಂದು ಮಾತು ತುಲಸಿಯ ಮನದ ಕಾವಳ ಹರಿಸಿತು. ಮೋಹ ಕಳೆಯಿತು. ತುಲಸಿ, ಶ್ರೀರಾಮಚಂದ್ರನ ದಾಸನಾದ. ಅವನ ಭಕ್ತಿ ಕಾವ್ಯಧಾರೆಯಾಯಿತು. ಜಗತ್ತು ಇಂದೂ ಸ್ಮರಿಸುವ ಸಂತರ ಪಾಲಿಗೆ ಸೇರ್ಪಡೆಯಾದ. ರತ್ನಾವಲಿಯ ಮಾತೆಂಬ ಪರುಷಮಣಿಯ ಸಂಪರ್ಕದಿಂದ ಕಬ್ಬಿಣ ಹೊನ್ನಾಗಿ ಪರಿವರ್ತನೆಯಾಯಿತು.

ಅಸಲಿಗೆ ಅವನು ತೆಪ್ಪವೆಂದು ಉಪಯೋಗಿಸಿದ್ದು ಕೊಳೆತ ಶವವಾಗಿತ್ತು. ತಾರಸಿಯಿಂದ ನೇಲುತ್ತಿದ್ದ ಹಗ್ಗ ಹಾವಾಗಿತ್ತು.


ANANDJOSHI9.BLOGSPOT.IN
Image have all standard licence belongs to Concerned person. Copying is purely offensive.
'ಸಂಸಾರವೆಂಬ ಸಾಗರದಲ್ಲಿ ಸಾಸಿವೆಯಷ್ಟು ಸುಖವಾದರೆ, ದುಃಖ ಸಾಗರದಷ್ಟು' ಎನ್ನುವ ಮಾತಿದೆ. ಈ ಸುಖ-ದುಃಖಗಳ ಮಧ್ಯದ ಗೆರೆ ಕಂಡವನಿಗೆ ಮಾಯೆ ಹಿಂಗುತ್ತದೆ. ಭವ ಕಳೆಯುತ್ತದೆ. ಹೀಗೆ ಕಳೆದುಕೊಂಡವರು ಭಾರತವೆಂಬ ಪುಣ್ಯಭೂಮಿಯಲ್ಲಿ ಕೋಟಿ ಸಂಖ್ಯೆಗಳಲ್ಲಿ ಇದ್ದರು, ಇದ್ದಾರೆ ಹಾಗೂ ಮುಂದಕ್ಕೂ ಬರುವವರಿದ್ದಾರೆ.

( Copyright © 2015-16 by Anand Joshi All rights reserved. No part of this publication may be reproduced, distributed, or transmitted in any form or by any means, including photocopying, recording, or other electronic or mechanical methods, without the prior written permission of the publisher, except in the case of brief quotations embodied in critical reviews and certain other noncommercial uses permitted by copyright law. For permission requests, write to the publisher, addressed “Attention: Permissions Coordinator,” at the address below. 

 anandjoshi9@live.com 
+91-9483998343

 Account ID: pub-2871201476498332 Client ID: ca-pub-2871201476498332

CLICK HERE