ಆರು ವರ್ಷದ ಮಗು ಅಪರೂಪದ ಹೃದಯರೋಗದಿಂದ ಬಳಲುತ್ತಿದ್ದ. ಊರಿನ ವೈದ್ಯರು ಬದುಕುವುದು ಮೂರು ತಿಂಗಳು ಮಾತ್ರ ಎಂದು ಭವಿಷ್ಯ ನುಡಿದಿದ್ದರು. ಕಂಗಾಲಾದ ಹೆತ್ತವರು ಖ್ಯಾತ ವೈದ್ಯರಲ್ಲಿ ಚಿಕಿತ್ಸೆಗಾಗಿ ಬಂದಿದ್ದರು. ಮಗುವಿನ ಕೂಲಂಕುಷ ತಪಾಸಣೆ ನಡೆಸಿದಾಗ, ಇನ್ನೂ ಪ್ರಯೋಗಾವಸ್ಥೆಯಲ್ಲಿರುವ ಅತ್ಯಂತ ಕ್ಷಿಷ್ಟಕರವಾದ, ತೆರೆದ ಹೃದಯದ ಶಸ್ತ್ರಕ್ರಿಯೆಯಿಂದ ಮಾತ್ರ ಮಗುವಿನ ಆರೋಗ್ಯ ಸುಧಾರಿಸಬಹುದಾದ ಸಾಧ್ಯತೆ ಇರಬಹುದು ಎಂದು ಕಂಡು ಬಂತು.
ಒಂದು ವೇಳೆ ಆ ಚಿಕಿತ್ಸೆ ನಡೆಸಿದಿದ್ದಲ್ಲಿ ಮಗು ಮೂರು ತಿಂಗಳು ಬದುಕುವುದೂ ಸಂದೇಹಾಸ್ಪದವಾಗಿತ್ತು. ಹಾಗೆಯೇ ಚಿಕಿತ್ಸೆ ನಡೆಸುತ್ತಿರುವಾಗಲೇ ಮಗು ಸಾಯುವ ಸಾಧ್ಯತೆಯೂ ಇತ್ತು. ಇವೆಲ್ಲವನ್ನೂ ಹೆತ್ತವರಿಗೆ ವಿವರವಾಗಿ ತಿಳಿಸಲಾಯಿತು. ಅಳೆದು ಸುರಿದು ಅನ್ಯಮಾರ್ಗ ಇರದ್ದನ್ನು ಅರಿತು ಅವರು ಶಸ್ತ್ರಚಿಕಿತ್ಸೆಗೆ ಒಪ್ಪಿದರು. ದಿನ ನಿಗದಿಯಾಯಿತು.
Image have all standard licence belongs to Concerned person. Copying is purely offensive. |
"ಹಾಗಾದರೆ, ನನ್ನದೊಂದು ವಿನಂತಿ ಇದೆ. ನನ್ನಮ್ಮ ಯಾವಾಗಲೂ ದೇವರು ಹೊರಗಿಲ್ಲ, ಮನುಷ್ಯರ ಹೃದಯದಲ್ಲಿದ್ದಾನೆ ಎನ್ನುತ್ತಿರುತ್ತಾಳೆ. ನನ್ನ ಹೃದಯದಲ್ಲೂ ಅವನು ಇದ್ದಾನೆ ಅಲ್ಲವೇ? ಈಗ ನೀವು ನನ್ನ ಹೃದಯ, ಸೀಳಿದಾಗ ಅವನು ನಿಮಗೆ ಕಂಡುಬರುತ್ತಾನೆ, ಅಲ್ಲವೇ? ನೀವು ಗಮನವಿಟ್ಟು ಅವನು ಹೇಗಿದ್ದಾನೆ ಎಂದು ನೋಡಬೇಕು . ನಾನು ಎಚ್ಚರಗೊಂಡ ಅನಂತರ ನನಗೆ ಹೇಳಬೇಕು, ಆಗಬಹುದೇ?" ಎಂದನಂತೆ.
ವೈದ್ಯರ ಹೃದಯ ಅವನ ಮುಗ್ಧ ಸುಂದರ ಕೋರಿಕೆ ಕೇಳಿ ದ್ರವಿಸಿತು. ತಲೆ ಸವಾರಿ, "ಆಗಬಹುದು ಮಗು, ಅವನನ್ನು ಕಾಣುವಷ್ಟು ಬಲಿತವ ನಾನಲ್ಲ. ಆದರೆ, ಒಂದು ವೇಳೆ ಅವನು ಕಂಡರೆ ನಿನಗೆ ಖಂಡಿತ ತಿಳಿಸುತ್ತೇನೆ." ಎಂದುತ್ತರಿಸಿದರು.
ಶಸ್ತ್ರಚಿಕಿತ್ಸೆ ಶುರುವಾಯಿತು. ಹೃದಯದ ಕೆಲಸವನ್ನು ಯಂತ್ರಕ್ಕೊಪ್ಪಿಸಿ ಅದಕ್ಕೆ ರಕ್ತ ಹರಿದು ಬರದಂತೆ ಬಸಿದು, ಹೃದಯ ಸಿಗಿದು, ಒಳಗಿರುವ ವಿಕೃತಿಯನ್ನು ಸರಿಪಡಿಸಲಾಯಿತು. ಎಲ್ಲ ಸರಿಯಾದ ಅನಂತರ ರಕ್ತಪರಿಚಲನೆಯನ್ನು ಯಂತ್ರದಿಂದ ತಪ್ಪಿಸಿ, ಹೃದಯಕ್ಕೆ ಹರಿಸಲಾಯಿತು.
ಆದರೆ ಹೃದಯಕ್ಕೆ ಏನು ಧಕ್ಕೆಯಾಗಿತ್ತೊ ಏನೋ ಅದು ಕೆಲಸ ಮಾಡಲು ಶುರು ಮಾಡಲೇ ಇಲ್ಲ. ಅದಕ್ಕೆ ರಕ್ತ ಹರಿದು ಬರಲೇ ಇಲ್ಲ. ಅಂದರೆ, ಮಗು ಬದುಕುವುದು ಅಸಂಭವವಾಗಿತ್ತು. ಆ ಕ್ಷಣ ಮಗುವಿನ ಹಿಂದಿನ ದಿನದ ಮಾತುಗಳು ವೈದ್ಯರಿಗೆ ನೆನಪಾದವು. ಹೃದಯ ತುಂಬಿ, ಕಣ್ಣೀರಾಗಿ ಹರಿಯಿತು. ಕನ್ನಡಕ ತೆಗೆದು ಕೈಮುಗಿದು, "ಭಗವಂತ, ನನ್ನ ಶಕ್ತಿಗನುಸಾರವಾಗಿ ಪ್ರಯತ್ನಿಸಿದ್ದೇನೆ. ಫಲ ಕಾಣುತ್ತಿಲ್ಲ. ಮುಂದಿನದು ನಿನ್ನ ಕೈಯಲ್ಲಿದೆ. ನಿನ್ನನ್ನು ನೋಡುವಾಸೆ ಎಂದ ಹುಡುಗ. ಅದಕ್ಕಾಗಿಯಾದರೂ ಬದುಕಿಸು ಇವನನ್ನು ಸ್ವಾಮೀ" ಎಂದು ಪ್ರಾರ್ಥಿಸತೊಡಗಿದರು. ಮನಸ್ಸು ಅವನಲ್ಲೇ ಒಂದಾಯಿತು.
ಯಾರೋ ರಟ್ಟೆ ಅಲುಗಾಡಿಸಿದಂತಾಗಿ ಎಚ್ಚರವಾಯಿತು. ಸಹವೈದ್ಯ, "ಸರ್ , ಸರ್ ನೋಡಿ ಹೃದಯ ಬಡಿದುಕೊಳ್ಳುತ್ತಿದೆ. ಆಪರೇಷನ್ ಫಲಕಾರಿಯಾಯಿತು. ಅಭಿನಂದನೆಗಳು." ಎನ್ನುತ್ತಿದ್ದ.
ಅರವಳಿಕೆಯಿಂದ ಎಚ್ಚರವಾಗಿ ಇವರ ಮುಖ ನೋಡುತ್ತಿದ್ದಂತೆಯೇ ಹುಡುಗ ಕ್ಷೀಣ ಧ್ವನಿಯಿಂದ, "ನೀವು ದೇವರನ್ನು ಕಂಡಿರೇನು?"ಎಂದ. ಇವರು ಅವನ ಕೈಹಿಡಿದು, "ಇಲ್ಲ ಮಗು, ಆದರೆ ಅವನಿರುವನ್ನು ಅನುಭವಿಸಿದೆ. ಅವನನ್ನು ನೋಡಲಿಲ್ಲಿ ಅನುಭವಿಸಲು ಸಾಧ್ಯ ಎನಿಸುತ್ತದೆ ನನಗೆ."ಎಂದುತ್ತರಿಸಿದರು.
Image have all standard licence belongs to Concerned person. Copying is purely offensive
|
No comments:
Post a Comment