Tuesday, 25 April 2017

ನಮ್ಮ ಪ್ರಾಚೀನರ ಸಂಪನ್ನ ಜ್ಞಾನ 'ವಿಜ್ಞಾನ'

ಉಜ್ಜಯಿನಿಯ ಮಹಾರಾಜನಿಗೆ ಪುತ್ರೋತ್ಸವವಾಗಿತ್ತು. ಅಪರೂಪಕ್ಕೆ ಹುಟ್ಟಿದ ಕಂದನ ಆಗಮನದಿಂದ ಹೆತ್ತವರು ಮಾತ್ರವಲ್ಲ, ಇಡೀ ರಾಜ್ಯವೇ ಸಂಭ್ರಮಿಸುತ್ತಿತ್ತು. ಮಗುವಿನ ಭವಿಷ್ಯ ತಿಳಿಯಲು ಮಹಾರಾಜ ತನ್ನ ಆಸ್ಥಾನದ ಜ್ಯೋತಿಷ್ಯ ಶಿರೋಮಣಿ 'ಮಿಹಿರಾಚಾರ್ಯ'ರರಿಗೆ ಕರೆ ಕಳುಹಿಸಿದ. ಜನ್ಮಕಾಲವನ್ನು ಕೇಳಿದ ಮಿಹಿರಾಚಾರ್ಯರ ತಲೆ ತಗ್ಗಿತು. ಹೊರಬರಲು ತಡಕಾಡುತ್ತಾ ಗಂಟಲಲ್ಲೇ ಭಂದಿಯಾಗಿದ್ದ ಶಬ್ದಗಳನ್ನು ಬಲು ಕಷ್ಟದಿಂದ ಹೊರಹಾಕಿದ ಮಿಹಿರಚಾರ್ಯ "ಈ ಹುಡುಗ ಅಲ್ಪಾಯುಷಿ, ತನ್ನ ಐದನೆಯ ಜನ್ಮದಿನ ಕಾಣಲಾರ". ರಾಜಕುಟುಂಬಕ್ಕೆ ಸಿಡಿಲು ಬಡಿದಂತಾಯಿತು. ಮಿಹಿರಾಚಾರ್ಯರ ಬಾಯಿಂದ ಹೊರಬಿದ್ದ ಯಾವುದೇ ಮಾತು ವ್ಯರ್ಥವಾದುದಿಲ್ಲ."ಸೂಕರದಿಂದ ಸಾವು" ಎಂದಿದ್ದರು ಆಚಾರ್ಯರು.

ಹೀಗಾಗಿ ಹುಡುಗನಿಗಾಗಿ ಒಂದು ಸುಭದ್ರ ಅರಮನೆ ತಯಾರಾಯಿತು. ನೊಣವೂ ಒಳಗೆ ನುಸುಳಲಾಗದಷ್ಟು ಭದ್ರತೆಯಲ್ಲಿ ಹುಡುಗ ಬೆಳೆಯತೊಡಗಿದ. ಅಂದು ಆಚಾರ್ಯರಿತ್ತ ಗಡುವಿನ ಕೊನೆಯ ದಿನ. ಗಳಿಗೆಗೊಮ್ಮೆಯಂತೆ ಭಟರು ಹುಡುಗನ ಕ್ಷೇಮ ಸಮಾಚಾರ ತರುತ್ತಿದರು. ಸೂರ್ಯಾಸ್ತವಾಯಿತು. ಸುದ್ದಿ ಹೊತ್ತು ಬಂದ ಭಟನ ಮುಖ ಬಿಳುಚಿಕೊಂಡಿತ್ತು. ಕಾತರದಿಂದ ಶುಭ ಸಮಾಚಾರಕ್ಕಾಗಿ ಕಾಯುತ್ತಿದ್ದ ನಾಡು ಸುದ್ದಿ ಕೇಳಿ ನಡುಗಿಹೋಯಿತು. ಹುಡುಗ ಸೂಕರದಿಂದ ಮೃತನಾಗಿದ್ದ.

ರಾಜ್ಯ ಲಾಂಛನ 'ವರಾಹ'ವನ್ನು ಹೊತ್ತ ಬಾವುಟ, ರಾಜಕುಮಾರ ಆಡುತ್ತಿದ್ದ ಛತ್ತಿನ ಮೇಲೆ ಹಾರಾಡುತ್ತಿತ್ತು. ಆಡುತ್ತಾ ಹುಡುಗ ಬಾವುಟದ ಹಗ್ಗ ಎಳೆದಿದ್ದ. ಭಾರದ ಬಾವುಟದ ಕೋಲು ಬುಡದಿಂದ ಕಳಚಿಕೊಂಡು ಅವನ ದೇಹದ ಮೇಲೆ ಬಿದ್ದು ಅವನೆದೆಯನ್ನು ಸೀಳಿತ್ತು!! ಮಿಹಿರಚಾರ್ಯ "ವರಾಹ ಮಿಹಿರಾಚಾರ್ಯ" ಎಂದೇ ಇಂದಿಗೂ ಪ್ರಸಿದ್ಧ.
Varaha Mihira astrologer
Image have all standard licence belongs to
Concerned person. Copying is purely offensive.

ಇಂದಿಗೂ ಇವರು ಬರೆದ ಬೃಹತ್ ಜಾತಕ ಸೂತ್ರಗಳ ಅಧಾರದ ಮೇಲೆ ಪಂಚಾಂಗಗಳನ್ನು ಬರೆಯಲಾಗುತ್ತದೆ.ಸೂರ್ಯೋದಯ ಅಸ್ತ, ಚಂದ್ರೋದಯ ಅಸ್ತಗಳನ್ನೂ, ಗ್ರಹಣ, ನಕ್ಷತ್ರೋದಯಗಳನ್ನು ಅತ್ಯಂತ ಕರಾರುವಕ್ಕಾಗಿ ದಾಖಲಿಸಿದ ಅದ್ಭುತ ಈ ಗ್ರಂಥ. ಗಣಿತದ ದೃಷ್ಠಿಯಿಂದ ನೋಡಿದರೆ ಇಂದಿಗೂ ಇದರಲ್ಲಿ ಕೆಲವೇ ಕೆಲವು ೦.೯ ಪ್ರತಿಶತ ವ್ಯತ್ಯಾಸ ಕಂಡು ಬರುತ್ತದೆ.

ಇನ್ನು ಭಾಸ್ಕರಾಚಾರ್ಯರ 'ಲೀಲಾವತಿ'ಎಂಬ ಕೃತಿ ಇಂದಿನ ಟ್ರಿಗ್ನಾಮಿಟ್ರಿ, ಜ್ಯಾಮಿಟ್ರಿ, ಕ್ಯಾಲುಕ್ಯಲಸ್ ಬೀಜಗಣಿತ, ಗೋಳಾಧ್ಯಾಯ, ಗ್ರಹಗಣಿತ ಇತ್ಯಾದಿಗಳಲ್ಲಿ ಇಂದಿನ ಸಂಶೋಧನೆಗಳಿಗೆ ಸರಿಸಾಟಿ ಅಥವಾ ಅವುಗಳನ್ನು ಮೀರಿ ನಿಲ್ಲುತ್ತದೆ. ಹೀಗೆ ಆರ್ಯಭಟ ಮುಂತಾದ ಹಲವು ಹತ್ತು ಮಂದಿ ಪ್ರಕಾಂಡ ಪಂಡಿತರ ಪಟ್ಟಿಯೇ ಇದೆ. ಭಾರತದ ಜ್ಯೋತಿರ್ವಿಜ್ಞಾನ, ವೈದ್ಯಕೀಯ ವಿಜ್ಞಾನ ಇಂದು ಮುಂದುವರೆದಿದೆ ಎನ್ನುತ್ತೇವೆ. ಇದಕ್ಕಿರುವ ಇತಿಹಾಸ ಗರಿಷ್ಠ ಐದುನೂರು ವರ್ಷಗಳು ಮಾತ್ರ ಆದರೆ, ಕ್ರಿ.ಪೂ. ನಾಲ್ಕನೇಯ ಶತಮಾನದಲ್ಲಿದ್ದ ಸುಶ್ರುತ ಪ್ರಸಿದ್ಧ ಶಸ್ತ್ರ ಚಿಕಿತ್ಸನಾಗಿದ್ದ. ಇವನು ದಾಖಲಿಸಿರುವ ಶ್ರುತ ಸಂಹಿತೆಯಲ್ಲಿ ಚರ್ಮಕ್ಕೆ ಏಳು ಪದರಗಳಿವೆ ಎನ್ನಲಾಗಿದೆ.

ಇಂದಿನ ವೈದ್ಯಕೀಯ ಪದ್ಧತಿ ಮೊನ್ನೆ ಮೊನ್ನೆಯವರೆಗೆ ಎರಡು ಪದರುಗಳನ್ನು ಗುರುತಿಸಿತ್ತು. ಎಲೆಕ್ಟ್ರಾನ್ ಸೂಕ್ಞ್ಮದರ್ಶಕದ ಆವಿಷ್ಕಾರದ ಅನಂತರವೂ ಐದು ಪದರಗಳನ್ನು ಮಾತ್ರ ಗುರುತಿಸಲು ಸಾಧ್ಯವಾಗಿದೆ. ಸುಶ್ರುತ ಮಹರ್ಷಿ ಅವಿಷ್ಕರಿಸಿ ಚಾಲ್ತಿಯಲ್ಲಿ ತಂದ ಮೂಗಿನ ಶಸ್ತ್ರಕ್ರಿಯೆ ರೈನೋಪ್ಲಾಸ್ತಿಯನ್ನು ಶಸ್ತ್ರಚಿಕಿತ್ಸಕರು ಇಂದಿಗೂ ಅನುಸರಿಸುತ್ತಿದ್ದಾರೆ. ಚರಕ, ಸುಶ್ರುತ, ವಾಗ್ಬಟರು ರಚಿಸಿದ ಗ್ರಂಥಗಳ ಆಧಾರದ ಮೇಲೆ ಇಂದಿಗೂ ವೈದ್ಯರು ಚಿಕಿತ್ಸೆ ನಡೆಸುತ್ತಿದ್ದಾರೆ. ಶಸ್ತ್ರಕ್ರಿಯೆಯಂಥ ಸಂಕೀರ್ಣ ಚಿಕಿತ್ಸೆಗೆ ದೇಹದ ಒಳಗಿನ ಅವಯವಗಳ ಸಂಪೂರ್ಣ ಜ್ನಾನವಿರಬೇಕು. ಸಾವಿರಾರು ವರ್ಷಗಳ ಹಿಂದೆ ಭರತಭೂಮಿಯಲ್ಲಿ ಅತ್ಯಂತ ಮುಂದುವರಿದ ವೈದ್ಯವಿಜ್ಞಾನ ಚಾಲ್ತಿಯಲ್ಲಿತ್ತು.
FromIndiaWithLove
Image have all standard licence belongs to
Concerned person. Copying is purely offensive
.

ವಿಶ್ವದ ಹುಟ್ಟು ಬೆಳವಣಿಗೆ ಹಾಗೂ ಅಂತ್ಯದ ಬಗ್ಗೆ ಅತ್ಯಂತ ನಿಖರವಾಗಿ ನಮ್ಮ ಪ್ರಾಚೀನರು ಪುರುಷಸೂಕ್ತ, ವೇದ ಇತ್ಯಾದಿಗಳಲ್ಲಿ ಸೂಕ್ತ ಋಕ್ಕುಗಳ ರೂಪದಲ್ಲಿ ವಿವರಿಸಿದ್ದಾರೆ. ಮಹಾಭಾರತ, ರಾಮಾಯಣಗಳಲ್ಲಿ ವಿಮಾನದ ಉಲ್ಲೇಖವಿದೆ. ಅತ್ಯಂತ ಶಕ್ತಿಶಾಲಿಯಾದ ಬ್ರಹ್ಮಾಸ್ತ್ರ, ವಾರುಣಾಸ್ತ್ರ, ವಾಯವ್ಯಾಸ್ತ್ರ, ಕುಶಿಕಾಸ್ತ್ರಗಳ ಮಾತು ಬರುತ್ತವೆ. ರಾಮಾಯಣದಲ್ಲಿ ರಾವಣ ಸಂಹಾರವಾದ ಅನಂತರ ಶ್ರೀರಾಮಚಂದ್ರ ಸಮಸ್ತ ವಾನರ ಸೇನೆಯೊಂದಿಗೆ ನಂದಿ ಗ್ರಾಮಕ್ಕೆ ಬರುವ ವಿಷಯವಿದೆ. ವಿಶೇಷವೇನು ಇದರಲ್ಲಿ ಎಂದರೆ, ಅವನು ಆಕಾಶಮಾರ್ಗವಾಗಿ ಪಯಣಿಸಿದ ಪುಷ್ಪಕ ವಿಮಾನ ಪ್ರಯಾಣಿಕರ ಗಾತ್ರಕ್ಕೆ ತಕ್ಕಂತೆ ಹಿಗ್ಗುತ್ತಿತ್ತು ಎಂಬುದು.

ಹರಪ್ಪಾ, ಮೊಹೆಂಜೋದಾರೋ, ಲೊಧಾಲಗಳ, ಸಿಂಧೂ ನಾಗರಿಕತೆಗಳ ಕಾಲಮಾನವನ್ನು ಇತಿಹಾಸ ತಜ್ಞರು ಕ್ರಿ.ಪೂ.೨೫೦೦ರಿಂದ ಕ್ರಿ.ಪೂ.೧೫೦೦ ಎಂದು ಗುರುತಿಸಿದ್ದಾರೆ. ಅಲ್ಲಿ ಸಿಕ್ಕಿದ ಆವೆಮಣ್ಣಿನ ಫಲಕಗಳಲ್ಲಿ ಲಿಪಿ ಇದೆ. 
ಇಂದು 'ಕುತುಬ್ ಮಿನಾರ್' ಎಂದು ಕರೆಯಲ್ಪಡುವ ಮೆಹರೋಲಿಯ ಕಬ್ಬಿಣದ ೨೩ ಅಡಿ, ೮ ಅಂಗುಲ ಎತ್ತರದ, ೧.೫ ಅಡಿ ವ್ಯಾಸದ, ೬ ಟನ್ ತೂಗುವ, ತುಕ್ಕು ಹಿಡಿಯದ ಕಂಬ ಒಂದೆ ಮೂಸೆಯಲ್ಲಿ ಎರಕ ಹೊಯ್ದದ್ದು!

ಭಾರತೀಯ ಬಲು ಬುದ್ಧಿವಂತ ಸಭ್ಯತೆಯ ಒಂದು ಹಿಸ್ಸೆ. ಜಗತ್ತಿನ ಉಳಿದ ಭಾಗಗಳಲ್ಲಿ ಮನುಷ್ಯರು ಬೇಟೆಯಾಡಿ ಬದುಕುತ್ತಿದ್ದ ಕಾಲದಲ್ಲಿ, ಭಾರತೀಯ ಅತ್ಯಂತ ಮುಂದುವರಿದ ಯಜ್ಞವಿಜ್ಞಾನವನ್ನು ಅರ್ಥಮಾಡಿಕೊಂಡಿದ್ದ. 

'ಕೋಯಿ ಲೌಟಾದೆ ಮೇರೆ ಬೀತೆ ಹುವೆ ದಿನ್
ಬೀತೆ ಹುವೆ ದಿನ್ ಯೇ (ಹಮಾರೇ)ಮೇರೆ ಪ್ಯಾರೆ ಪಲಕಿನ್..'
"ಕಳೆದು ಹೋದ ದಿನಗಳನ್ನು ಮರಳಿಸಿ ಯಾರಾದರೊಬ್ಬರು..
ಕಳೆದು ಹೋದ ದಿನಗಳವೂ..ನನ್ನ ಪ್ರೀತಿಯ ಕ್ಷಣಗಳು.."

ಮರಳಿ ಬರಲಿ ಈ ನಮ್ಮ ಭವ್ಯತೆಯ ದಿನಗಳು ಎಂದು ಹಾರೈಸುತ್ತದೆ ಮನಸ್ಸು...

Tuesday, 4 April 2017

ದೇವರು ಎಂಬ ಜಿಜ್ಞಾಸೆ

ಆರು ವರ್ಷದ ಮಗು ಅಪರೂಪದ ಹೃದಯರೋಗದಿಂದ ಬಳಲುತ್ತಿದ್ದ. ಊರಿನ ವೈದ್ಯರು ಬದುಕುವುದು ಮೂರು ತಿಂಗಳು ಮಾತ್ರ ಎಂದು ಭವಿಷ್ಯ ನುಡಿದಿದ್ದರು. ಕಂಗಾಲಾದ ಹೆತ್ತವರು ಖ್ಯಾತ ವೈದ್ಯರಲ್ಲಿ ಚಿಕಿತ್ಸೆಗಾಗಿ ಬಂದಿದ್ದರು. ಮಗುವಿನ ಕೂಲಂಕುಷ ತಪಾಸಣೆ ನಡೆಸಿದಾಗ, ಇನ್ನೂ ಪ್ರಯೋಗಾವಸ್ಥೆಯಲ್ಲಿರುವ ಅತ್ಯಂತ ಕ್ಷಿಷ್ಟಕರವಾದ, ತೆರೆದ ಹೃದಯದ ಶಸ್ತ್ರಕ್ರಿಯೆಯಿಂದ ಮಾತ್ರ ಮಗುವಿನ ಆರೋಗ್ಯ ಸುಧಾರಿಸಬಹುದಾದ ಸಾಧ್ಯತೆ ಇರಬಹುದು ಎಂದು ಕಂಡು ಬಂತು. 


ಒಂದು ವೇಳೆ ಆ ಚಿಕಿತ್ಸೆ ನಡೆಸಿದಿದ್ದಲ್ಲಿ ಮಗು ಮೂರು ತಿಂಗಳು ಬದುಕುವುದೂ ಸಂದೇಹಾಸ್ಪದವಾಗಿತ್ತು.  ಹಾಗೆಯೇ ಚಿಕಿತ್ಸೆ ನಡೆಸುತ್ತಿರುವಾಗಲೇ ಮಗು ಸಾಯುವ ಸಾಧ್ಯತೆಯೂ ಇತ್ತು. ಇವೆಲ್ಲವನ್ನೂ ಹೆತ್ತವರಿಗೆ ವಿವರವಾಗಿ ತಿಳಿಸಲಾಯಿತು. ಅಳೆದು ಸುರಿದು ಅನ್ಯಮಾರ್ಗ ಇರದ್ದನ್ನು ಅರಿತು ಅವರು ಶಸ್ತ್ರಚಿಕಿತ್ಸೆಗೆ ಒಪ್ಪಿದರು. ದಿನ ನಿಗದಿಯಾಯಿತು.

ದೇವರು ಎಂಬ ಜಿಜ್ಞಾಸೆ
Image have all standard licence belongs to Concerned person. Copying is purely offensive.
ನಿಗದಿಯಾದ ದಿನದ ಹಿಂದಿನ ಸಂಜೆ ವೈದ್ಯರು ಮಗು ಮತ್ತವನ ಹೆತ್ತವರನ್ನು ಕಾಣಲು ಹೋದರು. ಇವರನ್ನು ಕಂಡ ಹುಡುಗ ನಸುನಗುತ್ತಾ "ಅಂಕಲ್, ನೀವು ನಾಳೆ ನನಗೆ ಚಿಕಿತ್ಸೆ ನೀಡುವೀರಲ್ಲವೇ?" ಎಂದು ಕೇಳಿದ. ವೈದ್ಯರು ಹೌದೆಂದು ತಲೆ ಆಡಿಸಿದರು. ಹುಡುಗ ಮತ್ತೆ ಕೇಳಿದ " ನೀವು ನನ್ನ ಹೃದಯ ಕತ್ತರಿಸಿಸುವವರಿದ್ದಿರಂತೆ, ಹೌದಾ?"  ಮತ್ತೆ ಹೌದೆಂದರು ವೈದ್ಯರು. 



"ಹಾಗಾದರೆ, ನನ್ನದೊಂದು ವಿನಂತಿ ಇದೆ.  ನನ್ನಮ್ಮ ಯಾವಾಗಲೂ ದೇವರು ಹೊರಗಿಲ್ಲ, ಮನುಷ್ಯರ ಹೃದಯದಲ್ಲಿದ್ದಾನೆ ಎನ್ನುತ್ತಿರುತ್ತಾಳೆ. ನನ್ನ ಹೃದಯದಲ್ಲೂ ಅವನು ಇದ್ದಾನೆ ಅಲ್ಲವೇ? ಈಗ ನೀವು ನನ್ನ ಹೃದಯ, ಸೀಳಿದಾಗ ಅವನು ನಿಮಗೆ ಕಂಡುಬರುತ್ತಾನೆ, ಅಲ್ಲವೇ? ನೀವು ಗಮನವಿಟ್ಟು ಅವನು ಹೇಗಿದ್ದಾನೆ ಎಂದು ನೋಡಬೇಕು . ನಾನು ಎಚ್ಚರಗೊಂಡ ಅನಂತರ ನನಗೆ ಹೇಳಬೇಕು, ಆಗಬಹುದೇ?" ಎಂದನಂತೆ.




ವೈದ್ಯರ ಹೃದಯ ಅವನ ಮುಗ್ಧ ಸುಂದರ ಕೋರಿಕೆ ಕೇಳಿ ದ್ರವಿಸಿತು. ತಲೆ ಸವಾರಿ, "ಆಗಬಹುದು ಮಗು, ಅವನನ್ನು ಕಾಣುವಷ್ಟು ಬಲಿತವ ನಾನಲ್ಲ. ಆದರೆ, ಒಂದು ವೇಳೆ ಅವನು ಕಂಡರೆ ನಿನಗೆ ಖಂಡಿತ ತಿಳಿಸುತ್ತೇನೆ." ಎಂದುತ್ತರಿಸಿದರು.
ಶಸ್ತ್ರಚಿಕಿತ್ಸೆ ಶುರುವಾಯಿತು. ಹೃದಯದ ಕೆಲಸವನ್ನು ಯಂತ್ರಕ್ಕೊಪ್ಪಿಸಿ ಅದಕ್ಕೆ ರಕ್ತ ಹರಿದು ಬರದಂತೆ ಬಸಿದು, ಹೃದಯ ಸಿಗಿದು, ಒಳಗಿರುವ ವಿಕೃತಿಯನ್ನು ಸರಿಪಡಿಸಲಾಯಿತು. ಎಲ್ಲ ಸರಿಯಾದ ಅನಂತರ ರಕ್ತಪರಿಚಲನೆಯನ್ನು ಯಂತ್ರದಿಂದ ತಪ್ಪಿಸಿ, ಹೃದಯಕ್ಕೆ ಹರಿಸಲಾಯಿತು. 



ಆದರೆ ಹೃದಯಕ್ಕೆ ಏನು ಧಕ್ಕೆಯಾಗಿತ್ತೊ ಏನೋ ಅದು ಕೆಲಸ ಮಾಡಲು ಶುರು ಮಾಡಲೇ ಇಲ್ಲ. ಅದಕ್ಕೆ ರಕ್ತ ಹರಿದು ಬರಲೇ ಇಲ್ಲ. ಅಂದರೆ, ಮಗು ಬದುಕುವುದು ಅಸಂಭವವಾಗಿತ್ತು. ಆ ಕ್ಷಣ ಮಗುವಿನ ಹಿಂದಿನ ದಿನದ ಮಾತುಗಳು ವೈದ್ಯರಿಗೆ ನೆನಪಾದವು. ಹೃದಯ ತುಂಬಿ, ಕಣ್ಣೀರಾಗಿ ಹರಿಯಿತು. ಕನ್ನಡಕ ತೆಗೆದು ಕೈಮುಗಿದು, "ಭಗವಂತ, ನನ್ನ ಶಕ್ತಿಗನುಸಾರವಾಗಿ ಪ್ರಯತ್ನಿಸಿದ್ದೇನೆ. ಫಲ ಕಾಣುತ್ತಿಲ್ಲ. ಮುಂದಿನದು ನಿನ್ನ ಕೈಯಲ್ಲಿದೆ. ನಿನ್ನನ್ನು ನೋಡುವಾಸೆ ಎಂದ ಹುಡುಗ. ಅದಕ್ಕಾಗಿಯಾದರೂ ಬದುಕಿಸು ಇವನನ್ನು ಸ್ವಾಮೀ" ಎಂದು ಪ್ರಾರ್ಥಿಸತೊಡಗಿದರು. ಮನಸ್ಸು ಅವನಲ್ಲೇ ಒಂದಾಯಿತು.





ಯಾರೋ ರಟ್ಟೆ ಅಲುಗಾಡಿಸಿದಂತಾಗಿ ಎಚ್ಚರವಾಯಿತು. ಸಹವೈದ್ಯ, "ಸರ್ , ಸರ್ ನೋಡಿ ಹೃದಯ ಬಡಿದುಕೊಳ್ಳುತ್ತಿದೆ. ಆಪರೇಷನ್ ಫಲಕಾರಿಯಾಯಿತು. ಅಭಿನಂದನೆಗಳು." ಎನ್ನುತ್ತಿದ್ದ.





ಅರವಳಿಕೆಯಿಂದ ಎಚ್ಚರವಾಗಿ ಇವರ ಮುಖ ನೋಡುತ್ತಿದ್ದಂತೆಯೇ ಹುಡುಗ ಕ್ಷೀಣ ಧ್ವನಿಯಿಂದ, "ನೀವು ದೇವರನ್ನು ಕಂಡಿರೇನು?"ಎಂದ.  ಇವರು ಅವನ ಕೈಹಿಡಿದು, "ಇಲ್ಲ ಮಗು, ಆದರೆ ಅವನಿರುವನ್ನು ಅನುಭವಿಸಿದೆ. ಅವನನ್ನು ನೋಡಲಿಲ್ಲಿ ಅನುಭವಿಸಲು ಸಾಧ್ಯ ಎನಿಸುತ್ತದೆ ನನಗೆ."ಎಂದುತ್ತರಿಸಿದರು.


ದೇವರು ಎಂಬ ಜಿಜ್ಞಾಸೆ
Image have all standard licence belongs to Concerned person. Copying is purely offensive

ದುರ್ಭರವಾದ ಕ್ಷಣದಲ್ಲಿ ಮನಸ್ಸನ್ನು ಪರಬ್ರಹ್ಮನಲ್ಲಿರಿಸಲು ಸಾಧ್ಯವಾದರೆ ಅದೇ ಜೀವನ್ಮುಕ್ತಿ.

ಬದುಕು ಇಂದ್ರಿಯಗಳಿಂದ, ಹಾಗೇ ಬದುಕಿನೊಂದಿಗೆ ಮಾಯೆ. ಮಾಯೆ ಎಂದರಿತು ಅದರ ಗೋಜಲುಗಳಿಗೆ ಪಕ್ಕಾಗದೇ ಹೊರನಿಂತು, "ಇದು ಇಷ್ಟೇ, ಇದಕ್ಕಿಂತ ಮಿಗಿಲಾದುದನ್ನು ಕಾಣುವುದೇ ಜೀವನದ ಗುರಿ" ಎಂದುಕೊಂಡಾಗ ಜೀವ ವಿಕಸಿಸುತ್ತದೆ. ಎಲ್ಲಿ ಈ ಭಾವ ಬಂತೋ ಅವನು ಜೀವನದಲ್ಲಿ ಇದ್ದೂ ಇಲ್ಲದವ, ಮುಕ್ತಿ, ಅಲ್ಲಿ ಜಗತ್ತಿಗಾಗಿ  ಮರುಗುವ, ಸಹಾಯ ಹಸ್ತಚಾಚುವ ಹುಟ್ಟುತ್ತಾನೆ.

(ಕಥೆ ಹೇಳಿದವರು ಡಾ| ಗುರುರಾಜ ಕರ್ಜಗಿ.)
Copyright © 2017-18 by Anand Joshi All rights reserved. No part of this publication may be reproduced, distributed, or transmitted in any form or by any means, including photocopying, recording, or other electronic or mechanical methods, without the prior written permission of the publisher, except in the case of brief quotations embodied in critical reviews and certain other noncommercial uses permitted by copyright law. For permission requests, write to the publisher, addressed “Attention: Permissions Coordinator,” at the address below. 
 anandajoshi@datamail.in +91-9483998343 
 Account ID: pub-2871201476498332 Client ID: ca-pub-2871201476498332

CLICK HERE